ಮುಕೇಶ್ ಅಂಬಾನಿ (Mukesh Ambani) ಮತ್ತು ನೀತಾ ಅಂಬಾನಿ (Nita ambani) ಅವರ ಕಿರಿಯ ಪುತ್ರ ಅನಂತ್ ಅಂಬಾನಿ (Anant Ambani) ಅವರು ರಾಧಿಕಾ ಮರ್ಚೆಂಟ್ (Radhika Merchant) ಅವರೊಂದಿಗೆ ನಿಶ್ವಿತಾರ್ಥ ಮಾಡಿಕೊಂಡಿದ್ದಾರೆ. ಈ ಜೋಡಿಯ ಎಂಗೇಜ್ಮೆಂಟ್ಗಾಗಿ ಅಂಬಾನಿ ನಿವಾಸ ಆಂಟಿಲಿಯಾ (Antilia) ಸ್ವರ್ಗದಂತೆ ರೆಡಿಯಾಗಿತ್ತು. ಎಲ್ಲಿ ನೋಡಿದರೂ ಅಲ್ಲಿ ಹೂಗಳ ರಾಶಿ. ಮುಂಬೈನಲ್ಲಿರುವ ಮುಖೇಶ್ ಅಂಬಾನಿ ನಿವಾಸದಲ್ಲಿ ಕುಟುಂಬಸ್ಥರು, ಸ್ನೇಹಿತರು ಹಾಗೂ ಸಂಬಂಧಿಕರ ಸಮ್ಮುಖದಲ್ಲಿ ನಿಶ್ಚಿತಾರ್ಥ ನೆರವೇರಿತು. ಬಾಲಿವುಡ್ ಸೆಲಬ್ರಿಟಿಗಳು ಸೇರಿದಂತೆ ರಾಜಕೀಯ, ಕ್ರೀಡೆ ವರ್ಗದ ಗಣ್ಯರು ಕೂಡ ಭಾಗಿಯಾಗಿದ್ದರು. ಅನಂತ್ ಅಂಬಾನಿಯನ್ನು ಮದುವೆಯಾಗಲಿರುವ ರಾಧಿಕಾ ಮರ್ಚೆಂಟ್ ಈಗಾಗಲೇ ಜನಪ್ರಿಯರಾಗಿದ್ದಾರೆ. ಮುಕೇಶ್ ಅಂಬಾನಿ ಹಿರಿಯ ಪುತ್ರ ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ಅವರ ವಿವಾಹ ಸಮಾರಂಭದಲ್ಲಿ ರಾಧಿಕಾ ಮರ್ಚೆಂಟ್ ಹೆಸರು ಬೆಳಕಿಗೆ ಬಂದಿತ್ತು.
ರಿಂಗ್ ತಂದುಕೊಟ್ಟ ವಿಶೇಷ ಅತಿಥಿ!
ಇನ್ನೂ ಈ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದಿದ್ದು ಮಾತ್ರ ಒಬ್ಬರು ಎಂದರೆ ತಪ್ಪಾಗಲ್ಲ. ಹೌದು, ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರಿಗೆ ಅವರ ಪ್ರೀತಿಯ ನಾಯಿ ರಿಂಗ್ ತಂದುಕೊಟ್ಟಿದೆ. ಸರ್ಪ್ರೈಸ್ ಆಗಿ ಈ ನಾಯಿ ಅವರಿಬ್ಬರ ಬಳಿ ಬಂದು ರಿಂಗ್ ತಂದುಕೊಟ್ಟಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ರಿಂಗ್ ತಂದುಕೊಟ್ಟ ಈ ನಾಯಿ ಅಂಬಾನಿ ಕುಟುಂಬದ ಮುದ್ದು ನಾಯಿಯಂತೆ. ಕುಟುಂಬದ ಸದಸ್ಯರಿಗೆಲ್ಲ ಈ ನಾಯಿಯನ್ನು ಕಂಡರೆ ಎಲ್ಲಿಲ್ಲದ ಪ್ರೀತಿ.
ರಾಧಿಕಾ-ಅನಂತ್ ಲುಕ್, ಡ್ರೆಸ್ಗೆ ನೆಟ್ಟಿಗರು ಫಿದಾ!
ನಿಶ್ಚಿತಾರ್ಥದ ದಿನದಂದು, ರಾಧಿಕಾ ಮರ್ಚೆಂಟ್ ಗೋಲ್ಡನ್ ಮತ್ತು ಕೆನೆ ಬಣ್ಣದ ಲೆಹೆಂಗಾ ಚೋಲಿಯನ್ನು ಧರಿಸಿದ್ದರು. ಕೊರಳಲ್ಲಿ ವಜ್ರದ ಸೆಟ್ ಮತ್ತು ಕೈಯಲ್ಲಿ ವಜ್ರದ ಬಳೆ ಮತ್ತು ಮಾಂಗ್ ಟಿಕಾ ಧರಿಸಿ ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಮತ್ತೊಂದೆಡೆ, ಅನಂತ್ ಅಬಾನಿ ಪತ್ನಿ ರಾಧಿಕಾ ಅವರ ವಿಭಿನ್ನ ನೀಲಿ ಶೆರ್ವಾನಿಯಲ್ಲಿ ಕಾಣಿಸಿಕೊಂಡರು. ಇಬ್ಬರೂ ಒಟ್ಟಿಗೆ ಮತ್ತು ಕುಟುಂಬದೊಂದಿ ಫೋಟೋಗೆ ಪೋಸ್ ನೀಡಿದರು.
ಈ ಸಂದರ್ಭದಲ್ಲಿ, ನೀತಾ ಅಂಬಾನಿ ಅವರು ಗೋಲ್ಡನ್ ಮತ್ತು ಕ್ರೀಮ್ ಕಾಂಬಿನೇಶನ್ನ ಕೆಂಪು ಬಾರ್ಡರ್ ಸೀರೆಯನ್ನು ಧರಿಸಿದ್ದು, ಹಿರಿಯ ಸೊಸೆ ಶ್ಲೋಕಾ ತಿಳಿ ನೀಲಿ ಬಣ್ಣದ ಲೆಹೆಂಗಾದಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು.
ಇದನ್ನೂ ಓದಿ: ಸ್ವರ್ಗವನ್ನೇ ನಾಚಿಸುವಂತಿದೆ ಅಂಬಾನಿ ನಿವಾಸ, ಎಂಗೇಜ್ಮೆಂಟ್ ಸಂಭ್ರಮದಲ್ಲಿರುವ ಆಂಟಿಲಿಯಾ ವೈಭವ ನೋಡಿ!
ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರ!
2022ರ ಜೂನ್ನಲ್ಲಿ ಮುಂಬೈನಲ್ಲಿರುವ ಜಿಯೋ ವರ್ಲ್ಡ್ ಸೆಂಟರ್ನಲ್ಲಿ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರು, ರಾಧಿಕಾ ಅವರಿಗಾಗಿ ‘ಅರಾಂಜೇತ್ರಂ’ ಎನ್ನುವ ಸಾಂಪ್ರದಾಯಿಕ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಮುಕೇಶ್ ಅಂಬಾನಿಯವರ ಕಿರಿಯ ಪುತ್ರನಾಗಿರುವ ಅನಂತ್, ಅಂಬಾನಿ ಒಡೆತನದ ಎನರ್ಜಿ ಉದ್ಯಮವನ್ನು ಮುನ್ನಡೆಸಲಿದ್ದಾರೆ. ಹೊಸ ಜೋಡಿಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಸೆಲಿಬ್ರಿಟಿಗಳಗಾಗಿ ಪಾರ್ಟಿ!
ಅನಂತ್ ಮತ್ತು ರಾಧಿಕಾ ಅವರ ನಿಶ್ಚಿತಾರ್ಥದ ಅಂಗವಾಗಿ ಬಾಲಿವುಡ್ ಸೆಲಿಬ್ರಿಟಿಗಳಿಗಾಗಿ ಪಾರ್ಟಿ ಆಯೋಜಿಸಲಾಗಿತ್ತು. ನಿರ್ಮಾಪಕ ಕರಣ್ ಜೋಹರ್, ನಟರಾದ ಶಾರುಖ್ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಜಾನ್ ಅಬ್ರಹಾಂ, ವರುಣ್ ಧವನ್, ರಣವೀರ್ ಸಿಂಗ್ –ದೀಪಿಕಾ ಪಡುಕೋಣೆ, ಐಶ್ವರ್ಯಾ ರೈ, ಕತ್ರೀನಾ ಕೈಫ್, ಜಾಹ್ನವಿ ಕಪೂರ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ