ಅಪ್ಪನ ಹೆಸರಲ್ಲಿ ಆಸ್ತಿ ಇದ್ದರೆ ಸಾಕು ಜೀವನ ಪೂರ್ತಿ ಜುಮ್ ಅಂತ ಇರೋಣ ಅಂತ ಮಕ್ಕಳು ಯೋಚಿಸೋ ಕಾಲ ಇದು. ಅಪ್ಪನ (Father) ಹೆಸರು ಬಳಸಿಕೊಂಡು ಎಲ್ಲರೂ ದುಡ್ಡು (Money) ಮಾಡ್ತಾರೆ. ಆದರೆ ಅಪ್ಪನ ಹೆಸರು ಬಳಸದೇ ಸ್ವಂತ ಹೆಸರು (Own Name), ಹಣ ಮಾಡೋದು ಇದೆಯಲ್ಲಾ ಅದು ಅಷ್ಟು ಸುಲಭದ ವಿಷಯವಲ್ಲ. ಈ ಕೆಲಸ ಎಲ್ಲರಿಂದಲೂ ಸಾಧ್ಯವಿಲ್ಲ. ಆದರೆ ಈ ಯುವತಿ ಮಾತ್ರ ಅಪ್ಪನ ಫೇಮ್, ನೇಮ್ ಬಳಸಿಕೊಳ್ಳದೇ ಯಾವ ಮಟ್ಟಕ್ಕೆ ಸಾಧನೆ ಮಾಡಿದ್ದಾರೆ ಅಂತ ನಿಮಗೆ ಗೊತ್ತಾದ್ರೆ ನಿಮಗೂ ಸ್ಪೂರ್ತಿ (Inspiration) ಬರುತ್ತೆ. ಸಿಮ್ರಾನ್ ಲಾಲ್ ಅಪ್ಪನ 80 ಸಾವಿರ ಕೋಟಿ ಆಸ್ತಿಯನ್ನು ಬಿಟ್ಟು ಸ್ವಂತವಾಗಿ ತನ್ನ ಕಾಲಿನ ಮೇಲೆ ನಿಂತಿದ್ದಾರೆ.
ಈಕೆಯ ತಂದೆ ವಿಕ್ರಮ್ ಲಾಲ್. ಇವರು ಬೇರೆ ಯಾರು ಅಲ್ಲ, ರಾಯಲ್ ಎನ್‌ಫೀಲ್ಡ್ ಮೋಟಾರ್ ಕಂಪನಿಯ ಮಾಲೀಕರು. ಸಿಮ್ರಾನ್ ಲಾಲ್ ಅಣ್ಣ ಸಿದ್ ಲಾಲ್ ಕೂಡ ಅಪ್ರತಿಮ ಉದ್ಯಮಿ. ಇಷ್ಟೆಲ್ಲಾ ಇದ್ದರೂ ಆಕೆ ತುಡಿತ ಮಾತ್ರ ಆಕೆಯ ತಾಯಿ 1996ರಲ್ಲಿ ಸ್ಥಾಪಿಸಿದ್ದ ಗುಡ್ ಅರ್ಥನ ಕಡೆಗೆ ಇತ್ತು.
ಗುಡ್ ಅರ್ಥ್ನ ಸಿಇಒ ಸಿಮ್ರಾನ್ ಲಾಲ್!
ಸಿಮ್ರಾನ್ ಲಾಲ್ 2002 ರಲ್ಲಿ ಗುಡ್ ಅರ್ಥ್‌ಗೆ ಸೇರಿದರು. ಅವರು CEO ಆಗುವ ಮೊದಲು, ಕಂಪನಿಯಲ್ಲಿ ಕಾರ್ಯನಿರ್ವಾಹಕರಾಗಿ ಕೆಲಸ ಮಾಡಿದ್ದಾರೆ. ಈ ಕಂಪನಿಗಾಗಿ ಸಾಕಷ್ಟು ಹೊಸತನಗಳನ್ನು ಸಿಮ್ರಾನ್ ಲಾಲ್ ಪರಿಚಯಿಸಿದರು. ಫ್ಯಾಷನ್, ಮನೆ, ಆರೋಗ್ಯಕರ ವಸ್ತುಗಳನ್ನು ಮಾರಾಟ ಮಾಡುವ ಭಾರತದ ಅಂತ್ಯ ಯಶಸ್ವಿ ಐಷಾರಾಮಿ ಜೀವನಶೈಲಿ ಬ್ರ್ಯಾಂಡ್ಗಳಲ್ಲಿ ಗುಡ್ ಅರ್ಥ್ ಕೂಡ ಒಂದು.
ಪತಿ ಜೊತೆ ಸೇರಿ ಮತ್ತೊಂದು ಕಂಪನಿ ಸ್ಥಾಪನೆ!
ಇದಾದ ಬಳಿಕ ಸಿಮ್ರಾನ್ ಲಾಲ್ 2017ರಲ್ಲಿ ತಮ್ಮ ಪತಿ ರೌಲ್ ರೈ ಅವರೊಂದಿಗೆ ಸೇರಿ ನಿಕೋಬಾರ್ ಎಂಬ ಲೈಫ್ಸ್ಟೈಲ್ ಬ್ರ್ಯಾಂಡ್ ಸ್ಥಾಪಿಸಿದರು. ಸಿಮ್ರಾನ್ ಲಾಲ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ಕಂಪನಿಯ ಆದಾರ ಕೇವಲ 5 ಕೋಟಿ ರೂಪಾಯಿಯಾಗಿತ್ತು. ಆದರೆ 2016-17ರ ಹೊತ್ತಿಗೆ ಈ ಕಂಪನಿಯ ಆದಾಯ 150 ಕೋಟಿಗೆ ಏರಿಕೆಯಾಗಿತ್ತು.
ಇದನ್ನೂ ಓದಿ: ಜರ್ಮನಿಯಲ್ಲಿನ ಕೆಲಸ ಬಿಟ್ಟು ಬಂದು IPS ಆದ ಚೆಲುವೆ; ಇವರ ಪತಿ IAS ಅಧಿಕಾರಿ
ಸಿಮ್ರಾನ್ ಲಾಲ್ ಓದಿದ್ದು ಎಲ್ಲಿ?
ಸಿಮ್ರಾನ್ ಲಾಲ್ ಬೆಂಗಳೂರು ವಿಶ್ವವಿದ್ಯಾಲಯದಿಂದ ಕಲಾ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇದಾದ ನಂತರ ನ್ಯೂಯಾರ್ಕ್ಗೆ ತೆರಳಿ ಅಲ್ಲಿ ಫ್ಯಾಶನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕೋರ್ಸ್ಗೆ ಸೇರಿಕೊಂಡರು. ಇನ್ನೂ ಅಲ್ಲಿಂದ ಬಂದ ಕೂಡಲೇ ಗುಡ್ ಅರ್ಥ್ ಕಂಪನಿಯ ಸಿಇಒ ಆದರು. ಇಷ್ಟಕ್ಕೇ ನಿಲ್ಲದ ಸಿಮ್ರಾನ್ ಗುಡ್ ಅರ್ಥ್ನ ಉಪ ಬ್ರ್ಯಾಂಡ್ ಪಾರೊವನ್ನು ಮಾರುಕಟ್ಟೆಗೆ ತಂದರು.
ಚಿಕ್ಕವಯಸ್ಸಿನಿಂದಲೂ ಕಲೆ ಮೇಲೆ ವಿಶಿಷ್ಟ ಆಸಕ್ತಿ!
ಲಾಲ್ ಕೆಲವು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ತಮ್ಮ ಕುಟುಂಬದ ವಾತಾವರಣವು ಸಾಂಪ್ರದಾಯಿಕ ವ್ಯಾಪಾರ ಕುಟುಂಬದಂತೆ ಇರಲಿಲ್ಲ ಎಂದು ಹೇಳಿದ್ದರು. ಸಿಮ್ರಾನ್ ಲಾಲ್ ಯಾವಾಗಲೂ ಕಲಾತ್ಮಕವಾಗಿದ್ದರು. ಜೀವನದಲ್ಲಿ ಕಲೆಗೆ ಸಂಬಂಧಿಸಿದ ಏನಾದರೂ ಮಾಡಬೇಕೆಂದು ಬಯಸಿದ್ದರು. ಪುರಾತತ್ತ್ವ ಶಾಸ್ತ್ರ, ಭಾಷೆಗಳು, ಕಲೆ ಮತ್ತು ವಾಸ್ತುಶಿಲ್ಪದಲ್ಲಿ ಆಸಕ್ತಿ ಹೊಂದಿದ್ದರು.
2005 ರಲ್ಲಿ ಮುಂಬೈನಲ್ಲಿ ತಮ್ಮ ಪ್ರಮುಖ ಮಳಿಗೆಯನ್ನು ತೆರೆದರು. ಎರಡು ವರ್ಷಗಳ ನಂತರ ಅವರು ದೆಹಲಿಯ ಖಾನ್ ಮಾರುಕಟ್ಟೆಯಲ್ಲಿ ಅಂಗಡಿಯನ್ನು ತೆರೆದರು.
ವಿಕ್ರಮ್ ಲಾಲ್ ಕುಟುಂಬದ ನಿವ್ವಳ ಮೌಲ್ಯ 54000 ಕೋಟಿ!
ಐಷರ್ ಮೋಟಾರ್ಸ್ ಅನ್ನು ವಿಕ್ರಮ್ ಲಾಲ್ ಅವರ ತಂದೆ ಮನ್ ಮೋಹನ್ ಲಾಲ್ ಸ್ಥಾಪಿಸಿದರು. ಕ್ಲಾಸಿಕ್ ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡುವ ರಾಯಲ್ ಎನ್‌ಫೀಲ್ಡ್ ಬ್ರಾಂಡ್‌ನ ಪುನರುಜ್ಜೀವನಕ್ಕಾಗಿ ಸಿಮ್ರಾನ್ ಅವರ ಸಹೋದರ ಸಿದ್ ಲಾಲ್ ಬಹಳ ಶ್ರಮಿಸಿದರು. 2000 ರಲ್ಲಿ ಸಿದ್ ಲಾಲ್ ರಾಯಲ್ ಎನ್‌ಫೀಲ್ಡ್ ಸಿಇಒ ಆದರು.
ಸದ್ಯ ಸಿಮ್ರಾನ್ ಲಾಲ್ ಮತ್ತು ರೌಲ್ ರೈ ತಮ್ಮ ಇಬ್ಬರು ಪುತ್ರರೊಂದಿಗೆ ದೆಹಲಿಯಲ್ಲಿ ವಾಸವಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ