• Home
  • »
  • News
  • »
  • business
  • »
  • Invest in Karnataka: ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕವೇ ನಂಬರ್ 1, ಬರೋಬ್ಬರಿ 50 ಸಾವಿರ ಎಕರೆ ಭೂಸ್ವಾಧೀನ

Invest in Karnataka: ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕವೇ ನಂಬರ್ 1, ಬರೋಬ್ಬರಿ 50 ಸಾವಿರ ಎಕರೆ ಭೂಸ್ವಾಧೀನ

ಮುರುಗೇಶ್ ನಿರಾಣಿ

ಮುರುಗೇಶ್ ನಿರಾಣಿ

ನವೆಂಬರ್ 2ರಿಂದ  4ರವರೆಗೆ ನಡೆಯಲಿರುವ  ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಉದ್ದಿಮೆ ಆರಂಭಿಸುವವರಿಗೆ 50 ಸಾವಿರ ಎಕರೆ ಜಮೀನನ್ನು ಭೂಸ್ವಾಧೀನ ಪಡೆಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

  • Share this:

ನವದೆಹಲಿ, ಮೇ 9: ಹವಾಮಾನ, ಮೂಲಸೌಕರ್ಯ, ವಿದ್ಯುತ್ ಮತ್ತಿತರ ವಿಷಯಗಳಲ್ಲಿ ಅತ್ಯಂತ ಸಮೃದ್ಧವಾಗಿರುವ  ಕರ್ನಾಟಕದಲ್ಲಿ(Karnataka) ಉದ್ಯಮಗಳಿಗೆ ಪೂರಕ ವಾತಾವರಣವಿದೆ. ದೇಶದಲ್ಲೇ ಮೊದಲ ಸ್ಥಾನಕ್ಕೆ ಏರಬಹುದಾದ ಅವಕಾಶಗಳಿವೆ. ಈ ನಿಟ್ಟಿನಲ್ಲಿ ಕೈಗಾರಿಕಾ ವಲಯಕ್ಕೆ ಹೆಚ್ಚು ಆದ್ಯತೆ ನೀಡಲು  ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ (Industrial Minister Murugesh Nirani) ಅವರು ಸೋಮವಾರ ನವದೆಹಲಿಯಲ್ಲಿ ವಿವಿಧ ದೇಶಗಳ ರಾಯಭಾರಿಗಳನ್ನು ಭೇಟಿ ಮಾಡಿದರು. ಅಲ್ಲದೇ, ಬೆಂಗಳೂರಿನಲ್ಲಿ ನವೆಂಬರ್ 2 ರಿಂದ 4 ರವರೆಗೆ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ (Global Investors Meet Bengaluru) ಭಾಗವಹಿಸಿ ರಾಜ್ಯದಲ್ಲಿ ‌ಬಂಡವಾಳ‌ ಹೂಡಿಕೆ ಮಾಡುವಂತೆ ‌ಆಹ್ವಾನಿಸಿದರು.


ಕೈಗಾರಿಕಾ ಕ್ಷೇತ್ರಕ್ಕೆ ಪೂರಕವಾಗಿರುವ ಕರ್ನಾಟಕ
ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಮುರುಗೇಶ್ ‌ನಿರಾಣಿ ಅವರು, ಕರ್ನಾಟಕ ಇಂದು ದೇಶದಲ್ಲೇ ಅತ್ಯಂತ ಪ್ರಗತಿಪರ ರಾಜ್ಯವಾಗಿದೆ. ಇಲ್ಲಿನ ನೈಸರ್ಗಿಕ ಸಂಪನ್ಮೂಲಗಳು, ಐಟಿಬಿಟಿ, ರಕ್ಷಣಾ, ವೈಮಾನಿಕ, ಕೃಷಿ, ಸ್ಟಾರ್ಟ್  ಅಪ್, ಯೂನಿಕಾರ್ನ್, ಗಣಿ, ಆರೋಗ್ಯ, ಆಹಾರ ಮತ್ತು ಸಂಸ್ಕರಣಾ ಘಟಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದೇವೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.


ಯಾವ ದೇಶಗಳು ರಾಯಭಾರಿಗಳನ್ನು ಭೇಟಿಯಾದರು?
ಜರ್ಮನ್ ರಾಯಭಾರಿ ಕಚೇರಿಗೆ ಭೇಟಿ ಕೊಟ್ಟ ಸಚಿವ ಮುರುಗೇಶ್ ನಿರಾಣಿಯವರು ಜರ್ಮನಿಯ ಫೆಡೆರಲ್ ರಿಪಬ್ಲಿಕ್ ಆಂಡ್ ಮಿಷನ್ ಡೆಪ್ಯುಟಿ ಚೀಫ್ ಡಾ.ಸ್ಟೀಫನ್ ಗ್ರಾಬರ್, ನಂತರ ಕೊರಿಯಾದ ರಾಯಭಾರಿ ಚಾಂಗ್  ಜೆ-ಬೋಕ್,  ಜಪಾನ್ ದೇಶದ ಡೆಪ್ಯುಟಿ ಚೀಫ್ ಕುಹಿನಿಕೊ ಕವಾಜು , ಬ್ರಿಟಿಷ್ ಡೆಪ್ಯುಟಿ ಟ್ರೇಡ್ ಕಮಿಷನರ್ರೈಯಾನನ್ ಹ್ಯಾರಿಸ್, ಭಾರತದ ಬ್ರಿಟಿಷ್ ಹೈ ಕಮಿಷನ್ ನ ಅರ್ಥಶಾಸ್ತ್ರ ಮತ್ತು ಹಣಕಾಸು ಮುಖ್ಯಸ್ಥ ಆಡಮ್ ಟೇಲರ್,ಕೇಂದ್ರ ಸರ್ಕಾರದ ರಾಷ್ಟ್ರೀಯ ಹೂಡಿಕೆ ಉತ್ತೇಜನ ಸಂಸ್ಥೆಯಾದ ಇನ್ವೆಸ್ಟ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಓ ದೀಪಕ್ ಬಾಗ್ಲ ಸೇರಿದಂತೆ ಮತ್ತಿತರ ದೇಶಗಳ ರಾಯಭಾರಿಗಳನ್ನು ಭೇಟಿ ಮಾಡಿ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಲು ಆಹ್ವಾನ ಕೊಟ್ಟರು.


ಹೂಡಿಕೆದಾರರಿಗೆ ಕೆಂಪು ರತ್ನಗಂಬಳಿ ಸ್ವಾಗತ
ಸಿಲಿಕಾನ್ ವ್ಯಾಲಿ ಎಂದೇ ಕರೆಯುವ ಬೆಂಗಳೂರನ್ನು ನಾಲ್ಡೆಜ್ ಹಬ್  ಎಂದೇ ಪ್ರಸಿದ್ದಿಯಾಗಿದೆ. ವಿಶ್ವದ ಸುಪ್ರಸಿದ್ದ ಕೈಗಾರಿಕೆಗಳು ಇಲ್ಲಿ ಸ್ಥಾಪಿತವಾಗಿದೆ. ಕೈಗಾರಿಕಾ ಸ್ನೇಹಿ ಸರ್ಕಾರ ನಮ್ಮದಾಗಿದ್ದು, ಹೂಡಿಕೆದಾರರಿಗೆ ಕೆಂಪು ರತ್ನಗಂಬಳಿ ಹಾಕುತ್ತೇವೆ ಎಂದು ತಿಳಿಸಿದರು. ರಾಜ್ಯ ಸರ್ಕಾರ ಜಾರಿಗೆ ತಂದಿರುವ 2020-25ರ ಕೈಗಾರಿಕಾ ನೀತಿ ಉದ್ಯಮಿಗಳಿಗೆ ವರದಾನವಾಗಿ ಪರಿಣಮಿಸಿದೆ.  ಇದರಿಂದಾಗಿ  ನಾನಾ ರಾಷ್ಟ್ರಗಳಿಂದ ಕರ್ನಾಟಕಕ್ಕೆ ಬಂಡವಾಳ ಹೂಡಲು ಉದ್ಯಮಿಗಳು ಮುಂದೆ ಬರುತ್ತಿದ್ದಾರೆ ಎಂದು ಮೆಚ್ಚುಗೆ ‌ವ್ಯಕ್ತಪಡಿಸಿದರು.


ಮೊದಲ ಸ್ಥಾನದಲ್ಲಿರುವ ಕರ್ನಾಟಕ
ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಬರುವ  ಉದ್ಯಮಿಗಳಿಗೆ  ಇಲಾಖೆಯು ಅಗತ್ಯವಿರುವ ಭೂಮಿ, ನೀರು, ರಸ್ತೆ ಸೇರಿದಂತೆ ವಿಶ್ವದರ್ಜೆಯ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುತ್ತಿದ್ದೇವೆ. ಕಳೆದ ತ್ರೈಮಾಸಿಕ ಅವಧಿಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ  ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಇದಕ್ಕೆ ಸರ್ಕಾರದ ಕೈಗಾರಿಕಾ ಸ್ನೇಹಿ  ನೀತಿಗಳೇ ಕಾರಣ ಎಂದು ಸಚಿವ ಮುರುಗೇಶ್ ನಿರಾಣಿ ಶ್ಲಾಘಿಸಿದರು.


ಇದನ್ನೂ FD Interest Rate Hike: ಹೆಚ್ಚಾಯ್ತು ಎಫ್​ಡಿ ಬಡ್ಡಿದರ, ಹಣವನ್ನು ಬ್ಯಾಂಕಲ್ಲಿ ಇಡೋದೇ ಬೆಸ್ಟಾ?


ಬೆಂಗಳೂರು ಮಾತ್ರವಲ್ಲದೆ 2ನೇ ಹಂತದ ನಗರಗಳಾದ ಮೈಸೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿಘಿ, ಧಾರವಾಡ, ಕಲಬುರಗಿ ಅದೇ ರೀತಿ 3ನೇ ಹಂತದ ನಗರಗಳಾದ ಶಿವಮೊಗ್ಗ, ತುಮಕೂರು, ಬಳ್ಳಾರಿ, ಬೀದರ್, ಬಾಗಲಕೋಟೆ ಸೇರಿದಂತೆ ಎಲ್ಲಾ ಕಡೆ  ಬಂಡವಾಳ ಹೂಡಿಕೆಗೆ ಉದ್ಯಮಿಗಳು ಮುಂದೆ ಬರುತ್ತಿದ್ದಾರೆ. ಉದ್ಯಮಿಗಳಿಗೆ ನಮ್ಮ ಸರ್ಕಾರ ಸದಾ ಬೆಂಗಾವಲಿಗೆ ಇರುತ್ತದೆ ಎಂದು ಉದ್ಯಮಿಗಳಿಗೆ ಆಶ್ವಾಸನೆ ನೀಡಿದರು.


ನವೆಂಬರ್ 2ರಿಂದ ಜಾಗತಿಕ ಹೂಡಿಕೆದಾರರ ಸಮಾವೇಶ
ಈ ಹಿಂದೆ ನಮ್ಮ ಸರ್ಕಾರ ಎರಡು ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ನಡೆಸಿತ್ತು. ಪರಿಣಾಮ ರಾಜ್ಯದ ಎಲ್ಲೆಡೆ ಇಂದು ಅನೇಕ ಕೈಗಾರಿಕೆಗಳು ತಲೆ ಎತ್ತಿ ನಿಂತಿವೆ.


ಇದನ್ನೂ ಓದಿ: Nirmala Sitharaman Viral Video: ವಿಡಿಯೋದಲ್ಲಿ ಬಯಲಾಯ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾನವೀಯತೆ! ವೈರಲ್ ವಿಡಿಯೋ ನೋಡಿ


ನವೆಂಬರ್ 2ರಿಂದ  4ರವರೆಗೆ ನಡೆಯಲಿರುವ  ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಉದ್ದಿಮೆ ಆರಂಭಿಸುವವರಿಗೆ 50 ಸಾವಿರ  ಎಕರೆ ಜಮೀನನ್ನು ಭೂಸ್ವಾಧೀನ ಪಡೆಸಿಕೊಂಡಿದ್ದೇವೆ ಎಂದು ತಿಳಿಸಿದ ಸಚಿವ ಮುರುಗೇಶ್ ನಿರಾಣಿ ಮುಕ್ತ ಮನಸ್ಸಿನಿಂದ ಬಂಡವಾಳ ಹೂಡುವಂತೆ   ಮನವಿ ಮಾಡಿದರು. ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ. ರಮಣ ರೆಡ್ಡಿ, ಆಯುಕ್ತರಾದ ಗುಂಜನ್ ಕೃಷ್ಣ ಮತ್ತಿತರರು ಹಾಜರಿದ್ದರು.

Published by:ಗುರುಗಣೇಶ ಡಬ್ಗುಳಿ
First published: