15 ಕೋಟಿ ಸ್ಯಾಲರಿ ಪಡೆಯುತ್ತಿದ್ದ Ambani ಈ ವರ್ಷ ಒಂದು ರೂಪಾಯಿ ತೆಗೆದುಕೊಂಡಿಲ್ಲ, ಕಾರಣವೇನು?

ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ, ಉದ್ಯಮಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಈ ವರ್ಷ ಕೂಡ ಒಂದು ರೂಪಾಯಿ ಸಂಬಳವನ್ನು ಪಡೆದುಕೊಂಡಿಲ್ಲ ಎಂದು ಕಂಪನಿಗೆ ಸಂಬಂಧಿಸಿದ ವರದಿಗಳು ತಿಳಿಸಿವೆ. ಕೋವಿಡ್ ನಿಂದಾಗಿ ಕಳೆದ ವರ್ಷವೂ ಇದೇ ರೀತಿ ಕ್ರಮ ತೆಗೆದುಕೊಂಡು ಮಾದರಿಯಾಗಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಖೇಶ್ ಅಂಬಾನಿ 2021-22ರಲ್ಲೂ ಕಂಪನಿಯಿಂದ ಯಾವುದೇ ರೀತಿಯ ಸಂಬಳ ಪಡೆದುಕೊಂಡಿಲ್ಲ.

ಮುಖೇಶ್ ಅಂಬಾನಿ

ಮುಖೇಶ್ ಅಂಬಾನಿ

  • Share this:
ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ (Richest Man), ಉದ್ಯಮಿ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಅಧ್ಯಕ್ಷ ಮುಖೇಶ್ ಅಂಬಾನಿ (Mukesh Ambani) ಈ ವರ್ಷ ಕೂಡ ಒಂದು ರೂಪಾಯಿ ಸಂಬಳವನ್ನು ಪಡೆದುಕೊಂಡಿಲ್ಲ ಎಂದು ಕಂಪನಿಗೆ ಸಂಬಂಧಿಸಿದ ವರದಿಗಳು ತಿಳಿಸಿವೆ. ಕೋವಿಡ್ ನಿಂದಾಗಿ ಕಳೆದ ವರ್ಷವೂ ಇದೇ ರೀತಿ ಕ್ರಮ ತೆಗೆದುಕೊಂಡು ಮಾದರಿಯಾಗಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಖೇಶ್ ಅಂಬಾನಿ 2021-22ರಲ್ಲೂ ಕಂಪನಿಯಿಂದ ಯಾವುದೇ ರೀತಿಯ ಸಂಬಳ (Salary) ಪಡೆದುಕೊಂಡಿಲ್ಲ.  ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿ ಅದೆಷ್ಟೋ ಉದ್ಯೋಗಿಗಳು ಸಂಬಳವಿಲ್ಲದೇ ಕಷ್ಟಪಟ್ಟಿದ್ದರು. ಈ ಪರಿಸ್ಥಿತಿಯಲ್ಲಿ ಅಂಬಾನಿ ತಮ್ಮ 2020-21ನೇ ಆರ್ಥಿಕ ವರ್ಷದಲ್ಲಿ ವಾರ್ಷಿಕ ವೇತನವನ್ನು (Annual Salary) ಸ್ವಯಂಪ್ರೇರಣೆಯಿಂದ ಸಂಪೂರ್ಣವಾಗಿ ಬಿಟ್ಟುಕೊಟ್ಟಿದ್ದರು.

ಕಳೆದ ವರ್ಷವೂ ಸಂಬಳ ತ್ಯಜಿಸಿದ್ದ ಉದ್ಯಮಿ ಮುಖೇಶ್ ಅಂಬಾನಿ

ರಿಲಯನ್ಸ್ ಸಂಸ್ಥೆ ತನ್ನ ಇತ್ತೀಚಿನ ವಾರ್ಷಿಕ ವರದಿಯಲ್ಲಿ ಅಂಬಾನಿ ಅವರ ವೇತನ 2021-22ರಲ್ಲಿ ಶೂನ್ಯ ಎಂದು ನಮೂದಿಸಿದೆ. ಅಲ್ಲದೇ ಅಂಬಾನಿ ಸಹ ಭತ್ಯೆಗಳು, ಪರ್ಕ್ವಿಸೈಟ್‌ಗಳು, ಕಮಿಷನ್, ಸ್ಟಾಕ್ ಆಯ್ಕೆ ಮುಂತಾದ ಯಾವುದೇ ಪ್ರಯೋಜನವನ್ನು ಸಹ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಡಿ ಅಂಬಾನಿ ಪಡೆದುಕೊಂಡಿಲ್ಲ ಎಂದು ತಿಳಿಸಿದೆ.

ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ವ್ಯಾಪಿಸಿದ್ದು, ಆರ್ಥಿಕ, ಸಾಮಾಜಿಕ, ಕೈಗಾರಿಕ ಚಟುವಟಿಕೆಗಳು ಕುಸಿತ ಕಂಡಿದ್ದು ರಿಲಾಯನ್ಸ್ ನ ಅಧ್ಯಕ್ಷ ಹಾಗೂ ಎಂಡಿ ಅಂಬಾನಿ ಸ್ವಯಂ ಪ್ರೇರಿತರಾಗಿ ತಮ್ಮ ವೇತನ ಬಿಟ್ಟುಕೊಡುವುದಕ್ಕೆ ನಿರ್ಧರಿಸಿದ್ದಾರೆ ಎಂದು ಸಂಸ್ಥೆ ಕಳೆದ ವರ್ಷ 2020 ಜೂನ್ ನಲ್ಲಿ ತಿಳಿಸಿತ್ತು.

15 ಕೋಟಿ ರೂಪಾಯಿ ಸಂಬಳ ಪಡೆಯುತ್ತಿದ್ದ ಅಂಬಾನಿ

ಇದಕ್ಕೂ ಮೊದಲು ಅಂಬಾನಿ ಅವರು 2008-09 ರಿಂದ 15 ಕೋಟಿ ರೂಪಾಯಿಗಳನ್ನು ಸಂಸ್ಥೆಯಿಂದ ಸಂಬಳ ರೂಪದಲ್ಲಿ ಪಡೆದಿದ್ದಾರೆ. ಇನ್ನು 2019 -20ರಲ್ಲಿ 11 ವರ್ಷಗಳ ವಾಡಿಕೆಯಂತೆ ರೂ. 15 ಕೋಟಿ ವೇತನ ಪಡೆದಿದ್ದಾರೆ. ಸಂಬಳದಿಂದ ಅಂಬಾನಿ ಅವರ ವಾರ್ಷಿಕ ಆದಾಯದ ಮೊತ್ತ 24 ಕೋಟಿಯಷ್ಟಿದೆ.

ಇದನ್ನೂ ಓದಿ: Googleನಲ್ಲೂ ಜನ ಕೆಲಸ ಕಳೆದುಕೊಳ್ಳೋ ದಿನ ಬೇಗ ಬರುತ್ತಂತೆ, Sundar Pichai ಹೀಗಂದ್ರು!

ಅಂಬಾನಿ ಅವರ ಸೋದರ ಸಂಬಂಧಿಗಳಾದ ನಿಖಿಲ್ ಮತ್ತು ಹೇತಾಲ್ ಮೆಸ್ವಾನಿ ಅವರ ಸಂಭಾವನೆಯು 24 ಕೋಟಿ ರೂ.ಗಳಾಗಿದೆ. ಕಂಪನಿಯ ಮಂಡಳಿಯಲ್ಲಿ ಕಾರ್ಯನಿರ್ವಾಹಕೇತರ ನಿರ್ದೇಶಕಿಯಾಗಿರುವ ಅಂಬಾನಿ ಅವರ ಪತ್ನಿ ನೀತಾ ಅವರು ಸಿಟ್ಟಿಂಗ್ ಶುಲ್ಕವಾಗಿ 5 ಲಕ್ಷ ರೂಪಾಯಿ ಮತ್ತು ವರ್ಷಕ್ಕೆ 2 ಕೋಟಿ ರೂಪಾಯಿ ಕಮಿಷನ್ ಗಳಿಸಿದ್ದಾರೆ. ಹಿಂದಿನ ವರ್ಷ 8 ಲಕ್ಷ ಸಿಟ್ಟಿಂಗ್ ಶುಲ್ಕ ಮತ್ತು 1.65 ಕೋಟಿ ಕಮಿಷನ್ ಪಡೆದಿದ್ದಾರೆ ನೀತಾ ಅಂಬಾನಿ.

ಕಾರ್ಯನಿರ್ವಾಹಕ ನಿರ್ದೇಶಕರ ಸಂಭಾವನೆಯಲ್ಲಿ ಕೊಂಚ ಇಳಿಕೆ

ಕಾರ್ಯನಿರ್ವಾಹಕ ನಿರ್ದೇಶಕರಾದ ಪಿಎಂಎಸ್ ಪ್ರಸಾದ್ ಮತ್ತು ಪವನ್ ಕುಮಾರ್ ಕಪಿಲ್ ಅವರ ಸಂಭಾವನೆ ಈ ವರ್ಷ ಸ್ವಲ್ಪ ಕಡಿಮೆಯಾಗಿದೆ. ಪ್ರಸಾದ್ 2021-22ರಲ್ಲಿ 11.89 ಕೋಟಿ ಪಡೆದಿದ್ದರೆ, 2020-21ರಲ್ಲಿ 11.99 ಕೋಟಿ ರೂ. ಕಪಿಲ್ 4.22 ಕೋಟಿ ಪಡೆದಿದ್ದು, ಹಿಂದಿನ ವರ್ಷ 4.24 ಕೋಟಿ ರೂ.ಗಿಂತ ಕಡಿಮೆಯಾಗಿದೆ. ಪ್ರಸಾದ್ ಮತ್ತು ಕಪಿಲ್ ಅವರ ಪಾವತಿಯು "2021-22 ರಲ್ಲಿ ಪಾವತಿಸಿದ 2020-21ಗಾಗಿ ಕಾರ್ಯಕ್ಷಮತೆ ಸಂಯೋಜಿತ ಪ್ರೋತ್ಸಾಹಕಗಳನ್ನು ಒಳಗೊಂಡಿದೆ" ಎಂದು ವಾರ್ಷಿಕ ವರದಿ ಹೇಳಿದೆ.

ಇದನ್ನೂ ಓದಿ: ಸ್ಟಾರ್ಟ್​ಅಪ್​ Repos Energy ಅದೃಷ್ಟವನ್ನೇ ಬದಲಾಯಿಸಿತು ರತನ್​ ಟಾಟಾರ ಆ ಒಂದು ಫೋನ್​ ಕಾಲ್!

RIL ಮಂಡಳಿಯು ಅಂಬಾನಿಯನ್ನು ಹೊರತುಪಡಿಸಿ ಮೆಸ್ವಾನಿ ಸಹೋದರರು ಮತ್ತು ಪ್ರಸಾದ್ ಮತ್ತು ಕಪಿಲ್ ಅನ್ನು ಸಂಪೂರ್ಣ ನಿರ್ದೇಶಕರಾಗಿ ಒಳಗೊಂಡಿದೆ. ನಿತಾ ಅಂಬಾನಿ, ರಘುನಾಥ್ ಎ ಮಷೇಲ್ಕರ್, ದೀಪಕ್ ಸಿ ಜೈನ್, ಆದಿಲ್ ಜೈನುಲ್ಭಾಯಿ, ಶುಮೀತ್ ಬ್ಯಾನರ್ಜಿ, ರಮೀಂದರ್ ಸಿಂಗ್ ಗುಜ್ರಾಲ್, ಎಸ್‌ಬಿಐ ಮಾಜಿ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಮತ್ತು ಮಾಜಿ ಸಿವಿಸಿ ಕೆ ವಿ ಚೌಧರಿ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿ ಸಂಸ್ಥೆಯಲ್ಲಿದ್ದಾರೆ.
Published by:Ashwini Prabhu
First published: