ಕಟ್ಟಡಗಳಿಗೆ ಬಳಿಯುವ ಬಣ್ಣದ ಉದ್ಯಮ (Business) ಈಗ ಜಗತ್ತಿನಲ್ಲಿ ವ್ಯಾಪರ ಉದ್ಯಮದಲ್ಲಿ ಪ್ರಮುಖವಾಗಿದೆ. ಮಾರುಕಟ್ಟೆಯಲ್ಲಿ ಹಲವಾರು ಪೇಂಟ್ ಬ್ರ್ಯಾಂಡ್‌ಗಳು ಇದ್ದು ಅವಗಳಲ್ಲಿ ಕೆಲವು ಗ್ರಾಹಕರ ಮೆಚ್ಚಿನವುಗಳಾಗಿವೆ. ಈ ಪಟ್ಟಿಯಲ್ಲಿ ಏಷ್ಯನ್ ಪೇಂಟ್ಸ್ ಕೂಡ ಸ್ಥಾನ ಪಡೆದಿದೆ. ಹೌದು, ಭಾರತದಲ್ಲಿ (India) ಏಷ್ಯನ್ ಪೇಂಟ್ಸ್ ಬ್ರ್ಯಾಂಡ್ ಕಂಪನಿ ಲಾಭದಾಯಕ ಕಂಪನಿಯಾಗಿ ಸಾಗುತ್ತಿದೆ. ಕಂಪನಿಯ ಸಾರಥಿಗಳು ಇಂದು ಏಷ್ಯನ್ ಪೇಂಟ್ಸ್ ಅನ್ನು ದೇಶದ ನಂಬರ್ ಒನ್ ಪೇಂಟ್ ಕಂಪನಿಯಾಗಿ (Company) ಉತ್ತುಂಗಕ್ಕೆ ಏರಿಸಿದ್ದಾರೆ. ಅದರಲ್ಲೂ ಉದ್ಯಮಿ ಮತ್ತು ಏಷ್ಯನ್ ಪೇಂಟ್ಸ್‌ನ ಕಾರ್ಯನಿರ್ವಾಹಕೇತರ ನಿರ್ದೇಶಕ ಅಶ್ವಿನ್ ದಾನಿ ಅವರ ಪಾತ್ರ ಕಂಪನಿಯು ಈ ಮಟ್ಟಕ್ಕೆ ಬರುವಲ್ಲಿ ದೊಡ್ಡ ಪಾತ್ರ ವಹಿಸಿದೆ.
ಏಷ್ಯನ್ ಪೇಂಟ್ಸ್ ಕಂಪನಿ ಉತ್ತುಂಗಕ್ಕೆ ಏರಲು ಕಾರಣಕರ್ತರಾಗಿರುವ ಉದ್ಯಮಿ ಅಶ್ವಿನ್ ದಾನಿ ಯಾರು? ಸಾಧಕರ ಶಿಕ್ಷಣ, ಕುಟುಂಬ, ನಿವ್ವಳ ಮೌಲ್ಯ ಮತ್ತು ಸಾಧನೆಯ ಹಾದಿ ಬಗ್ಗೆ ಒಮ್ಮೆ ಮೆಲುಕು ಹಾಕೋಣ.
ಅಶ್ವಿನ್ ಸೂರ್ಯಕಾಂತ್ ದಾನಿ
ಅಶ್ವಿನ್ ಸೂರ್ಯಕಾಂತ್ ದಾನಿ ಒಬ್ಬ ಭಾರತೀಯ ಬಿಲಿಯನೇರ್ ಉದ್ಯಮಿ ಮತ್ತು 16 ದೇಶಗಳಲ್ಲಿ ಕಾರ್ಯಾಚರಣೆಯನ್ನು ಹೊಂದಿರುವ ಭಾರತದ ಅತಿದೊಡ್ಡ ಪೇಂಟ್ ಕಂಪನಿಯಾದ ಏಷ್ಯನ್ ಪೇಂಟ್ಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅವರು ಡಿಸೆಂಬರ್ 1998 ರಿಂದ ಮಾರ್ಚ್ 2009 ರವರೆಗೆ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅಶ್ವಿನ್ ಅಗ್ರ 50 ಶ್ರೀಮಂತ ಭಾರತೀಯರಲ್ಲಿ ಒಬ್ಬರಾಗಿದ್ದಾರೆ.
ಇದನ್ನೂ ಓದಿ: ಪ್ರತಿನಿತ್ಯ ಓಡಾಡಲು ಬೈಕ್ ಇಲ್ವಾ? ಹಾಗಾದ್ರೆ EMI ಮೂಲಕ ಇದನ್ನು ಖರೀದಿಸಿ
ತಂದೆ ಜೊತೆ ಸೇರಿ ಸ್ಥಾಪಿಸಿದ ಈ ಕಂಪನಿ ಈಗ ಭಾರತದಲ್ಲಿ ಪ್ರಮುಖ ಪೇಂಟ್ ಕಂಪನಿಯಾಗಿದೆ. ದಾನಿ ಅವರ ಪರಿಶ್ರಮ, ಸಮರ್ಪಣೆ ಮತ್ತು ಪ್ರಯತ್ನದಿಂದಾಗಿ ಕಂಪನಿ ಇಲ್ಲಿಯವರೆಗೆ ಬೆಳೆದು ನಿಂತಿದೆ. ಪೇಂಟ್ ಉದ್ಯಮದಲ್ಲಿ ಉದ್ಯಮಿಯಾಗಿರುವ ಅಶ್ವಿನ್ ದಾನಿ ಅವರು ಏಷ್ಯನ್ ಪೇಂಟ್ಸ್‌ನಲ್ಲಿ ಕಾರ್ಯನಿರ್ವಾಹಕ-ಅಲ್ಲದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಇದನ್ನು ತಂದೆ ಮತ್ತು ಇತರ ಮೂವರು 1942 ರಲ್ಲಿ ಈ ಕಂಪನಿಯನ್ನು ಸ್ಥಾಪಿಸಿದರು.
ಜನನ ಮತ್ತು ಶಿಕ್ಷಣ
ಸೆಪ್ಟೆಂಬರ್ 26, 1944 ರಂದು ಭಾರತದ ಮುಂಬೈನಲ್ಲಿ ಜನಿಸಿದ ಇವರು, 1966 ರಲ್ಲಿ ಮುಂಬೈ ವಿಶ್ವವಿದ್ಯಾನಿಲಯದಿಂದ ರಸಾಯನಶಾಸ್ತ್ರದಲ್ಲಿ ತಮ್ಮ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಪೂರ್ಣಗೊಳಿಸಿದರು. ಅದರ ನಂತರ, ಯುನೈಟೆಡ್ ಸ್ಟೇಟ್ಸ್‌ಗೆ ತೆರಳಿ ಅಕ್ರಾನ್ ವಿಶ್ವವಿದ್ಯಾಲಯದಿಂದ ರಾಸಾಯನಿಕ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.
ಏಷ್ಯನ್ ಪೇಂಟ್ಸ್‌ನಲ್ಲಿ ಸಾಧನೆ
ಶಿಕ್ಷಣ ಮುಗಿಸಿದ ಬಳಿಕ ದಾನಿ ಅವರು ಡೆಟ್ರಾಯಿಟ್‌ನಲ್ಲಿ ರಸಾಯನಶಾಸ್ತ್ರಜ್ಞನಾಗಿ ವೃತ್ತಿ ಜೀವನ ಆರಂಭಿಸಿದರು. ಬಳಿಕ ಕುಟುಂಬದ ಒತ್ತಾಯದ ಮೇರೆಗೆ ಕುಟುಂಬದ ವ್ಯಾಪಾರವನ್ನು ನೋಡಿಕೊಳ್ಳಲು ಆರಂಭಿಸಿದರು. 1968 ರಲ್ಲಿ ಹಿರಿಯ ಕಾರ್ಯನಿರ್ವಾಹಕರಾಗಿ ಸೇರಿದ ಇವರು ಕಂಪನಿಯ ಜವಾಬ್ದಾರಿಯನ್ನು ಹೊತ್ತುಕೊಂಡರು.
ಹೀಗೆ ವರ್ಷಗಳಲ್ಲಿಯೇ ಕಂಪನಿಯಲ್ಲಿ ಪ್ರಮುಖರು ಎಂದೆನಿಕೊಂಡ ದಾನಿ 1997 ರಲ್ಲಿ ಏಷ್ಯನ್ ಪೇಂಟ್ಸ್‌ನ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದರು. ಇವರ ನಾಯಕತ್ವದಲ್ಲಿ ಏಷ್ಯನ್ ಪೇಂಟ್ಸ್ ತನ್ನ ಕಾರ್ಯಾಚರಣೆಯನ್ನು ಜಾಗತಿಕವಾಗಿ ವಿಸ್ತರಿಸಿತು ಮತ್ತು ವಿಶ್ವದ ಪ್ರಮುಖ ಪೇಂಟ್ ಕಂಪನಿಗಳಲ್ಲಿ ಒಂದಾಯಿತು. ದೇಶ, ವಿದೇಶಗಳಲ್ಲಿ ಕಂಪನಿಯನ್ನು ವಿಸ್ತರಿಸಿದ ಹೆಗ್ಗಳಿಗೆ ಅಶ್ವಿನ್ ದಾನಿಗೆ ಸಲ್ಲುತ್ತದೆ.
ಇದನ್ನೂ ಓದಿ: ಪಿಎಫ್ ಖಾತೆ ಹೊಂದಿರುವವರಿಗೆ ಗುಡ್ ನ್ಯೂಸ್, ಈ ದಿನ ನಿಮ್ಮ ಅಕೌಂಟ್ ಸೇರುತ್ತೆ 91 ಲಕ್ಷ!
ಇಂದು, ಏಷ್ಯನ್ ಪೇಂಟ್ಸ್ ಭಾರತದಲ್ಲಿ ಅತಿದೊಡ್ಡ ಪೇಂಟ್ ಕಂಪನಿಯಾಗಿದೆ, ಏಷ್ಯಾದಲ್ಲಿ ಮೂರನೇ-ಅತಿದೊಡ್ಡ ಮತ್ತು ಜಾಗತಿಕವಾಗಿ ಒಂಬತ್ತನೇ ಅತಿದೊಡ್ಡ ಕಂಪನಿಯಾಗಿದೆ.
ಐದು ದಶಕಗಳಿಗೂ ಹೆಚ್ಚು ಮಾರುಕಟ್ಟೆ ನಾಯಕತ್ವವನ್ನು ಹೊಂದಿದೆ. ಇಷ್ಟೇಲ್ಲಾ ಕಂಪನಿ ಪ್ರಗತಿ ಕಾಣಲು ಮುಖ್ಯವಾಗಿ ಅಶ್ವಿನ್ ದಾನಿ ಅವರ ದಕ್ಷತೆ ಮತ್ತು ನಾಯಕತ್ವ ಕಾರಣ ಎನ್ನುತ್ತದೆ ಕಂಪನಿ ಮತ್ತು ಆಡಳಿತ ಮಂಡಳಿ.
ನಾಯಕತ್ವದ ಜೊತೆಗೆ, ಅವರು ಹೊಸ ತಂತ್ರಜ್ಞಾನಗಳನ್ನು ಸಹ ಅಳವಡಿಸಿಕೊಂಡಿದ್ದಾರೆ, ಭಾರತದಲ್ಲಿ ಗಣಕೀಕೃತ ಬಣ್ಣ ಮಿಶ್ರಣ ಕಾರ್ಯಕ್ರಮವನ್ನು ಪರಿಚಯಿಸಿದ ಹೆಗ್ಗಳಿಕೆ ಕೂಡ ಇವರಿಗೆ ಸಲ್ಲುತ್ತದೆ.
ಅಶ್ವಿನ್ ದಾನಿ ಕುಟುಂಬ
ಅಶ್ವಿನ್ ದಾನಿ ಅವರು ಏಷ್ಯನ್ ಪೇಂಟ್ಸ್‌ನ ನಾಲ್ವರು ಸಂಸ್ಥಾಪಕರಲ್ಲಿ ಒಬ್ಬರಾದ ಸೂರ್ಯಕಾಂತ್ ಅವರ ಮಗ. ಅವರು ಇನಾ ದಾನಿ ಅವರನ್ನು ವಿವಾಹವಾದರು ಮತ್ತು ಮೂರು ಮಕ್ಕಳನ್ನು ಹೊಂದಿದ್ದಾರೆ. ದಾನಿ ಅವರ ಮಗ ಮಾಲವ್ ಕೂಡ ಕಂಪನಿಯ ಮಂಡಳಿಯ ಸದಸ್ಯರಾಗಿದ್ದಾರೆ.
ಅಶ್ವಿನ್ ದಾನಿ: ನಿವ್ವಳ ಮೌಲ್ಯ
ಫೋರ್ಬ್ಸ್ ಪ್ರಕಾರ, 2023 ರ ಹೊತ್ತಿಗೆ ದಾನಿಯ ನಿವ್ವಳ ಮೌಲ್ಯವು $ 7.1 ಬಿಲಿಯನ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ