TATA: ಮಾಯಾ ಟಾಟಾ ಬಗ್ಗೆ ಕೇಳಿದ್ದೀರಾ? ರತನ್​ ಟಾಟಾ ಬಳಿಕ ಇವ್ರೇ ಉತ್ತರಾಧಿಕಾರಿಯಾಗ್ತಾರಾ?

ಕೈಗಾರಿಕೋದ್ಯಮಿ ರತನ್​ ಟಾಟಾ

ಕೈಗಾರಿಕೋದ್ಯಮಿ ರತನ್​ ಟಾಟಾ

ಟಾಟಾ ಕುಟುಂಬದ ಮುಂದಿನ ತಲೆಮಾರಿನವರು ಸಾಮಾನ್ಯವಾಗಿ ಸಾರ್ವಜನಿಕವಾಗಿ ಇತರರಿಗಿಂತ ಬೇಗನೆ ಕಾಣಿಸಿಕೊಳ್ಳುತ್ತಾರೆ.ಇವರೆಲ್ಲಾ ತುಂಬಾನೇ ಸರಳವಾದ ಪ್ರೊಫೈಲ್ ಹೊಂದಿರುವ ಜೀವನವನ್ನು ನಡೆಸುವ ಗುಂಪಿಗೆ ಸೇರಿದವರು.

  • Share this:

ಕೆಲವೊಮ್ಮೆ ಈ ದೊಡ್ಡ ದೊಡ್ಡ ಜನಪ್ರಿಯ ಉದ್ಯಮಿಗಳು (Famous  Entrepreneurs) ತಾವು ಕಷ್ಟಪಟ್ಟು, ಕಠಿಣವಾದ ಪರಿಶ್ರಮದಿಂದ ಯಶಸ್ಸಿನ (Success) ಉತ್ತುಂಗಕ್ಕೆ ಕೊಂಡೊಯ್ದ ಉದ್ಯಮವನ್ನು ಮುಂದೆ ತಮ್ಮ ಮಕ್ಕಳು ಅದನ್ನು ಹೇಗೆ ಮುಂದುವರೆಸಿಕೊಂಡು ಹೋಗುತ್ತಾರೆ ಅಥವಾ ಇಲ್ಲವೇ ಅನ್ನೋ ಚಿಂತೆ ಅವರನ್ನು ಸದಾ ಕಾಡುತ್ತಲೇ ಇರುತ್ತದೆ ಅಂತ ಹೇಳಬಹುದು. ಈಗ ನಮ್ಮ ದೇಶದ ಶ್ರೀಮಂತ ಉದ್ಯಮಿಗಳಲ್ಲಿ ಟಾಟಾ ಸನ್ಸ್ (TATA Sons) ನ ಮಾಜಿ ಅಧ್ಯಕ್ಷರಾದ ರತನ್ ಟಾಟಾ (Ratan TATA) ಅವರು ಸಹ ಒಬ್ಬರು ಅಂತ ಹೇಳಬಹುದು. ಇವರಿಗೂ ಸಹ ಮುಂದೆ ತಮ್ಮ ಉದ್ದಿಮೆ ಸಾಮ್ರಾಜ್ಯದ ಉತ್ತರಾಧಿಕಾರಿ ಯಾರು ಅನ್ನೋ ಚಿಂತೆ ಕಾಡುವುದು ಸಹಜ ಅಂತಾನೆ ಹೇಳಬಹುದು.


ಮಾಯಾ ಟಾಟಾ ಬಗ್ಗೆ ಕೇಳಿದ್ದೀರಾ?


ಟಾಟಾ ಕುಟುಂಬದ ಮುಂದಿನ ತಲೆಮಾರಿನವರು ಸಾಮಾನ್ಯವಾಗಿ ಸಾರ್ವಜನಿಕವಾಗಿ ಇತರರಿಗಿಂತ ಬೇಗನೆ ಕಾಣಿಸಿಕೊಳ್ಳುತ್ತಾರೆ.ಇವರೆಲ್ಲಾ ತುಂಬಾನೇ ಸರಳವಾದ ಪ್ರೊಫೈಲ್ ಹೊಂದಿರುವ ಜೀವನವನ್ನು ನಡೆಸುವ ಗುಂಪಿಗೆ ಸೇರಿದವರು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಆದಾಗ್ಯೂ, ರತನ್ ಟಾಟಾ ಅವರು ಇತ್ತೀಚೆಗೆ ಟಾಟಾ ಮೆಡಿಕಲ್ ಸೆಂಟರ್ ಟ್ರಸ್ಟ್ ನಲ್ಲಿ ಮೂವರು ಟಾಟಾ ಒಡಹುಟ್ಟಿದವರನ್ನು ಜನರಿಗೆ ಪರಿಚಯಿಸಿದರು ಅಂತ ಹೇಳಬಹುದು.


ಇವರೆಲ್ಲಾ ಮುಂದಿನ ದಿನಗಳಲ್ಲಿ ಟಾಟಾ ಗ್ರೂಪ್ ನ ಉತ್ತರಾಧಿಕಾರಿಗಳಾಗಿ ಕೆಲಸ ಮಾಡಲಿದ್ದಾರೆ ಮತ್ತು ಉದ್ಯಮದ ಜವಾಬ್ದಾರಿಯನ್ನು ತೆಗೆದುಕೊಳ್ಳಲಿದ್ದಾರೆ ಅಂತ ಹೇಳಬಹುದು. ಇವರಲ್ಲಿ 34 ವರ್ಷದ ಮಾಯಾ ಟಾಟಾ ಎಂಬ ಮಹಿಳೆ ರತನ್ ಟಾಟಾ ಅವರ ಕಿರಿಯ ಉತ್ತರಾಧಿಕಾರಿಯಾಗಿದ್ದಾರೆ.


ಯಾರು ಈ ಕಿರಿಯ ಉತ್ತರಾಧಿಕಾರಿ ಮಾಯಾ ಟಾಟಾ?


ಮಾಯಾ ಮತ್ತು ಅವರ ಒಡಹುಟ್ಟಿದವರಾದ ಲೇಹ್ ಮತ್ತು ನೆವಿಲ್ಲೆ ಅವರನ್ನು ರತನ್ ಟಾಟಾ ಅವರು ಮಂಡಳಿಯ ಹೊಸ ಸದಸ್ಯರಾಗಿ ಅನುಮೋದಿಸಿದರು ಮತ್ತು ಬಹು ಶತಕೋಟಿ ಡಾಲರ್ ಸಾಲ್ಟ್-ಟು-ಸಾಫ್ಟ್‌ವೇರ್ ಸಮೂಹವನ್ನು ಮುನ್ನಡೆಸಲು ಪ್ರಸಿದ್ಧ ಉದ್ಯಮಿ ಸ್ವತಃ ಅವರನ್ನು ಸಜ್ಜುಗೊಳಿಸುತ್ತಿದ್ದಾರೆ ಎಂದು ವರದಿಯಾಗಿದೆ.


ಇದನ್ನೂ ಓದಿ: ಕೈಗಾರಿಕೋದ್ಯಮಿ ರತನ್ ಟಾಟಾ ಮೀಟಿಂಗ್​ಗಳಲ್ಲಿ ಹೇಗಿರ್ತಾರೆ ಗೊತ್ತಾ? ಇದನ್ನೊಮ್ಮೆ ಓದಿ


ಮಾಯಾ ಅವರು ನೋಯೆಲ್ ಟಾಟಾ ಅವರ ಮೂವರು ಮಕ್ಕಳಲ್ಲಿ ಕಿರಿಯವರು. ತನ್ನ ಸಹೋದರಿ ಲೇಹ್ ಮತ್ತು ಸಹೋದರ ನೆವಿಲ್ಲೆ ಅವರಂತೆ, ಮಾಯಾ ಟಾಟಾ ಗ್ರೂಪ್ ನೊಂದಿಗೆ ವಿವಿಧ ಸಾಮರ್ಥ್ಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ.


ಯುಕೆನಲ್ಲಿ ವಿದ್ಯಾಭ್ಯಾಸ ಮಾಡಿರುವ  ಮಾಯಾ ಟಾಟಾ!


ಸುದ್ದಿ ಮಾಧ್ಯಮದ ವರದಿಯ ಪ್ರಕಾರ ಮಾಯಾ ಯುಕೆಯ ಬೇಯೀಸ್ ಬಿಸಿನೆಸ್ ಸ್ಕೂಲ್ ಮತ್ತು ವಾರ್ವಿಕ್ ವಿಶ್ವವಿದ್ಯಾಲಯದಿಂದ ಶಿಕ್ಷಣ ಪಡೆದರು. ಅವರ ತಾಯಿ ಅಲೂ ಮಿಸ್ತ್ರಿ, ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರ ಸಹೋದರಿ ಮತ್ತು ದಿವಂಗತ ಬಿಲಿಯನೇರ್ ಪಲ್ಲೊಂಜಿ ಮಿಸ್ತ್ರಿ ಅವರ ಮಗಳು ಆಗಿದ್ದಾರೆ. ಅವರು ತಮ್ಮ ವೃತ್ತಿಜೀವನವನ್ನು ಟಾಟಾ ಅಪರ್ಚುನಿಟೀಸ್ ಫಂಡ್ ನೊಂದಿಗೆ ಪ್ರಾರಂಭಿಸಿದರು, ಇದು ಟಾಟಾ ಗ್ರೂಪ್ ಅಂಗ ಸಂಸ್ಥೆಯಾದ ಟಾಟಾ ಕ್ಯಾಪಿಟಲ್ ನ ಅತ್ಯಂತ ಹಳೆಯ ಖಾಸಗಿ ಈಕ್ವಿಟಿ ಫಂಡ್ ಆಗಿತ್ತು.


ಮಾಯಾ ಅವರ ತಂದೆ ನೋಯೆಲ್ ಟಾಟಾ!


ಎಕನಾಮಿಕ್ ಟೈಮ್ಸ್ ಪ್ರಕಾರ, ಮಾಯಾ ಫಂಡ್ ನಲ್ಲಿ ಪೋರ್ಟ್ಫೋಲಿಯೋ ಮ್ಯಾನೇಜ್ಮೆಂಟ್ ಮತ್ತು ಇನ್ವೆಸ್ಟರ್ಸ್ ರಿಲೇಷನ್ಸ್ ಗಳನ್ನು ನೋಡಿಕೊಳ್ಳುತ್ತಿದ್ದರು. ಎನ್ ಚಂದ್ರಶೇಖರನ್ ನೇತೃತ್ವದ ಸಮೂಹವು 1,000 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿರುವ ಟಾಟಾ ಡಿಜಿಟಲ್ ಕಂಪನಿಗೆ ಸ್ಥಳಾಂತರಗೊಂಡರು.


ಮಾಯಾ ಅವರ ತಂದೆ ನೋಯೆಲ್ ಟಾಟಾ ಅವರು ಮಾಯಾ ಸಮೂಹದೊಂದಿಗೆ ಮುಂದುವರಿಯಲು ಉತ್ಸುಕರಾಗಿದ್ದರು ಎಂದು ವರದಿಯಾಗಿದೆ. ಅವರು ಟಾಟಾ ಡಿಜಿಟಲ್ ನಲ್ಲಿದ್ದಾಗ, ಅಂಗ ಸಂಸ್ಥೆಯಾದ ಟಾಟಾ ನ್ಯೂ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದ್ದಾರೆ.


ಮಾಯಾ ಅವರು "ಹೊಸ ಯುಗದ ವಿಶ್ಲೇಷಣೆ ಮತ್ತು ತಂತ್ರಜ್ಞಾನ" ದಲ್ಲಿ ಸಾಕಷ್ಟು ಆಸಕ್ತಿಯನ್ನು ಹೊಂದಿದ್ದಾರೆ ಎಂದು ಇಟಿ 2022 ರಲ್ಲಿ ಗ್ರೂಪ್ ಗೆ ಹತ್ತಿರವಿರುವ ವ್ಯಕ್ತಿಯೊಬ್ಬರು ಹೇಳಿದ್ದಾರೆ. ಅಂತರ್ಜಾಲದಲ್ಲಿ ಮಾಯಾ ಅವರ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ, ಅವರು ಇಲ್ಲಿಯವರೆಗೆ ಲೈಮ್ಲೈಟ್ ನಿಂದ ದೂರವಿದ್ದಾರೆ. 2011 ರಲ್ಲಿ ರತನ್ ಟಾಟಾ ಉದ್ಘಾಟಿಸಿದ ಕೋಲ್ಕತಾ ಮೂಲದ ಕ್ಯಾನ್ಸರ್ ಆಸ್ಪತ್ರೆಯನ್ನು ನಿರ್ವಹಿಸುವ ಟಾಟಾ ಮೆಡಿಕಲ್ ಸೆಂಟರ್ ಟ್ರಸ್ಟ್ ನ ಮಂಡಳಿಯ ಆರು ಸದಸ್ಯರಲ್ಲಿ ಇವರು ಒಬ್ಬರಾಗಿದ್ದರು.

Published by:ವಾಸುದೇವ್ ಎಂ
First published: