ಟ್ವಿಟರ್ (Twitter) ನಂತರ ಟೆಕ್ ಉದ್ಯಮದಲ್ಲೇ ಅತ್ಯಂತ ಕೆಟ್ಟ ವಜಾಗೊಳಿಸುವಿಕೆ ಎಂಬ ಕಪ್ಪುಚುಕ್ಕೆಗೆ ಗುರಿಯಾಗಿರುವ ಮಾರ್ಕ್ ಜುಕರ್‌ಬರ್ಗ್ (Mark Zuckerberg) ನೇತೃತ್ವದ ಮೆಟಾ ಸಂಸ್ಥೆ (Meta Company) ಯು 11,000 ಕ್ಕೂ ಹೆಚ್ಚು ಉದ್ಯೋಗಿ (Employees) ಗಳನ್ನು ಒಂದೇ ಬಾರಿಗೆ ತೆಗೆದುಹಾಕಿತ್ತು. ಇದೀಗ ಮತ್ತೊಮ್ಮೆ ತನ್ನ ಕಂಪನಿಯಿಂದ ಕೆಲಸಗಾರರನ್ನು ಹೊರ ಕಳುಹಿಸಲು ಮೆಟಾ ಮುಂದಾಗಿದೆ. ಇದರಿಂದ 1000 ಜನರು ಮತ್ತೆ ಕೆಲಸ ಕಳೆದುಕೊಳ್ಳಲಿದ್ದಾರೆ. ಅದು ಈ ವಾರದಲ್ಲೇ 1000 ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ. ಜಾಹೀರಾತು (Advertisment) ಆದಾಯದಲ್ಲಿ ನಿಧಾನಗತಿಯನ್ನು ಕಂಡಿರುವ ಮೆಟಾ, ಮೆಟಾವರ್ಸ್ ಎಂಬ ವರ್ಚುವಲ್-ರಿಯಾಲಿಟಿ ಪ್ಲಾಟ್‌ಫಾರ್ಮ್‌ಗೆ ಗಮನ ಹರಿಸಿದೆ.
ಪಟ್ಟಿ ರೆಡಿ ಮಾಡಲು ಸೂಚನೆ!
ಇನ್ನೂ ಕೆಲಸದಿಂದ ವಜಾಗೊಳಿಸಲಿರುವ ಉದ್ಯೋಗಿಗಳ ಪಟ್ಟಿಯನ್ನು ರೆಡಿಮಾಡಲು ಮೆಟಾ ಕಂಪನಿ ಮ್ಯಾನೇಜರ್ಗಳಿಗೆ ಸೂಚನೆ ನೀಡಲಾಗಿದೆ. ಮುಂದಿನ ವಾರದಲ್ಲಿ ಈ ಹಂತದ ವಜಾಗೊಳಿಸುವಿಕೆಯನ್ನು ಅಂತಿಮಗೊಳಿಸಬಹುದು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಜುಕರ್‌ಬರ್ಗ್ ತನ್ನ ಮೂರನೇ ಮಗುವಿಗೆ ಪೋಷಕರ ರಜೆಗೆ ಹೋಗುವ ಮೊದಲು ಯೋಜನೆಯಲ್ಲಿ ಕೆಲಸ ಮಾಡುವವರು ಅದನ್ನು ಸಿದ್ಧಪಡಿಸಬೇಕೆಂದು ಆಶಿಸುತ್ತಿದ್ದಾರೆ.
ಮೆಟಾದಿಂದ ಕೆಲಸ ಕಳೆದುಕೊಂಡಿದ್ದ ಭಾರತೀಯ!
ಮೆಟಾದಿಂದ ವಜಾಗೊಂಡಿರುವ 11000 ಉದ್ಯೋಗಿಗಳಲ್ಲಿ ಒಬ್ಬರಾದ ಯುಎಸ್‌ನಲ್ಲಿವಾಸವಾಗಿರುವ ಭಾರತೀಯ ವ್ಯಕ್ತಿಯೊಬ್ಬರು ಕಂಪೆನಿಗೆ ಸೇರಿದ ಒಂಬತ್ತು ತಿಂಗಳ ನಂತರ ವಜಾಗೊಂಡಿದ್ದು, ಇದೀಗ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ದುಃಸ್ಥಿತಿಯನ್ನು ಹಂಚಿಕೊಂಡಿದ್ದಾರೆ.
ಲಿಂಕ್ಡ್‌ಇನ್‌ನಲ್ಲಿ ತಮ್ಮ ವಜಾಗೊಂಡ ವಿವರವನ್ನು ಹಂಚಿಕೊಂಡಿರುವ ಮೆಟಾದಲ್ಲಿ ತಾಂತ್ರಿಕ ತಂಡದ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ರಾಜು ಕದಮ್ ಒಂಬತ್ತು ತಿಂಗಳ ಹಿಂದೆಯಷ್ಟೇ ಸಂಸ್ಥೆಗೆ ಸೇರಿದ್ದರು ಹಾಗೂ ಎಲ್ಲಾ ತ್ರೈಮಾಸಿಕಗಳಲ್ಲಿ ಉತ್ತಮ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದ್ದರು ಹಾಗಾಗಿ ತಾನು ವಜಾಗೊಳ್ಳುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ ಎಂಬುದಾಗಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಮೆಟಾದಿಂದ ವಜಾಗೊಂಡ ಭಾರತೀಯ ಉದ್ಯೋಗಿಗಳಿಗೆ ಆಪತ್ತು! ಅವರ ಮಕ್ಕಳಿಗೂ ಇಲ್ವಾ ಭವಿಷ್ಯ?
ಕೆಲಸಕ್ಕೆ ಸೇರಿದ ಎರಡೇ ದಿನಕ್ಕೆ ವಜಾ!
ಹಿಮಾಂಶು ವಿ ಹೆಸರಿನ ಮೆಟಾದ ಮಾಜಿ ಉದ್ಯೋಗಿ, ಮೆಟಾದಲ್ಲಿನ ತಮ್ಮ ಹೊಸ ಉದ್ಯೋಗಕ್ಕಾಗಿ ಇದೀಗ ತಾನೇ ಭಾರತದಿಂದ ಕೆನಡಾಕ್ಕೆ ಸ್ಥಳಾಂತರಗೊಂಡಿದ್ದರು. ಇದೀಗ ಲಿಂಕ್ಡ್‌ಇನ್ ಖಾತೆಯಲ್ಲಿ ತಮ್ಮ ದಯನೀಯ ಹಾಗೂ ಹತಾಶ ಸ್ಥಿತಿಯನ್ನು ಬಹಿರಂಗಪಡಿಸಿರುವ ಹಿಮಾಂಶು, ಐಐಟಿ ಖಾರಗ್‌ಪುರ್ ವಿದ್ಯಾಲಯದ ಪದವೀಧರರಾಗಿದ್ದಾರೆ ಹಾಗೂ ಗಿಟ್‌ಹಬ್, ಅಡೋಬ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಉನ್ನತ ಮಟ್ಟದ ಬ್ರ್ಯಾಂಡ್‌ಗಳಲ್ಲಿ ಉದ್ಯೋಗ ನಿರ್ವಹಿಸಿದ ವೃತ್ತಿಪರರು ಎಂದೆನಿಸಿದ್ದಾರೆ.
ಮೆಟಾ ಸೇರಲು ಕೆನಡಾಗೆ ಬಂದಿದ್ದ ಹಿಮಾಂಶು
ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಮಾಡಿರುವ ಹಿಮಾಂಶು, ಮೆಟಾ ಸಂಸ್ಥೆಗೆ ಸೇರಲು ಭಾರತದಿಂದ ಕೆನಡಾಗೆ ಸ್ಥಳಾಂತರಗೊಂಡಿದ್ದು ಮೆಟಾಗೆ ಸೇರಿದ 2 ದಿನಗಳ ನಂತರ ವಜಾಗೊಂಡಿರುವೆ. ಮೆಟಾದೊಂದಿಗೆ ನನ್ನ ಪ್ರಯಾಣ ಇಲ್ಲಿಗೆ ಕೊನೆಗೊಂಡಿದೆ. ನನ್ನಂತೆಯೇ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವ ಪ್ರತಿಯೊಬ್ಬರಿಗೂ ನನ್ನ ವಿಶಾದವಿದೆ.
ಮುಂದಿನ ಹಂತದ ಬಗ್ಗೆ ತನಗೇನೂ ಯೋಚನೆ ಇಲ್ಲ ಎಂದು ಹೇಳಿರುವ ಹಿಮಾಂಶು, ಸಾಫ್ಟ್‌ವೇರ್ ಇಂಜಿನಿಯರ್ ಹುದ್ದೆಯ ಕುರಿತು ಬೇರೆಲ್ಲಾದರೂ ಉದ್ಯೋಗವಕಾಶಗಳಿದ್ದರೆ ತಿಳಿಸಿ ಎಂದು ಲಿಂಕ್ಡ್‌ಇನ್ ಬಳಕೆದಾರರಲ್ಲಿ ವಿನಂತಿಸಿಕೊಂಡಿದ್ದಾರೆ.
ಮಾರ್ಕ್ ಜುಕರ್‌ಬರ್ಗ್ ಹೇಳಿದ್ದೇನು?
ಬೃಹತ್ ಉದ್ಯೋಗಿ ವಜಾಗೊಳಿಸುವಿಕೆಯ ನಂತರ ಸಿಇಒ ಮಾರ್ಕ್ ಜುಕರ್‌ಬರ್ಗ್ ತಮ್ಮ ಪೋಸ್ಟ್‌ನಲ್ಲಿ ಕಾಮೆಂಟ್ ಮಾಡಿದ್ದು, ಮೆಟಾ ಇತಿಹಾಸದಲ್ಲಿಯೇ ನಡೆಸಿದ ಅತ್ಯಂತ ಕಷ್ಟಕರವಾದ ಬದಲಾವಣೆಯ ಕುರಿತು ನಾನು ಹಂಚಿಕೊಳ್ಳುತ್ತಿದ್ದೇನೆ. ತಂಡದ ಗಾತ್ರವನ್ನು 13% ಕ್ಕಿಂತ ಕಡಿಮೆ ಮಾಡಲು ನಿರ್ಧರಿಸಿದ್ದು, 11000 ಕ್ಕಿಂತಲೂ ಹೆಚ್ಚಿನ ಪ್ರತಿಭಾವಂತರಿಗೆ ಕಂಪನಿ ಬಿಟ್ಟು ಹೋಗಲು ಅವಕಾಶ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ