ಡಿಬಿಎಸ್ ಗ್ರೂಪ್ನ (DBS Group) ಮುಖ್ಯ ಕಾರ್ಯನಿರ್ವಾಹ ಅಧಿಕಾರಿ ಪಿಯೂಷ್ ಗುಪ್ತಾ (Piyush Gupta) ಅವರ ಸಾಧನೆ ಯುವಕರಿಗೆ ಸ್ಫೂರ್ತಿ. ಪರಿಶ್ರಮ, ಛಲದಿಂದ ಇವರು ಅಪಾರ ಮನ್ನಣೆಗಳಿಸಿದ್ದಾರೆ. 500 ಶತಕೋಟಿ ಡಾಲರ್ಗಿಂತಲೂ ಹೆಚ್ಚು ಹಣಕಾಸು ಮೌಲ್ಯದ ಡಿಬಿಎಸ್ ಬ್ಯಾಂಕಿನಲ್ಲೂ ಸಿಇಒ(DBS Bank Ceo) ಸ್ಥಾನ ಅಲಂಕರಿಸಿ ಅದು ಉತ್ತುಂಗಕ್ಕೇರುವಂತೆ ಮಾಡುವಲ್ಲಿ ಇವರ ಪಾತ್ರ ಹಿರಿದಾಗಿದೆ. 1960ರ ದಶಕದಲ್ಲಿ ಜನಿಸಿದ ಇವರು ಇವತ್ತಿಗೂ ಯಶಸ್ವಿ ಕಾರ್ಪೊರೇಟ್ ಲೀಡರ್ ಆಗಿ ಗೆಲುವಿನ ಮುನ್ನಡೆಯಲ್ಲಿದ್ದಾರೆ. ಆ ಮೂಲಕ ಇಂದಿನ ಯುವಪೀಳಿಗೆಗೆ ಮಾದರಿಯಾಗಿದ್ದಾರೆ.
ಪಿಯೂಷ್ ಅವರು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ರೀತಿಗೆ ಇಂದು ವಿಶ್ವಮಾನ್ಯರಾಗಿದ್ದಾರೆ. ಭಾರತದ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ಹಾಗಾದ್ರೆ ಅವರ ಬದುಕಿನ ಜರ್ನಿ ಹೇಗಿತ್ತು? ಬ್ಯಾಂಕ್ ಬ್ಯಾಲೆನ್ಸ್ ಡಾಲರ್ಸ್ನಿಂದ ತುಂಬಿ ಹೋದ ಕಥೆ ಏನು ಎಲ್ಲವೂ ಇಲ್ಲಿದೆ.
ಕಲಾವಿಭಾದಿಂದ ಬ್ಯುಸಿನೆಸ್ ಹಾದಿ!
ದೆಹಲಿಯಲ್ಲಿ ಶಾಲಾ ವ್ಯಾಸಂಗ ಮುಗಿಸಿದ ಗುಪ್ತಾ ಅವರು ಸೇಂಟ್ ಕೊಲಂಬಾಸ್ ನಲ್ಲಿ ಹೈಸ್ಕೂಲ್ ಶಿಕ್ಷಣ ಸಂಪೂರ್ಣಗೊಳಿಸಿದರು. ಸೇಂಟ್ ಸ್ಟೀಫನ್ ಕಾಲೇಜಿನಲ್ಲಿ ಪದವಿ ಶಿಕ್ಷಣದಲ್ಲಿ ಕರಗತರಾದರು. ಜೊತೆಗೆ ಕಲಾ ವಿಭಾಗದಲ್ಲಿ ಪದವಿ ಶಿಕ್ಷಣವನ್ನು ಮಗಿಸಿದರು. ಇಷ್ಟೇ ಆಗಿದ್ದರೆ ಗುಪ್ತಾ ಅವರ ಸಾಧನೆ ಬೇರೆಯೇ ಇರುತ್ತಿತ್ತೋ ಏನೋ? ಆದರೆ ಅವರ ನಾಯಕತ್ವದ ಮನೋಭಾವ ಅವರನ್ನು ಎಮ್ಬಿಎ ಮಾಡಲು ಪ್ರೋತ್ಸಾಹಿಸಿತು.
ಕಾರ್ಪೊರೇಟ್ ಜಗತ್ತಿನ ಹೆಸರು ಮಾಡಿದ್ದೇ ರೋಚಕ!
ಅಹಮದಬಾದ್ನ ಪ್ರತಿಷ್ಠಿತ ಐಐಎಮ್ ಅಂದರೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮೆಟ್ಟಿಲೇರಿದರು. ಕಾರ್ಪೊರೇಟ್ ಜಗತ್ತಿನ ಜ್ಞಾನ ಮತ್ತು ಕೌಶಲ್ಯದ ಎಲ್ಲಾ ಅರಿವನ್ನು ಪಡೆದುಕೊಂಡರು.
ಅವರ ಶೈಕ್ಷಣಿಕ ಆಸಕ್ತಿ ಅವರಿಗೆ ಚಿನ್ನದ ಪದಕವನ್ನು ತಂದುಕೊಟ್ಟಿತು. 2 ವರ್ಷದ ಪದವಿಯಲ್ಲೂ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗುವ ಮೂಲಕ ತಾವು ಭವಿಷ್ಯದ ಭರವಸೆ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟರು.
ಸಿಟಿ ಬ್ಯಾಂಕ್ ಸಿಟಿಓ!
ಶಿಕ್ಷಣವನ್ನು ಮುಗಿಸಿದ ಬಳಿಕ ಪಿಯೂಷ್ ವ್ಯಾಪಾರಿ ಜಗತ್ತಿಗೆ ಕಾಲಿಟ್ಟರು. ಇಲ್ಲಿನ ಆಳ ಅಗಲವನ್ನು ಅರ್ಥಮಾಡಿಕೊಂಡರು. ಹಣಕಾಸು ಕ್ಷೇತ್ರದಲ್ಲಿ ತಮ್ಮ ಜ್ಞಾನವನ್ನು ಧಾರೆಯೆರೆದರು.
ಇದನ್ನೂ ಓದಿ: ಫಾರಿನ್ ಬಿಟ್ಟು ತಾಯ್ನಾಡಿಗೆ ಬಂದು ಕೋಟ್ಯಾಧಿಪತಿಯಾದ ಉದ್ಯಮಿ! ಅಷ್ಟಕ್ಕೂ ಯಾರವರು?
ಸಿಟಿ ಬ್ಯಾಂಕ್ (ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್) ನಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಲು ಸನ್ನದ್ದರಾದರು. ಈ ಶ್ರಮ ಅವರಿಗೆ ಬೇರೆ ಬೇರೆ ಬ್ಯಾಂಕ್ ಶಾಖೆಗಳಲ್ಲಿ ಕೆಲಸ ಮಾಡಲು ಅವಕಾಶಗಳನ್ನು ತಂದುಕೊಟ್ಟಿತು. ಅಲ್ಲದೇ ಬ್ಯಾಂಕ್ನ ಆಗ್ನೇಯ ಏಷ್ಯಾ ವಿಭಾಗದ ಸಿಟಿಓ ಆಗುವ ಮಟ್ಟಕ್ಕೆ ಬೆಳೆದರು.
ವಿದೇಶಿ ಬ್ರ್ಯಾಂಚ್ಗಳಲ್ಲಿ ಗೆಲುವಿನ ಹಾದಿ
ಸಿಟಿ ಬ್ಯಾಂಕ್ ಮೂಲಕ 1982ರಲ್ಲಿ ವೃತ್ತಿ ಬದುಕಿಗೆ ಕಾಲಿಟ್ಟಾಗ ಅವರ ವಯಸ್ಸು ಕೇವಲ 22 ವರ್ಷ. ಸಿಂಗಾಪುರ್ನಲ್ಲಿ ಏಷ್ಯಾ ಹೆಡ್ ಆಗಿ ಗುರುತಿಸಿಕೊಂಡರು. ಅಲ್ಲದೇ ಮಲೇಷಿಯಾದಲ್ಲೂ ಕಂಪನಿಯನ್ನು ಉತ್ತಂಗಕ್ಕೇರಿಸಿದರು. ಜೊತೆಗೆ ವಿವಿಧ ದೇಶಗಳಲ್ಲಿರುವ ಸಿಟಿ ಬ್ಯಾಂಕ್ನ ಸಿಇಒ ಆಗಿ ಮಾಡಿರುವ ಕೆಲಸಗಳು ಇವತ್ತಿಗೂ ಸ್ಮರಣೀಯ. ಸೌತ್ ಈಸ್ಟ್ ಏಷ್ಯಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ನಲ್ಲಿ ಅಲ್ಲಿನ ಸವಾಲುಗಳನ್ನು ಗೆದ್ದು ತಮ್ಮ ತನವನ್ನು ಸಾಧಿಸಿ ತೋರಿಸಿದ್ದಾರೆ.
ಡಿಬಿಎಸ್ ಬ್ಯಾಂಕ್ ಸಿಇಓ
2009 ರಲ್ಲಿ ಡಿಬಿಎಸ್ ಬ್ಯಾಂಕ್ನ ಸಿಇಒ ಆಗುವ ಮೂಲಕ ಅವರು ಅದ್ಭುತ ಗೆಲುವು ಸಾಧಿಸಿರು. ತಮ್ಮ ನಾಯಕತ್ವದಲ್ಲಿ ಬ್ಯಾಂಕ್ ಅನ್ನು ಉತ್ತಮಮಟ್ಟಕ್ಕೆ ಬೆಳೆಸಿದರು. ದೊಡ್ಡ ಮೊತ್ತದ ಆದಾಯವನ್ನು ಗಳಿಸಿದರು. ಕಾರ್ಪೊರೇಟ್ ಕ್ಷೇತ್ರದ ಪ್ರಭಾವಿ ಮತ್ತು ಅಗ್ರಗಣ್ಯ ವ್ಯಕ್ತಿಯಾಗಿಯೂ ಬೆಳೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ