• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Nikhil Kamath: 17ನೇ ವಯಸ್ಸಿನಲ್ಲಿ ಮನೆ ತೊರೆದ ನಿಖಿಲ್ ಕಾಮತ್, ಈಗ ದೊಡ್ಡ ಕಂಪನಿಯ ಒಡೆಯ! ಇದು ಕನ್ನಡಿಗನ ಸಾಧನೆಯ ಕಥೆ

Nikhil Kamath: 17ನೇ ವಯಸ್ಸಿನಲ್ಲಿ ಮನೆ ತೊರೆದ ನಿಖಿಲ್ ಕಾಮತ್, ಈಗ ದೊಡ್ಡ ಕಂಪನಿಯ ಒಡೆಯ! ಇದು ಕನ್ನಡಿಗನ ಸಾಧನೆಯ ಕಥೆ

ನಿಖಿಲ್​ ಕಾಮತ್​

ನಿಖಿಲ್​ ಕಾಮತ್​

ನಿತಿನ್ ಕಾಮತ್ (Nitin Kamath) ಮತ್ತು ನಿಖಿಲ್ ಕಾಮತ್ (Nikhil Kamath) ಅವರ ಕಥೆ ತುಂಬಾನೇ ವಿಶಿಷ್ಟವಾಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈ ಸಹೋದರರು ಝೆರೋಧಾ ಎಂಬ ಫಿನ್ಟೆಕ್ (Zerodha Finect) ಕಂಪನಿಯನ್ನು ಶುರು ಮಾಡಿದರು. ಅದು ಈ ವರ್ಷ 2,000 ಕೋಟಿ ರೂಪಾಯಿಗಿಂತ ಹೆಚ್ಚು ಲಾಭವನ್ನು ಗಳಿಸಿದೆ.

ಮುಂದೆ ಓದಿ ...
  • Trending Desk
  • 4-MIN READ
  • Last Updated :
  • Bangalore [Bangalore], India
  • Share this:

ಕೆಲವೊಬ್ಬರು ಜೀವನದಲ್ಲಿ ಅದನ್ನು ಸಾಧಿಸಬೇಕು, ಇದನ್ನು ಸಾಧಿಸಬೇಕು ಅಂತ ತುಂಬಾನೇ ಕನಸು ಕಂಡಿರುತ್ತಾರೆ, ಆದರೆ ಅದ್ಯಾವುದು ಅವರ ಕೈಗೆ ಎಟುಕಿರುವುದಿಲ್ಲ. ಇನ್ನೂ ಕೆಲವರಿಗೆ ಜೀವನದಲ್ಲಿ (Life) ಮುಟ್ಟಿದ್ದೆಲ್ಲಾ ಚಿನ್ನ (Gold) ಆಗಿರುತ್ತದೆ, ಎಂದರೆ ಮಾಡಿದ ಕೆಲಸಗಳಲ್ಲಿ ಭಾರಿ ಯಶಸ್ಸು (Success) ಸಿಕ್ಕಿರುತ್ತದೆ. ಇಲ್ಲಿಯೂ ಸಹ ಇಬ್ಬರು ಕನ್ನಡಿಗರು ಕಟ್ಟಿ ಬೆಳೆಸಿದ ಕಂಪನಿ (Kannadiga) ಇಂದು ದೊಡ್ಡದಾಗಿ ಬೆಳೆದು ನಿಂತಿದೆ ನೋಡಿ. ನಿತಿನ್ ಕಾಮತ್ (Nitin Kamath) ಮತ್ತು ನಿಖಿಲ್ ಕಾಮತ್ (Nikhil Kamath) ಅವರ ಕಥೆ ತುಂಬಾನೇ ವಿಶಿಷ್ಟವಾಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈ ಸಹೋದರರು ಝೆರೋಧಾ ಎಂಬ ಫಿನ್ಟೆಕ್ (Zerodha Finect) ಕಂಪನಿಯನ್ನು ಶುರು ಮಾಡಿದರು. ಅದು ಈ ವರ್ಷ 2,000 ಕೋಟಿ ರೂಪಾಯಿಗಿಂತ ಹೆಚ್ಚು ಲಾಭವನ್ನು ಗಳಿಸಿದೆ.


ಕನ್ನಡಿಗರು ಶುರು ಮಾಡಿದ ಕಂಪನಿ !


ಈಗಂತೂ ಜನರು ಹಿಂದೆಗಿಂತಲೂ ಸ್ವಲ್ಪ ಹೆಚ್ಚೆಚ್ಚು ಸ್ಟಾರ್ಟ್ ಅಪ್ ಗಳ ಕಡೆಗೆ ಮುಖ ಮಾಡುತ್ತಿರುವುದು ನಮಗೆಲ್ಲಾ ಗೊತ್ತೇ ಇದೆ. ಅಷ್ಟೇ ವೇಗವಾಗಿ ಕೆಲವು ಸ್ಟಾರ್ಟ್ ಅಪ್ ಗಳು ನಷ್ಟ ಆಯಿತು ಅಂತ ಮುಚ್ಚಿಕೊಂಡು ಹೋದರೆ, ಇನ್ನೂ ಕೆಲವು ಸ್ಟಾರ್ಟ್ ಅಪ್ ಗಳು ದೊಡ್ಡ ಕಂಪನಿಗಳಾಗಿ ಬೆಳೆದು ನಿಂತಿವೆ.


ಈ ವರ್ಷ 2000 ಕೋಟಿಗಿಂತ ಹೆಚ್ಚು ಲಾಭ!


ಈ ಕನ್ನಡ ಸಹೋದರರಿಗೂ ಮೊದಲಿಗೆ ಕಂಪನಿ ಕಟ್ಟಲು ಧನಸಹಾಯ ಪಡೆಯಲು ಪ್ರಯತ್ನಿಸಿದರು, ಆದರೆ ಔಪಚಾರಿಕ ಶಿಕ್ಷಣದ ಅನುಪಸ್ಥಿತಿಯಲ್ಲಿ ನಿರಾಕರಿಸಲಾಯಿತು. ಆದರೆ ಅವರಲ್ಲಿರುವ ಪ್ರತಿಭೆ, ಆಲೋಚನೆಗಳಲ್ಲಿ ಸ್ವಂತಿಕೆ, ವ್ಯಾಪಾರದ ಬಗ್ಗೆ ಅರಿತುಕೊಳ್ಳುವ ಮತ್ತು ಕಲಿತುಕೊಳ್ಳುವ ಹಸಿವು ಮತ್ತು ಅವರ ಕಠಿಣ ಪರಿಶ್ರಮದೊಂದಿಗೆ ಅವರಿಗಿದ್ದ ಆ ಶಿಕ್ಷಣದ ಕೊರತೆಯನ್ನು ಸರಿದೂಗಿಸಿದರು ಅಂತಾನೆ ಹೇಳಬಹುದು.


ಶ್ರೀಮಂತರ ಪಟ್ಟಿ 2022 ರಲ್ಲಿ ಅಗ್ರಸ್ಥಾನ ಪಡೆದಿದ್ದ ನಿಖಿಲ್


ಈ ಸಹೋದರರಲ್ಲಿ ನಿಖಿಲ್ ಕಾಮತ್ ಕಿರಿಯವರು ಮತ್ತು ಇವರು ಕಳೆದ ವರ್ಷ ಹುರುನ್ ಸೆಲ್ಫ್-ಮೇಡ್ ಶ್ರೀಮಂತರ ಪಟ್ಟಿ 2022 ರಲ್ಲಿ ಅಗ್ರಸ್ಥಾನ ಪಡೆದಿದ್ದರು. ಆ ಸಮಯದಲ್ಲಿ, ಅವರ ನಿವ್ವಳ ಮೌಲ್ಯವು 17,500 ಕೋಟಿ ರೂಪಾಯಿ ಆಗಿತ್ತು. ಅವರು ಕೇವಲ 34 ವರ್ಷದವರಿದ್ದಾಗ 2021 ರಲ್ಲಿ ಬಿಲಿಯನೇರ್ ಆದರು. ಅವರ ವೈಯುಕ್ತಿಕ ಜೀವನವು ಸಹ ಅಷ್ಟೇ ಆಸಕ್ತಿದಾಯಕವಾಗಿದೆ ಅಂತ ಹೇಳಬಹುದು. ಅವರಿಗೆ ಬಾಲ್ಯದಲ್ಲಿ ಈ ಶಾಲೆಗೆ ಹೋಗುವುದು ಎಂದರೆ ತುಂಬಾನೇ ದ್ವೇಷವಿತ್ತಂತೆ ಮತ್ತು ಹಾಗಾಗಿ ಶಾಲಾ ಶಿಕ್ಷಣದ ಕಡೆಗೆ ಹೆಚ್ಚು ಒಲವು ತೋರಿಸಲಿಲ್ಲ.


14ನೇ  ವಯಸ್ಸಿಗೆ ಬ್ಯುಸಿನೆಸ್​ ಆರಂಭಿಸಿದ್ದ ನಿಖಿಲ್!


14ನೇ ವಯಸ್ಸಿನಲ್ಲಿ, ಅವರು ಬಳಸಿದ ಫೋನ್ ಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರಂತೆ ನಿಖಿಲ್, ಈ ಕೆಲಸದಿಂದ ಅಸಮಾಧಾನಗೊಂಡ ಅವರ ತಾಯಿ, ಶೌಚಾಲಯದಲ್ಲಿ ಎಲ್ಲಾ ಫೋನ್ ಗಳನ್ನು ಫ್ಲಶ್ ಮಾಡಿದ್ದರಂತೆ. ಔಪಚಾರಿಕ ಶಿಕ್ಷಣದ ಬಗ್ಗೆ ಅವರಿಗಿದ್ದ ನಿರಾಸಕ್ತಿಯ ಬಗ್ಗೆ ಶಾಲಾ ಆಡಳಿತ ಮಂಡಳಿಯವರು ಸಹ ಅಸಮಾಧಾನಗೊಂಡಿತ್ತು. ಅವರು ನಿಖಿಲ್ ಗೆ 10ನೇ ತರಗತಿ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗುವ ಅವಕಾಶವನ್ನು ನಿರಾಕರಿಸಿದ್ದರಿಂದ ಕಾಮತ್ ಶಾಲೆಯನ್ನು ಬಿಟ್ಟರಂತೆ.


ಇದನ್ನೂ ಓದಿ: ತವರು ದೇಶದಲ್ಲಿಯೇ ವಿದ್ಯಾಭ್ಯಾಸ ಮಾಡಿ, ಝೆರೋಧಾ ಸಹ-ಸಂಸ್ಥಾಪಕರ ಸಲಹೆ!


ತಮ್ಮ 17ನೇ ವಯಸ್ಸಿಗೆ ಕಾಲ್ ಸೆಂಟರ್ ನಲ್ಲಿ ಕೆಲಸ!


17ನೇ ವಯಸ್ಸಿನಲ್ಲಿ ಕಾಲ್ ಸೆಂಟರ್ ಒಂದರಲ್ಲಿ ಕೇವಲ 8,000 ರೂಪಾಯಿ ಸಂಬಳಕ್ಕೆ ಕೆಲಸಕ್ಕೆ ಸೇರಿಕೊಂಡರು, ನಂತರ ಅವರು ತಮ್ಮ ಜನನ ಪ್ರಮಾಣಪತ್ರವನ್ನು ಸಹ ನಕಲಿ ಮಾಡಿಸಿದ್ದರಂತೆ. ಇಷ್ಟೇ ಅಲ್ಲದೆ ತನ್ನ ಹೆತ್ತವರ ಮನೆಯಿಂದ ಹೊರಬಂದು ತನ್ನ ಗೆಳತಿಯೊಂದಿಗೆ ವಾಸಿಸಲು ಶುರು ಮಾಡಿದ್ದರಂತೆ ಎಂದು ಹೇಳಲಾಗುತ್ತಿದೆ. "


“ನಾನು ಮನೆಯಿಂದ ಹೊರ ಬಂದೆ ಮತ್ತು ನನಗೆ ಗೆಳತಿ ಜೊತೆ ವಾಸಿಸುತ್ತಿದ್ದೆ. ನಾನು ಸಂಜೆ 4 ರಿಂದ ಬೆಳಿಗ್ಗೆ 1 ರವರೆಗೆ ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದೆ ಮತ್ತು ಬೆಳಿಗ್ಗೆ ನಾನು ಟ್ರೇಡಿಂಗ್ ಮಾಡಲು ಪ್ರಯತ್ನಿಸಿದೆ. ನಾನು ಇದುವರೆಗೂ ಬಹಳಷ್ಟು ಕಲಿತಿದ್ದೇನೆ. ನೀವು ಕುಟುಂಬ ವ್ಯವಸ್ಥೆ ಮತ್ತು ಸಂಬಂಧಿಕರ ತೀರ್ಮಾನದಿಂದ ದೂರ ಸರಿದಾಗ, ನೀವು ನಿಜವಾದ ಜೀವನ ನೋಡಲು ಶುರು ಮಾಡುತ್ತೀರಿ" ಎಂದು ಅವರು ಹ್ಯೂಮನ್ಸ್ ಆಫ್ ಬಾಂಬೆಗೆ ತಿಳಿಸಿದರು.


2010 ರಲ್ಲಿ ಝೆರೋಧಾ ಕಂಪನಿ ಆರಂಭ!


ಇಂದು ಅವರು ಬಿಲಿಯನೇರ್ ಆಗಿದ್ದರೂ ಸಹ ಅವರು ಕಿಂಚಿತ್ತೂ ಸಹ ಬದಲಾಯಿಸಿಲ್ಲ, ಇನ್ನೂ ತಮ್ಮ ದಿನದ 85 ಪ್ರತಿಶತದಷ್ಟು ಸಮಯವನ್ನು ಕೆಲಸದಲ್ಲಿ ಕಳೆಯುತ್ತಾರೆ ಎಂದು ನಿಖಿಲ್ ಹೇಳಿದರು.


ಝೆರೋಧಾ ಒಂದು ಟ್ರೇಡಿಂಗ್ ಅಪ್ಲಿಕೇಶನ್ ಆಗಿದ್ದು, ಅದರ ವಿಶೇಷತೆ ಎಂದರೆ ಅದು ಕಡಿಮೆ ಶುಲ್ಕವನ್ನು ವಿಧಿಸುತ್ತದೆ. ಇದು 2094 ಕೋಟಿ ರೂಪಾಯಿಗಳ ಲಾಭವನ್ನು ಗಳಿಸಿತು. ಕಂಪನಿಯು ಐಐಟಿ ಅಥವಾ ಐಐಎಂನಿಂದ ಯಾವುದೇ ಉದ್ಯೋಗಿಗಳನ್ನು ಹೊಂದಿಲ್ಲ. ಪ್ರತಿಷ್ಠಿತ ಪದವಿಗಳನ್ನು ಹೊಂದಿರುವ ಜನರು ಕಂಪನಿಗೆ ಯಾವುದು ಉತ್ತಮ ಎಂಬುದಕ್ಕಿಂತ ಅವರ ವೃತ್ತಿಜೀವನದ ಬೆಳವಣಿಗೆಗೆ ಆದ್ಯತೆ ನೀಡುತ್ತಾರೆ ಎಂದು ನಿಖಿಲ್ ಹೇಳುತ್ತಾರೆ. ಕಂಪನಿಯು ಕನಿಷ್ಠ 1 ಕೋಟಿ ಬಳಕೆದಾರರನ್ನು ಹೊಂದಿದೆ.


top videos



    ನಿತಿನ್ ಕಾಮತ್ ಮತ್ತು ನಿಖಿಲ್ ಕಾಮತ್ ತಲಾ 100 ಕೋಟಿ ರೂಪಾಯಿಗಳ ಸ್ಯಾಲರಿ ಪ್ಯಾಕೇಜ್ ಅನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು