Licious: ಸಖತ್​ ಫೇಮಸ್​ ಆಗಿರೋ ಲಿಸಿಯಸ್‌ ಅಪ್ಲಿಕೇಷನ್‌ನ ಸಂಸ್ಥಾಪಕರು ಇವರೇ ನೋಡಿ!

ಸಕ್ಸಸ್​ ಸ್ಟೋರಿ

ಸಕ್ಸಸ್​ ಸ್ಟೋರಿ

ಲಿಸಿಯಸ್ ಇಂದ ಸಿಟಿ ಮಂದಿ ಸದ್ಯ ಹೆಚ್ಚಾಗಿ ಬಳಕೆ ಮಾಡುವ ಅಪ್ಲಿಕೇಶನ್.‌ ಬೇಕೆನಿಸಿದಾಗ ತಾಜಾ ಮಾಂಸಗಳನ್ನು ಆರ್ಡರ್‌ ಮಾಡಿ ಬೇಕಾದ್ದ ಅಡಿಗೆ ಮಾಡಿ ಸವಿಯುತ್ತಾರೆ.

  • Share this:
  • published by :

ದಿನಸಿ ವಸ್ತುಗಳಿಂದ ಹಿಡಿದು ಮೀನು(Fish), ಚಿಕನ್ (Chiken)‌, ಮೊಟ್ಟೆ(Egg) ವರೆಗೂ ಎಲ್ಲವನ್ನೂ ಮನೆ ಬಾಗಿಲಿಗೆ ತರಿಸಿಕೊಳ್ಳುವಷ್ಟು ಈ ಆನ್‌ಲೈನ್‌ ಮಾರಾಟ ಜನಪ್ರಿಯವಾಗಿದೆ. ದಿನಸಿ ಸಾಮಾನು, ಬಟ್ಟೆ-ಬರೆ ಎಲ್ಲವೂ ಅಪ್ಲಿಕೇಷನ್‌ ಮೂಲಕ ಆರ್ಡರ್‌ ಮಾಡಿದರೆ ಕೈಗೆ ಸಿಗುತ್ತಿತ್ತು. ಆದರೆ ಕೆಲ ವರ್ಷಗಳ ಹಿಂದೆ ಚಿಕನ್‌, ಮಟನ್‌, ಮೀನುಗಳಂತಹ ಆಹಾರ ಪದಾರ್ಥಗಳನ್ನು (Items) ಅಂಗಡಿಗಳಿಗೆ ಹೋಗಿಯೇ ತರಬೇಕಿತ್ತು. ಆದರೆ ಈಗ ಆ ತಾಪತ್ರಯಾನೇ ಇಲ್ಲ ನೋಡಿ. ಒಂದೇ ಒಂದು ಆರ್ಡರ್‌ ಮಾಡಿದ್ರೆ ಅವು ಕೂಡ ಮನೆ ಬಾಗಿಲಿಗೆ ಬರುತ್ತಿವೆ. ಮೊದಲಿಗೆ ಅಂಗಡಿಯವರಿಗೆ ಕರೆ ಮಾಡಿ ಹೇಳಿದರೆ ಅವರು ಹೋಮ್‌ ಡೆಲಿವರಿ ಕೊಡುತ್ತಿದ್ದರು.


ಆದ್ರೆ ಈಗ ಅದೆಲ್ಲಾ ಅಪ್ಲಿಕೇಶನ್‌ ಮೂಲಕವೇ ನಡೆಯುತ್ತಿದೆ. ಮಾಂಸವನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಹಲವು ಅಪ್ಲಿಕೇಶನ್‌ಗಳು ಪ್ರಸ್ತುತ ಇವೆ. ಅದರಲ್ಲಿ ಒಂದು ಈ ಲಿಸಿಯಸ್.‌ ಸಿಟಿ ಮಂದಿ ಸದ್ಯ ಹೆಚ್ಚಾಗಿ ಬಳಕೆ ಮಾಡುವ ಅಪ್ಲಿಕೇಶನ್.‌ ಬೇಕೆನಿಸಿದಾಗ ತಾಜಾ ಮಾಂಸಗಳನ್ನು ಆರ್ಡರ್‌ ಮಾಡಿ ಬೇಕಾದ್ದ ಅಡಿಗೆ ಮಾಡಿ ಸವಿಯುತ್ತಾರೆ. ಹೀಗೆ ಹಲವರಿಗೆ ಅಪ್ಲಿಕೇಶನ್‌ ಮಾತ್ರ ಗೊತ್ತೇ ವಿನಾಃ ಅದರ ಹಿಂದಿರುವ ಕೈ ಯಾರದ್ದು ಅಂತಾನೇ ಗೊತ್ತಿಲ್ಲ.


ಲಿಸಿಯಸ್‌ ಆಪ್‌ ಹಿಂದೆ ಇದ್ದಾರೆ ಇಬ್ಬರು ಸಾರಥಿಗಳು
ಹೌದು, ಲಿಸಿಯಸ್‌ ಆಪ್‌ ಹಿಂದೆ ಇಬ್ಬರು ರುವಾರಿಗಳಿದ್ದು, ಉತ್ತಮ ಸಂಬಳದ ಕೆಲಸವನ್ನೇ ಬಿಟ್ಟು ಈ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗಿಳಿದು ಸಕ್ಸಸ್‌ ಆಗಿದ್ದಾರೆ.


ಇದನ್ನೂ ಓದಿ: ಮೂರೇ ದಿನದಲ್ಲಿ ಬಂಗಾರದ ಬೆಲೆ ಇಷ್ಟೊಂದು ಕುಸಿತ, ನೀವು ಊಹೆ ಮಾಡ್ಕೊಳ್ಳೋಕೂ ಆಗಲ್ಲ!


ಅಭಯ್ ಹಂಜುರಾ ಮತ್ತು ವಿವೇಕ್ ಗುಪ್ತಾ
ಅಭಯ್ ಹಂಜುರಾ ಮತ್ತು ವಿವೇಕ್ ಗುಪ್ತಾ ಇವರೇ ಲಿಸಿಯಸ್‌ ಸಂಸ್ಥಾಪಕರು. 2015 ರಲ್ಲಿ ಮಾಂಸ, ಸಮುದ್ರಾಹಾರ ಮತ್ತು ಮೊಟ್ಟೆಗಳನ್ನು ತಮ್ಮ ಲಿಸಿಯಸ್‌ ವೇದಿಕೆ ಮೂಲಕ ಡೆಲಿವರಿ ಮಾಡಿ, ಇಂದು ಸಾವಿರಾರು ಕೋಟಿಯ ಒಡೆಯರಾಗಿದ್ದಾರೆ. ಅಭಯ್‌ ಮತ್ತ ವಿವೇಕ್‌ ಇಬ್ಬರೂ ವಿದ್ಯಾವಂತರು ಮತ್ತು ಒಳ್ಳೆಯ ವೇತನ ಪಡೆದುಕೊಳ್ಳುವ ಉದ್ಯೋಗದಲ್ಲಿದ್ದರು. ಆದರೆ ಇಬ್ಬರಿಗಿದ್ದ ಉದ್ಯಮ ಗೀಳು ಅವರ ಪ್ರಸ್ತುತ ಕೆಲಸವನ್ನು ಬಿಟ್ಟು ಉದ್ಯಮ ಶುರು ಮಾಡಲು ಕಾರಣವಾಯಿತು. ಇಂದು ಈ ಎರಡು ಜೋಡೆತ್ತುಗಳ ಹೋರಾಟದ ಸಾಕ್ಷಿಯಾಗಿ ಭಾರತದಾದ್ಯಂತ ಲಿಸಿಯಸ್‌ ಕಾರ್ಯ ನಿರ್ವಹಿಸುತ್ತಿದೆ.


ಅಭಯ್ ಹಂಜುರಾ ಅವರು ಕಾಶ್ಮೀರಿ ಪಂಡಿತರಾಗಿದ್ದು, ಜೈವಿಕ ತಂತ್ರಜ್ಞಾನವನ್ನು ಅಧ್ಯಯನ ಮಾಡಲು 2004 ರಲ್ಲಿ ಜಮ್ಮುವಿನಿಂದ ಬೆಂಗಳೂರಿಗೆ ಬಂದಿದ್ದರು. ಇನ್ನೂ ವಿವೇಕ್ ಗುಪ್ತಾ ಅವರು ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದು, ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದರು.


ಸಕ್ಸಸ್‌ ಹಾದಿಯಲ್ಲಿ ಲಿಸಿಯಸ್
ಇಬ್ಬರೂ ಸಹ ಉದ್ಯಮ ಆರಂಭಿಸುವ ಗುರಿ ಇಟ್ಟುಕೊಂಡಿದ್ದರು. ಆದರೆ ಪ್ರಾರಂಭದಲ್ಲಿ ಇಬ್ಬರಿಗೂ ಕಂಪನಿ ಶುರು ಮಾಡುವುದರ ಬಗ್ಗೆ ಭಯ ಇತ್ತು. ನಂತರ ಏನು ಮಾಡಬಹುದು ಎಂದು ಇಬ್ಬರೂ ಯೋಚಿಸಿ ಲಿಸಿಯಸ್‌ ಅನ್ನು ಆರಂಭಿಸಿಯೇ ಬಿಟ್ಟರು. ಲಿಸಿಯಸ್‌ ಮೊದಲೇ ಉತ್ತಮವಾಗಿ ಕಾರ್ಯ ನಿರ್ವಹಿಸಿತು. ಮೊದಲ ಪ್ರತಿಕ್ರಿಯೆ ಇಬ್ಬರಿಗೂ ಮತ್ತಷ್ಟು ಬಲ ನೀಡಿತು ಮತ್ತು ಅಪ್ಲಿಕೇಷನ್‌ ಅನ್ನು ಇನ್ನೂ ಉತ್ತಮಗೊಳಿಸುವ ಬಗ್ಗೆ ಇಬ್ಬರೂ ಮತ್ತಷ್ಟು ಕೆಲಸ ಮಾಡಿದರು.


ಇದನ್ನೂ ಓದಿ: ವಾಹನ ಸವಾರರು ತಪ್ಪದೇ ಓದಿ! ಇಂದಿನ ಪೆಟ್ರೋಲ್-ಡೀಸೆಲ್ ದರ ಇಲ್ಲಿ ಗಮನಿಸಿ


ಕಂಪನಿಗೆ ವರದಾನವಾದ ಕೋವಿಡ್‌ ಸಮಯ
ಅಭಯ್‌ ಮತ್ತು ವಿವೇಕ್‌ ಮೊದಲಿಗೆ ಐದು ಸದಸ್ಯರ ತಂಡದೊಂದಿಗೆ ಪ್ರಾರಂಭಿಸಿದರು ಮತ್ತು ಇಲ್ಲಿಯವರೆಗೆ ಅವರು ಸುಮಾರು $489 ಮಿಲಿಯನ್ ಸಂಗ್ರಹಿಸಿದ್ದಾರೆ. ಎಲ್ಲಾ ಉದ್ಯಮಗಳಿಗೆ ಕೋವಿಡ್‌ ಸಮಯ ಪರಿಣಾಮ ಬೀರಿದರೆ ಇವರ ಲಿಸಿಯಸ್‌ ಕಂಪನಿಗೆ ಕೋವಿಡ್‌ ಸಮಯವೇ ಪ್ಲಸ್‌ ಪಾಯಿಂಟ್‌ ಆಯಿತು. ಈ ಅವಧಿಯಲ್ಲಿ ಕಂಪನಿ ಜನಪ್ರಿಯಗೊಂಡಿದ್ದಲ್ಲದೇ ಘಾತೀಯವಾಗಿ ಬೆಳೆಯಿತು.


top videos



    ಪ್ರಸ್ತುತ Licious 1000+ ಆದಾಯದ ರನ್ ರೇಟ್ ಅನ್ನು ಹೊಂದಿದೆ, ಇದು ಪ್ರತಿ ತಿಂಗಳು 80 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಆದಾಯವಾಗಿದೆ ಎಂದು ಅಭಯ್ ಹಂಜುರ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಕಂಪನಿಯು 2022 ರ ಹೊತ್ತಿಗೆ ಕಂಪನಿಯು ಸುಮಾರು 3500 ಉದ್ಯೋಗಿಗಳನ್ನು ನೇಮಿಸಿಕೊಂಡಿದೆ. ಕೇವಲ 6 ವರ್ಷಗಳಲ್ಲಿ ಉದ್ಯಮ 1,000 ಕೋಟಿ ವ್ಯವಹಾರವನ್ನು ತಲುಪಿದೆui

    First published: