Rooh Afza ಶರ್ಬತ್ ಕಂಡು ಹಿಡಿದಿದ್ದು ಯಾರು ಗೊತ್ತಾ? ಇದರ ಹಿಂದಿದೆ ಇಂಟ್ರೆಸ್ಟಿಂಗ್​ ಕಹಾನಿ!

ಹಕೀಮ್ ಹಫೀಜ್ ಅಬ್ದುಲ್ ಮಜೀದ್

ಹಕೀಮ್ ಹಫೀಜ್ ಅಬ್ದುಲ್ ಮಜೀದ್

ಹೆಚ್ಚಾಗಿ ಬೇಸಿಗೆಕಾಲದಲ್ಲಿ ದೇಹವನ್ನು ತಂಪಾಗಿರಿಸಿಕೊಳ್ಳಲು ಇದರ ರೂಹ್ ಅಫ್ಜಾ ಶರ್ಬತ್ (Sharbath) ಅಂತ ಮಾಡಿಕೊಂಡು ಕುಡಿಯಲು ಬಳಸುತ್ತಾರೆ ಅನ್ನೋದು ಬಹುತೇಕರಿಗೆ ಗೊತ್ತಿರುವ ವಿಚಾರವೇ ಆಗಿದೆ.

  • Share this:

ರೂಹ್ ಅಫ್ಜಾ (Rooh Afza) ಅಂತ ಹೆಸರು ಕೇಳಿದ ತಕ್ಷಣ ನಮಗೆಲ್ಲಾ ಕಣ್ಮುಂದೆ ಒಂದು ಕೆಂಪು ಉದ್ದನೆಯ ಬಾಟಲ್ ನಲ್ಲಿರುವ ಕೆಂಪು (Red) ಬಣ್ಣದ ಮಿಶ್ರಣದ ಚಿತ್ರಣ ಬರುತ್ತದೆ. ಹೌದು.. ಈ ಮಿಶ್ರಣ ಗುಲಾಬಿ ಪರಿಮಳ (Rose Smell) ಮತ್ತು ಸಕ್ಕರೆ ಪಾಕದ ಸಾರವನ್ನು ಹೊಂದಿರುವಂತಹ ಒಂದು ಮಿಶ್ರಣವಾಗಿರುತ್ತದೆ. ಈ ಸುವಾಸನೆಭರಿತ ಗಿಡಮೂಲಿಕೆಯಿಂದ ಮಾಡಿದ ಈ ಮಿಶ್ರಣ ಭಾರತ (India) , ಪಾಕಿಸ್ತಾನ (Pakistan) ಮತ್ತು ಬಾಂಗ್ಲಾದೇಶದಲ್ಲಿ (Bangladesh) ತಯಾರಿಸಲಾದ ಮತ್ತು ರುಚಿಕರವಾದ ಜನಪ್ರಿಯ ಬೇಸಿಗೆ ಪಾನೀಯವಾಗಿದೆ. ಇದನ್ನು ಜನರು ಹೆಚ್ಚಾಗಿ ಬೇಸಿಗೆಕಾಲದಲ್ಲಿ ದೇಹವನ್ನು ತಂಪಾಗಿರಿಸಿಕೊಳ್ಳಲು ಇದರ ಶರ್ಬತ್ (Sharbath) ಅಂತ ಮಾಡಿಕೊಂಡು ಕುಡಿಯಲು ಬಳಸುತ್ತಾರೆ ಅನ್ನೋದು ಬಹುತೇಕರಿಗೆ ಗೊತ್ತಿರುವ ವಿಚಾರವೇ ಆಗಿದೆ.


ಇಂತಹ ಒಂದು ದೇಹಕ್ಕೆ ತಂಪು ನೀಡುವ ಪಾನೀಯವನ್ನು ಕಂಡು ಹಿಡಿದವರು ಎಂದರೆ ತಯಾರಿಸಿದವರು ಯಾರಿರಬಹುದು ಅಂತ ಅನೇಕರ ಮನಸ್ಸಿನಲ್ಲಿ ಪ್ರಶ್ನೆಯೊಂದು ಮೂಡಿರುತ್ತೆ ಅಲ್ಲವೇ? ಬನ್ನಿ ಹಾಗಾದರೆ ಇಲ್ಲಿದೆ ನೋಡಿ ಇದಕ್ಕೆ ಕಂಪ್ಲೀಟ್ ಉತ್ತರ.


ಈ ರೂಹ್ ಅಫ್ಜಾ ತಯಾರಿಸಿದ್ದು ಹಕೀಮ್ ಹಫೀಜ್ ಅಬ್ದುಲ್ ಮಜೀದ್!


ಹಕೀಮ್ ಹಫೀಜ್ ಅಬ್ದುಲ್ ಮಜೀದ್ ಹಮ್ ದರ್ದ್ ನ ಸ್ಥಾಪಕರಾಗಿದ್ದು, ಬೇಸಿಗೆಯಲ್ಲಿ ಜನರು ತಂಪಾಗಿರಲು ಸಹಾಯ ಮಾಡುವ ಗಿಡಮೂಲಿಕೆ ಪಾನೀಯವಾಗಿ ಈ ರೂಹ್ ಅಫ್ಜಾವನ್ನು ತಯಾರಿಸಿದರಂತೆ.


1883 ರಲ್ಲಿ ಜನಿಸಿದ ಹಕೀಮ್ ಹಫೀಜ್ ಅಬ್ದುಲ್ ಮಜೀದ್ ಉರ್ದು ಮತ್ತು ಪರ್ಷಿಯನ್ ಭಾಷೆಗಳ ಮೂಲವನ್ನು ಅಧ್ಯಯನ ಮಾಡಿದವರು. ಅವರು ಯುನಾನಿ ವೈದ್ಯ ಪದ್ಧತಿಯಲ್ಲಿ ಅತ್ಯುನ್ನತ ಪದವಿಯನ್ನು ಸಹ ಪಡೆದಿದ್ದರಂತೆ.


ಹಕೀಮ್ ಹಫೀಜ್ ಅಬ್ದುಲ್ ಮಜೀದ್ ಅವರ ವೃತ್ತಿಜೀವನ ಹೇಗಿತ್ತು?


1906 ರಲ್ಲಿ, ಹಕೀಮ್ ಹಫೀಜ್ ಅಬ್ದುಲ್ ಮಜೀದ್ ದೆಹಲಿಯ ಹೌಸ್ ಖಾಜಿಯಲ್ಲಿ ಗಿಡಮೂಲಿಕೆ ಅಂಗಡಿಯನ್ನು ಸ್ಥಾಪಿಸಲು ನಿರ್ಧರಿಸಿದರು. 1920 ರಲ್ಲಿ, ಅವರ ಸಣ್ಣ ಅಂಗಡಿ ಒಂದು ಪ್ರೊಡಕ್ಷನ್ ಹೌಸ್ ಆಗಿ ಮಾರ್ಪಟ್ಟಿತು. ಸಾಂಪ್ರದಾಯಿಕ ಯುನಾನಿ ಔಷಧಿಗಳಿಂದ ಗಿಡಮೂಲಿಕೆಗಳು ಮತ್ತು ಸಿರಪ್ ಗಳನ್ನು ಆಯ್ಕೆ ಮಾಡಿದ ಹಕೀಮ್ ಹಫೀಜ್ ಅಬ್ದುಲ್ ಮಜೀದ್ ಅವರು ಬೇಸಿಗೆಯಲ್ಲಿ ಬಿಸಿಲಿನ ತಾಪದ ವಿರುದ್ಧ ಹೋರಾಡಲು ಈ ಪಾನೀಯವನ್ನು ತಯಾರಿಸಿದರಂತೆ.


ಅವರು ಈ ಪಾನೀಯಕ್ಕೆ ರೂಹ್ ಅಫ್ಜಾ ಎಂದು ಹೆಸರಿಟ್ಟರಂತೆ. ಉರ್ದುವಿನಲ್ಲಿ ಇದರ ಅರ್ಥ 'ಆತ್ಮವನ್ನು ಉಲ್ಲಾಸಗೊಳಿಸುವ ವಿಷಯ' ಅಂತ ಅರ್ಥ. 1910 ರಲ್ಲಿ, ಮಿರ್ಜಾ ನೂರ್ ಅಹ್ಮದ್ ಎಂಬ ಕಲಾವಿದ ರೂಹ್ ಅಫ್ಜಾ ಅವರ ಲೇಬಲ್ ಗಳನ್ನು ಹಲವಾರು ಬಣ್ಣಗಳಲ್ಲಿ ಸಿದ್ಧಪಡಿಸಿದರು. ಆ ಸಮಯದಲ್ಲಿ ಯಾವುದೇ ಬಣ್ಣದ ಮುದ್ರಕಗಳು ಇಲ್ಲದ ಕಾರಣ ಬಾಂಬೆಯ (ಮುಂಬೈ) ಪಾರ್ಸಿಗಳ ಬೋಲ್ಟನ್ ಮುದ್ರಣಾಲಯವು ಇದನ್ನು ವಿಶೇಷ ವ್ಯವಸ್ಥೆಯಲ್ಲಿ ಮುದ್ರಿಸಿತು.


ಇದನ್ನೂ ಓದಿ: ಇನ್ಮುಂದೆ ರೈಲಿನಲ್ಲಿ ಪ್ರಯಾಣಿಸುವವರಿಗೆ ಊಟ ಫ್ರೀ!


ಹೇಗಿತ್ತು ನೋಡಿ ಈ ರೂಹ್ ಅಫ್ಜಾ ಪ್ರಯಾಣ!


1947 ರಲ್ಲಿ ಭಾರತದ ವಿಭಜನೆಯು ರೂಹ್ ಅಫ್ಜಾದ ಪ್ರಯಾಣದಲ್ಲಿ ಒಂದು ಮಹತ್ವದ ಪಾತ್ರವನ್ನು ವಹಿಸಿತು. ಹಕೀಮ್ ಅಬ್ದುಲ್ ಮಜೀದ್ ಅವರ ಹಿರಿಯ ಮಗ ಭಾರತದಲ್ಲಿ ಉಳಿಯಲು ನಿರ್ಧರಿಸಿದರು, ಆದರೆ ಅವರ ಕಿರಿಯ ಸಹೋದರ ಮೊಹಮ್ಮದ್ ಸಯೀದ್ ಪಾಕಿಸ್ತಾನದಲ್ಲಿ ವಾಸಿಸಲು ಬಯಸಿದ್ದರು. ಅವರು ಕರಾಚಿಯ ಎರಡು ಕೋಣೆಗಳಿಂದ ಹಮ್ ದರ್ದ್ ಅನ್ನು ಪ್ರಾರಂಭಿಸಿದರು ಮತ್ತು ಶೀಘ್ರದಲ್ಲಿಯೇ ಅವರ ವ್ಯವಹಾರವು ಪ್ರವರ್ಧಮಾನಕ್ಕೆ ಬಂದಿತು.


ಬಾಂಗ್ಲಾದೇಶದಲ್ಲಿ ಮೊದಲ ಬಾರಿಗೆ ಆರಂಭ!


ಹಕೀಮ್ ಮೊಹಮ್ಮದ್ ಸಯೀದ್ ಅವರ ಮಗಳು ಸಾದಿಯಾ ರಶೀದ್ ಅವರ ಪ್ರಕಾರ, 1971 ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯದ ನಂತರ ಅವರ ತಂದೆ ಈ ವ್ಯವಹಾರವನ್ನು ಬಾಂಗ್ಲಾದೇಶದ ಜನರಿಗೆ ಉಡುಗೊರೆಯಾಗಿ ನೀಡಿದರು. ರೂಹ್ ಅಫ್ಜಾ ಭಾರತದಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿತು. ಈ ಬಾಟಲಿಗಳನ್ನು ಜರ್ಮನಿಯಲ್ಲಿ ಆರಂಭದಲ್ಲಿ ಗಾಜಿನ ಬಾಟಲಿಯಲ್ಲಿ ಪರಿಚಯಿಸಲಾಯಿತು, ಆದರೆ ನಂತರ ಅದನ್ನು ಪ್ಲಾಸ್ಟಿಕ್ ಬಾಟಲ್ ಆಗಿ ಬದಲಾಯಿಸಲಾಯಿತು.




ಆದರೆ 2019 ರಲ್ಲಿ, ಈ ರೂಹ್ ಅಫ್ಜಾ ಪಾನೀಯವನ್ನು ತಯಾರಿಸಲು ಅಗತ್ಯವಾದ ಗಿಡಮೂಲಿಕೆಗಳ ಕಡಿಮೆ ಲಭ್ಯತೆಗೆ ಪೂರೈಕೆಯಲ್ಲಿ ಕೊರತೆಯನ್ನು ಸಹ ಎದುರಿಸಿತು. ಇನ್ನು ಈ ರೂಹ್ ಅಫ್ಜಾ ಅಡಿಯಲ್ಲಿ ಇತರ ಬ್ರ್ಯಾಂಡ್ ಗಳಾದ ಪಚ್ನೌಲ್, ಸಫಿ, ರೋಗನ್ ಬಾದಾಮ್ ಶಿರಿನ್ ನಂತಹ ಉತ್ಪನ್ನಗಳನ್ನು ಸಹ ಪ್ರಾರಂಭಿಸಿದರು.

First published: