ದೇಶದಲ್ಲಿ ಮುಂಬೈ (Mumbai) ಎಂದರೆ ಬಿಡುವಿಲ್ಲದ ನಗರ ಎಂದೇ ಖ್ಯಾತಿ ಪಡೆದುಕೊಂಡ ನಗರವಾಗಿದೆ. ಇಲ್ಲಿರುವ ನಿವಾಸಿಗಳು ಕಾಲಿಗೆ ಚಕ್ರ ಕಟ್ಟಿಕೊಂಡು ಜೀವನ (Life) ನಡೆಸುತ್ತಾರೋ ಎಂಬಂತೆ ಸದಾ ಕಾಲ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿಯೇ (Busy) ಇರುತ್ತಾರೆ. ಇಂತಿಪ್ಪ ಮುಂಬೈಗೆ (Mumbai) ಕನಸಿನ ನಗರಿ ಎಂಬ ಹೆಸರೂ ಇದೆ. ನಗರವು ದೊಡ್ಡ ವ್ಯಾಪಾರಿಗಳು, ಸೆಲೆಬ್ರಿಟಿಗಳು, ಸಿಇಒಗಳಿಗೆ ನೆಲೆಯಾದ ತಾಣವಾಗಿದೆ. ಭವ್ಯವಾದ ಜೀವನಶೈಲಿಗೆ ಹೆಸರುವಾಸಿಯಾಗಿರುವ ಮುಂಬೈ ನಗರ ಅತ್ಯಂತ ವೈಭವೋಪೇತವಾದ ನಗರ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ.
ಇಲ್ಲಿರುವ ಒಂದೊಂದು ಪ್ರದೇಶಗಳು ಕೂಡ ಒಂದೊಂದು ಕಥೆಯನ್ನು ಸಾರುವಂತಿದ್ದು, ದಕ್ಷಿಣ ಮುಂಬೈ (SoBo) ದಿ ಕ್ವೀನ್ಸ್ ನೆಕ್ಲೇಸ್, ಚೌಪಾಟಿ ಮತ್ತು ಬ್ರಿಟಿಷ್ ವಾಸ್ತುಶಿಲ್ಪದ ಶ್ರೇಷ್ಠತೆಗೆ ನೆಲೆಯಾಗಿದೆ.
ಉದ್ಯಮಿಗಳ ಐಶಾರಾಮಿ ಮನೆಗಳು
ರಾಧಾಕಿಶನ್ ದಮಾನಿ, ಕುಮಾರ್ ಮಂಗಲಂ ಬಿರ್ಲಾ, ಮುಖೇಶ್ ಅಂಬಾನಿ ಮುಂತಾದ ವ್ಯಾಪಾರ ಉದ್ಯಮಿಗಳು ದಕ್ಷಿಣ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಈ ಉದ್ಯಮಿಗಳು ನಗರದಲ್ಲಿ ಅತ್ಯಂತ ಐಷಾರಾಮಿ ಜೀವನ ನಡೆಸುತ್ತಿದ್ದು, ಮುಂಬೈನ ಅತ್ಯಂತ ಶ್ರೀಮಂತ ಪ್ರದೇಶವಾದ ದಕ್ಷಿಣ ಮುಂಬೈನಲ್ಲಿ ದುಬಾರಿ ಮನೆಗಳನ್ನು ಹೊಂದಿದ್ದಾರೆ. ಐದು ಭಾರತೀಯ ಬಿಲಿಯನೇರ್‌ಗಳ ಪಟ್ಟಿ ಹೀಗಿದೆ ನೋಡಿ
1) ರಾಧಾಕಿಶನ್ ದಮಾನಿ
ಭಾರತೀಯ ಬಿಲಿಯನೇರ್ ಮತ್ತು ಅವೆನ್ಯೂ ಸೂಪರ್‌ಮಾರ್ಟ್‌ನ (ಡಿಮಾರ್ಟ್) ಸಂಸ್ಥಾಪಕ ಮತ್ತು ಸಿಇಒ ಆಗಿರುವ ರಾಧಾಕಿಶನ್ ದಮಾನಿ, ನಿವ್ವಳ ಆಸ್ತಿ ರೂ. 13,568 ಕೋಟಿಗೆ ಯಜಮಾನರು. ದಕ್ಷಿಣ ಮುಂಬೈನಲ್ಲಿ ಅತಿದುಬಾರಿ ಆಸ್ತಿಹೊಂದಿರುವ ಎರಡನೇ ವ್ಯಕ್ತಿ ಎಂದೆನ್ನಿಸಿದ್ದಾರೆ. 5,752 ಚದರ ಮೀಟರ್ ಆಸ್ತಿಯನ್ನು 1001 ಕೋಟಿ ರೂ.ಗೆ ಖರೀದಿಸಿದರು.
2) ಕುಮಾರ್ ಮಂಗಲಮ್ ಬಿರ್ಲಾ
ಕುಮಾರ್ ಮಂಗಲಂ ಬಿರ್ಲಾ ಮುಂಬೈನ ಮಲಬಾರ್ ಹಿಲ್‌ನಲ್ಲಿರುವ ಜಟಿಯಾ ಹೌಸ್‌ನಲ್ಲಿ ವಾಸಿಸುತ್ತಿದ್ದಾರೆ. ಮಿಡ್-ಡೇ ವರದಿಯ ಪ್ರಕಾರ, ಕುಮಾರ್ ಮಂಗಲಂ ಬಿರ್ಲಾ ಅವರ ಮನೆ 2926 ಚದರ ಮೀಟರ್‌ನಲ್ಲಿ ವಿಸ್ತಾರದಲ್ಲಿ ಹರಡಿದೆ. ಮನೆ ಕನಿಷ್ಠ 28,000 ಚದರ ಅಡಿಗಳ ನಿರ್ಮಾಣ ಪ್ರದೇಶವನ್ನು ಹೊಂದಿದೆ. ಇದಕ್ಕೆ 425 ಕೋಟಿ ರೂ ವೆಚ್ಚ ತಗುಲಿದೆ ಎಂದು ವರದಿ ತಿಳಿಸಿದೆ.
3) ಮುಕೇಶ್ ಅಂಬಾನಿ
ಫೋರ್ಬ್ಸ್ ಅಂದಾಜಿಸಿದಂತೆ $1 ಬಿಲಿಯನ್ ವೆಚ್ಚದ ಆಂಟಿಲಿಯಾ ವಿಶ್ವದ ಅತ್ಯಂತ ದುಬಾರಿ ನಿವಾಸವಾಗಿದೆ. ವಿಶ್ವದ ಎಂಟನೇ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಆಂಟಿಲಿಯಾದ ಒಡೆಯರು.
ಇದನ್ನೂ ಓದಿ: 1 ಲಕ್ಷ ಹೊಸ ಉದ್ಯೋಗ ಸೃಷ್ಟಿಸುತ್ತೇವೆ; ಮುಕೇಶ್ ಅಂಬಾನಿ ಘೋಷಣೆ
ಬಿಸಿನೆಸ್ ಇನ್ಸೈಡರ್ ಪ್ರಕಾರ, ಆಂಟಿಲಿಯಾ 27 ಮಹಡಿಗಳನ್ನು ಮತ್ತು 9 ಹೈ-ಸ್ಪೀಡ್ ಎಲಿವೇಟರ್‌ಗಳನ್ನು ಹೊಂದಿದೆ. ಬಹುಮಹಡಿಯಲ್ಲಿರುವ ಗ್ಯಾರೇಜ್ ಸುಮಾರು 168 ಕಾರುಗಳಿಗೆ ಪಾರ್ಕಿಂಗ್ ಅವಕಾಶವನ್ನೊದಗಿಸುತ್ತದೆ. ಮನೆಯಲ್ಲಿ 3 ಹೆಲಿಪ್ಯಾಡ್‌ಗಳು, ಭವ್ಯವಾದ ಬಾಲ್ ರೂಂ, ಥಿಯೇಟರ್, ಸ್ಪಾ, ದೇವಸ್ಥಾನ ಮತ್ತು ಬಹು ತಾರಸಿ ತೋಟಗಳಿವೆ.
4) ರತನ್ ಟಾಟಾ
ಟಾಟಾ ಸನ್ಸ್‌ನ ಗೌರವಾನ್ವಿತ ಅಧ್ಯಕ್ಷರಾದ ರತನ್ ಟಾಟಾ, ಅವರು ದಕ್ಷಿಣ ಮುಂಬೈನ ಕೊಲಾಬಾದಲ್ಲಿ ಅದ್ದೂರಿ, ಆಧುನಿಕ ಬಂಗಲೆಯನ್ನು ಹೊಂದಿದ್ದಾರೆ. ಇದರ ಬೆಲೆ ರೂ 150 ಕೋಟಿ ಎಂದು ಮಿಡ್ ಡೇ ವರದಿ ಮಾಡಿದೆ. ರತನ್ ಟಾಟಾ ತಮ್ಮ ಸರಳ ವ್ಯಕ್ತಿತ್ವಕ್ಕೆ ಹೆಸರುವಾಸಿಯಾಗಿದ್ದಾರೆ.
5) ಸೈರಸ್ ಪೂನಾವಾಲ
ಲಿಂಕನ್ ಹೌಸ್ ಎಂದು ಜನಪ್ರಿಯವಾಗಿ ಕರೆಯಲಾದ ಸೈರಸ್ ಪೂನಾವಾಲಾ ಅವರ ಮನೆಯ ಬೆಲೆ 750 ಕೋಟಿ ರೂಪಾಯಿ ಎಂದು ಮಿಡ್-ಡೇ ವರದಿ ಮಾಡಿದೆ.
ಇದು ಮುಂಬೈನ ಅತ್ಯಂತ ದುಬಾರಿ ಭೂಮಿಗಳಲ್ಲಿ ಒಂದಾಗಿದೆ. 50,000 ಚದರ ಅಡಿ ವಿಸ್ತೀರ್ಣದ ಅದ್ದೂರಿ ಭವನವನ್ನು ಮೂಲತಃ ವಾಂಕನೇರ್ ಮಹಾರಾಜ ಹೆಚ್ ಹೆಚ್ ಸರ್ ಅಮರಸಿಂಹಜಿ ಬನೇಸಿನ್ಹಿ ಅವರಿಗಾಗಿ (ಆದ್ದರಿಂದ ಇದನ್ನು ಮೊದಲು ವಾಂಕನರ್ ಹೌಸ್ ಎಂದು ಕರೆಯಲಾಗುತ್ತಿತ್ತು) 1993 ರಲ್ಲಿ ಬ್ರಿಟಿಷ್ ವಾಸ್ತುಶಿಲ್ಪಿ ಕ್ಲಾಡ್ ಬ್ಯಾಟ್ಲಿ ನಿರ್ಮಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ