• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Success Story: ಭಾರತದ 2ನೇ ಅತೀ ಶ್ರೀಮಂತ ಮಹಿಳೆ ಲೀನಾ ತಿವಾರಿ ಬಗ್ಗೆ ಗೊತ್ತಾ? ಇವರು ಸಾಧನೆ ಶಿಖರ ಏರಿದ್ದೇ ರೋಚಕ ಕಥೆ!

Success Story: ಭಾರತದ 2ನೇ ಅತೀ ಶ್ರೀಮಂತ ಮಹಿಳೆ ಲೀನಾ ತಿವಾರಿ ಬಗ್ಗೆ ಗೊತ್ತಾ? ಇವರು ಸಾಧನೆ ಶಿಖರ ಏರಿದ್ದೇ ರೋಚಕ ಕಥೆ!

ಲೀನಾ ತಿವಾರಿ

ಲೀನಾ ತಿವಾರಿ

ಶೈಕ್ಷಣಿಕವಾಗಿ, ಆರ್ಥಿಕವಾಗಿ ಮಹಿಳೆಯರು ಸಬಲರಾಗುತ್ತಿದ್ದು, ಉದ್ಯಮದಲ್ಲಿ ಚುಕ್ಕಾಣಿ ಹಿಡಿಯುತ್ತಿದ್ದಾರೆ. ಇಂತಹ ಮಹಿಳೆಯರ ಸಾಲಿನಲ್ಲಿ ನಿಲ್ಲುವುದು ಲೀನಾ ತಿವಾರಿ (Leena Tiwari) .

  • Share this:

ಪ್ರತಿ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಹಲವು ಸಾಧಕಿಯರು ದೇಶದಲ್ಲಿದ್ದಾರೆ. ಉದ್ಯಮ ಕ್ಷೇತ್ರದಲ್ಲಂತೂ (Industry Sector) ಬಾಸ್‌ ಆಗಿ ತಾವೇ ಕಂಪನಿ ನಡೆಸುವಷ್ಟು ಮಹಿಳೆಯರು (Womens) ಪ್ರಬುದ್ಧರಾಗಿದ್ದಾರೆ. ತೊಟ್ಟಿಲ ತೂಗುವ ಕೈ ಜಗತ್ತನ್ನೇ ಅಳಬಹುದು ಎಂದು ಹಲವು ಸಾಧಕಿಯರು (Achiever) ನಿರೂಪಿಸಿ ತೋರಿಸಿದ್ದಾರೆ. ಶೈಕ್ಷಣಿಕವಾಗಿ, ಆರ್ಥಿಕವಾಗಿ ಮಹಿಳೆಯರು ಸಬಲರಾಗುತ್ತಿದ್ದು, ಉದ್ಯಮದಲ್ಲಿ ಚುಕ್ಕಾಣಿ ಹಿಡಿಯುತ್ತಿದ್ದಾರೆ. ಇಂತಹ ಮಹಿಳೆಯರ ಸಾಲಿನಲ್ಲಿ ನಿಲ್ಲುವುದು ಲೀನಾ ತಿವಾರಿ (Leena Tiwari) . USV ಫಾರ್ಮಾದ ಅಧ್ಯಕ್ಷೆಯಾಗಿರುವ ಇವರು ಶ್ರೀಮಂತ ಮಹಿಳೆ ಎಂಬ ಸ್ಥಾನಮಾನ ಪಡೆದುಕೊಂಡಿದ್ದಾರೆ.


ಯಾರು ಈ ಲೀನಾ ತಿವಾರಿ?


ಲೀನಾ ತಿವಾರಿ ಅವರು ಖಾಸಗಿಯಾಗಿ ನಡೆಸುವ USV ಇಂಡಿಯಾದ ಅಧ್ಯಕ್ಷರಾಗಿ ಇಡೀ ಕಂಪನಿಯ ಜವಬ್ದಾರಿ ಹೊತ್ತು ನಿಭಾಯಿಸುತ್ತಿದ್ದಾರೆ. ಈ ಕಂಪನಿಯನ್ನು 1961 ರಲ್ಲಿ, ಆಕೆಯ ದಿವಂಗತ ತಂದೆ ವಿಠಲ್ ಗಾಂಧಿ ಅವರು ರೆವ್ಲಾನ್ ಜೊತೆಗೆ ಸ್ಥಾಪಿಸಿದರು. ತಂದೆಯ ನಂತರ ಉದ್ಯಮವನ್ನು ಯಶಸ್ಸಿನ ಕಡೆಗೆ ಕೊಂಡೊಯ್ಯುತ್ತಿರುವ 65 ವರ್ಷ ವಯಸ್ಸಿನ ಉದ್ಯಮಿ ಲೀನಾ ತಿವಾರಿ ಫೋರ್ಬ್ಸ್‌ನ ಭಾರತದ ಶ್ರೀಮಂತ 2022ರ ಪಟ್ಟಿಯಲ್ಲಿ 51 ನೇ ಸ್ಥಾನ ಪಡೆದಿದ್ದಾರೆ.


ಭಾರತದಲ್ಲಿ ಅತ್ಯಂತ ಪ್ರಭಾವಿ ಮತ್ತು ಶ್ರೀಮಂತ ಮಹಿಳೆಯರಿದ್ದು, ಫೋರ್ಬ್ಸ್ ಪಟ್ಟಿಯಲ್ಲಿ ಹೆಸರು ಮಾಡಿದ್ದಾರೆ. ರೋಹಿಕಾ ಸೈರಸ್ ಮಿಸ್ತ್ರಿ, ವಿನೋದ್ ರಾಯ್ ಗುಪ್ತಾ, ಲೀನಾ ತಿವಾರಿ, ಸಾವಿತ್ರಿ ಜಿಂದಾಲ್ ಮತ್ತು ರೇಖಾ ಜುಂಜುನ್ವಾಲಾ ಸ್ಥಾನ ಪಡೆದಿದ್ದಾರೆ.


ಲೀನಾ ತಿವಾರಿ ಜನನ ಮತ್ತು ಶಿಕ್ಷಣ


9 ಮಾರ್ಚ್ 1957ರ ಮುಂಬೈನಲ್ಲಿ ಜನಿಸಿದ ಲೀನಾ ತಿವಾರಿ ಮುಂಬೈನ ವಿಶ್ವವಿದ್ಯಾಲಯದಲ್ಲಿ ಬಿಕಾಂ ಪದವಿ ಪಡೆದರು. ನಂತರ ಯುಎಸ್‌ಎ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ತಮ್ಮ ಎಂಬಿಎ ಪದವಿಯನ್ನು ಪೂರ್ಣಗೊಳಿಸಿದರು.


ಲೀನಾ ತಿವಾರಿ ಅವರ ವೃತ್ತಿಜೀವನ


ಶಿಕ್ಷಣದ ನಂತರ ತಂದೆಯ ಕಂಪನಿಯನ್ನು ಸೇರಿಕೊಂಡು ಅದರ ಹೊಣೆಗಾರಿಕೆ ಹೊತ್ತರು. ಯುಎಸ್‌ವಿ ಫಾರ್ಮಾ ಮಧುಮೇಹಕ್ಕೆ ಔಷಧೀಯ ಪದಾರ್ಥಗಳನ್ನು (ಎಪಿಐಗಳು), ಚುಚ್ಚುಮದ್ದುಗಳು ಮತ್ತು ಬಯೋಸಿಮಿಲರ್ ಔಷಧಿಗಳನ್ನು ತಯಾರು ಮಾಡುತ್ತದೆ.


ಕಂಪನಿಯ ಆಂಟಿ-ಡಯಾಬಿಟಿಕ್ ಸೂತ್ರೀಕರಣವು ಭಾರತದಲ್ಲಿ ಅಗ್ರ ಮೂರು ಸ್ಥಾನಗಳಲ್ಲಿದೆ. ಈ ಮೂಲಕ ಉದ್ಯಮವು ಕ್ಷೇತ್ರದಲ್ಲಿ ಯಶಸ್ಸಿನ ಹಾದಿಯಲ್ಲಿದೆ.


ಲೀನಾ ತಿವಾರಿ ಅವರ ಜೀವನಶೈಲಿ


ಹೆಚ್ಚಾಗಿ ಲೀನಾ ತಿವಾರಿ ಅವರು, ಪಾರ್ಟಿ, ಕಾರ್ಯಕ್ರಮಗಳಿಂದ ದೂರ ಉಳಿಯಲು ಇಷ್ಟ ಪಡುತ್ತಾರೆ. ಪ್ರವಾಸ ಮತ್ತು ಪುಸ್ತಕ ಓದಲು ಬಯಸುವ ಇವರು ಸಮಾಜ ಸೇವೆಯಲ್ಲೂ ಸಹ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.


ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರೂ ಸೋದರ-ಸೋದರಿಯರು IAS-IPS ಅಧಿಕಾರಿಗಳು


ಲೀನಾ ತಿವಾರಿ ಕುಟುಂಬ


USV ಯ MD ಆಗಿರುವ ಮತ್ತು ಕಂಪನಿಯನ್ನು ನಡೆಸುತ್ತಿರುವ ಪ್ರಶಾಂತ್ ತಿವಾರಿ ಅವರನ್ನು ವಿವಾಹವಾಗಿದ್ದಾರೆ. ಪ್ರಶಾಂತ್ ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮತ್ತು ಯುಎಸ್‌ನ ಕಾರ್ನೆಲ್ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ಓದಿದ್ದಾರೆ.


ಅವರಿಗೆ ಅನೀಶಾ ಗಾಂಧಿ ತಿವಾರಿ ಎಂಬ ಮಗಳಿದ್ದಾಳೆ. ಈಕೆ ಆಗಸ್ಟ್ 2022 ರಲ್ಲಿ USV ಮಂಡಳಿಗೆ ಸೇರಿದರು ಮತ್ತು MIT (ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಯಿಂದ ಆಣ್ವಿಕ ಜೀವಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದಿದ್ದಾರೆ.


ಲೀನಾ ತಿವಾರಿ ಅವರ ನಿವ್ವಳ ಮೌಲ್ಯ


ಲೀನಾ ತಿವಾರಿಯ ಅಂದಾಜು ನಿವ್ವಳ ಮೌಲ್ಯ $3.5 ಬಿಲಿಯನ್ (30,000 ಕೋಟಿ ರೂ) ಆಗಿದೆ. ಅವರು ಜೋಹೋ ಕಾರ್ಪ್‌ನ ರಾಧಾ ವೆಂಬು, ಬಯೋಕಾನ್‌ನ ಕಿರಣ್ ಮಜುಂದಾರ್-ಶಾ ಮತ್ತು ನೈಕಾ ಅವರ ಫಲ್ಗುಣಿ ನಾಯರ್‌ಗಿಂತ ಮುಂದಿದ್ದಾರೆ.
2016 ರಲ್ಲಿ, ಅವರು $ 1.7 ಶತಕೋಟಿ ನಿವ್ವಳ ಮೌಲ್ಯವನ್ನು ಹೊಂದಿದ್ದರು, ಅದು 2017 ರಲ್ಲಿ $ 2 ಶತಕೋಟಿಗೆ ಏರಿಕೆ ಕಂಡಿತ್ತು. ತಿವಾರಿ ಅವರ ನಿವ್ವಳ ಮೌಲ್ಯವು 2018ರಲ್ಲಿ $ 2.4 ಶತಕೋಟಿಗೆ ಏರಿಕೆ ಆಗಿತ್ತು. ಹೀಗೆ ಯಶಸ್ಸಿನ ಅಲೆಯಲ್ಲಿರುವ ಕಂಪನಿ ಸದ್ಯ $3.5 ಬಿಲಿಯನ್ ಮೌಲ್ಯ ತಲುಪಿದೆ.

top videos
    First published: