Sagar Gupta: 4 ವರ್ಷಗಳಲ್ಲಿ 600 ಕೋಟಿಯ ಸಾಮಾಜ್ಯ ಕಟ್ಟಿದ B Com ಪದವೀಧರ, ಈತನ ಸಾಧನೆ ಯುವಜನತೆಗೆ ಮಾದರಿ!

ಸಾಗರ್​ ಗುಪ್ತಾ

ಸಾಗರ್​ ಗುಪ್ತಾ

ಇನ್ನೊಬ್ಬರ ಕೈ ಕೆಳಗೆ ದುಡಿಯದೇ ತಮ್ಮದೇ ಸಂಸ್ಥೆ ಸ್ಥಾಪಿಸಬೇಕು, ಇತರರಂತೆ ತಾವು ಕೂಡ ಸಮಾಜದಲ್ಲಿ ಗಣ್ಯರಾಗಬೇಕೆಂದು ಹೆಚ್ಚಿನ ಯುವಜನರು ಕನಸು ಕಾಣುತ್ತಿರುತ್ತಾರೆ.

  • Share this:

ಜೀವನದಲ್ಲಿ ಏನನ್ನಾದರೂ ಮಹತ್ತರವಾದುದನ್ನು ಸಾಧಿಸಬೇಕೆಂಬುದು ಹೆಚ್ಚಿನವರ ಬಯಕೆಯಾಗಿರುತ್ತದೆ. ಅದರಲ್ಲೂ ಉದ್ಯಮ ಕ್ಷೇತ್ರದಲ್ಲಿ (Business Filed) ಈ ತುಡಿತ ತೀವ್ರವಾಗಿರುತ್ತದೆ. ಇನ್ನೊಬ್ಬರ ಕೈ ಕೆಳಗೆ ದುಡಿಯದೇ ತಮ್ಮದೇ ಸಂಸ್ಥೆ ಸ್ಥಾಪಿಸಬೇಕು, ಇತರರಂತೆ ತಾವು ಕೂಡ ಸಮಾಜದಲ್ಲಿ ಗಣ್ಯರಾಗಬೇಕೆಂದು ಹೆಚ್ಚಿನ ಯುವಜನರು ಕನಸು ಕಾಣುತ್ತಿರುತ್ತಾರೆ. ಕನಸು (Dream) ಕಾಣುವವರು ಹೆಚ್ಚಿನವರಾದರೂ ಅದನ್ನು ನನಸಾಗಿಸಲು ಪ್ರಯತ್ನಿಸುವವರು ಬೆರಳೆಣಿಕೆಯಷ್ಟು ಜನ ಮಾತ್ರ. ಈ ಮೊದಲು ಉದ್ಯಮ ರಂಗದಲ್ಲಿ ಮೇಲೇರಿ ಸಾಧನೆ ನಡೆಸುತ್ತಿದ್ದವರು ಒಂದಾ ಹುಟ್ಟು ಶ್ರೀಮಂತರಾಗಿರುವವರು ಇಲ್ಲವೇ ತಾವು ಬಯಸುವ ಉದ್ಯಮಕ್ಕೆ ಹಣ (Money) ಹೂಡಿಕೆ ಮಾಡುವವರಾಗಿರುತ್ತಿದ್ದರು.


ಆದರೀಗ ಹೆಚ್ಚಿನ ಸ್ಟಾರ್ಟಪ್‌ಗಳು ತಲೆ ಎತ್ತುತ್ತಿದ್ದು ಸಣ್ಣ ಸಣ್ಣ ಹರೆಯದವರು ಕೂಡ ಉದ್ಯಮಶೀಲರಾಗಿ ಹೆಸರುವಾಸಿಯಾಗುತ್ತಿದ್ದಾರೆ. ಇಂತಹ ಸಾಧಕರಲ್ಲಿ ನೋಯ್ಡಾದ ಸಾಗರ್ ಗುಪ್ತಾ ಕೂಡ ಒಬ್ಬರಾಗಿದ್ದು ಇವರು ನಡೆದು ಬಂದ ದಾರಿ ಹಲವಾರು ಯುಕವರಿಗೆ ಮಾದರಿ ಹಾಗೂ ಪ್ರೇರಣಾದಾಯಕವಾಗಿದೆ.


4 ವರ್ಷಗಳಲ್ಲಿ 600 ಕೋಟಿ ಒಡೆತನದ ಸಾಮ್ರಾಜ್ಯ ಕಟ್ಟಿದ ಸಾಹಸೋದ್ಯಮಿ


22ರ ಹರೆಯದಲ್ಲಿ ದೆಹಲಿಯ ವಿಶ್ವವಿದ್ಯಾಲಯದಿಂದ ಬಿ.ಕಾಮ್ ಪದವಿ ಗಳಿಸಿದ ಸಾಗರ್, ತಂದೆಯೊಂದಿಗೆ ಉತ್ಪಾದನಾ ವ್ಯವಹಾರ ಆರಂಭಿಸಿದರು ತದನಂತರ ಈ ಯುವಕ ಹಿಂತಿರುಗಿ ನೋಡಲಿಲ್ಲ. ಯಶಸ್ಸಿನ ಒಂದೊಂದೇ ಮೆಟ್ಟಿಲೇರತೊಡಗಿದರು. ಬರೇ 4 ವರ್ಷಗಳಲ್ಲಿ ಸಾಗರ್ 600 ಕೋಟಿ ಒಡೆತನದ ಸಾಮ್ರಾಜ್ಯ ನಿರ್ಮಿಸಿದರು.


ಆರಂಭದಲ್ಲಿ ಉದ್ಯಮಿಯಾಗಬೇಕೆಂಬ ಕನಸನ್ನು ಸಾಗರ್ ಕಂಡಿರಲಿಲ್ಲ. ಈ ಸಲುವಾಗಿ ಯಾವುದೇ ಯೋಜನೆ ಕೂಡ ಇವರ ಮನದಲ್ಲಿರಲಿಲ್ಲ. ಸಿಎ ಆಗಬೇಕೆಂಬ ಅದಮ್ಯ ಬಯಕೆಯನ್ನು ಇವರು ಹೊಂದಿದ್ದರು ಹಾಗಾಗಿಯೇ ಪ್ರತಿಷ್ಠಿತ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ನಲ್ಲಿ ಅಧ್ಯಯನ ಕೂಡ ನಡೆಸಿದರು.


ಇದನ್ನೂ ಓದಿ: ವಾಹನ ಸವಾರರೇ ಪೆಟ್ರೋಲ್‌ ಟ್ಯಾಂಕ್‌ ಫುಲ್ ಮಾಡೋ ಮುನ್ನ ಇಂದಿನ ತೈಲ ಬೆಲೆ ಗಮನಿಸಿ


ವ್ಯಾಸಂಗ ಪೂರ್ಣಗೊಳಿಸಿ ಉತ್ತೀರ್ಣರಾದ ನಂತರ ಸಾಗರ್ ತಮ್ಮ ಮನಸ್ಸು ಬದಲಾಯಿಸಿಕೊಂಡರು. ಅವರ ತಂದೆ 2017 ರಲ್ಲಿ LED ಟೆಲಿವಿಷನ್‌ಗಳನ್ನು ಉತ್ಪಾದಿಸಲು ಪ್ರಾರಂಭಿಸಿದಾಗ ಸಾಗರ್ ಇದರಲ್ಲಿಯೇ ಅದ್ಭುತ ಅವಕಾಶ ಇರುವುದನ್ನು ಮನಗಂಡರು. ಎರಡು ವರ್ಷಗಳ ನಂತರ, ತಂದೆ ಮತ್ತು ಮಗ ನೋಯ್ಡಾದಲ್ಲಿ ತಮ್ಮ ವ್ಯಾಪಾರವನ್ನು ಪ್ರಾರಂಭಿಸಿದರು.


ಬ್ಯುಸಿನೆಸ್ ವಲಯದಲ್ಲಿ ಸಾಗರ್ ಕಂಡ ಏರಿಳಿತ


ಬ್ಯುಸಿನೆಸ್‌ನಲ್ಲಿ ಸಾಗರ್ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. ಸಾಗರ್ ತಂದೆ ಈ ಕ್ಷೇತ್ರದಲ್ಲಿ ಸಂಪರ್ಕಗಳನ್ನು ಹೊಂದಿದ್ದರಿಂದ ಅವರಿಗೆ ಕೊಂಚ ನಿರಾಳವೆಂದೆನಿಸಿತು.


ಸೋನಿ, ತೋಷಿಬಾ ಮತ್ತು ಸ್ಯಾಮ್‌ಸಂಗ್‌ನಂತಹ ಕಂಪನಿಗಳಿಗೆ ಸರಕುಗಳನ್ನು ಉತ್ಪಾದಿಸಲು ಪ್ರಾರಂಭಿಸಿದರು. ಆ ಸಮಯದಲ್ಲಿ ಎಲ್ಇಡಿ ಉತ್ಪಾದನಾ ವಲಯದಲ್ಲಿ ಚೀನಾ ಪ್ರಾಬಲ್ಯ ಹೊಂದಿತ್ತು. ಇದೀಗ ಸಂಸ್ಥೆ ಭಾರತದಲ್ಲಿ ಕ್ಷೇತ್ರವನ್ನು ಹೆಚ್ಚಿಸುತ್ತಿದೆ.


ಬ್ಯುಸಿನೆಸ್ ಅನ್ನು ಇನ್ನಷ್ಟು ವಿಸ್ತರಿಸುವ ಇರಾದೆ


ವ್ಯವಹಾರ ಕ್ಷೇತ್ರದಲ್ಲಿ ಹೆಸರು ಹಾಗೂ ಕೀರ್ತಿ ಸಂಪಾದಿಸಿರುವ ಸಾಗರ್ ಮಾರುಕಟ್ಟೆಯಲ್ಲಿ ತಮ್ಮದೇ ಹೆಸರು ಸಾಧಿಸಿದ್ದಾರೆ. ಇಂದು 100 ಕ್ಕೂ ಹೆಚ್ಚಿನ ಸಂಸ್ಥೆಗಳು, ಸಾಗರ್ ಗುಪ್ತಾ ಅವರ ಕಂಪನಿಯಿಂದ LCD ಟಿವಿಗಳು, LED ಟಿವಿಗಳು ಮತ್ತು ಉನ್ನತ-ಮಟ್ಟದ ಟಿವಿಗಳನ್ನು ಖರೀದಿಸುತ್ತವೆ.


ಇದನ್ನೂ ಓದಿ: 15 ವರ್ಷಗಳಿಂದ ಸಿಕ್‌ ಲೀವ್‌ನಲ್ಲಿರುವ IBM ಉದ್ಯೋಗಿ; ವೇತನ ಏರಿಕೆ ಮಾಡಿಲ್ಲ ಎಂದು ಕಂಪನಿಯ ವಿರುದ್ಧ ಮೊಕದ್ದಮೆ


ಪ್ರತಿ ತಿಂಗಳು, ಕಂಪನಿಯು 1 ಲಕ್ಷಕ್ಕೂ ಹೆಚ್ಚು ಟಿವಿಗಳನ್ನು ತಯಾರಿಸುತ್ತದೆ. ಹೀಗೆ ಸಂಸ್ಥೆಯು 2022-23 ರಲ್ಲಿ ಗಳಿಸಿದ ಆದಾಯ ಬರೋಬ್ಬರಿ 600 ಕೋಟಿ ರೂ. ಎಂದರೆ ಅವರ ಪರಿಶ್ರಮ ಮನವರಿಕೆಯಾಗುವುದು ಖಂಡಿತ.


ಸಾಗರ್ ಗುಪ್ತಾ ತಮ್ಮ ಬ್ಯುಸಿನೆಸ್ ವಲಯವನ್ನು ಇನ್ನಷ್ಟು ವಿಸ್ತಾರಗೊಳಿಸುವ ನಿಟ್ಟಿನಲ್ಲಿದ್ದು ಸ್ಮಾರ್ಟ್ ವಾಚ್‌ಗಳು, ಸ್ಪೀಕರ್‌ಗಳು ಮತ್ತು ವಾಷಿಂಗ್ ಮೆಷಿನ್‌ಗಳಂತಹ ತಾಂತ್ರಿಕ ಸಾಧನಗಳ ಉತ್ಪಾದನೆಯಲ್ಲೂ ಅದೃಷ್ಟ ಪರಿಶೀಲಿಸುವ ತವಕದಲ್ಲಿದ್ದಾರೆ.




ಸೋನೆಪತ್‌ನ ಕಾರ್ಖಾನೆಯಲ್ಲಿ 1000 ಕ್ಕೂ ಹೆಚ್ಚಿನ ಜನರಿಗೆ ಉದ್ಯೋಗ


ಡಿಎನ್ಎ ವರದಿಗಳ ಪ್ರಕಾರ, ಇದಕ್ಕಾಗಿ ಅವರು ನೋಯ್ಡಾದಲ್ಲಿ 1,000 ಕೋಟಿ ರೂ ಹೂಡಿಕೆ ಮಾಡಲಿದ್ದಾರೆ ಎಂಬ ಮಾಹಿತಿ ಇದೆ. ಭೂಮಿ, ಪರಿಕರ ಹಾಗೂ ಸೌಲಭ್ಯಗಳನ್ನು ಖರೀದಿಸಲು ಸಂಸ್ಥೆ ಮೊದಲಿಗೆ ರೂ 400 ಕೋಟಿ ವಿನಿಯೋಗಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯಕ್ಕೆ, ಅವರು ಸೋನೆಪತ್‌ನಲ್ಲಿ ಕಾರ್ಖಾನೆಯನ್ನು ಹೊಂದಿದ್ದಾರೆ ಮತ್ತು 1000 ಕ್ಕೂ ಹೆಚ್ಚು ಉದ್ಯೋಗಿಗಳು ಇಲ್ಲಿ ಜೀವನ ಕಂಡುಕೊಂಡಿದ್ದಾರೆ.

top videos
    First published: