• Home
 • »
 • News
 • »
 • business
 • »
 • Ratan Tata: ಮೊಬೈಲೂ ಇಲ್ಲ, ಎರಡು ಕೋಣೆಯ ಮನೆಯಲ್ಲಿ ವಾಸ: ಇದು ರತನ್ ಟಾಟಾ ತಮ್ಮ ಜಿಮ್ಮಿ ಲೈಫ್​​ಸ್ಟೈಲ್!

Ratan Tata: ಮೊಬೈಲೂ ಇಲ್ಲ, ಎರಡು ಕೋಣೆಯ ಮನೆಯಲ್ಲಿ ವಾಸ: ಇದು ರತನ್ ಟಾಟಾ ತಮ್ಮ ಜಿಮ್ಮಿ ಲೈಫ್​​ಸ್ಟೈಲ್!

ರತನ್​ ಟಾಟಾ ಹಾಗೂ ಅವರ ತಮ್ಮ ಜಿಮ್ಮಿ ಟಾಟಾ

ರತನ್​ ಟಾಟಾ ಹಾಗೂ ಅವರ ತಮ್ಮ ಜಿಮ್ಮಿ ಟಾಟಾ

ಟಾಟಾ ಸನ್ಸ್ ಅಧ್ಯಕ್ಷ ರತನ್ ಟಾಟಾ ಅವರು ಮಂಗಳವಾರ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ತಮ್ಮ ಕಿರಿಯ ಸಹೋದರ ಜಿಮ್ಮಿ ಟಾಟಾ ಅವರೊಂದಿಗೆ ಹಂಚಿಕೊಂಡ ಬಾಲ್ಯದ ಆ ಬಂಧವನ್ನು ನೆನಪಿಸಿಕೊಂಡರು. ಬಿಲಿಯನೇರ್ ತಮ್ಮ ಕಿರಿಯ ಸಹೋದರನೊಂದಿಗೆ 1945 ರಲ್ಲಿ ಕ್ಲಿಕ್ಕಿಸಿಕೊಂಡ ಒಂದು ಕಪ್ಪು ಮತ್ತು ಬಿಳುಪಿನ ಫೋಟೋವನ್ನು ಹಂಚಿಕೊಂಡಿದ್ದಾರೆ.

ಮುಂದೆ ಓದಿ ...
 • Trending Desk
 • 4-MIN READ
 • Last Updated :
 • Mumbai, India
 • Share this:

ಸಾಮಾನ್ಯವಾಗಿ ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳ ಜೀವನಶೈಲಿ ಎಂದರೆ ತುಂಬಾನೇ ವೈಭವದಿಂದ ಕೂಡಿರುತ್ತದೆ ಅಂತ ನಾವೆಲ್ಲಾ ತಿಳಿದುಕೊಂಡಿರುತ್ತೇವೆ. ಆದರೆ ನಾವು ಎಷ್ಟೇ ಹೆಸರು, ದುಡ್ಡು ಮಾಡಿದರೂ ಸಹ ಸರಳವಾದ ಜೀವನವನ್ನ ಬದುಕುತ್ತಿರುವವರು ಸಹ ಇದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಇನ್ಫೋಸಿಸ್ ಕಂಪನಿಯ ನಾರಾಯಣ ಮೂರ್ತಿ(Narayana Murthy), ಅವರ ಹೆಂಡತಿ ಸುಧಾ ಮೂರ್ತಿ ಮತ್ತು ಟಾಟಾ ಕಂಪನಿಯ ರತನ್ ಟಾಟಾ (Ratan Tata) ಅವರು ಹೀಗೆ ತುಂಬಾನೇ ಸರಳವಾಗಿ ಬದುಕುತ್ತಿರುವ ದೊಡ್ಡ ಉದ್ಯಮಿಗಳು (Businessmen) ಅಂತಾನೆ ಹೇಳಬಹುದು.


ಜೀವನದ ಆ ಸರಳತೆಗಿರುವ ಆ ಮುಗ್ದತೆಯನ್ನ ಮೈಗೂಡಿಸಿಕೊಂಡ ಇವರು ತಮ್ಮ ಉದ್ಯಮದಲ್ಲಿಯೂ ಅಷ್ಟೇ ಹೆಸರು ಮಾಡಿದವರು. ವ್ಯವಹಾರದಲ್ಲಿ ಅಷ್ಟೇ ಅಲ್ಲದೆ ಸಂಬಂಧಗಳನ್ನೂ ಬಹಳ ಮುಗ್ದತೆಯಿಂದ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ ಇವರು ಅಂತ ಹೇಳಬಹುದು.


ಟಾಟಾ ಸನ್ಸ್ ಅಧ್ಯಕ್ಷ ರತನ್ ಟಾಟಾ ಅವರು ಮಂಗಳವಾರ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ತಮ್ಮ ಕಿರಿಯ ಸಹೋದರ ಜಿಮ್ಮಿ ಟಾಟಾ ಅವರೊಂದಿಗೆ ಹಂಚಿಕೊಂಡ ಬಾಲ್ಯದ ಆ ಬಂಧವನ್ನು ನೆನಪಿಸಿಕೊಂಡರು. ಬಿಲಿಯನೇರ್ ತಮ್ಮ ಕಿರಿಯ ಸಹೋದರನೊಂದಿಗೆ 1945 ರಲ್ಲಿ ಕ್ಲಿಕ್ಕಿಸಿಕೊಂಡ ಒಂದು ಕಪ್ಪು ಮತ್ತು ಬಿಳುಪಿನ ಫೋಟೋವನ್ನು ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: Ratan Tata: ಕೈಗಾರಿಕೋದ್ಯಮಿ ರತನ್ ಟಾಟಾ ಮೀಟಿಂಗ್​ಗಳಲ್ಲಿ ಹೇಗಿರ್ತಾರೆ ಗೊತ್ತಾ? ಇದನ್ನೊಮ್ಮೆ ಓದಿ


ತಮ್ಮನ ಜೊತೆ ಕ್ಲಿಕ್ಕಿಸಿಕೊಂಡ ಕಪ್ಪು-ಬಿಳುಪು ಫೋಟೋ ಹಂಚಿಕೊಂಡ ರತನ್


"ಆ ದಿನಗಳು ತುಂಬಾನೇ ಸಂತೋಷದ ದಿನಗಳು, ನಮ್ಮ ನಡುವೆ ಯಾವುದೇ ಜಗಳ ಬರಲಿಲ್ಲ. (1945 ರಲ್ಲಿ ನನ್ನ ಸಹೋದರ ಜಿಮ್ಮಿಯೊಂದಿಗೆ)" ಎಂದು ರತನ್ ಟಾಟಾ ಅವರು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ತಮ್ಮ 7 ಮಿಲಿಯನ್ ಫಾಲೋವರ್ ಗಳೊಂದಿಗೆ ಹಂಚಿಕೊಂಡಿರುವ ಫೋಟೋಗೆ ಶೀರ್ಷಿಕೆಯನ್ನು ನೀಡಿದ್ದಾರೆ.


ಟಾಟಾ ಸನ್ಸ್ ಮತ್ತು ಇತರ ಟಾಟಾ ಗ್ರೂಪ್ ಕಂಪನಿಗಳಲ್ಲಿ ಷೇರುದಾರರಾಗಿರುವ 82 ವರ್ಷದ ಜಿಮ್ಮಿ ತುಂಬಾ ಸರಳವಾದ ಜೀವನವನ್ನು ನಡೆಸುತ್ತಿದ್ದಾರೆ ಅಂತ ಹೇಳಬಹುದು. ಅವರು ಮುಂಬೈ ನಗರದ ಕೊಲಾಬಾದ 2 ಬಿಎಚ್ ಕೆ ಫ್ಲ್ಯಾಟ್ ನಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರು ಮೊಬೈಲ್ ಫೋನ್ ಅನ್ನ ಸಹ ಬಳ್ಸೋದಿಲ್ವಂತೆ ಅಂತ ಹೇಳಲಾಗುತ್ತಿದೆ.


ರತನ್ ಅವರ ತಮ್ಮ ಜಿಮ್ಮಿಯನ್ನ ಜಗತ್ತಿಗೆ ಪರಿಚಯಿಸಿದ ಗೋಯೆಂಕಾ


ಜನವರಿ 19, 2022 ರಂದು ಹಂಚಿಕೊಂಡ ಈ ಟ್ವಿಟ್ಟರ್ ಪೋಸ್ಟ್ ನಲ್ಲಿ ಆರ್‌ಪಿಜಿ ಗ್ರೂಪ್ ನ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ಜಿಮ್ಮಿಯವರನ್ನು ಇಡೀ ಜಗತ್ತಿಗೆ ಪರಿಚಯಿಸಿದರು.


"ರತನ್ ಟಾಟಾ ಅವರ ಕಿರಿಯ ಸಹೋದರ ಜಿಮ್ಮಿ ಟಾಟಾ ಅವರು ಮುಂಬೈನ ಕೊಲಾಬಾದಲ್ಲಿರುವ 2 ಬಿಎಚ್‌ಕೆ ಫ್ಲ್ಯಾಟ್ ನಲ್ಲಿ ಆರಾಮವಾದ ಜೀವನವನ್ನು ನಡೆಸುತ್ತಿದ್ದಾರೆ ಎಂದು ನಿಮಗೆ ತಿಳಿದಿದೆಯೇ? ವ್ಯವಹಾರದಲ್ಲಿ ಎಂದಿಗೂ ಆಸಕ್ತಿ ಹೊಂದಿರದ ಇವರು ತುಂಬಾ ಉತ್ತಮ ಸ್ಕ್ವಾಷ್ ಆಟಗಾರರಾಗಿದ್ದರು ಮತ್ತು ಪ್ರತಿ ಬಾರಿಯೂ ನನ್ನನ್ನು ಸೋಲಿಸುತ್ತಿದ್ದರು. ಟಾಟಾ ಗ್ರೂಪ್ ನಂತೆ ಇವರದ್ದು ಸಹ ಸಿಂಪಲ್ ಪ್ರೊಫೈಲ್" ಎಂಬ ವೈರಲ್ ಪೋಸ್ಟ್ ನಲ್ಲಿ ಗೋಯೆಂಕಾ ಅವರು ಬರೆದಿದ್ದಾರೆ.

View this post on Instagram


A post shared by Ratan Tata (@ratantata)

ಟಾಟಾ ಸನ್ಸ್, ಟಿಸಿಎಸ್, ಟಾಟಾ ಮೋಟರ್ಸ್, ಟಾಟಾ ಸ್ಟೀಲ್, ಟಾಟಾ ಕೆಮಿಕಲ್ಸ್, ಇಂಡಿಯನ್ ಹೋಟೆಲ್ಸ್ ಮತ್ತು ಟಾಟಾ ಪವರ್ ನಲ್ಲಿ ಜಿಮ್ಮಿ ಟಾಟಾ ಷೇರುದಾರರಾಗಿದ್ದಾರೆ.


ಮಾಧ್ಯಮದ ವರದಿಯ ಪ್ರಕಾರ, ಕಿರಿಯ ಟಾಟಾ, ಅವಿವಾಹಿತರಾಗಿದ್ದು, ಮೊಬೈಲ್ ಫೋನ್ ಸಹ ಹೊಂದಿಲ್ಲ ಮತ್ತು ಎಲ್ಲೋ ಅಪರೂಪಕ್ಕೆ ಅಪಾರ್ಟ್ಮೆಂಟ್ ನಿಂದ ಹೊರಬರುತ್ತಾರಂತೆ.


ಇದನ್ನೂ ಓದಿ: Bangalore University: ಬೆಂಗಳೂರು ಯುನಿವರ್ಸಿಟಿಗೂ ಬಂತಾ ಚಿರತೆ?


ಸರ್ ರತನ್ ಟಾಟಾ ಟ್ರಸ್ಟ್ ನ ಟ್ರಸ್ಟಿಯಾಗಿದ್ದ ಜಿಮ್ಮಿ, 1989 ರಲ್ಲಿ ನಿಧನರಾದ ನವಲ್ ಟಾಟಾ ಅವರ ತಂದೆಯ ಇಚ್ಛೆಗೆ ಬದ್ಧರಾಗಿ ಈ ಸ್ಥಾನವನ್ನು ಪಡೆದರು.


ಜಿಮ್ಮಿ ಮತ್ತು ರತನ್ ಗೆ ಇನ್ನೊಬ್ಬ ಸಹೋದರ ಸಹ ಇದ್ದಾರಂತೆ..


ಜಿಮ್ಮಿ ಮತ್ತು ರತನ್ ಗೆ ಇನ್ನೊಬ್ಬ ಸಹೋದರ ಇದ್ದು, ಅವರು ನವಲ್ ಟಾಟಾ ಮತ್ತು ಅವರ ಎರಡನೇ ಪತ್ನಿ ಸಿಮೋನ್ ಅವರಿಗೆ ಜನಿಸಿದವರು. ಅವರು ಈಗ ಟಾಟಾ ಇಂಟರ್ನ್ಯಾಷನಲ್ ನ ಎಂಡಿ ಮತ್ತು ಟ್ರೆಂಟ್ ನ ಅಧ್ಯಕ್ಷರಾಗಿದ್ದಾರೆ.

Published by:Precilla Olivia Dias
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು