Success Story: ವಿದೇಶ ಕೆಲಸ ಬಿಟ್ಟು ಇಲ್ಲೇ ಸ್ಟಾರ್ಟಪ್​ ಶುರು, ಇಂದು 8000 ಸಾವಿರ ಕೋಟಿ ಒಡತಿ!

ಉಪಾಸನಾ

ಉಪಾಸನಾ

ಮೊಬೈಲ್ ಫೋನ್ ಆಧಾರಿತ ಪಾವತಿ ವ್ಯವಸ್ಥೆಯನ್ನೊದಗಿಸುವ ಮತ್ತು ಡಿಜಿಟಲ್ ವ್ಯಾಲೆಟ್ ಮೊಬಿಕ್‌ಕ್ವಿಕ್ (MobiKwik) 2022-23 ರ ಹಣಕಾಸು ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಲಾಭದಾಯಕವಾಗಿದೆ ಎಂದು ಸಂಸ್ಥೆಯ ಸಹ-ಸಂಸ್ಥಾಪಕಿ ಉಪಾಸನಾ ಟಾಕು ತಿಳಿಸಿದ್ದಾರೆ.

  • Share this:

ಮಹಿಳಾ ಉದ್ಯಮಿಯಾಗಿ ಮೊಬಿಕ್ವಿಕ್‌ನಂತಹ ಸ್ಟಾರ್ಟಪ್ ಆರಂಭಿಸಿದ ಉಪಾಸನಾ ಟಾಕು ಪ್ರಯಾಣ ಅಷ್ಟೊಂದು ಸುಲಭದ್ದಾಗಿರಲಿಲ್ಲ. ತಮ್ಮದೇ ಸ್ಟಾರ್ಟಪ್ ಆರಂಭಿಸಬೇಕೆಂಬ ನಿಟ್ಟಿನಲ್ಲಿ ಭಾರತಕ್ಕೆ ಬಂದ ಉಪಾಸನಾ ಟಾಕು ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ ಎಂದೆನಿಸಿದ್ದಾರೆ. ಮೊಬೈಲ್ ಫೋನ್ ಆಧಾರಿತ ಪಾವತಿ ವ್ಯವಸ್ಥೆಯನ್ನೊದಗಿಸುವ ಮತ್ತು ಡಿಜಿಟಲ್ ವ್ಯಾಲೆಟ್ ಮೊಬಿಕ್‌ಕ್ವಿಕ್ (MobiKwik) 2022-23 ರ ಹಣಕಾಸು ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಲಾಭದಾಯಕವಾಗಿದೆ ಎಂದು ಸಂಸ್ಥೆಯ ಸಹ-ಸಂಸ್ಥಾಪಕಿ ಉಪಾಸನಾ ಟಾಕು ತಿಳಿಸಿದ್ದಾರೆ.


ಲಾಭದಾಯಕ ಸಂಸ್ಥೆ ಎಂದೆನಿಸಿರುವ ಮೊಬಿಕ್ವಿಕ್!


ಪ್ರಸಕ್ತ ವರ್ಷದಲ್ಲಿ, ಕಂಪನಿಯು ಆದಾಯವನ್ನು ದ್ವಿಗುಣಗೊಳಿಸುವ ಮತ್ತು ಸಂಪೂರ್ಣ ವರ್ಷಕ್ಕೆ ಲಾಭದಾಯಕತೆಯನ್ನು ಸಾಧಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿರುವ ಟಾಕು, ಕಳೆದ ಆರ್ಥಿಕ ವರ್ಷದಲ್ಲಿ ರೂ 560 ಕೋಟಿ ಆದಾಯ ಗಳಿಸಿದೆ ಎಂದು ತಿಳಿಸಿದ್ದಾರೆ.


ಸಕ್ರಿಯ ಬಳಕೆದಾರರ ಸಂಖ್ಯೆಯಲ್ಲಿ ಏರಿಕೆ!


ಬಳಕೆದಾರರ ಸಂಖ್ಯೆ ಕೂಡ ಏರಿರುವುದಾಗಿ ತಿಳಿಸಿರುವ ಉಪಾಸನಾ ಟಾಕು, ಸಕ್ರಿಯ ಬಳಕೆದಾರರು 2 ಮಿಲಿಯನ್‌ನಿಂದ 4 ಮಿಲಿಯನ್‌ಗೆ ಏರಿಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.ಈಗ ಖರೀದಿಸಿ ನಂತರ ಪಾವತಿಸಿ (‘Buy Now Pay Later') ಯೋಜನೆಯು ಅನುಕೂಲಕರ ಫಲಿತಾಂಶಗಳನ್ನು ಸಾಧಿಸಲು ಸಹಾಯ ಮಾಡಿದೆ ಎಂಬುದು ಟಾಕು ಮಾತಾಗಿದೆ.


ಕಂಪನಿಯು ಕೊನೆಯದಾಗಿ ಡಿಸೆಂಬರ್ 2021 ರಲ್ಲಿ 700 ಮಿಲಿಯನ್ ಡಾಲರ್ (ರೂ 5,723 ಕೋಟಿ) ಹಣವನ್ನು ಸಂಗ್ರಹಿಸಿತ್ತು. ಅದಾಗ್ಯೂ ಸಂಸ್ಥೆಯ ಉದ್ಯೋಗಿಗಳು ಉದ್ಯೋಗಿ ಸ್ಟಾಕ್ ಮಾಲೀಕತ್ವದ ಯೋಜನೆಯಲ್ಲಿ ತೊಡಗಿಸಿಕೊಂಡ ನಂತರ ಈ ಮೌಲ್ಯವು ಒಂದು ಬಿಲಿಯನ್‌ಗೆ ಏರಿಕೆಯಾಯಿತು.


ಉಪಾಸನಾ ಟಾಕು ವಿದ್ಯಾಭ್ಯಾಸ


ಮೊಬಿಕ್ವಿಕ್‌ ಸಂಸ್ಥೆಯ ಅಧ್ಯಕ್ಷರಾಗಿ ಟಾಕು ಕಾರ್ಯನಿರ್ವಹಿಸುತ್ತಿದ್ದು ಕಂಪನಿಯ ಸಿಒಒ ಕೂಡ ಆಗಿ ಪ್ರಮುಖ ಪಾತ್ರ ವಹಿಸಿದ್ದಾರೆ. ತಮ್ಮ ಪತಿಯೊಂದಿಗೆ ಉಪಾಸನಾ ಕಂಪನಿಯನ್ನು ಆರಂಭಿಸಿದ್ದು ಇವರು ಪಂಜಾಬ್‌ನ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ಪದವಿಯನ್ನು ಪೂರೈಸಿದ್ದಾರೆ. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಮ್ಯಾನೇಜ್‌ಮೆಂಟ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ.


ಇದನ್ನೂ ಓದಿ: ಐಐಟಿ ವಿದ್ಯಾರ್ಥಿಯಲ್ಲದೇ ಹೋದರೂ 90 ಲಕ್ಷ ಪ್ಯಾಕೇಜ್‌ನ ಜಾಬ್‌ ಆಫರ್ ಪಡೆದ ಯುವಕ!


ಉಪಾಸನಾ ಕಾರ್ಯನಿರ್ವಹಿಸಿದ ಸಂಸ್ಥೆಗಳು


ಮೊಬಿಕ್ವಿಕ್ ಅನ್ನು ಆರಂಭಿಸುವ ಮುನ್ನ ಅವರು ಅಮೇರಿಕನ್ ಪಾವತಿಗಳ ದೈತ್ಯ ಪೇಪಾಲ್‌ನಲ್ಲಿ ಉತ್ಪನ್ನ ನಿರ್ವಾಹಕರಾಗಿದ್ದರು. ನಂತರ HSBC ಯೊಂದಿಗೆ ಕೆಲಸ ಮಾಡಿದ್ದಾರೆ. ಫೋರ್ಬ್ಸ್‌ಗೆ ನೀಡಿದ ಹಳೆಯ ಸಂದರ್ಶನವೊಂದರಲ್ಲಿ ಉಪಾಸನಾ ಟಾಕು ಭಾರತ ಎದುರಿಸುತ್ತಿರುವ ಸಮಸ್ಯೆಯನ್ನು ಪರಿಹರಿಸುವ ಆತ್ಮವಿಶ್ವಾಸವನ್ನು ತೋರ್ಪಡಿಸಿದ್ದರು.


ಭಾರತ ಸಾಕಷ್ಟು ಬಳಕೆಯಾಗದ ಸಾಮರ್ಥ್ಯ ಹಾಗೂ ಸಮಸ್ಯೆಗಳ ಸುಳಿಯಲ್ಲಿ ಬಳಲುತ್ತಿರುವ ದೇಶವಾಗಿದೆ ಎಂದು ತಿಳಿಸಿದ್ದ ಉಪಾಸನಾ ತಮ್ಮ ಮಾರುಕಟ್ಟೆಗೆ ಭಾರತಕ್ಕಿಂತ ಉತ್ತಮ ಸ್ಥಳ ಇನ್ನೊಂದಿಲ್ಲ ಎಂಬ ಇರಾದೆಯನ್ನು ವ್ಯಕ್ತಪಡಿಸಿ ಸಂಸ್ಥೆಯನ್ನು ದೇಶದಲ್ಲಿ ಆರಂಭಿಸಿದರು.


ಕುಟುಂದವರ ವಿರೋಧ


ಅಮೆರಿಕಾದಲ್ಲಿ ನೆಲೆಗೊಂಡಿದ್ದ ಉಪಾಸನಾ ಭಾರತಕ್ಕೆ ಮರಳುವುದನ್ನು ಆಕೆಯ ಕುಟುಂಬದವರು ವಿರೋಧಿಸಿದ್ದರು, ಆದರೆ ಕುಟುಂಬದವರ ವಿರೋಧದ ನಡುವೆಯೇ ಅವರು 2009 ರಲ್ಲಿ ಭಾರತಕ್ಕೆ ಮರಳಿದರು. ಪೇಪಾಲ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ಉಪಾಸನಾ ಉತ್ತಮ ವೇತನವನ್ನು ಹೊಂದಿದ್ದರು, ಆದರೆ ತಮ್ಮದೇ ಸಂಸ್ಥೆಯನ್ನು ನಿರ್ಮಿಸಬೇಕೆಂಬ ಅವರ ಮನದಾಳದ ತುಡಿತ ಆಕೆಯಲ್ಲಿ ಅಚಲವಾಗಿತ್ತು.


ಕನಸನ್ನು ನನಸು ಮಾಡುವ ತುಡಿತ


ಸುಲಭವಾದ ಜೀವನ ನಡೆಸಲು ಭಾರತಕ್ಕೆ ಮರಳಲಿಲ್ಲ ಎಂಬ ಅಂಶವನ್ನು ಉಪಾಸನಾ ತಿಳಿಸಿದ್ದು ತಾವು ಹೋಗಬೇಕಾದ ಪಯಣ ಕಷ್ಟದ್ದಾಗಿರುತ್ತದೆ ಎಂಬುದರ ಅರಿವಿದ್ದೂ ತಮ್ಮ ಕನಸನ್ನು ನನಸು ಮಾಡುವ ಉದ್ದೇಶದಲ್ಲಿ ತೊಡಗಿಸಿಕೊಂಡರು.


2011 ರಲ್ಲಿ ಬಿಪಿನ್ ಪ್ರೀತಿ ಸಿಂಗ್ ಅವರನ್ನು ವಿವಾಹವಾದ ಉಪಾಸನಾ ಪತಿಯೊಂದಿಗೆ ಒಗ್ಗೂಡಿ ಮೊಬಿಕ್ವಿಕ್‌ನ ಆರಂಭಕ್ಕೆ ಮುಂದಾದರು. ಮೊದಲಿಗೆ ಸ್ಟಾರ್ಟಪ್‌ನ ಆರಂಭಕ್ಕೆ ಹಿಂಜರಿದಿದ್ದ ಬಿಪಿನ್‌ಗೆ ಪತ್ನಿ ಉಪಾಸನಾ ಧೈರ್ಯ ನೀಡಿದ್ದರು ಹಾಗೂ ಅವರು ಕೂಡ ತಮಗಿದ್ದ ಉದ್ಯೋಗವನ್ನು ತೊರೆದು ಪತ್ನಿಯೊಂದಿಗೆ ಸ್ಟಾರ್ಟಪ್ ಆರಂಭಿಸಲು ಕೈ ಜೋಡಿಸಿದರು.




ದಂಪತಿಗಳ ಆದಾಯ ಎಷ್ಟಿದೆ?

top videos


    ಮಹಿಳಾ ಉದ್ಯಮಿಯಾಗಿ ಔದ್ಯೋಗಿಕ ರಂಗದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿರುವುದಾಗಿ ಉಪಾಸನಾ ಟಾಕು ತಿಳಿಸಿದ್ದಾರೆ. ಇದೀಗ ಉಪಾಸನಾ ಟಾಕು ಮತ್ತು ಬಿಪಿನ್ ಪ್ರೀತ್ ಸಿಂಗ್ ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಟಾರ್ಟಪ್ ಸಂಸ್ಥಾಪಕರಲ್ಲಿ ಒಬ್ಬರು. ಆರ್ಥಿಕ ವರ್ಷ 2021 ರಲ್ಲಿ ಇವರಿಬ್ಬರೂ ತಲಾ ತಲಾ 1.4 ಕೋಟಿ 35 ಲಕ್ಷ ರೂ ಆದಾಯ ಗಳಿಸಿದ್ದಾರೆ.

    First published: