ದೇಶಾದ್ಯಂತ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಸಂಬಂಧಿಸಿದ ಬೆಂಕಿ ಅವಘಡಗಳ ಬಗ್ಗೆ ಗಂಭೀರವಾಗಿ ಗಮನಹರಿಸಿರುವ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಸಮಸ್ಯೆ ಬಗೆಹರಿಯುವವರೆಗೆ (Electric Scooters Problem) ಯಾವುದೇ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡದಂತೆ ಎಲ್ಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬ್ರಾಂಡ್ಗಳಿಗೆ (EV makers) ಕೇಂದ್ರ ಸರ್ಕಾರ ಸೂಚಿಸಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಇತ್ತೀಚೆಗೆ ದೆಹಲಿಯಲ್ಲಿ ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದೆ. ಬ್ಯಾಟರಿ ಸ್ಕೂಟರ್ಗಳು (Electric Scooters Fire) ಬೆಂಕಿಯ ಅಪಾಯಗಳ ಹಿನ್ನೆಲೆಯಲ್ಲಿ ಅದರ ಜನರ ಮೇಲೆ ಗಂಭೀರ ಪರಿಣಾಮ ಬೀರುವ ಸಮಸ್ಯೆ ಎಂದು ಕೇಂದ್ರವು ಪರಿಗಣಿಸಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಳನ್ನು ಮಾರಾಟ ಮಾಡಲು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ತಯಾರಕರು ಯಾವುದೇ ಅಭ್ಯಂತರವಿಲ್ಲ. ಆದರೂ ಎಲೆಕ್ಟ್ರಿಕ ಸ್ಕೂಟರ್ಗಳಿಗೆ ಬೆಂಕಿ ತಗುಲಿದ ಕಾರಣವನ್ನು ಮತ್ತಷ್ಟು ತನಿಖೆ ಮಾಡಲು ಅನೇಕ ಕಂಪನಿಗಳು ತಮ್ಮ ವಾಹನಗಳನ್ನು ಹಿಂಪಡೆದಿವೆ. ಹೀಗಾಗಿ ಕೇಂದ್ರ ಸರ್ಕಾರದ ಈ ಸೂಚನೆಯ ನಂತರ ಭಾರತೀಯ ಮಾರುಕಟ್ಟೆಯಲ್ಲಿ ಪಾದಾರ್ಪಣೆ ಮಾಡಲು ಎದುರು ನೋಡುತ್ತಿರುವ EV ಬ್ರ್ಯಾಂಡ್ಗಳಿಗೆ ಏನಾಗುತ್ತದೆ ಎಂಬುದನ್ನು ನೋಡಬೇಕಾಗಿದೆ.
ಹಾನಿಗೊಳಗಾದ ಮಾದರಿಯ ಸ್ಕೂಟರ್ ಹಿಂಪಡೆದ ವಿವಿಧ ಕಂಪನಿಗಳು ಪ್ರಮುಖ ಎಲೆಕ್ಟ್ರಿಕ್ ತಯಾರಕ ಕಂಪನಿ ಒಕಿನಾವಾ 3,215 ಸ್ಕೂಟರ್ಗಳನ್ನು ಬೇಸ್ಗೆ ಹಿಂದಿರುಗಿಸುವ ಮೂಲಕ ಅತಿ ದೊಡ್ಡ ಹಿಂಪಡೆಯುವಿಕೆಯನ್ನು ಘೋಷಿಸಿದೆ. ನಂತರ ಕಳೆದ ವರ್ಷದಿಂದಲೂ ಬೆಂಕಿ ತಗುಲಿರುವ ಘಟನೆಗಳು ವರದಿಯಾಗಿರುವ ಪ್ಯೂರ್ EV ಮಾದರಿಯ 1,441 ಸ್ಕೂಟರ್ಗಳನ್ನು ಹಿಂಪಡೆದಿದೆ ಓಲಾ ಎಲೆಕ್ಟ್ರಿಕ್.
ಪುಣೆಯಲ್ಲಿ ಬ್ಯಾಟರಿ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಓಲಾ ಹಿಂಪಡೆಯಲು ನಿರ್ಧರಿಸಿದೆ. ಒಂದು ಸ್ಕೂಟರ್ ಹಾನಿಗೊಳಗಾದರೂ ಸಹ ಸ್ಕೂಟರ್ಗಳ ಸಂಪೂರ್ಣ ಬ್ಯಾಚ್ ಅನ್ನು ಹಿಂಪಡೆಯುವಂತೆ ಸರ್ಕಾರದ ಸೂಚನೆಯಿದೆ. ಈ ನಿಟ್ಟಿನಲ್ಲಿ ಓಲಾ ಈ ಕ್ರಮ ಕೈಗೊಂಡಿದೆ.
ಪ್ರಾಣವನ್ನು ಕಳೆದುಕೊಂಡಂತಹ ದುರಂತ ಈ ಹಿಂದೆ ಎಲೆಕ್ಟ್ರಿಕ್ ಸ್ಕೂಟರ್ಗಳಿಗೆ ಬೆಂಕಿ ಹಚ್ಚಿದ ಹಲವಾರು ಘಟನೆಗಳು ವರದಿಯಾದ ನಂತರ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು EV ಕಂಪನಿಗಳಿಗೆ ಸೂಕ್ಷ್ಮಿ ನಿರ್ದೇಶನ ನೀಡಿದ್ದರು. ಕೆಲವು ಸಂದರ್ಭಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್ಗಳ ಮಾಲೀಕರು ತಮ್ಮ ಪ್ರಾಣವನ್ನು ಕಳೆದುಕೊಂಡಂತಹ ದುರಂತವೂ ನಡೆದಿತ್ತು.
ಇತ್ತೀಚಿನ ಘಟನೆಯಲ್ಲಿ ಒಬ್ಬ ವ್ಯಕ್ತಿಯ ಸಾವು ಮತ್ತು ಅವನ ಹೆಂಡತಿ ಮತ್ತು ಇಬ್ಬರು ಹೆಣ್ಣುಮಕ್ಕಳಿಗೆ ಗಂಭೀರವಾದ ಬೆಂಕಿಯ ಗಾಯಗಳು ಸಂಭವಿಸಿದ್ದವು. ಹೀಗಾಗಿ ಇನ್ನೂ ತಡ ಮಾಡದೇ ಹೊಸ ಸ್ಕೂಟರ್ಗಳನ್ನು ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡದಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ನಿತಿನ್ ಗಡ್ಕರಿ ಅವರ ವ್ಯಾಪ್ತಿಗೆ ಬರುತ್ತದೆ. ಈ ಘಟನೆಗಳ ಬಗ್ಗೆ ತನಿಖೆ ನಡೆಸಲು ಮತ್ತು ಪರಿಹಾರ ಕ್ರಮಗಳನ್ನು ಶಿಫಾರಸು ಮಾಡಲು ತಜ್ಞರ ಸಮಿತಿಯನ್ನು ರಚಿಸಲಾಗಿದೆ ಎಂದು ಗಡ್ಕರಿ ಘೋಷಿಸಿದ್ದರು.
ಸರಿಪಡಿಸುವ ಕ್ರಮಗಳನ್ನು ಕೈಗೊಳ್ಳಲು ಸೂಚನೆ ಈ ಬೆಂಕಿ ಅಪಘಾತಗಳಲ್ಲಿ ಇದುವರೆಗೆ ಸಿಲುಕದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಕಂಪನಿಗಳು ತಮ್ಮ ಮಾರಾಟವಾದ ವಾಹನಗಳ ಮೇಲೆ "ಸರಿಪಡಿಸುವ ಕ್ರಮಗಳನ್ನು" ತೆಗೆದುಕೊಳ್ಳುವಂತೆ ಕೇಳಲಾಗಿದೆ ಎಂದು ವರದಿ ತಿಳಿಸಿದೆ. ಇದರರ್ಥ ಅವರ ಸ್ಕೂಟರ್ಗಳಲ್ಲಿ ಕೆಲವು ಸಮಸ್ಯೆಗಳನ್ನು ಗಮನಿಸಲಾಗಿದೆಯೇ ಅಥವಾ ಇದು ಕೇವಲ ಪೂರ್ವಭಾವಿ ಕ್ರಮವಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಅಥರ್ ಈ ವರ್ಷ ಯಾವುದೇ ಹೊಸ ಮಾದರಿಯನ್ನು ಬಿಡುಗಡೆ ಮಾಡುತ್ತಿಲ್ಲ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ