• Home
  • »
  • News
  • »
  • business
  • »
  • TATA-Bisleri: 7000 ಕೋಟಿ ಆಸ್ತಿ ಭಾರ ಹೊರಲು ಒಪ್ಪದ ಮಗಳು! ಇದೇ ಕಾರಣಕ್ಕೆ ಬಿಸ್ಲೆರಿ ಮಾರಿದ್ರಾ ರಮೇಶ್​ ಚೌಹಾಣ್​?

TATA-Bisleri: 7000 ಕೋಟಿ ಆಸ್ತಿ ಭಾರ ಹೊರಲು ಒಪ್ಪದ ಮಗಳು! ಇದೇ ಕಾರಣಕ್ಕೆ ಬಿಸ್ಲೆರಿ ಮಾರಿದ್ರಾ ರಮೇಶ್​ ಚೌಹಾಣ್​?

ಜಯಂತಿ ಚೌಹಾಣ್​

ಜಯಂತಿ ಚೌಹಾಣ್​

ರಮೇಶ್ ಚೌಹಾಣ್, ತಂಪು ಪಾನೀಯ ಬ್ರ್ಯಾಂಡ್​ಗಳಾದ ಥಮ್ಸ್ ಅಪ್, ಗೋಲ್ಡ್ ಸ್ಪಾಟ್ ಹಾಗೂ ಲಿಮ್ಕಾಗಳನ್ನು ಕೋಕಾ ಕೋಲಾಗೆ ಮಾರಾಟ ಮಾಡಿದ ಮೂರು ದಶಕದ ನಂತರ ಅವರು ಬಿಸ್ಲೆರಿಯನ್ನೂ ಸಹ ಮಾರಾಟ ಮಾಡಲು ಮುಂದಾಗಿದ್ದಾರೆ.

  • Trending Desk
  • 2-MIN READ
  • Last Updated :
  • Share this:

ಭಾರತ (India) ದ ಅತ್ಯಂತ ಹಳೆಯ ಮತ್ತು ಜನಪ್ರಿಯ ಕುಡಿಯುವ ನೀರಿನ (Drinking Water) ಬ್ರ್ಯಾಂಡ್‌ಗಳಲ್ಲಿ ಒಂದಾದ ಬಿಸ್ಲೆರಿ (Bisleri)  ಟಾಟಾ (TATA) ತೆಕ್ಕೆಗೆ ಬೀಳುವ ಎಲ್ಲಾ ಸಾಧ್ಯತೆಗಳ ಬಗ್ಗೆ ವರದಿಗಳು ಕೇಳಿ ಬರುತ್ತಿವೆ. ಬಿಸ್ಲೆರಿ ಇಂಟರ್​ನ್ಯಾಷನಲ್​ನಿಂದ ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ ಲಿಮಿಟೆಡ್ (TATA Consumer Product Ltd) ಸುಮಾರು 7,000 ಕೋಟಿ ರೂ.ಗೆ ಖರೀದಿಸಿದೆ ಎಂಬುದರ ಬಗ್ಗೆ ಸಾಕಷ್ಟು ವರದಿಗಳು ಹೊರಬಿದ್ದಿವೆ. ಈಗಾಗ್ಲೇ ಅಧ್ಯಕ್ಷ ರಮೇಶ್ ಚೌಹಾಣ್ ಅವರು 7,000 ಕೋಟಿ ವ್ಯವಹಾರದ ಬಗ್ಗೆ ನಿರ್ಧಾರವನ್ನು ಸಹ ಪ್ರಕಟಿಸಿದ್ದಾರೆ ಎನ್ನಲಾಗಿದೆ.


ರಮೇಶ್ ಚೌಹಾಣ್, ತಂಪು ಪಾನೀಯ ಬ್ರ್ಯಾಂಡ್​ಗಳಾದ ಥಮ್ಸ್ ಅಪ್, ಗೋಲ್ಡ್ ಸ್ಪಾಟ್ ಹಾಗೂ ಲಿಮ್ಕಾಗಳನ್ನು ಕೋಕಾ ಕೋಲಾಗೆ ಮಾರಾಟ ಮಾಡಿದ ಮೂರು ದಶಕದ ನಂತರ ಅವರು ಬಿಸ್ಲೆರಿಯನ್ನೂ ಸಹ ಮಾರಾಟ ಮಾಡಲು ಮುಂದಾಗಿದ್ದಾರೆ. ಟಾಟಾ ಮತ್ತು ಬಿಸ್ಲೆರಿ ಇಂಟರ್​ನ್ಯಾಷನಲ್ ನಡುವೆ ಏರ್ಪಟ್ಟಿರುವ ಒಪ್ಪಂದದ ಪ್ರಕಾರ, ಮುಂದಿನ ಎರಡು ವರ್ಷಗಳವರೆಗೆ ಬಿಸ್ಲೆರಿ ಈಗಿನ ಮಾಲೀಕರ ಬಳಿಯೇ ಇರಲಿದೆ ಎಂದು ಹೇಳಲಾಗುತ್ತಿದೆ.


ತಂದೆಯ ವ್ಯವಹಾರ ನಡೆಸಲು ಮಗಳು ನಿರಾಕರಿಸಿದ್ದೇಕೆ?


ಇಷ್ಟೆಲ್ಲಾ ಜನಪ್ರಿಯ ಮತ್ತು ಬೇಡಿಕೆಯ ಬ್ರ್ಯಾಂಡ್‌ ಅನ್ನು ಟಾಟಾ ಅಥವಾ ಬೇರೆ ಕಂಪನಿಗಳ ತೆಕ್ಕೆಗೆ ಹಾಕಲು ಕಾರಣವೇನು? ಇದನ್ನು ಚೌಹಾಣ್‌ ಕುಟುಂಬವೇ ಏಕೆ ನಿಭಾಯಿಸುತ್ತಿಲ್ಲ ಎಂದು ಪ್ರಶ್ನೆಗಳು ಸಹ ಹುಟ್ಟಿಕೊಂಡಿವೆ. ಇದಕ್ಕೆ ಸ್ವತಃ ಚೌಹಾಣ್‌ ಅವರೇ ಪ್ರತಿಕ್ರಿಯೇ ಕೂಡ ನೀಡಿದ್ದಾರೆ.


ಹೌದು. ಚೌಹಾಣ್‌ ಅವರಿಗೆ 82 ವರ್ಷವಾಗಿದ್ದು, ಸದ್ಯ ಆರೋಗ್ಯ ಸಮಸ್ಯೆಗಳೂ ಕೂಡ ಇದೆ ಎನ್ನಲಾಗಿದೆ. ಈ ಮಧ್ಯೆ ಚೌಹಾಣ್‌ ಅವರ ಮಗಳು ಜಯಂತಿಗೆ ಈ ವ್ಯವಹಾರದಲ್ಲಿ ಅಷ್ಟಾಗಿ ಆಸಕ್ತಿ ಇಲ್ಲದ ಕಾರಣ ಚೌಹಾಣ್‌ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. "ನನ್ನ ಮಗಳು ಜಯಂತಿ ಅದನ್ನು ಸ್ವಾಧೀನಪಡಿಸಿಕೊಳ್ಳಲು ಆಸಕ್ತಿ ಹೊಂದಿಲ್ಲದ ಕಾರಣ ಯಾರಾದರೂ ಅದನ್ನು ನಿಭಾಯಿಸಬೇಕಾಗಿದೆ" ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದರು.


ಇದನ್ನೂ ಓದಿ: ಹೀಗೆ ಕಥೆ ಹೇಳಿ ನಿಮ್ಮ ಬ್ಯುಸಿನೆಸ್​ ಹೆಚ್ಚಿಸಿಕೊಳ್ಳಿ! ಈ ಟಿಪ್ಸ್​ ಎಲ್ಲ ಉದ್ಯಮದವರಿಗೂ ವರ್ಕ್​ ಆಗುತ್ತೆ!


ರಮೇಶ್‌ ಚೌಹಾಣ್ ಅವರ ಏಕೈಕ ಮಗಳು ಜಯಂತಿ ಚೌಹಾಣ್ ಯಾರು?


1) ಉದ್ಯಮಿ ರಮೇಶ್‌ ಚೌಹಾಣ್ ಅವರ ಏಕೈಕ ಮಗಳು ಜಯಂತಿ ಚೌಹಾಣ್. ತನ್ನ ಬಾಲ್ಯದ ಬಹುಪಾಲು ದಿನಗಳನ್ನು ದೆಹಲಿ, ಬಾಂಬೆ ಮತ್ತು ನ್ಯೂಯಾರ್ಕ್ ನಗರದಲ್ಲಿ ಕಳೆದರು.


2.) ಜಯಂತಿ ಲಾಸ್ ಏಂಜಲೀಸ್‌ನ ಫ್ಯಾಶನ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ ಮತ್ತು ಮರ್ಚಂಡೈಸಿಂಗ್ (ಎಫ್‌ಐಡಿಎಂ) ನಲ್ಲಿ ಕೋರ್ಸ್‌ ಅನ್ನು ಪೂರ್ತಿ ಮಾಡಿದ್ದಾರೆ .ಇಸ್ಟಿಟುಟೊ ಮರಂಗೋನಿ ಮಿಲಾನೊದಲ್ಲಿ ಫ್ಯಾಶನ್ ಸ್ಟೈಲಿಂಗ್ ಮತ್ತು ಲಂಡನ್ ಕಾಲೇಜ್ ಆಫ್ ಫ್ಯಾಶನ್‌ನಲ್ಲಿ ಫ್ಯಾಶನ್ ಸ್ಟೈಲಿಂಗ್ ಮತ್ತು ಫೋಟೋಗ್ರಫಿಯನ್ನು ಸಹ ಅಧ್ಯಯನ ಮಾಡಿದ್ದಾರೆ.


3.) ಜಯಂತಿ ಅವರು ತನ್ನ ತಂದೆಯ ಮಾರ್ಗದರ್ಶನದಲ್ಲಿ 24ನೇ ವಯಸ್ಸಿನಲ್ಲಿ ತಮ್ಮದೇ ಬಿಸ್ಲೇರಿ ಕಂಪನಿಗೆ ಸೇರಿಕೊಂಡು ತಂದೆಗೆ ನೆರವಾದರು. ಒಂದೇ ಭಾರಿ ಎಸಿ ರೂಮ್‌ನಲ್ಲಿ ಕೂರದ ಜಯಂತಿ ಕೆಳಗಿನ ಮಟ್ಟದ ಕೆಲಸದಿಂದ ಮೇಲಕ್ಕೆ ಬಂದರು.


4) ಬಿಸ್ಲೇರಿ ಕಂಪನಿಯ ದೆಹಲಿಯ ಕಚೇರಿಯ ಜವಾಬ್ದಾರಿಯನ್ನು ವಹಿಸಿಕೊಂಡು ಜಯಂತಿ ಕೆಲಸ ಪ್ರಾರಂಭಿಸಿದರು. ಕಂಪನಿಯಲ್ಲಿ ಹಲವು ಹೊಸ ನೀತಿ-ನಿಯಮಗಳನ್ನು ಜಾರಿಗೆ ತರುವ ಮೂಲಕ ಮತ್ತು ಸವಾಲುಗಳನ್ನು ಎದುರಿಸುವ ಮೂಲಕ ತಂದೆಯ ವ್ಯವಹಾರದಲ್ಲಿ ತಮ್ಮದೇ ಚಾಪು ಮೂಡಿಸಿದರು.


ಇದನ್ನೂ ಓದಿ: ನಿಮ್​ ಹತ್ರ 100 ರೂಪಾಯಿ ಇದ್ರೆ ಇಲ್ಲಿ ಹೂಡಿಕೆ ಮಾಡಿ, ಬ್ಯುಸಿನೆಸ್​ ಮೆನ್​ಗಳೆಲ್ಲ ಹೀಗೆ ದುಡ್ಡು ಮಾಡೋದು!


5) ಜಯಂತಿ ಚೌಹಾಣ್ ಕಂಪನಿಯಲ್ಲಿ ಎಚ್‌ಆರ್, ಸೇಲ್‌, ಮಾರ್ಕೆಟಿಂಗ್‌ ವಿಭಾಗಗಳ ಜವಾಬ್ದಾರಿ ಹೊತ್ತು ಉತ್ತಮ ಟೀಮ್‌ ಅನ್ನು ನಿರ್ವಹಿಸಿದರು.


6) ಕಂಪನಿಯ ಮೂಲ ಕೆಲಸಗಳನ್ನು ನಿರ್ವಹಿಸಿದ ನಂತರ 2011 ರಲ್ಲಿ ಮುಂಬೈ ಕಚೇರಿಯ ಜವಾಬ್ದಾರಿಯನ್ನು ವಹಿಸಿಕೊಂಡರು.


7) ಬಿಸ್ಲೆರಿ ಮಿನರಲ್ ವಾಟರ್, ಹಿಮಾಲಯದ ವೇದಿಕಾ ನ್ಯಾಚುರಲ್‌ ಮಿನರಲ್‌ ವಾಟರ್‌, ಫಿಜ್ಜಿ ಹಣ್ಣಿನ ಪಾನೀಯಗಳು ಮತ್ತು ಬಿಸ್ಲೇರಿ ಹ್ಯಾಂಡ್ ಪ್ಯೂರಿಫೈಯರ್ ಸೇರಿ ಜಯಂತಿ ಚೌಹಾಣ್ ಅವರು ಹೊಸ ಉತ್ಪನ್ನದ ಅಭಿವೃದ್ಧಿಯಲ್ಲಿ ಕೆಲಸ ಮಾಡುತ್ತಿದ್ದಾರೆ .

Published by:ವಾಸುದೇವ್ ಎಂ
First published: