Vodafone Layoff: 11,000 ಉದ್ಯೋಗಿಗಳನ್ನು ವಜಾ ಮಾಡಲು ನಿರ್ಧರಿಸಿದ ವೋಡಾಫೋನ್ ಕಂಪನಿ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಮುಂದಿನ ಮೂರು ವರ್ಷಗಳಲ್ಲಿ 11,000 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ವೋಡಾಫೋನ್​ ಕಂಪನಿ ಮಾಹಿತಿ ನೀಡಿದೆ. ಈ ವಜಾಗೊಳಿಸುವಿಕೆಯು ಕಂಪನಿಯ ಕಾರ್ಯತಂತ್ರದ ಯೋಜನೆಯ ಭಾಗವಾಗಿದೆ. ಇದನ್ನು ಮುಂದಿನ 3 ವರ್ಷಗಳ ಅವಧಿಯಲ್ಲಿ ಕಾರ್ಯಗತಗೊಳಿಸಲಾಗುವುದು.

  • Share this:

ಬ್ರಿಟನ್‌ನ (Britain)  ಬಹುರಾಷ್ಟ್ರೀಯ ದೂರಸಂಪರ್ಕ ಕಂಪನಿ ವೋಡಾಫೋನ್ (Vodafone) 11,000 ಉದ್ಯೋಗಗಳನ್ನು ಕಡಿತಗೊಳಿಸಲು ಯೋಜಿಸುತ್ತಿದೆ. ಕಂಪನಿಯ ಹೊಸ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಾರ್ಗರಿಟಾ ಡೆಲ್ಲಾ ವ್ಯಾಲೆ (Margherita della Valle) ಅವರು ಹೊಸ ಹಣಕಾಸು ವರ್ಷದ ಗಳಿಕೆಯಲ್ಲಿ ಯಾವುದೇ ಬೆಳವಣಿಗೆ ಕಾಣಿಸದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಉದ್ಯೋಗಗಳ (Job) ಕಡಿತದ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.


ವೋಡಾಫೋನ್​ನ ಹೊಸ ಮುಖ್ಯ ಕಾರ್ಯನಿರ್ವಾಹಕ (ಸಿಇಓ) ಹೇಳಿರುವುದೇನು?


ಮುಂದಿನ ಮೂರು ವರ್ಷಗಳಲ್ಲಿ 11,000 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಕಂಪನಿ ಮಂಗಳವಾರ ಮಾಹಿತಿ ನೀಡಿದೆ. ಈ ವಜಾಗೊಳಿಸುವಿಕೆಯು ಕಂಪನಿಯ ಕಾರ್ಯತಂತ್ರದ ಯೋಜನೆಯ ಭಾಗವಾಗಿದೆ. ಇದನ್ನು ಮುಂದಿನ 3 ವರ್ಷಗಳ ಅವಧಿಯಲ್ಲಿ ಕಾರ್ಯಗತಗೊಳಿಸಲಾಗುವುದು.


ವೋಡಾಫೋನ್​​ನ​ ಹೊಸ ಮುಖ್ಯ ಕಾರ್ಯನಿರ್ವಾಹಕ ಮಾರ್ಗರಿಟಾ ಡೆಲ್ಲಾ ವ್ಯಾಲೆ ಅವರು ಆರ್ಥಿಕ ವರ್ಷದಲ್ಲಿ ಕಂಪನಿ ಕಾರ್ಯಕ್ಷಮತೆಯು ಉತ್ತಮವಾಗಿಲ್ಲದ ಕಾರಣ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಪ್ರಸಕ್ತ ವರ್ಷದ ಹಣಕಾಸು ವರದಿಯಲ್ಲಿ ಮಾರ್ಗರಿಟಾ ಡೆಲ್ಲಾ ವ್ಯಾಲೆ, "ನಾನು ವೋಡಾಫೋನ್​ಗಾಗಿ ನನ್ನ ಯೋಜನೆಗಳನ್ನು ಪ್ರಕಟಿಸುತ್ತಿದ್ದೇನೆ. ನಮ್ಮ ಕಾರ್ಯಕ್ಷಮತೆ ಸಾಕಷ್ಟು ಉತ್ತಮವಾಗಿಲ್ಲ. ವೊಡಾಪೋನ್‌ ಬದಲಾಗಬೇಕು" ಎಂದು ಹೇಳಿದ್ದಾರೆ.


ಇದನ್ನೂ ಓದಿ: Loan Foreclosure Charge ಏನು? ಇದ್ರಿಂದ ತಪ್ಪಿಸಿಕೊಳ್ಳೋದು ಹೇಗೆ ಅಂತ ಇಲ್ಲಿದೆ ನೋಡಿ!

“ನಾಲ್ಕು ವರ್ಷಗಳಲ್ಲಿ ಕಂಪನಿಯಲ್ಲಿ ಬದಲಾವಣೆಯನ್ನು ಕಾರ್ಯಗತಗೊಳಿಸಲು, ವೊಡಾಪೋನ್‌ ಈಗಾಗಲೇ ಕ್ರಿಯಾ ಯೋಜನೆಯನ್ನು ಹೊಂದಿದೆ. ಗ್ರಾಹಕರು, ಸರಳತೆ ಮತ್ತು ಬೆಳವಣಿಗೆ ಈ ಮೂರು ಆದ್ಯತೆಗಳ ಮೇಲೆ ಕಂಪನಿಯ ಕಾರ್ಯತಂತ್ರ ಕೇಂದ್ರೀಕರಿಸಿದೆ.



ಸಾಂಕೇತಿಕ ಚಿತ್ರ

ನಾವು ನಮ್ಮ ಸಂಸ್ಥೆಯನ್ನು ಸರಳಗೊಳಿಸುತ್ತೇವೆ. ನಮ್ಮ ಗ್ರಾಹಕರು ನಿರೀಕ್ಷಿಸುವ ಗುಣಮಟ್ಟದ ಸೇವೆಯನ್ನು ನೀಡಲು ಮತ್ತು ವೋಡಾಫೋನ್ ವ್ಯಾಪಾರದ ಕಾರಣದಿಂದ ಮತ್ತಷ್ಟು ಬೆಳವಣಿಗೆಯನ್ನು ಹೆಚ್ಚಿಸಲು ನಾವು ಸಂಪನ್ಮೂಲಗಳನ್ನು ಮರುಹಂಚಿಕೆ ಮಾಡುತ್ತೇವೆ” ಎಂದು ವೋಡಾಪೋನ್‌ ಕಂಪನಿ ಸಿಇಓ ಹೇಳಿದ್ದಾರೆ.


ಗ್ರಾಹಕರಿಗೆ ಉತ್ತಮ ಸೇವೆ ನೀಡುವುದೇ ನಮ್ಮ ಪರಮ ಗುರಿ- ಸಿಇಒ


“ನಮ್ಮ ಗ್ರಾಹಕರು ನಿರೀಕ್ಷಿಸುವ ಗುಣಮಟ್ಟದ ಸೇವೆಯನ್ನು ನೀಡಲು ನಾವು ಸಂಪನ್ಮೂಲಗಳ ಬಗ್ಗೆ ಹೆಚ್ಚು ಜಾಗೃತರಾಗಿರುತ್ತೇವೆ ಮತ್ತು ವೋಡಾಫೋನ್ ವ್ಯಾಪಾರದ ಅನನ್ಯ ಸ್ಥಾನದಿಂದ ಮತ್ತಷ್ಟು ಬೆಳವಣಿಗೆಯನ್ನು ಹೆಚ್ಚಿಸುತ್ತೇವೆ. ಹೀಗಾಗಿ ಸ್ಥಳೀಯ ಮಾರುಕಟ್ಟೆಗಳ ಸರಳೀಕರಣದೊಂದಿಗೆ ಮೂರು ವರ್ಷಗಳಲ್ಲಿ 11,000 ಉದ್ಯೋಗಗಳನ್ನು ಕಡಿತಗೊಳಿಸಲು ಯೋಜಿಸಲಾಗಿದೆ" ಎಂದಿದ್ದಾರೆ.


ಗ್ರಾಹಕರ ವಿಷಯದಲ್ಲಿ, ವೊಡಫೋನ್ ಮುಂದಿನ ಆರ್ಥಿಕ ವರ್ಷದಲ್ಲಿ ಗ್ರಾಹಕರ ಅನುಭವ ಮತ್ತು ಬ್ರ್ಯಾಂಡ್‌ಗೆ ಗಮನಾರ್ಹ ಹೂಡಿಕೆಗಳನ್ನು ಮರುಹಂಚಿಕೆ ಮಾಡಿದೆ. ಗ್ರಾಹಕ ಮಾರುಕಟ್ಟೆಗಳಲ್ಲಿ ಗೆಲ್ಲಲು, ವೋಡಾಫೋನ್ ಮೂಲಭೂತ ಅಂಶಗಳ ಮೇಲೆ ಕೇಂದ್ರೀಕರಿಸುತ್ತದೆ. ಗ್ರಾಹಕರು ನಿರೀಕ್ಷಿಸುವ ಸರಳ ಮತ್ತು ಉತ್ತಮ ಅನುಭವವನ್ನು ನೀಡಲು ಕಂಪನಿ ಕೆಲಸ ಮಾಡಲಿದೆ.


ಮೇ ತಿಂಗಳಲ್ಲಿ ಪೂರ್ಣಾವಧಿಯ ಸಿಇಓ ಆಗಿ ಮಾರ್ಗರಿಟಾ ಡೆಲ್ಲಾ ವ್ಯಾಲೆ ನೇಮಕ


ಮುಖ್ಯ ಕಾರ್ಯ ನಿರ್ವಾಹಕ ಮಾರ್ಗರಿಟಾ ಡೆಲ್ಲಾ ವ್ಯಾಲೆ ಅವರು “ವೋಡಾಪೋನ್‌ ಕಂಪನಿಯ ಮಧ್ಯಂತರ ಮುಖ್ಯಸ್ಥರಾದ ಐದು ತಿಂಗಳ ನಂತರ, ಮೇ ತಿಂಗಳ ಆರಂಭದಲ್ಲಿ ಪೂರ್ಣಾವಧಿಯ ಸಿಇಓ ಆಗಿ ನೇಮಕಗೊಂಡಿದ್ದೇನೆ” ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ವೋಡಾಫೋನ್ ಕಂಪನಿಯಲ್ಲಿ ಈಗ ಕಡಿತಗೊಳಿಸುತ್ತಿರುವ 11,000 ಉದ್ಯೋಗ ಕಡಿತ ಕಳೆದ ವರ್ಷಕ್ಕಿಂತ ಶೇಕಡಾ 10 ಕ್ಕಿಂತ ಹೆಚ್ಚಾಗಿದೆ. ಕಳೆದ ವರ್ಷ 104,000 ಸಿಬ್ಬಂದಿಯನ್ನು ವೋಡಾಫೋನ್ ಕಂಪನಿ ಹೊಂದಿತ್ತು.


 


ಗ್ರಾಹಕರ ಮೂಲಭೂತ ಅಂಶಗಳ ಕಡೆಗೆ ಕೇಂದ್ರಿಕರಿಸಬೇಕಾಗಿರುವುದು ಕಂಪನಿಯ ಆದ್ಯ ಕರ್ತವ್ಯ - ವೋಡಾಫೋನ್ ಸಿಇಓ


“ವೋಡಾಫೋನ್ ಕಂಪನಿಯು ತನ್ನ ಗ್ರಾಹಕ ಮಾರುಕಟ್ಟೆಗಳನ್ನು ಮತ್ತೆ ಗಳಿಸುವ ಸಲುವಾಗಿ, ಕೆಲವು ಮೂಲಭೂತ ಅಂಶಗಳ ಮೇಲೆ ಕೇಂದ್ರಿಕರಿಸುವುದು ಅಗತ್ಯ ಮತ್ತು ಅವಶ್ಯಕತೆಯಿಂದ ಕೂಡಿದೆ. ಕಂಪನಿಯಿಂದ ಗ್ರಾಹಕರು ನಿರೀಕ್ಷಿಸುವ ಸರಳ ಮತ್ತು ಉತ್ತಮ ಅನುಭವವನ್ನು ಕಂಪನಿಯು ನೀಡುವಲ್ಲಿ ಬದ್ಧವಾಗಿದೆ. ಕ್ರಿಯಾ ಯೋಜನೆಯು ಮೂರು ಆದ್ಯತೆಗಳ ಸುತ್ತ ಕೇಂದ್ರೀಕೃತವಾಗಿದೆ” ಎಂದು ವೋಡಾಫೋನ್ ಕಂಪನಿ ಹೇಳಿಕೆ ನೀಡಿದೆ.


ವೋಡಾಫೋನ್ ಕಂಪನಿ ಬಗ್ಗೆ ಒಂದಿಷ್ಟು ಮಾಹಿತಿ


ವೋಡಾಫೋನ್ ಐಡಿಯಾ ಲಿಮಿಟೆಡ್ ಕಂಪನಿಯು ಆದಿತ್ಯ ಬಿರ್ಲಾ ಗ್ರೂಪ್ ಮತ್ತು ವೊಡಾಫೋನ್ ಗ್ರೂಪ್‌ಗಳ ಪಾರ್ಟನರ್‌ಶಿಪ್‌ ಕಂಪನಿಯಾಗಿದೆ. ಇದು ಭಾರತದ ಪ್ರಮುಖ ಟೆಲಿಕಾಂ ಸೇವಾ ಪೂರೈಕೆದಾರವಾಗಿದೆ. ಕಂಪನಿಯು 2G, 3G ಮತ್ತು 4G ಪ್ಲಾಟ್‌ಫಾರ್ಮ್‌ನಲ್ಲಿ ಪ್ಯಾನ್ ಇಂಡಿಯಾ ವಾಯ್ಸ್ ಮತ್ತು ಡೇಟಾ ಸೇವೆಗಳನ್ನು ಒದಗಿಸುತ್ತದೆ.


top videos
    First published: