Business Tips: ಬಿಡುವಿನ ವೇಳೆಯಲ್ಲಿ ಆರಂಭವಾದ ಸಣ್ಣ ಉದ್ಯಮದಿಂದ ವರ್ಷಕ್ಕೆ ಕೋಟಿ ಕೋಟಿ ಆದಾಯ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅನೇಕ ಗೃಹಿಣಿಯರೂ ಕೂಡ ತಮ್ಮದೇ ಆದ ಸಣ್ಣ ಉದ್ಯಮವನ್ನು ನಡೆಸಬೇಕು ಎಂದುಕೊಳ್ಳುತ್ತಾರೆ. ಆದರೆ ಧೈರ್ಯ ಹಾಗೂ ಮಾಹಿತಿಗಳ ಕೊರತೆಯಿಂದ ಸುಮ್ಮನಿರುತ್ತಾರೆ. ಹೀಗೆ ಕನಸನ್ನು ಕೈಯ್ಯಲ್ಲಿ ಕಟ್ಟಿ ಕೂತವರಿಗೆ ಅನೇಕ ವ್ಯಕ್ತಿಗಳು ಸ್ಪೂರ್ತಿಯಾಗುತ್ತಾರೆ. ಅವರಲ್ಲಿ ಒಬ್ಬರು ಲಂಡನ್‌ ಮೂಲದ ಸ್ಟೆಫ್‌ ಡೌಗ್ಲಾಸ್‌

ಮುಂದೆ ಓದಿ ...
  • Trending Desk
  • 5-MIN READ
  • Last Updated :
  • Share this:

    ಬಹಳಷ್ಟು ಜನರಿಗೆ ಬೇರೆಯವರ ಕೈಕೆಳಗೆ ಕೆಲಸ ಮಾಡೋಕೆ ಇಷ್ಟವಿರುವುದಿಲ್ಲ. ಸ್ವಂತದ್ದೇನಾದರೂ ಉದ್ಯಮ (Own Industry) ಆರಂಭಿಸಬೇಕು ಎಂದು ಕನಸು ಕಾಣುತ್ತಾರೆ. ಹಾಗೆಯೇ ಅನೇಕ ಗೃಹಿಣಿಯರೂ ಕೂಡ ತಮ್ಮದೇ ಆದ ಸಣ್ಣ ಉದ್ಯಮವನ್ನು ನಡೆಸಬೇಕು ಎಂದುಕೊಳ್ಳುತ್ತಾರೆ. ಆದರೆ ಧೈರ್ಯ ಹಾಗೂ ಮಾಹಿತಿಗಳ ಕೊರತೆಯಿಂದ ಸುಮ್ಮನಿರುತ್ತಾರೆ. ಹೀಗೆ ಕನಸನ್ನು ಕೈಯ್ಯಲ್ಲಿ ಕಟ್ಟಿ ಕೂತವರಿಗೆ ಅನೇಕ ವ್ಯಕ್ತಿಗಳು ಸ್ಪೂರ್ತಿಯಾಗುತ್ತಾರೆ. ಅವರಲ್ಲಿ ಒಬ್ಬರು ಲಂಡನ್‌ (London) ಮೂಲದ ಸ್ಟೆಫ್‌ ಡೌಗ್ಲಾಸ್‌ (Steph Douglas). ಈಕೆ ತನ್ನ ಬಿಡುವಿನ ವೇಳೆಯಲ್ಲಿ ಏನಾದರೂ ಆದಾಯ ಬರುವಂಥ ಕೆಲಸ ಮಾಡೋಣ ಎಂದುಕೊಂಡಿದ್ದರ ಪರಿಣಾಮ ಇದೀಗ ಯಶಸ್ವೀ ಉದ್ಯಮವೊಂದನ್ನು ನಡೆಸುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಕೋಣೆಯೊಂದರಲ್ಲಿ ಆರಂಭವಾದ ಅರೆಕಾಲಿಕ ಸೈಡ್‌ ಬ್ಯುಸಿನೆಸ್‌ನಿಂದ ವರ್ಷಕ್ಕೆ 3 ಮಿಲಿಯನ್‌ ಡಾಲರ್‌ ಗಳಿಸುತಿದ್ದಾರೆ.


    ಲಂಡನ್ ಮೂಲದ ಸ್ಟೆಫ್ ಡೌಗ್ಲಾಸ್ 2014 ರಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಬ್ರಾಂಡಿಂಗ್‌ ಮಾರ್ಕೆಟರ್‌ ಆಗಿ ಮಾಡುತ್ತಿದ್ದ ಕೆಲಸವನ್ನು ತೊರೆದರು. ಹಾಗೆಯೇ ಆನ್‌ಲೈನ್ ಗಿಫ್ಟಿಂಗ್ ಕಂಪನಿ ಡೋಂಟ್ ಬೈ ಹರ್ ಫ್ಲವರ್ಸ್‌ಗೆ ಪೂರ್ಣ ಸಮಯವನ್ನು ನೀಡಿದರು. ಎಲ್ಲರಿಗೂ ಗೊತ್ತಿರುವಂತೆ ಮಕ್ಕಳಾದ ಮೇಲೆ ಖರ್ಚು ಹೆಚ್ಚಾಗುತ್ತದೆ. ಇದಕ್ಕೆ ಡೌಗ್ಲಾಸ್‌ ಕುಟುಂಬ ಕೂಡ ಹೊರತಾಗಿಲ್ಲ. ಇದಕ್ಕಾಗಿ ಡೌಗ್ಲಾಸ್ 2010 ರಲ್ಲಿ ವ್ಯವಹಾರದ ಕಲ್ಪನೆಯೊಂದಿಗೆ ಬಂದರು.


    ನಂತರ ಬಿಡುವಿನ ವೇಳೆಯಲ್ಲಿ ತಮ್ಮ ಕನಸಿನ ಉದ್ಯಮವನ್ನು ಬೆಳೆಸಲು ಕೆಲಸ ಮಾಡತೊಡಗಿದರು. ಕಷ್ಟ ಪಟ್ಟು ಕೆಲಸ ಮಾಡಿದ್ದು ಕೊನೆಗೂ ಫಲ ನೀಡಿತು. ಕಳೆದ ವರ್ಷ ಅವರು 20 ಕೋಟಿಗೂ ಹೆಚ್ಚಿನ ವ್ಯವಹಾರ ಮಾಡಿದ್ದಾರೆ. ಹೀಗೆ ಸ್ವಂತದ ಉದ್ಯಮ ನಡೆಸುವವರಿಗೆ ಡೌಗ್ಲಾಸ್‌ ಕೆಲವೊಂದಿಷ್ಟು ಸಲಹೆಗಳನ್ನು ನೀಡುತ್ತಾರೆ.


    • ನಿಮ್ಮ ದಿನದ ಕೆಲಸವನ್ನು ಬಿಡಬೇಡಿ:


    ನೀವು ನಿಮ್ಮ ಸ್ವಂತ ಉದ್ಯಮವನ್ನು ಶುರು ಮಾಡುತ್ತೀರೆಂಬ ಕಾರಣಕ್ಕೆ ನಿಮ್ಮ ಕೆಲಸವನ್ನು ಬಿಟ್ಟು ಬಿಡಬೇಕೆಂದೇನಿಲ್ಲ. ಬದಲಾಗಿ ನೀವು ಕೆಲಸ ಮಾಡುತ್ತಲೇ ಬಿಡುವಿನ ವೇಳೆಯಲ್ಲಿ ಸಣ್ಣದಾಗಿ ಸೈಡ್‌ಗಿಡ್‌ ಅನ್ನು ಆರಂಭಿಸಿ. ವೇತನ ಹಾಗೆಯೇ ಬರುತ್ತಿರಲಿ. ಆ ಆರ್ಥಿಕ ಸುರಕ್ಷತೆಯ ಜೊತೆಗೆ ನೀವು ಉದ್ಯಮ ಆರಂಭಿಸಿ. ತುಂಬಾ ಬೇಗ ಜಂಪ್‌ ಮಾಡುವಂಥ ಅವಶ್ಯಕತೆ ಇಲ್ಲ ಎಂಬುದಾಗಿ ಡೌಗ್ಲಾಸ್‌ ಎಚ್ಚರಿಕೆ ನೀಡುತ್ತಾರೆ.


    ಇದನ್ನೂ ಓದಿ: ಡಿಜಿಲಾಕರ್​ನಿಂದ ವ್ಯಾಪಾರಿಗಳಿಗಿದೆ ಇಷ್ಟೆಲ್ಲ ಪ್ರಯೋಜನ! ನೀವೂ ಚೆಕ್ ಮಾಡಿ


    ಅಲ್ದೇ ರಾತ್ರೋ ರಾತ್ರೋ ಎಲ್ಲರಿಗೂ ಯಶಸ್ಸು ಒಲಿದು ಬಿಡುವುದಿಲ್ಲ. ನಿಮ್ಮ ಕರಕುಶಲತೆಯನ್ನು ನಿಜವಾಗಿಯೂ ಅಭಿವೃದ್ಧಿಪಡಿಸಲು ಸಮಯ ನೀಡಿ. ನೀವು ಅಂತಿಮವಾಗಿ ನಿಮ್ಮ ರಾಜೀನಾಮೆ ಪತ್ರವನ್ನು ನೀಡಿದಾಗ ಅದು ಟೇಕ್ ಆಫ್ ಆಗುತ್ತದೆ.


    • ನಿಮ್ಮ ನೆಟ್ವರ್ಕ್ ಬಳಸಿಕೊಳ್ಳಿ:


    ನಿಮಗೆ ಹತ್ತಿರವಿರುವವರಿಗಿಂತ ಅಪರಿಚಿತರಿಗೆ ನಿಮ್ಮ ಹೊಸ ಉದ್ಯಮದ ಬಗ್ಗೆ ಹೇಳುವುದು ಸುಲಭ ಎನಿಸಬಹುದು. ಆದರೆ ಡೌಗ್ಲಾಸ್ ಹೇಳುವ ಪ್ರಕಾರ ನಿಮ್ಮ ನೆಟ್‌ವರ್ಕ್‌ ನಲ್ಲಿ ಯಾರಿದ್ದಾರೆ ಅವರಿಗೆಲ್ಲರಿಗೂ ನಿಮ್ಮ ಉದ್ಯಮದ ಬಗ್ಗೆ ಹೇಳಬೇಕು. ನಿಮ್ಮ ಸ್ನೇಹಿತರು ಅಥವಾ ನಿಮ್ಮ ಕುಟುಂಬದವರನ್ನು, ಸಂಬಂಧಿಕರನ್ನು ಇದರಲ್ಲಿ ತೊಡಗಿಸಿಕೊಳ್ಳಿ.


    ಸಾಂದರ್ಭಿಕ ಚಿತ್ರ


    ನಿಮಗೆ ಗೊತ್ತಿರುವವರು ಚೆನ್ನಾಗಿ ಕೆಲಸ ಮಾಡುತ್ತಾರೆಂದರೆ ಅವರನ್ನು ನೇಮಿಸಿಕೊಳ್ಳಿ. ಏಕೆಂದರೆ ಅವರ ಮೇಲೆ ನಿಮಗೆ ನಂಬಿಕೆ ಇರುತ್ತದೆ. ಅಪರಿಚಿತರಿಗಿಂತ ನೀವು ನಂಬುವ ಜನರೊಂದಿಗೆ ಕೆಲಸ ಮಾಡುವುದು ಸುಲಭವಾಗಿದೆ.


    • ಡು ಇಟ್‌ ಯುವರ್‌ಸೆಲ್ಫ್‌:


    "ನಿಮ್ಮ ವೆಚ್ಚವನ್ನು ನೀವು ಸಾಧ್ಯವಾದಷ್ಟು ಕಡಿಮೆ ಮಾಡಲು ಪ್ರಯತ್ನಿಸಿ. ನಿಮ್ಮ ಉತ್ಪನ್ನ ಅಥವಾ ಸೇವೆಯ ಬಗ್ಗೆ ಇತರರಿಗಿಂತ ಹೆಚ್ಚಾಗಿ ನಿಮಗೇ ಗೊತ್ತಿರುತ್ತದೆ. ಅದಕ್ಕಾಗಿಯೇ ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ಬ್ರ್ಯಾಂಡ್‌ನ ಧ್ವನಿ, ಜನರ ಫೀಡ್‌ಬ್ಯಾಕ್‌ಗಳನ್ನು ನೋಡುವುದು, ಫಾಲೋವರ್ಸ್‌ಗಳ ಸಣ್ಣ ಸಮುದಾಯವನ್ನು ನಿರ್ಮಿಸುವವರೆಗೆ ನೀವೇ ಕೆಲಸ ಮಾಡುವುದು ಉತ್ತಮ.


    ಇದರಿಂದ ನಿಮ್ಮ ಹಣ ಉಳಿತಾಯವಾಗುವುದರ ಜೊತೆಗೆ, ಮಾರ್ಕೆಟಿಂಗ್ ತಂಡವನ್ನು ಹೊರಗುತ್ತಿಗೆ ನೀಡುವ ಮೊದಲು ನಿಮ್ಮ ಗ್ರಾಹಕರ ಬಗ್ಗೆ ನೀವೇ ಹೆಚ್ಚು ತಿಳಿದುಕೊಳ್ಳಲು ಸಹಾಯವಾಗುತ್ತದೆ. ಇದರಿಂದ ಹೊರಗುತ್ತಿಗೆ ಪಡೆದ ಏಜೆನ್ಸಿಗಳು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ನಿಮಗೆ ಗೊತ್ತಿರುತ್ತದೆ.


    • ನಂಬಿಕೆ ಇಡಿ:


    ವ್ಯವಹಾರವನ್ನು ನೀವೇ ಎಷ್ಟರ ಮಟ್ಟಿಗೆ ಮಾಡಬಹುದು ಎಂಬುದಕ್ಕೆ ಮಿತಿ ಇದೆ. ಹೊರಗುತ್ತಿಗೆ ವೆಚ್ಚಗಳೊಂದಿಗೆ ತುಂಬಾ ಜಾಗರೂಕರಾಗಿರುವುದು ತನ್ನ ವ್ಯವಹಾರ ಹಿಮ್ಮೆಟ್ಟಿಸಲು ಕಾರಣವಾಯಿತು ಎಂಬುದಾಗಿ ಡೌಗ್ಲಾಸ್‌ ಹೇಳುತ್ತಾರೆ. ಪ್ರತಿ ಚಿಕ್ಕ ಚಿಕ್ಕ ಲೆಕ್ಕಗಳನ್ನು ಎಣಿಸುವಾಗ ನಿಮ್ಮ ಗುರಿಯು ಹಣ ಗಳಿಸುವುದೇ ಆಗಿದೆ. ಇದರಿಂದ ನೀವು ಅದನ್ನು ನಿಮ್ಮ ಪೂರ್ಣ ಸಮಯದ ಉದ್ಯಮವಾಗಿ ಪರಿವರ್ತಿಸಬಹುದು ಎಂದುಕೊಳ್ಳುತ್ತಿರಿ.


    ನೀವೇ ಎಲ್ಲವನ್ನು ಮಾಡಬಹುದು ಎಂದುಕೊಳ್ಳಬೇಡಿ. ವಾಸ್ತವವಾಗಿ, ನಿಮ್ಮ ಶಕ್ತಿಯನ್ನು ಎಲ್ಲಿ ಉತ್ತಮವಾಗಿ ಬಳಸಿಕೊಳ್ಳಬಹುದು ಎಂದು ಯೋಚಿಸುವುದು ಉತ್ತಮ ಎಂಬುದಾಗಿ ಅವರು ಹೇಳುತ್ತಾರೆ.




    ಪೂರಕ ಉದ್ಯಮ:


    ನಿಮ್ಮ ಮುಖ್ಯ ಉದ್ಯಮಕ್ಕೆ ಪೂರಕವಾಗಿ ಇನ್ನೊಂದು ಉದ್ಯಮವನ್ನು ಆರಂಭಿಸಬಹುದು ಎಂಬುದಾಗಿ ಡೌಗ್ಲಾಸ್‌ ಹೇಳುತ್ತಾರೆ. ಸಾಂಕ್ರಾಮಿಕ ಸಮಯದಲ್ಲಿ ಹೂವಿನ ಅಂಗಡಿಗಳು ಮುಚ್ಚಲ್ಪಟ್ಟಾಗ ಆನ್‌ಲೈನ್‌ನಲ್ಲಿ ಮಾರಾಟ ಆರಂಭಿಸಿದ್ದರಿಂದ ಮಾರಾಟ ಹೆಚ್ಚಾಯಿತು. ಆದ್ದರಿಂದ ನಿಮ್ಮ ಉದ್ಯಮಕ್ಕೆ ಸಹಾಯಕವಾಗುವ, ಲಾಭ ತಂದುಕೊಡುವಂಥ ಪೂರಕ ಉದ್ಯಮವನ್ನು ಆರಂಭಿಸುವುದರಲ್ಲಿ ತಪ್ಪೇನಿಲ್ಲ ಎಂಬುದಾಗಿ ಡೌಗ್ಲಾಸ್‌ ಹೇಳುತ್ತಾರೆ.

    Published by:Prajwal B
    First published: