Success Story: ಇವ್ರು ಭಾರತದ ಮೂರನೇ ಮಹಿಳಾ ಬಿಲಿಯನೇರ್, ಅಷ್ಟು ಸುಲಭವಾಗಿರಲಿಲ್ಲ ಯಶಸ್ಸಿನ ಹಾದಿ!

ರಾಧಾ ವೆಂಬು

ರಾಧಾ ವೆಂಬು

ವೆಬ್ ಆಧಾರಿತ ವ್ಯವಹಾರ ಸಾಧನಗಳನ್ನು ತಯಾರಿಸುವ ಟೆಕ್ ಕಂಪನಿಯಲ್ಲಿ ಬಹುಪಾಲು ಪಾಲನ್ನು ಹೊಂದಿರುವ ರಾಧಾ ವೆಂಬು ಭಾರತದ ಮೂರನೇ ಶ್ರೀಮಂತ ಸ್ವ-ನಿರ್ಮಿತ ಮಹಿಳಾ ಬಿಲಿಯನೇರ್ ಆಗಿದ್ದಾರೆ.

  • Trending Desk
  • 3-MIN READ
  • Last Updated :
  • Share this:

ಕೆಲವರು ಅವರ ಜೀವನದಲ್ಲಿ ಕಠಿಣ ಪರಿಶ್ರಮದಿಂದ ಮತ್ತು ಗುರಿಯ (Aim) ಕಡೆಗೆ ಇರುವ ತಮ್ಮ ದೃಢನಿಶ್ಚಯದಿಂದ ಭಾರಿ ಮಟ್ಟದ ಯಶಸ್ಸನ್ನು (Success) ಕಂಡಿರುತ್ತಾರೆ. ಅವರು ಹೆಸರಿನ ಜೊತೆಗೆ ತಮ್ಮ ಪರಿಶ್ರಮದಿಂದ (Persevere) ದೊಡ್ಡ ಸಂಪತ್ತನ್ನೇ ಗಳಿಸಿರುತ್ತಾರೆ ಅನ್ನೋದಕ್ಕೆ ನಮ್ಮ ಎದುರಿಗೆ ಅನೇಕ ಉದಾಹರಣೆಗಳಿವೆ. ಇಲ್ಲೊಬ್ಬ ಮಹಿಳೆ (Women) ಸಹ 129 ಸಾವಿರ ಕೋಟಿ ಮೌಲ್ಯದ ಸಂಪತ್ತನ್ನು ಹೊಂದಿದ್ದಾರಂತೆ. 50 ವರ್ಷ ವಯಸ್ಸಿನ ರಾಧಾ ವೆಂಬು (Radha Vembu) ಅವರು ಜೊಹೋ ಮೇಲ್ ನ ಉತ್ಪನ್ನ ವ್ಯವಸ್ಥಾಪಕರಾಗಿ ಆಗಿ ಕೆಲಸ ಮಾಡುತ್ತಿದ್ದು, ಕಳೆದ ವರ್ಷ ಏಪ್ರಿಲ್ ನಲ್ಲಿ ಹುರುನ್ ರಿಸರ್ಚ್ ಇನ್ಸ್ಟಿಟ್ಯೂಟ್ ನ ಪ್ರತಿಷ್ಠಿತ ಪಟ್ಟಿಯಲ್ಲಿ ಸೇರ್ಪಡೆಗೊಂಡ ಮೂರನೇ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.


ಅವರು ನೈಕಾದ ಫಾಲ್ಗುಣಿ ನಾಯರ್ ಮತ್ತು ಕಿರಣ್ ಮಜುಂದಾರ್ ಷಾ ಅವರೊಂದಿಗೆ ಈ ಪಟ್ಟಿಯಲ್ಲಿ ಸೇರಿಕೊಂಡರು ಅಂತ ಹೇಳಬಹುದು.


ಭಾರತದ ಮೂರನೇ ಶ್ರೀಮಂತ ಸ್ವ-ನಿರ್ಮಿತ ಮಹಿಳಾ ಬಿಲಿಯನೇರ್!


ವೆಬ್ ಆಧಾರಿತ ವ್ಯವಹಾರ ಸಾಧನಗಳನ್ನು ತಯಾರಿಸುವ ಟೆಕ್ ಕಂಪನಿಯಲ್ಲಿ ಬಹುಪಾಲು ಪಾಲನ್ನು ಹೊಂದಿರುವ ರಾಧಾ ವೆಂಬು ಭಾರತದ ಮೂರನೇ ಶ್ರೀಮಂತ ಸ್ವ-ನಿರ್ಮಿತ ಮಹಿಳಾ ಬಿಲಿಯನೇರ್ ಆಗಿದ್ದಾರೆ. 1996 ರಲ್ಲಿ, ವೆಂಬು ಒಡಹುಟ್ಟಿದವರು ಎಂದರೆ ರಾಧಾ ಮತ್ತು ಶ್ರೀಧರ್ ಅವರು ಈ ಜೊಹೋವನ್ನು ಸಹ-ಸ್ಥಾಪಿಸಿದರು.


ಚೆನ್ನೈ ಮೂಲದವರು ರಾಧಾ!


ಬಹುತೇಕರಿಗೆ ರಾಧಾ ವೆಂಬು ಅವರು ಎಲ್ಲಿಯವರು ಅಂತ ಗೊತ್ತಿರಲಿಕ್ಕಿಲ್ಲ. ಡಿಸೆಂಬರ್ 24, 1972 ರಂದು ಜನಿಸಿದ ರಾಧಾ ವೆಂಬು ಚೆನ್ನೈ ಮೂಲದವರು. ರಾಧಾ ವೆಂಬು ಅವರ ತಂದೆ ಮದ್ರಾಸ್ ಹೈಕೋರ್ಟ್ ನಲ್ಲಿ ಸ್ಟೆನೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದರು. ಚೆನ್ನೈನ ನ್ಯಾಷನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಅವರು 1997 ರಲ್ಲಿ ಮದ್ರಾಸ್ ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಇಂಡಸ್ಟ್ರಿಯಲ್ ಮ್ಯಾನೇಜ್ಮೆಂಟ್ ನಲ್ಲಿ ಪದವಿ ಪಡೆದರು.


ತನ್ನ ಸಹೋದರನೊಂದಿಗೆ ಕಂಪನಿ ಸ್ಥಾಪನೆ!


1996 ರಲ್ಲಿ, ರಾಧಾ ವೆಂಬು ಇನ್ನೂ ಉನ್ನತ ಶಿಕ್ಷಣವನ್ನು ಪಡೆಯುತ್ತಿರುವಾಗ, ಪ್ರಿನ್ಸ್ಟನ್ ನಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ನಲ್ಲಿ ಪಿಎಚ್‌ಡಿ ಪಡೆದ ತನ್ನ ಪ್ರಸಿದ್ಧ ಸಹೋದರ ಶ್ರೀಧರ್ ಅವರೊಂದಿಗೆ ಕಂಪನಿಯನ್ನು ಸಹ-ಸ್ಥಾಪಿಸಿದರು. ಕಂಪನಿಯನ್ನು ಆರಂಭದಲ್ಲಿ ಅಡ್ವೆನ್ನೆಟ್ ಎಂದು ಹೆಸರಿಸಲಾಯಿತು, ಆದಾಗ್ಯೂ, ನಂತರ ಇದನ್ನು ಜೊಹೋ ಕಾರ್ಪೊರೇಷನ್ ಎಂದು ಮರುನಾಮಕರಣ ಮಾಡಲಾಯಿತು.


ಇದನ್ನೂ ಓದಿ: ಬ್ಯಾಂಕ್​ ಲಾಕರ್​ನಲ್ಲಿ ದುಡ್ಡಿಡೋ ಮುನ್ನ ಹುಷಾರ್, ಎರಡೂವರೆ ಲಕ್ಷ ಹಣ ಗೆದ್ದಲು ಹುಳುಗಳ ಪಾಲು!


ರಾಧಾ ವೆಂಬು ಅವರು ಜೊಹೋ ಮೇಲ್ ನ ಉತ್ಪನ್ನ ವ್ಯವಸ್ಥಾಪಕರಾಗಿ ಸುಮಾರು 250 ಜನರ ತಂಡದ ನೇತೃತ್ವ ವಹಿಸಿದ್ದಾರೆ. ಅವರು ಈಗ ಚೆನ್ನೈನಲ್ಲಿ ನೆಲೆಸಿದ್ದಾರೆ. ಟೆಕ್ಸಾಸ್ ಮತ್ತು ಆಸ್ಟಿನ್ ನಲ್ಲಿ ಸಹ 375 ಎಕರೆಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಜೊಹೋದ ಮುಖ್ಯ ಕಚೇರಿಗಳಲ್ಲಿ ಚೆನ್ನೈ ಸಹ ಒಂದಾಗಿದೆ. ಈ ಕಂಪನಿಯು 6 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿದೆ ಎಂದು ವರದಿಯಾಗಿದೆ.




ರಾಧಾ ವೆಂಬು ಅವರು ಕೃಷಿ ಎನ್‌ಜಿಒ ಜಾನಕಿ ಹೈಟೆಕ್ ಆಗ್ರೋ ಪ್ರೈವೇಟ್ ಲಿಮಿಟೆಡ್ ಮತ್ತು ರಿಯಲ್ ಎಸ್ಟೇಟ್ ಕಂಪನಿಯಾದ ಹೈಲ್ಯಾಂಡ್ ವ್ಯಾಲಿ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕರಾಗಿದ್ದಾರೆ.


ಫೋರ್ಬ್ಸ್ ಪ್ರಕಾರ ಇವರ ನಿವ್ವಳ ಮೌಲ್ಯ 129 ಸಾವಿರ ಕೋಟಿ ಅಂತೆ..


ಏಪ್ರಿಲ್ 2022 ರ ಹೊತ್ತಿಗೆ, ಫೋರ್ಬ್ಸ್ ಪ್ರಕಾರ ರಾಧಾ ವೆಂಬು ಅವರ ನಿವ್ವಳ ಮೌಲ್ಯವು 129 ಸಾವಿರ ಕೋಟಿ ರೂಪಾಯಿ ಅಂತೆ. ಅವರು ತಮ್ಮ ಸಂಪತ್ತಿನ ಬಹುಪಾಲನ್ನು ಜೊಹೋ ಕಂಪನಿಯಲ್ಲಿರುವ ತನ್ನ ಪಾಲಿನಿಂದ ಪಡೆಯುತ್ತಾರೆ. ಫೋರ್ಬ್ಸ್ ಇಂಡಿಯಾ ರಿಚ್ ಲಿಸ್ಟ್ 2021 ರಲ್ಲಿ ಈ ವೆಂಬು ಒಡಹುಟ್ಟಿದವರು 285 ಸಾವಿರ ಕೋಟಿ ರೂಪಾಯಿಗಳ ಒಟ್ಟು ನಿವ್ವಳ ಮೌಲ್ಯದೊಂದಿಗೆ 55ನೇ ಸ್ಥಾನದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

Published by:ವಾಸುದೇವ್ ಎಂ
First published: