IT Companies: ಹೊಸಬರೆಂದು ಧೋರಣೆ ಬೇಡ, ಅವರನ್ನು ಮನುಷ್ಯರಂತೆ ಪರಿಗಣಿಸಿ; ಮೋಹನದಾಸ್ ಪೈ ಕಿವಿಮಾತು

ಮಾಧ್ಯಮವೊಂದರ ಸಂದರ್ಶನದಲ್ಲಿ ಐಟಿ ದಿಗ್ಗಜ ಇನ್ಫೋಸಿಸ್ ಸಂಸ್ಥೆಯ ಮಾಜಿ ನಿರ್ದೇಶಕರಾಗಿರುವ ಮೋಹನದಾಸ್ ಪೈ ಅವರು, ಪ್ರಸ್ತುತ ಐಟಿ ಕ್ಷೇತ್ರದಲ್ಲಿ ಹೊಸಬರನ್ನು ನಡೆಸಿಕೊಳ್ಳುತ್ತಿರುವ ರೀತಿಯ ಕುರಿತು ಅಸಮಾಧಾನ ವ್ಯಕ್ತಪಡಿಸುತ್ತ ಆ ವಲಯದ ಮಹಾನಾಯಕರಿಗೆ ಹೊಸದಾಗಿ ಸೇರ್ಪಡೆಗೊಂಡ ಫ್ರೆಶರ್ಸ್ ಉದ್ಯೋಗಿಗಳನ್ನು ಪುಟಾಣಿಗಳೆಂದು ಬಗೆಯದೆ ಅವರನ್ನೂ ಮನುಷ್ಯರಂತೆ ಪರಿಗಣಿಸಿ ಎಂದು ಹೇಳಿದ್ದಾರೆ. 

ಇನ್ಫೋಸಿಸ್ ಸಂಸ್ಥೆಯ ಮಾಜಿ ನಿರ್ದೇಶಕ ಮೋಹನದಾಸ್ ಪೈ

ಇನ್ಫೋಸಿಸ್ ಸಂಸ್ಥೆಯ ಮಾಜಿ ನಿರ್ದೇಶಕ ಮೋಹನದಾಸ್ ಪೈ

  • Share this:
ಮಾಧ್ಯಮವೊಂದರ ಸಂದರ್ಶನದಲ್ಲಿ ಐಟಿ ದಿಗ್ಗಜ ಇನ್ಫೋಸಿಸ್ ಸಂಸ್ಥೆಯ ಮಾಜಿ ನಿರ್ದೇಶಕರಾಗಿರುವ ಮೋಹನದಾಸ್ ಪೈ (Mohandas Pai) ಅವರು, ಪ್ರಸ್ತುತ ಐಟಿ ಕ್ಷೇತ್ರದಲ್ಲಿ ಹೊಸಬರನ್ನು (Fresher) ನಡೆಸಿಕೊಳ್ಳುತ್ತಿರುವ ರೀತಿಯ ಕುರಿತು ಅಸಮಾಧಾನ ವ್ಯಕ್ತಪಡಿಸುತ್ತ ಆ ವಲಯದ ಮಹಾನಾಯಕರಿಗೆ ಹೊಸದಾಗಿ ಸೇರ್ಪಡೆಗೊಂಡ ಫ್ರೆಶರ್ಸ್ ಉದ್ಯೋಗಿಗಳನ್ನು(employees) ಪುಟಾಣಿಗಳೆಂದು ಬಗೆಯದೆ ಅವರನ್ನೂ ಮನುಷ್ಯರಂತೆ ಪರಿಗಣಿಸಿ ಎಂದು ಹೇಳಿದ್ದಾರೆ. ಸದ್ಯ, ಪ್ರೊಪ್ರೈಟರಿ ವೆಂಚ್ಯೂರ್ ಫಂಡ್ ಸಂಸ್ಥೆಯಾದ ಆರಿನ್ ಕ್ಯಾಪಿಟಲ್ ನ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿರುವ ಪೈ ಅವರು ಹೇಳುವಂತೆ ಇಂದು ಭಾರತದಲ್ಲಿ ಮಾಹಿತಿ ತಂತ್ರಜ್ಞಾನ ಕಂಪನಿಗಳು (Information Technology Companies) ಉತ್ತಮವಾಗಿ ಹಣಗಳಿಸುತ್ತಿದ್ದು ಇದಕ್ಕೆ ಪ್ರಮುಖ ಕಾರಣವಾಗಿರುವ ಹೊಸ ಉದ್ಯೋಗಿಗಳ ಪ್ರಯತ್ನ ಹೆಚ್ಚಾಗಿದ್ದರೂ ಹಿರಿಯ ಅನುಭವಿ ಉದ್ಯೋಗಿಗಳಿಗೆ ಹೆಚ್ಚಿನ ವೇತನ ನೀಡುತ್ತಿವೆ.

ಫ್ರೆಶರ್ಸ್ ಉದ್ಯೋಗಿಗಳ ಮೇಲೆ ನಡೆಯುತ್ತಿರುವ ಶೋಷಣೆ 
ಭಾರತದ ಐಟಿ ಕಂಪನಿಗಳಲ್ಲಿ ಹೊಸದಾಗಿ ಸೇರ್ಪಡೆಗೊಂಡ ಫ್ರೆಶರ್ಸ್ ಉದ್ಯೋಗಿಗಳ ಮೇಲೆ ಕಳೆದ ಹತ್ತು ವರ್ಷಗಳಿಂದ ಶೋಷಣೆ ಮಾಡಲಾಗುತ್ತಿದೆ. ಹಾಗಾಗಿಯೇ ಇಂದು ಐಟಿ ಕ್ಷೇತ್ರದಲ್ಲಿ ಹೆಚ್ಚಳವಾಗಿರುವ ಕೆಲಸ ತೊರೆಯುವಿಕೆಯ ದರ, ದಿನದ ಉದ್ಯೋಗದ ನಂತರ ರಾತ್ರಿಯಲ್ಲಿ ಬೇರೊಂದು ಕೆಲಸದಲ್ಲಿ ಉದ್ಯೋಗಿಗಳು ತೊಡಗಿಕೊಳ್ಳುವಿಕೆ, ಕಚೇರಿಗೆ ಮರಳಲು ನಿರುತ್ಸಾಹ ಇತ್ಯಾದಿ ಅಂಶಗಳು ಕಂಡುಬರುತ್ತಿರುವುದಾಗಿ ಮೋಹನದಾಸ್ ಪೈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ರೂಪಾಯಿ ಕುಸಿತವಾಗುತ್ತಿರುವ ಇಂದಿನ ಸನ್ನಿವೇಶದಲ್ಲಿ ಭಾರತದ ಐಟಿ ಕಂಪನಿಗಳು ಉತ್ತಮ ಎನ್ನಬಹುದಾದ ಲಾಭಗಳಿಸುತ್ತಿವೆ. ರೂಪಾಯಿ ಬೆಲೆ ಕುಸಿತವಾಗಿರುವ ಹಿನ್ನೆಲೆಯಲ್ಲಿ ಐಟಿ ಕಂಪನಿಗಳು ಆದಾಯದಲ್ಲಿ ಏನಿಲ್ಲವೆಂದರೂ 13-14% ರಷ್ಟು ಏರಿಕೆ ಕಂಡಿವೆ. ಹಾಗಾಗಿ ಅವು ತಮ್ಮ ಸಂಸ್ಥೆಯ ಹಿರಿಯ ಉದ್ಯೋಗಿಗಳಿಗೆ ಉತ್ತಮ ವೇತನ ನೀಡುತ್ತಿವೆ. ಆದರೆ, ಅವು ತಮ್ಮಲ್ಲಿರುವ ಫ್ರೆಶರ್ಸ್ ಗಳಿಗೆ ಯಾಕೆ ಉತ್ತಮ ವೇತನ ಪಾವತಿಸುತ್ತಿಲ್ಲ ಎಂದು ಪೈ ಪ್ರಶ್ನಿಸುತ್ತಾರೆ.

ವೇತನ ಪಾವತಿಯ ಬಗ್ಗೆ ಮೋಹನದಾಸ್ ಪೈಯವರ ಅಭಿಪ್ರಾಯವೇನು
ಇತ್ತೀಚಿಗಷ್ಟೆ, ಕೆಲವು ಐಟಿ ಕಂಪನಿಗಳು ತಮ್ಮ ಹಿರಿಯ ಉದ್ಯೋಗಿಗಳಾದಂತಹ ಸಿಎಕ್ಸ್‌‌‌‌‍ಒ ಗಳಿಗೆ ಅತಿ ಹೆಚ್ಚಿನ ವೇತನ ನೀಡುತ್ತಿರುವಂತಹ ವರದಿಗಳು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಪೈ ಅವರು ತಮ್ಮ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಉದಾಹರಣೆಗೆ, ಇತ್ತೀಚಿಗಷ್ಟೇ ತನ್ನ ವಾರ್ಷಿಕ ವರದಿಯಲ್ಲಿ HCL Tech ಸಂಸ್ಥೆಯು ಕಂಪನಿಯ ಸಿಇಒ ಆಗಿರುವ ವಿಜಯ್ ಕುಮಾರ್ ಅವರು ವಾರ್ಷಿಕವಾಗಿ 123 ಕೋಟಿ ರೂಪಾಯಿ ವೇತನ ಪಡೆದಿರುವುದಾಗಿ ಹೇಳಿತ್ತು.

ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ಯುನಿಕಾರ್ನ್ ಲೋಗೋ! ಅಬ್ಬಬ್ಬಾ, ಏನಿದರ ವಿಶೇಷತೆ?

ಇನ್ನು, ಇನ್ಫೋಸಿಸ್ ತನ್ನ ಇತ್ತೀಚಿನ ವಾರ್ಷಿಕ ವರದಿಯಲ್ಲಿ ದಾಖಲಿಸಿರುವಂತೆ ಸಂಸ್ಥೆಯ ಸಿಇಒ ಆಗಿರುವ ಸಲಿಲ್ ಪಾರೇಕ್ ಅವರ ವಾರ್ಷಿಕ ಸಂಬಳ 79 ಕೋಟಿ ರೂಪಾಯಿಗಳಾಗಿವೆ. ಈ ಹಿಂದೆ ಅವರು 42 ಕೋಟಿ ರೂ. ಪಡೆಯುತ್ತಿದ್ದರು. ಅಂದರೆ ಅವರ ವೇತನದಲ್ಲಿ ಏನಿಲ್ಲವೆಂದರೂ 88% ರಷ್ಟು ಹೆಚ್ಚಳವಾಗಿರುವುದನ್ನು ಇಲ್ಲಿ ಕಾಣಬಹುದು. ಇದೇ ರೀತಿ ವಿಪ್ರೋದ ಸಿಇಒ ಕೂಡ 79.9 ಕೋಟಿ ರೂ. ವಾರ್ಷಿಕವಾಗಿ ಸಂಬಳ ಪಡೆದಿದ್ದಾರೆ.

ಈ ಕುರಿತು ಮಾತು ಮುಂದುವರೆಸಿದ ಪೈ ಹೇಳುತ್ತಾರೆ, "ಇದನ್ನೆಲ್ಲ ನೋಡಿದಾಗ ಫ್ರೆಶರ್ಸ್ ಕಳೆದ ಹತ್ತು ವರ್ಷಗಳಿಂದ ಶೋಷಣೆಗೊಳಪಡುತ್ತಲೇ ಇದ್ದಾರೆ. ಹಿಂದೊಮ್ಮೆ 2008-09 ರಲ್ಲಿ ಐಟಿ ಕಂಪನಿಗಳು ಫ್ರೆಶರ್ಸ್ ಗಳಿಗೆ ನೀಡುತ್ತಿದ್ದ ವೇತನವಾದಂತಹ 3.5-3.8 ಲಕ್ಷದ ಪ್ಯಾಕೇಜ್ ಅನ್ನು ಇಂದಿಗೂ ಅದೇ ಪ್ರಮಾಣದಲ್ಲೇ ನೀಡುತ್ತಿವೆ".

ಕಿರಿಯರನ್ನೂ ಸಹ ಮನುಷ್ಯರೆಂದು ಪರಿಗಣಿಸಿ
ಈ ಹಿನ್ನೆಲೆಯಲ್ಲಿ ಮಾತನಾಡಿದ ಪೈ, "ಹೀಗೆ ಕಂಪನಿಗಳು ಹಣಕಾಸಿನ ವಿಷಯದಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಮುಖ್ಯವೇ ಆಗಿದ್ದಲ್ಲಿ ವೇತನಕ್ಕೆ ಸಂಬಂಧಿಸಿದಂತೆ ತ್ಯಾಗವನ್ನು ಹಿರಿಯ ಉದ್ಯೋಗಿಗಳು ಮಾಡಬೇಕು, ಕಿರಿಯ ಉದ್ಯೋಗಿಗಳಿಗೆ ಹೆಚ್ಚಿನ ವೇತನ ನೀಡದೆ ಇರುವಂತಹ ಸಂದರ್ಭದಲ್ಲಿ ಹಿರಿಯ ಉದ್ಯೋಗಿಯೊಬ್ಬ ಹೆಚ್ಚಿನ ವೇತನ ಹೇಗೆ ಪಡೆಯುತ್ತಾನೆ? ಕಿರಿಯರನ್ನೂ ಸಹ ಮನುಷ್ಯರೆಂದು ಪರಿಗಣಿಸಿ, ಪುಟಾಣಿಗಳೆಂದಲ್ಲ" ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:  Work From Office: ಉದ್ಯೋಗಿಗಳಿಗೆ ಕಚೇರಿಗೆ ಮರಳುವಂತೆ ಟೆಕ್ ದಿಗ್ಗಜ ಆದೇಶ! ಕಂಪೆನಿ ವಿರುದ್ಧವೇ ರೊಚ್ಚಿಗೆದ್ದ ನೌಕರರು

ಈ ರೀತಿಯಾಗಿ ಐಟಿ ಕ್ಷೇತ್ರದ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಪೈ ಅವರು ಇದೇ ರೀತಿಯ ಆಚರಣೆ ಹೀಗೆ ಮುಂದುವರೆದರೆ ಭವಿಷ್ಯದಲ್ಲಿ ಐಟಿ ಕಂಪನಿಗಳಿಗೂ ಮರ್ಸಿನರಿಗಳಿಗೂ ಯಾವುದೇ ವ್ಯತ್ಯಾಸವಿರುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತ ಈ ರೀತಿಯ ನೀತಿಗಳನ್ನು ಕಂಪನಿಗಳು ತಿದ್ದಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.

ಐಟಿ ಕ್ಷೇತ್ರದ ಧನಾತ್ಮಕ ಅಂಶಗಳು ಯಾವುವು 
ಆದರೆ ಇದೇ ಸಂದರ್ಭದಲ್ಲಿ ಐಟಿ ಕ್ಷೇತ್ರದ ಧನಾತ್ಮಕ ಅಂಶಗಳ ಬಗ್ಗೆಯೂ ಅವರು ಮನಸಾರೆ ಮಾತಾಡಿದ್ದಾರೆ. ಅವರು ಹೇಳುವಂತೆ, "ಐಟಿ ಕ್ಷೇತ್ರ ಪ್ರಪ್ರಥಮವಾಗಿ ಮನುಷ್ಯತ್ವ ಹಾಗೂ ಮಾನವೀಯ ಮೌಲ್ಯಗಳಿಗೆ ಮೇಲಿನ ಸ್ತರದಿಂದ ಕೆಳಸ್ತರದವರೆಗೂ ಬೆಲೆ ನೀಡಿ ಪ್ರತಿಯೊಬ್ಬರನ್ನೂ ಅವರವರ ಮೌಲ್ಯಗಳಿಗನುಸಾರ ಗೌರವ ಆದರ ನೀಡುತ್ತ ಒಂದು ಅದ್ಭುತ ಸಂಪ್ರದಾಯವನ್ನು ನಿರ್ಮಿಸಿದೆ. ಇಲ್ಲಿ ಯಾರೂ ಮೇಲಿಲ್ಲ, ಯಾರೂ ಕೀಳಿಲ್ಲ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡುವಂತೆ ಮಾಡಿದ್ದೇ ಐಟಿ ಕ್ಷೇತ್ರ. ಆದರೆ, ಕಳೆದ ಕೆಲ ಸಮಯದಿಂದ ಗಮನಿಸಿದರೆ ಈ ಪಿರಮಿಡ್ಡಿನ ಮೇಲಿನ ಸ್ತರದಲ್ಲರುವವರಿಗೆ ಮಾತ್ರ ಮಣೆ ಹಾಕಲಾಗುತ್ತಿದ್ದು ಪಿರಮಿಡ್ಡಿನ ಕೆಳ ಸ್ತರದ ಜನರನ್ನು ಮರೆತೇ ಬಿಡಲಾಗಿದೆ" ಎಂದಿದ್ದಾರೆ.
Published by:Ashwini Prabhu
First published: