• Home
  • »
  • News
  • »
  • business
  • »
  • Layoff: ಮತ್ತೆ ಮೈಕ್ರೋಸಾಫ್ಟ್‌ನಿಂದ 11 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳ ವಜಾ

Layoff: ಮತ್ತೆ ಮೈಕ್ರೋಸಾಫ್ಟ್‌ನಿಂದ 11 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳ ವಜಾ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೈಕ್ರೋಸಾಫ್ಟ್‌ ಸಹ ಇದೀಗ ಸಾವಿರಾರು ಉದ್ಯೋಗಿಗಳನ್ನು ವಜಾ ಮಾಡುತ್ತಿದೆ ಎಂಬ ಸುದ್ದಿ ಹೊರಬಂದಿದೆ. ಈ ವರ್ಷದಲ್ಲಿ ಸುಮಾರು 11 ಸಾವಿರ ಉದ್ಯೊಗಿಗಳನ್ನು ಅದರೆ ಕಂಪನಿಯ ಶೇ. 5 ರಷ್ಟು ಸಿಬ್ಬಂದಿಗೆ ಗೇಟ್‌ಪಾಸ್‌ ನೀಡಲಾಗುತ್ತಿದೆ.

  • Share this:

ಇತ್ತೀಚೆಗೆ, ವಿವಿಧ ಪ್ರಮುಖ ಕಂಪನಿಗಳು ನಿರಂತರವಾಗಿ ವಜಾ (Layoff) ಗಳನ್ನು ನಡೆಸುತ್ತಿವೆ. ರಷ್ಯಾ-ಉಕ್ರೇನ್ (Russia-Ukraine) ಯುದ್ಧದ ನಂತರದ ಕೊರೊನಾ ವೈರಸ್ (Corona Virus) ಮತ್ತು ಆರ್ಥಿಕ ಕುಸಿತವು ಜಗತ್ತನ್ನು ಆರ್ಥಿಕ ಹಿಂಜರಿತಕ್ಕೆ ತಳ್ಳಿದೆ. ಮೈಕ್ರೋಸಾಫ್ಟ್ (Microsoft) , ಟ್ವಿಟರ್ (Twitter) , ಅಮೆಜಾನ್ (Amazon) ಸೇರಿದಂತೆ ಎಂಎನ್‌ಸಿ ಕಂಪನಿ (MNC Company) ಗಳಿಂದ ಉದ್ಯೋಗಿಗಳನ್ನು ವಜಾ ಗೊಳಿಸಿಲಾಗಿದೆ. ಜೊತೆಗೆ ಭಾರತ (India) ದ ಹಲವು ಕಂಪನಿಗಳು ಕಳೆದ ಕೆಲವು ತಿಂಗಳುಗಳಿಂದ ವಜಾಗೊಳಿಸುತ್ತಿವೆ. ಮೈಕ್ರೋಸಾಫ್ಟ್‌ ಸಹ ಇದೀಗ ಸಾವಿರಾರು ಉದ್ಯೋಗಿಗಳನ್ನು ವಜಾ ಮಾಡುತ್ತಿದೆ ಎಂಬ ಸುದ್ದಿ ಹೊರಬಂದಿದೆ. ಈ ವರ್ಷದಲ್ಲಿ ಸುಮಾರು 11 ಸಾವಿರ ಉದ್ಯೊಗಿಗಳನ್ನು ಅದರೆ ಕಂಪನಿಯ ಶೇ. 5 ರಷ್ಟು ಸಿಬ್ಬಂದಿಗೆ ಗೇಟ್‌ಪಾಸ್‌ ನೀಡಲಾಗುತ್ತಿದೆ.


11 ಸಾವಿರ ಉದ್ಯೋಗಿಗಳಿಗೆ ಗೇಟ್​​ಪಾಸ್​!


ಶೀಘ್ರದಲ್ಲೇ ವಜಾ ಪ್ರಕ್ರಿಯೆ ನಡೆಯಲಿದೆ ಕೂಡ ನಡೆಯಲಿದೆ. ಇದೇ ರೀತಿ, ಭಾರತ ಸೇರಿದಂತೆ ಜಾಗತಿಕ ಟೆಕ್‌ ಕಂಪನಿಗಳು ದಿನಕ್ಕೆ 1,600 ರಂತೆ ಉದ್ಯೋಗಿಗಳನ್ನು ವಜಾಮಾಡುತ್ತಿರುವುದು ಇತ್ತೀಚಿನ ಅಂಕಿ ಅಂಶಗಳಿಂದ ತಿಳಿದುಬಂದಿದೆ.  ಎಂಜಿನಿಯರಿಂಗ್ ಹಾಗೂ ಎಚ್‌ಆರ್‌ ವಿಭಾಗದಲ್ಲಿ ಹೆಚ್ಚು ಉದ್ಯೋಗ ಕಡಿತವಾಗಲಿದೆ ಎಂದು ಬ್ಲೂಮ್‌ಬರ್ಗ್‌ ಹಾಗೂ ರಾಯಿಟರ್ಸ್‌ ವರದಿ ಮಾಡಿದೆ.


ಮೈಕ್ರೋಸಾಫ್ಟ್​ನಲ್ಲಿದ್ದಾರೆ 2 ಲಕ್ಷ ಉದ್ಯೋಗಿಗಳು!‘


ಮೈಕ್ರೋಸಾಫ್ಟ್‌ನಲ್ಲಿ ಸುಮಾರು 2 ಲಕ್ಷ ಉದ್ಯೋಗಿಗಳಿದ್ದು, ಈ ಪೈಕಿ ಅಕ್ಟೋಬರ್‌ 2022ರಲ್ಲಿ ಸುಮಾರು 1 ಸಾವಿರ ಉದ್ಯೋಗಿಗಳಿಗೆ ಗೇಟ್‌ ಪಾಸ್‌ ಸಿಕ್ಕಿತ್ತು . ಆದರೆ, ಯುಕೆ ಮೂಲದ ಸ್ಕೈ ನ್ಯೂಸ್‌ ಪ್ರಕಾರ ಒಟ್ಟಾರೆ 11 ಸಾವಿರ ಉದ್ಯೋಗಿಗಳು ಮೈಕ್ರೋಸಾಫ್ಟ್‌ನಲ್ಲಿ ಉದ್ಯೋಗ ಕಳೆದುಕೊಳ್ಳುತ್ತಾರೆ. ಇದು ಕಂಪನಿಯ ಶೇ. 5 ರಷ್ಟು ಸಿಬ್ಬಂದಿಗೆ ಉದ್ಯೋಗ ಕಡಿತ ಎಂದು ತಿಳಿದುಬಂದಿದೆ.


ಓಲಾ ಕಂಪನಿಯಿಂದ 200 ಮಂದಿ ಉದ್ಯೋಗಿಗಳು ವಜಾ!


ಓಲಾ ಕ್ಯಾಬ್ಸ್, ಓಲಾ ಎಲೆಕ್ಟ್ರಿಕ್ ಮತ್ತು ಓಲಾ ಫೈನಾನ್ಶಿಯಲ್ ಸರ್ವಿಸಸ್‌ನಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಈ ವಜಾಗೊಳಿಸುವಿಕೆಯಿಂದ ತೊಂದರೆಗೀಡಾಗಿದ್ದಾರೆ. ಕಂಪನಿಯನ್ನು ಪುನರ್ರಚಿಸಲು ಮತ್ತು ಕೆಲಸದ ದಕ್ಷತೆಯನ್ನು ಸುಧಾರಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಓಲಾ ವಕ್ತಾರರು ತಿಳಿಸಿದ್ದಾರೆ.


ಇದನ್ನೂ ಓದಿ: ಮುಂದುವರಿದ ಲೇಆಫ್ ಟ್ರೆಂಡ್​, ಓಲಾ ಕಂಪನಿಯಿಂದ 200 ಉದ್ಯೋಗಿಗಳಿಗೆ ಗೇಟ್​ ಪಾಸ್​!


ಆದಾಯ ಕಡಿಮೆಯಾಗಿದ್ದಕ್ಕೆ ಗೇಟ್​ಪಾಸ್?


2021 ರ ಹಣಕಾಸು ವರ್ಷದಲ್ಲಿ, ಓಲಾ ರೂ.689.61 ಕೋಟಿ ಆದಾಯ ಗಳಿಸಿದೆ. ಇದು ಹಿಂದಿನ ವರ್ಷಕ್ಕಿಂತ ಶೇ 65ರಷ್ಟು ಕಡಿಮೆಯಾಗಿದೆ. 2021 ರಲ್ಲಿ ರೂ 610.18 ಕೋಟಿ ನಷ್ಟವನ್ನು ಅನುಭವಿಸಿದ ಓಲಾ, 2022 ರಲ್ಲಿ 1000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದೆ.


ಇತ್ತೀಚೆಗೆ, ಅಮೆಜಾನ್ ಕೂಡ 18,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿತು. ಭಾರತವೊಂದರಲ್ಲೇ ಸುಮಾರು 1,000 ಉದ್ಯೋಗಿಗಳನ್ನು ವಜಾ ಮಾಡಲಾಗಿದೆ. ಕೆಲಸ ಬಿಟ್ಟ ಉದ್ಯೋಗಿಗಳಿಗೆ ಅಮೆಜಾನ್ 5 ತಿಂಗಳ ಬೇರ್ಪಡಿಕೆ ವೇತನವನ್ನು ನೀಡಿದೆ.


ಜೊಮ್ಯಾಟೊ ಸಹ ಸಂಸ್ಥಾಪಕ ಮೋಹಿತ್ ಗುಪ್ತಾ ರಾಜೀನಾಮೆ!


ಈಗಾಗಲೇ ಜೊಮ್ಯಾಟೊವನ್ನು ಕಟ್ಟಿ ಬೆಳೆಸಿದ, ಸಹ-ಸಂಸ್ಥಾಪಕ ಮೋಹಿತ್ ಗುಪ್ತಾ ರಾಜೀನಾಮೆ ನೀಡಿದ್ದಾರೆ. ಈ ನಡುವೆ ಸಂಸ್ಥೆಯು ಸುಮಾರು ಶೇಕಡ 3ರಷ್ಟು ಉದ್ಯೋಗ ಕಡಿತವನ್ನು ಮಾಡುವುದಾಗಿ ಘೋಷಣೆ ಮಾಡಿದೆ. ಆ್ಯಪ್ ಆಧಾರಿತ ಖ್ಯಾತ ಆನ್‌ಲೈನ್ ಆಹಾರ ವಿತರಣಾ ಕಂಪನಿ ಜೊಮ್ಯಾಟೊ ಸಹ-ಸಂಸ್ಥಾಪಕ ಮೋಹಿತ್ ಗುಪ್ತಾ ಶುಕ್ರವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.



ನಾಲ್ಕೂವರೆ ವರ್ಷಗಳ ಹಿಂದೆ ಜೊಮ್ಯಾಟೊಗೆ ಸೇರಿದ್ದ ಗುಪ್ತಾ, ಅದರ ಆಹಾರ ವಿತರಣಾ ವ್ಯವಹಾರದ ಸಿಇಒ ಸ್ಥಾನದಿಂದ 2020ರಲ್ಲಿ ಸಹ-ಸಂಸ್ಥಾಪಕರಾಗಿ ಬಡ್ತಿ ಪಡೆದಿದ್ದರು.ಪ್ರಮುಖವಾಗಿ ಸಂಸ್ಥೆಯಲ್ಲಿ ತನ್ನ ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಜೊಮ್ಯಾಟೊ ಈ ಹಾದಿಯನ್ನು ಹಿಡಿದಿದೆ.

Published by:ವಾಸುದೇವ್ ಎಂ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು