Pai International: ಎಲ್ಲರ ಮನೆ, ಮನಗಳಲ್ಲಿ ಪೈ - 3 ರಾಜ್ಯಗಳಲ್ಲಿ ಅಭೂತಪೂರ್ವ ಸೇವೆ

ಎಲ್ಲರ ಮನೆಮಾತಾಗಿರುವ ಪೈ ಇಂಟರ್‌ನ್ಯಾಷನಲ್ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶ ಹೀಗೆ ದೇಶದ ಮೂರು 3 ರಾಜ್ಯಗಳಲ್ಲಿ ಸೇವೆ ನೀಡುತ್ತಿದೆ.

ಪೈ ಕುಟುಂಬ

ಪೈ ಕುಟುಂಬ

 • Share this:

  ಪೈ ಸಂಸ್ಥೆಯ ಮೊದಲ ಸ್ಟೋರ್ ಅನ್ನು 2000ದಲ್ಲಿ ಬೆಂಗಳೂರಿನ ಇಂದಿರಾನಗರದಲ್ಲಿ ಪೈ ಸ್ಥಾಪಕರು ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಶ್ರೀ ರಾಜ್‌ಕುಮಾರ್ ಪೈ ಅವರು ಸ್ಥಾಪಿಸಿದರು. ಪೈ ಹಿಂದಿರುವ ಪ್ರೇರಕ ಶಕ್ತಿ ಎಂದರೆ ಅದು ಶ್ರೀ ರಾಜ್‌ಕುಮಾರ್ ಅವರು. ಅವರ ಮಾರ್ಗದರ್ಶನದಲ್ಲಿ ಇಂದು ಪೈ ಸಂಸ್ಥೆಯು ದಿನದಿಂದ ದಿನಕ್ಕೆ ತನ್ನ ವ್ಯಾಪಾರ, ವಹಿವಾಟುಗಳನ್ನು ವಿಸ್ತರಿಸಿಕೊಳ್ಳುತ್ತಲೇ ಇದೆ.


  ಎಲ್ಲೆಲ್ಲಿ ಕಾರ್ಯಾಚರಣೆ?


  ಈ ವಿವರಗಳನ್ನು ನೋಡಿದಾಗ ಅದರ ವಿಸ್ತರಣೆಯ ಕೆಲವು ವಿವರಗಳು ನಿಮಗೆ ದೊರೆಯುತ್ತವೆ. ಬೃಹತ್ ಸ್ವರೂಪದ 86 ಮಲ್ಟಿ ಬ್ರ್ಯಾಂಡ್ ಸ್ಟೋರ್‌ಗಳು, 1 ಬ್ರ್ಯಾಂಡ್ ಸ್ಟೋರ್, 121 ಸಣ್ಣ ಗಾತ್ರದ ಮೊಬೈಲ್ ಸ್ಟೋರ್‌ಗಳು ಹಾಗೂ ಪೂರ್ಣ ಸ್ವರೂಪದ 15 ಫರ್ನೀಚರ್ ಸ್ಟೋರ್‌ಗಳು ಇಂದು ಸೇವೆ ಒದಗಿಸುತ್ತಿವೆ. ದೇಶದಾದ್ಯಂತ ಒಟ್ಟಾರೆ 223 ಸ್ಟೋರ್‌ಗಳನ್ನು ಪೈ ಹೊಂದಿದ್ದು, ಅವುಗಳಲ್ಲಿ ಕರ್ನಾಟಕದಲ್ಲಿ 150, ತೆಲಂಗಾಣದಲ್ಲಿ 39 ಹಾಗೂ ಆಂಧ್ರಪ್ರದೇಶದಲ್ಲಿ 34 ಸ್ಟೋರ್‌ಗಳು ಕಾರ್ಯನಿರ್ವಹಿಸುತ್ತಿವೆ. 2020-21ರಲ್ಲಿ ರೂ. 1687/- ಕೋಟಿ ರಿಟೇಲ್ ವಹಿವಾಟು ನಡೆಸಿದೆ.  ಸೇವೆ, ಉಡುಗೊರೆ, ಬಹುಮಾನ


  ಕಳೆದ 20 ವರ್ಷಗಳಲ್ಲಿ ನಮ್ಮ ಗ್ರಾಹಕರಿಗೆ ನಾವು ಸೇವೆಯನ್ನಷ್ಟೇ ಅಲ್ಲದೆ ಏನೆಲ್ಲಾ ಉಡುಗೊರೆ, ಬಹುಮಾನಗಳನ್ನು ನೀಡಿದ್ದೇವೆ ಎಂಬುದನ್ನು ಇಲ್ಲಿ ನೋಡಬಹುದು: 320 ಕಾರುಗಳು, 320 ಬೈಕ್‌ಗಳು ಹಾಗೂ ಪೈನಲ್ಲಿ ರೂ. 22.5 ಕೋಟಿಯ ಉಚಿತ ಶಾಪ್ಪಿಂಗ್, ರೂ. 7.3 ಕೋಟಿ ಮೌಲ್ಯದ ಚಿನ್ನ ಬಹುಮಾನ ಮತ್ತು ರೂ. 2.65 ಕೋಟಿ ಮೌಲ್ಯದ ನಗದು ಬಹುಮಾನ ನೀಡಲಾಗಿದೆ. ಇದಿಷ್ಟೇ ಅಲ್ಲದೆ, 64.56 ಕೋಟಿ ಪೈ ಲಾಯಲ್ಟಿ ಪಾಯಿಂಟ್‌ಗಳನ್ನು ನಮ್ಮ ಗ್ರಾಹಕರ ಅಧಿಕೃತ ಮೊಬೈಲ್ ನಂಬರ್‌ಗೆ ಕ್ರೆಡಿಟ್ ಮಾಡಲಾಗಿದೆ.


  ಪೈ ಮೆಗಾ ಫೆಸ್ಟಿವಲ್ ಸೇಲ್ ಲಕ್ಕಿ ಡ್ರಾ


  2021 ದಸರಾ ಮತ್ತು ದೀಪಾವಳಿ ಹಬ್ಬದ ಸಮಯದಲ್ಲಿ ರೂ. 2000 ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಖರೀದಿ ಮಾಡಿದ ಎಲ್ಲಾ ಗ್ರಾಹಕರಿಗೂ ಡಿಜಿಟಲ್ ಕೂಪನ್ ನೀಡಲಾಗಿತ್ತು.


  ವಿಜೇತರನ್ನು ಆಯ್ಕೆ ಮಾಡಲು ಡಿಸೆಂಬರ್ 5, 2021 ರಂದು ಲಕ್ಕಿ ಡ್ರಾ ನಡೆಸಲಾಯಿತು ಹಾಗೂ ಅದನ್ನು ನೇರ ಪ್ರಸಾರ ಮಾಡಲಾಯಿತು. ನೀವು ಆ ಕಾರ್ಯಕ್ರಮ ವೀಕ್ಷಿಸಲು - https://www.youtube.com/watch?v=P7nD9NYKH5s&t=2468s

  ಹೈದರಬಾದ್‌ನ ಬಾಬ್ಬಿ ಅವರು ಪೈ ಮೊಬೈಲ್ಸ್‌ನಲ್ಲಿ ರೂ. 8000 ಮೌಲ್ಯದ ಡೆಮೊ ಮೊಬೈಲ್ ಅನ್ನು ಖರೀದಿಸಿದ್ದರು, ಈಗ ಅವರು ಲಕ್ಕಿ ಡ್ರಾದಲ್ಲಿ ವಿಜೇತರಾಗಿ ಮರ್ಸಿಡಿಝ್ ಬೆಂಜ್ ಕಾರು ಪಡೆದುಕೊಂಡಿದ್ದಾರೆ. ಅವರ ಸಂತಸದ ಮಾತುಗಳನ್ನು ಈ ವೀಡಿಯೊದಲ್ಲಿ ನೋಡಿ, ಕೇಳಬಹುದು -  https://www.youtube.com/watch?v=HgpGoLCFvOE


  ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯ


  ಪೈ ಔಟ್‌ಲೆಟ್‌ಗಳು ಇಂದು 3.5 ಮಿಲಿಯನ್‌ಗೂ ಹೆಚ್ಚು ಗ್ರಾಹಕರಿಗೆ ಸೇವೆ ಒದಗಿಸಿವೆ ಹಾಗೂ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್‌ನಲ್ಲಿ 150k ಸಂಖ್ಯೆಯಷ್ಟು ಫಾಲೋವರ್‌ಗಳನ್ನು ಹೊಂದಿದೆ. ಇದರ ಪ್ರಮುಖ ವೀಕ್ಷಕರು ಎಂದರೆ 18 ವರ್ಷ ಮೀರಿದ ವಯೋಮಾನದ ಗುಂಪಿನವರು ಎಂಬುದು ಗಮನಿಸಬೇಕಾದ ಅಂಶವಾಗಿದೆ.


  2015-16 ಹಣಕಾಸು ವರ್ಷದಲ್ಲಿ 2,53,032 ಗ್ರಾಹಕರನ್ನು ಸೆಳೆದುಕೊಂಡಿದ್ದು ಪೈ, 2020-21 ಹಣಕಾಸು ವರ್ಷದಲ್ಲಿ 5,28,395 ಗ್ರಾಹಕರನ್ನು ತನ್ನೆಡೆಗೆ ಸೆಳೆದಿದೆಇದುವರೆಗಿನ ಗ್ರಾಹಕರ ಸಂಖ್ಯೆಯು 24,61,938 ಆಗಿದೆ.


  ಪೈ ಹಿಂದಿನ ಪ್ರೇರಕ ಶಕ್ತಿ – ಎಸ್. ರಾಜ್‌ ಕುಮಾರ್ ಪೈ


  1963ರಲ್ಲಿ ಜನಿಸಿದ ಎಸ್ರಾಜ್‌ಕುಮಾರ್ ಪೈತಮ್ಮ 13ನೇ ವಯಸ್ಸಿನಲ್ಲಿಯೇ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಾವ್ಯಾಪಾರ ವಹಿವಾಟಿನ ಒಳಮರ್ಮ ಅರಿತುಕೊಂಡವರುಆಗೆಲ್ಲ ಅವರು ಎಷ್ಟು ಶ್ರಮ ಪಟ್ಟಿದ್ದರು ಎಂಬುದರ ಪ್ರತಿಫಲ ಇಂದು ನಮ್ಮೆಲ್ಲರ ಕಣ್ಣೆದುರಿಗಿದೆ. 2000ದಲ್ಲಿ ಪೈ ಇಂಟರ್‌ನ್ಯಾಷನಲ್ ಎಲೆಕ್ಟ್ರಾನಿಕ್ಸ್ ಲಿಸ್ಥಾಪಿಸುವ ಮೂಲಕ ಅತ್ಯಂತ ಸ್ಪರ್ಧಾತ್ಮಕ ಕ್ಷೇತ್ರವಾದ ಕನ್ಸ್ಯೂಮರ್ ಡ್ಯೂರಬಲ್ ಮತ್ತು ಎಲೆಕ್ಟ್ರಾನಿಕ್ಸ್‌ಗೆ ಪ್ರವೇಶಿಸಿದರುಅಂದಿನಿಂದ ಇಂದಿನವರೆಗೂ ಅವರು ಹಾಕಿದ ಪರಿಶ್ರಮದಿಂದಾಗಿ ಪೈ ಇಂದು ರೂ. 1000 ಕೋಟಿಗೂ ಅಧಿಕ ವಹಿವಾಟು ನಡೆಸಿದೆ.


  ಸತತ ಪ್ರಯತ್ನ, ಕಾಲಕ್ಕೆ ತಕ್ಕ ನಾವೀನ್ಯತೆ, ಗ್ರಾಹಕ-ಸ್ನೇಹಿ ಸಿಬ್ಬಂದಿ, ಸಿಬ್ಬಂದಿ ಕ್ಷೇಮಾಭಿವೃದ್ಧಿ, ಸಾಮಾಜಿಕ ಕಳಕಳಿ ಇವೇ ಮುಂತಾದ ದೂರದೃಷ್ಟಿಸಹಿತ ಕಾರ್ಯಾಚರಣೆಯಿಂದಾಗಿ ಪ್ರಾರಂಭದಲ್ಲಿ ಒಂದು ಔಟ್‌ಲೆಟ್ ಹೊಂದಿದ್ದ ಪೈ, ಈಗ ಮೂರು ರಾಜ್ಯಗಳಲ್ಲಿ 223 ಔಟ್‌ಲೆಟ್‌ಗಳನ್ನು ಹೊಂದಿದೆ. ತಾವು ಪಡೆದಿದ್ದನ್ನು ಸಮಾಜಕ್ಕೆ ಹಿಂದಿರುಗಿಸುವ ‘ಮಂತ್ರ’ವನ್ನು ಪೈ ಅವರು ಅಳವಡಿಸಿಕೊಂಡಿದ್ದು, ಅದರಲ್ಲಿ ನಾಲ್ಕು ‘E’ ಗಳು ಇವೆ, ಅವುಗಳೆಂದರೆ: ಶಿಕ್ಷಣ (Education), ಹಿರಿಯರ ಕಾಳಜಿ (Elderly), ಪರಿಸರ ಸಂರಕ್ಷಣೆ (Environment) ಹಾಗೂ ತಮ್ಮ ಸಂಸ್ಥೆಯ ಉದ್ಯೋಗಿಗಳು (Employees).


  ಪೈ ಸಂಸ್ಥೆಯ ಯಶಸ್ಸಿಗೆ ಕಾರಣವೇನು?


  ಬದಲಾಗುತ್ತಿರುವ ಕಾಲ ಹಾಗೂ ತಂತ್ರಜ್ಞಾನಕ್ಕೆ ತಕ್ಕ ಹಾಗೆ, ಎಂತಹ ಸವಾಲಿನ ಸಂದರ್ಭಗಳಲ್ಲಿಯೂ ಸಹ ಪೈ ಅತ್ಯುತ್ತಮ ಸೇವೆ ಒದಗಿಸಿದೆ. ಪೈ ಪ್ರಮುಖವಾಗಿ 5 ಮೌಲ್ಯಗಳನ್ನು ಪಾಲಿಸುತ್ತಿದೆ. ಅವುಗಳೆಂದರೆ:
       ಪಾರದರ್ಶಕ ಮತ್ತು ಪ್ರಾಮಾಣಿಕ ವ್ಯವಹಾರ


       ನಂಬಿಕೆ


       ಯಾವಾಗಲೂ ತನ್ನ ಗ್ರಾಹಕರಿಗಾಗಿ ಕಾರ್ಯನಿರ್ವಹಿಸುವುದು


       ಪ್ರತಿ ಹಂತದಲ್ಲೂ ನ್ಯಾಯಯುತವಾದ ಹಾಗೂ ತಾರತಮ್ಯವಿಲ್ಲದ ಸೇವೆ


       ಅತ್ಯುತ್ತಮ ಗ್ರಾಹಕ ಸಂತೋಷಕ್ಕಾಗಿ ಅಳವಡಿಸಿಕೊಂಡಿರುವ ನಾವೀನ್ಯತೆ
  ಸಿಬ್ಬಂದಿ ವರ್ಗ - ಪೈ ಪರಿವಾರದ ಶಕ್ತಿ


  ಪೈ ಯಶಸ್ಸಿಗೆ ಅದರ ಸಿಬ್ಬಂದಿ ವರ್ಗದ ಕೊಡುಗೆ ಸಾಕಷ್ಟಿದೆ. ಅದರ ಯಶಸ್ಸಿನಲ್ಲಿ ಅವರೆಲ್ಲರ ಅಪಾರ ಶ್ರಮವಿದ್ದು, ಪೈ ಪರಿವಾರದ ಏರಿಕೆಯಾಗುತ್ತಿರುವ ಸದಸ್ಯರ ಸಂಖ್ಯೆ ಇಲ್ಲಿದೆ ನೋಡಿ: 2014ರಲ್ಲಿ ಕರ್ನಾಟಕದಲ್ಲಿ 1142 ಇದ್ದ ಸಿಬ್ಬಂದಿ ಸಂಖ್ಯೆ, 2018ರಲ್ಲಿ 2449ಕ್ಕೆ ಏರಿಕೆ ಆಯಿತು. 2022ರಲ್ಲಿ ಆ ಸಂಖ್ಯೆಯು 2930ಕ್ಕೆ ತಲುಪಿದೆ. ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ 2014ರಲ್ಲಿ 166ರಷ್ಟಿದ್ದ ಸಿಬ್ಬಂದಿ ಸಂಖ್ಯೆಯು 2018ರಲ್ಲಿ 1066 ಕ್ಕೆ ಏರಿಕೆಯಾಯಿತು. 2022ರಲ್ಲಿ ಅಲ್ಲಿ ಒಟ್ಟು 1304 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ತಿಳಿದು ಬರುವುದೇನೆಂದರೆ 2014ರಲ್ಲಿ 1308 ಸಿಬ್ಬಂದಿಯನ್ನು ಹೊಂದಿದ್ದ ಪೈ, ಇಂದು 2022ರಲ್ಲಿ 4234 ಸಿಬ್ಬಂದಿಯನ್ನು ಹೊಂದಿದೆ.


  ಕಾರ್ಯಾಚರಣೆ ಶಕ್ತಿ – ಸಾಮಾಜಿಕ ಕಾಳಜಿ
       ಉದ್ಯೋಗಿಗಳ ಕ್ಷೇಮಾಭಿವೃದ್ಧಿ (ಎಂಪ್ಲಾಯಿ ವೆಲ್‌ಫೇರ್) – ಉದ್ಯೋಗಿಗಳು ಮತ್ತು ಅವರ ಕುಟುಂಬ ಸದಸ್ಯರ ಆರೋಗ್ಯದ ಕಾಳಜಿ


       ಶಿಕ್ಷಣ (ಎಜುಕೇಷನ್) – ಕಳೆದ 14 ವರ್ಷಗಳಲ್ಲಿ 22500 ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ನೋಟ್‌ಬುಕ್‌ಗಳನ್ನು ಉಚಿತವಾಗಿ ವಿತರಿಸಲಾಗಿದೆ


       ಪರಿಸರ ಸಂರಕ್ಷಣೆ (ಎನ್ವಿರಾನ್‌ಮೆಂಟ್) – ಹಸಿರು ಬೆಳೆಸಿ ಉಳಿಸುವ ಅಭಿಯಾನದ ಭಾಗವಾಗಿ ನಮ್ಮ ಗ್ರಾಹಕರಿಗೆ ಒಳಾಂಗಣದಲ್ಲಿ ಬೆಳೆಸಬಹುದಾದ ಸಸಿಗಳನ್ನು ನೀಡುತ್ತಿದ್ದೇವೆ
  ಮೇಲಿನ ಯೋಜನೆಗಳನ್ನು ಈಗಾಗಲೇ ಜಾರಿಯಲ್ಲಿಟ್ಟಿದ್ದು, ಮುಂದಿನ ದಿನಗಳಲ್ಲಿ ಹಿರಿಯರ ಆರೈಕೆ (ಎಲ್ಡರ್ ಕೇರ್), ಸ್ವಚ್ಛತೆ ಮತ್ತು ಮರುಬಳಕೆ ಅಭಿಯಾನ, ಜಾಗೃತಿ ಅಭಿಯಾನಗಳನ್ನು ನಡೆಸಲು ಸೂಕ್ತವಾಗಿ ಯೋಜಿಸಲಾಗುತ್ತಿದೆ.


  ಪೈ ಕುರಿತಾದ ಇನ್ನಷ್ಟು ಆಸಕ್ತಿದಾಯಕ ವಿವರಗಳಿಗಾಗಿ https://www.paiinternational.in/ಗೆ ಭೇಟಿ ಕೊಡಿ.

  Published by:Soumya KN
  First published: