• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Success Story: ಐಐಟಿ, ಐಐಎಂ ಪದವೀಧರರಿಗೇ ಕೆಲ್ಸ ಕೊಟ್ಟ ತಳ್ಳುಗಾಡಿ ವ್ಯಾಪಾರಿ! ಸ್ಮಾರ್ಟ್‌ಅಪ್ ಶುರು ಮಾಡಿ ಸಕ್ಸಸ್‌ ಆದವನ ಕಥೆ ಇದೆ!

Success Story: ಐಐಟಿ, ಐಐಎಂ ಪದವೀಧರರಿಗೇ ಕೆಲ್ಸ ಕೊಟ್ಟ ತಳ್ಳುಗಾಡಿ ವ್ಯಾಪಾರಿ! ಸ್ಮಾರ್ಟ್‌ಅಪ್ ಶುರು ಮಾಡಿ ಸಕ್ಸಸ್‌ ಆದವನ ಕಥೆ ಇದೆ!

ದಿಲ್ಖುಷ್​ ಟೀಂ

ದಿಲ್ಖುಷ್​ ಟೀಂ

ದಿಲ್ಖುಷ್ ಕುಮಾರ್ ಅವರು ಬಿಹಾರದ ಸಣ್ಣ ಹಳ್ಳಿಯಿಂದ ಬಂದವರು. ತಳ್ಳುಗಾಡಿಯಲ್ಲಿ ತರಕಾರಿ ಮಾರಾಟಗಾರರಾಗಿದ್ದರು. ಆದರೆ ಈಗ, ಅವರು ಕೋಟಿ ಮೌಲ್ಯದ ರೋಡ್ಬೆಜ್ ಕಂಪನಿಯ ಸ್ಥಾಪಕ ಮತ್ತು ಸಿಇಒ ಕೂಡ ಆಗಿದ್ದಾರೆ.

  • Share this:

ಈ ಜಗತ್ತಿನಲ್ಲಿರುವ (World) ಸಾಧಕರಲ್ಲಿ  ನಾವು ಎರಡು ರೀತಿಯ ಜನರನ್ನು ನೋಡುತ್ತೇವೆ. ಮೊದಲನೇ ರೀತಿಯ ಜನರು ತಮ್ಮ ಬಳಿ ಹೂಡಿಕೆ ಮಾಡಲು ಹಣ (Money) ಇರದೆ ಇದ್ದರೂ, ತಮ್ಮ ವಿಭಿನ್ನವಾದ ಆಲೋಚನೆಗಳಿಂದ (Thought) ಮತ್ತು ಕಠಿಣ ಪರಿಶ್ರಮದಿಂದ (Hard Work) ಹಂತ ಹಂತವಾಗಿ ಜೀವನದಲ್ಲಿ ಸಾಧನೆಯ ಶಿಖರವನ್ನೇರಿದವರಾಗಿರುತ್ತಾರೆ. ಇನ್ನೂ ಎರಡನೇ ರೀತಿಯ ಜನರು ಚೆನ್ನಾಗಿ ಹಣ ಹೂಡಿಕೆ (Investment) ಮಾಡಿ, ಒಳ್ಳೆಯ ಯೋಜನೆಯೊಂದಿಗೆ ಸಾಧನೆಯ ಉತ್ತುಂಗಕ್ಕೆ ಏರುತ್ತಾರೆ ಅಂತ ಹೇಳಬಹುದು.


ನಿಜವಾದ ಸಾಧನೆ ಅಂದ್ರೆ ಇದು!


ಇಲ್ಲೊಬ್ಬ ವ್ಯಕ್ತಿ ಮೇಲೆ ನಾವು ಹೇಳಿದ ಮೊದಲನೇ ಗುಂಪಿಗೆ ಸೇರಿದವರಾಗಿದ್ದು, ಕಷ್ಟಪಟ್ಟು ಕೆಲಸ ಮಾಡಿ, ಎಂತಹ ಕೆಟ್ಟ ಪರಿಸ್ಥಿತಿಗಳಲ್ಲಿಯೂ ತಮ್ಮ ಭರವಸೆಯನ್ನು ಕಳೆದುಕೊಳ್ಳದೆ ಇಂದು ಯಶಸ್ಸಿನ ಮೆಟ್ಟಿಲುಗಳನ್ನು ಒಂದೊಂದಾಗಿ ಹತ್ತಲು ಶುರು ಮಾಡಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ದಿಲ್ಖುಷ್ ಕುಮಾರ್ ಅವರು ಬಿಹಾರದ ಸಣ್ಣ ಹಳ್ಳಿಯಿಂದ ಬಂದವರು. ತಳ್ಳುಗಾಡಿಯಲ್ಲಿ ತರಕಾರಿ ಮಾರಾಟಗಾರರಾಗಿದ್ದರು. ಆದರೆ ಈಗ, ಅವರು ಕೋಟಿ ಮೌಲ್ಯದ ರೋಡ್ಬೆಜ್ ಕಂಪನಿಯ ಸ್ಥಾಪಕ ಮತ್ತು ಸಿಇಒ ಕೂಡ ಆಗಿದ್ದಾರೆ.


ತಳ್ಳುಗಾಡಿಯಲ್ಲಿ ತರಕಾರಿ ಮಾರಿದವ ಈಗ ಕಂಪನಿಯ ಮಾಲೀಕ


ದಿಲ್ಖುಷ್ ಬಿಹಾರದ ಸಹರ್ಸಾ ಜಿಲ್ಲೆಯ ಬಂಗಾವ್ ಮೂಲದವರು. ಅವರು ಓದಿದ್ದು ಕೇವಲ 12ನೇ ತರಗತಿಯವರೆಗೆ. ಅವರು ತುಂಬಾ ದಿನಗಳಿಂದ ತಮ್ಮದೇ ಆದ ಸ್ವಂತ ಉದ್ದಿಮೆಯನ್ನು ಪ್ರಾರಂಭಿಸಲು ಮತ್ತು ಬಿಹಾರದಲ್ಲಿ ಟ್ಯಾಕ್ಸಿ ಸೇವೆಗಳನ್ನು ಒದಗಿಸಲು ಬಯಸಿದ್ದರು. ಆದ್ದರಿಂದ, ಕುಮಾರ್ ರೋಡ್ಬೆಜ್ ಎಂಬ ಸ್ಟಾರ್ಟ್‌ಅಪ್ ಅನ್ನು ಶುರು ಮಾಡಿದರು. ಈ ಸ್ಟಾರ್ಟ್ಅಪ್ ಇತರ ಟ್ಯಾಕ್ಸಿ ಸೇವಾ ಪೂರೈಕೆದಾರರಾದ ಉಬರ್ ಅಥವಾ ಓಲಾದಂತೆ ಅಲ್ಲ.


ಇದನ್ನೂ ಓದಿ: ಮುಚ್ಚಲು ಹೊರಟಿದ್ದ ರಾಯಲ್​ ಎನ್​ಫೀಲ್ಡ್​​ಗೆ ಮರುಜೀವ ಕೊಟ್ಟ ಸಿದ್ಧಾರ್ಥ್! 54000 ಕೋಟಿ ಒಡೆಯನ ಸ್ಟ್ರಾಟಜಿ ಏನಿತ್ತು?


ಇದು ಮೂಲಭೂತವಾಗಿ ಗ್ರಾಹಕರನ್ನು ಟ್ಯಾಕ್ಸಿ ಚಾಲಕರೊಂದಿಗೆ ಸಂಪರ್ಕಿಸುವ ಡೇಟಾಬೇಸ್ ಕಂಪನಿಯಾಗಿದೆ ಮತ್ತು 50 ಕಿಲೋ ಮೀಟರ್ ಗಿಂತ ಹೆಚ್ಚಿನ ಹೊರಗಿನ ಪ್ರಯಾಣಕ್ಕೆ ವಾಹನಗಳನ್ನು ಜನರಿಗೆ ಒದಗಿಸುತ್ತದೆ.


ಐಐಟಿ ಮತ್ತು ಐಐಎಂ ಪದವೀಧರರಿಗೆ ಕೆಲಸ!


ಜಿಎನ್‌ಟಿ ಡಿಜಿಟಲ್ ನೊಂದಿಗೆ ಮಾತನಾಡಿದ ದಿಲ್ಖುಷ್ ಅವರು ಐಐಟಿ ಗುವಾಹಟಿಯಂತಹ ಪ್ರತಿಷ್ಠಿತ ಸಂಸ್ಥೆಗಳ ಪದವೀಧರರನ್ನು ರೋಡ್ಬೆಜ್ ನಲ್ಲಿ ಕೆಲಸ ಮಾಡಲು ನೇಮಿಸಿಕೊಳ್ಳಲಾಗಿದೆ ಮತ್ತು ಅವರು ಸಹ ತಮ್ಮ ಈ ಯೋಜನೆಯನ್ನು ಬೆಂಬಲಿಸಿದರು ಎಂದು ಹೇಳಿದರು. ಐಐಎಂನ ಕೆಲವು ವಿದ್ಯಾರ್ಥಿಗಳು ಸಹ ಅರೆಕಾಲಿಕ ಆಧಾರದ ಮೇಲೆ ತಮ್ಮ ಸ್ಟಾರ್ಟ್ಅಪ್ ಗೆ ಸೇರಿದ್ದಾರೆ ಎಂದು ಅವರು ಹೇಳಿದ್ದಾರೆ.


ತನ್ನ ಹಳೆಯ ದಿನಗಳನ್ನು ನೆನಪಿಸಿಕೊಂಡ ದಿಲ್ಖುಷ್?


ತನ್ನ ಹಳೆಯ ದಿನಗಳನ್ನು ನೆನಪಿಸಿಕೊಳ್ಳುವಾಗ, ದಿಲ್ಖುಷ್ ಸ್ವಲ್ಪ ಭಾವುಕರಾದರು ಮತ್ತು ಅವರು ದೆಹಲಿಯಲ್ಲಿ ರಿಕ್ಷಾ ಗಾಡಿಯನ್ನು ಎಂದರೆ ತಳ್ಳುಗಾಡಿಯನ್ನು ಎಳೆಯುತ್ತಿದ್ದರು ಎಂದು ಹೇಳಿದರು. ಅವರು ಪಾಟ್ನಾದ ಬೀದಿಗಳಲ್ಲಿ ತರಕಾರಿಗಳನ್ನು ಮಾರಾಟ ಮಾಡಿದರು. ಅವರು ವಾಚ್‌ಮ್ಯಾನ್ ಆಗಿ ಸಹ ಕೆಲಸಕ್ಕೆ ಸೇರಲು ಸಂದರ್ಶನಕ್ಕೆ ಹೋದಾಗ, ಅವರನ್ನು ಅವಿದ್ಯಾವಂತರೆಂದು ಪರಿಗಣಿಸಲಾಯಿತು.


ದಿಲ್ಖುಷ್ ಅವರನ್ನು ಐಫೋನ್ ನ ಲೋಗೋವನ್ನು ಗುರುತಿಸುವಂತೆ ಕೇಳಲಾಯಿತು, ಏಕೆಂದರೆ ಅವರು ಮೊದಲ ಬಾರಿಗೆ ಐಫೋನ್ ನೋಡುತ್ತಿದ್ದರಿಂದ ಅದು ಸಾಧ್ಯವಾಗಲಿಲ್ಲ. ಆದಾಗ್ಯೂ, ಅವರನ್ನೇ ನಂಬಿಕೊಂಡ ಕುಟುಂಬ ಇದ್ದುದ್ದರಿಂದ ಅವರು ತಮ್ಮ ಪ್ರಯತ್ನ ಮಾತ್ರ ಎಂದಿಗೂ ಬಿಡಲಿಲ್ಲ ಅಂತ ಹೇಳುತ್ತಾರೆ.


 ಒಂದು ಸೆಕೆಂಡ್ ಹ್ಯಾಂಡ್ ನ್ಯಾನೋ ಇದ್ದಿದ್ದು!


ಅವರು ನಿಜವಾಗಿಯೂ ರೋಡ್ಬೆಜ್ ಅನ್ನು ಸೆಕೆಂಡ್ ಹ್ಯಾಂಡ್ ಟಾಟಾ ನ್ಯಾನೋದೊಂದಿಗೆ ಪ್ರಾರಂಭಿಸಿದರು. ಆದರೆ ರೋಡ್ಬೆಜ್ ಪ್ರಾರಂಭಿಸಿದ 6-7 ತಿಂಗಳಲ್ಲಿ, ದಿಲ್ಖುಷ್ ಮತ್ತು ಅವರ ತಂಡವು 4 ಕೋಟಿ ರೂಪಾಯಿಗಳ ಲಾಭವನ್ನು ಗಳಿಸಲು ಸಾಧ್ಯವಾಯಿತು. ಇದೀಗ, ಕಂಪನಿಯು ಪಾಟ್ನಾದಿಂದ ಬಿಹಾರದ ಪ್ರತಿ ಹಳ್ಳಿಗೆ ಮೊದಲ ಹಂತದಲ್ಲಿ ಸೇವೆಯನ್ನು ಒದಗಿಸುತ್ತಿದೆ. ಎರಡನೇ ಹಂತದಲ್ಲಿ, ಇದು ನಗರದಿಂದ ನಗರಕ್ಕೆ ಸಂಪರ್ಕ ಕಲ್ಪಿಸುತ್ತದೆ.


ಬಿಹಾರದ ಪ್ರತಿಯೊಂದು ಹಳ್ಳಿಯನ್ನು ಟ್ಯಾಕ್ಸಿಯೊಂದಿಗೆ ಸಂಪರ್ಕಿಸುವುದು ಅವರ ದೃಷ್ಟಿಕೋನವಾಗಿದೆ. ನಂತರ, ಅವರು ಸೇವೆಗಳನ್ನು ಬಿಹಾರದ ಹೊರಗೆ ವಿಸ್ತರಿಸಲು ಯೋಜಿಸಿದ್ದಾರೆ.

top videos
    First published: