• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Business Coaches: ಬಿಲಿಯನೇರ್‌ಗಳಿಗೆ ವ್ಯಾಪಾರದಲ್ಲಿ ಸಹಾಯ ಮಾಡುವ 9 ಭಾರತೀಯ ವ್ಯಾಪಾರ ತರಬೇತುದಾರರು ಇವರೇ ನೋಡಿ

Business Coaches: ಬಿಲಿಯನೇರ್‌ಗಳಿಗೆ ವ್ಯಾಪಾರದಲ್ಲಿ ಸಹಾಯ ಮಾಡುವ 9 ಭಾರತೀಯ ವ್ಯಾಪಾರ ತರಬೇತುದಾರರು ಇವರೇ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಯಾವುದೇ ಕಂಪನಿ ವ್ಯಾಪಾರ ತರಬೇತುದಾರರ ಮಾಗದರ್ಶನದೊಂದಿಗೆ ಕೆಲಸ ಮಾಡುವುದು ಒಳ್ಳೆಯ ಉದ್ದೇಶವನ್ನೇ ಉಂಟುಮಾಡುತ್ತದೆ. 

  • Trending Desk
  • 4-MIN READ
  • Last Updated :
  • Share this:

ವಿಶ್ವದಲ್ಲಿ ಅದೆಷ್ಟೋ ಯಶಸ್ವಿ ಜನರು ಉದ್ಯಮದಲ್ಲಿ ಬಿಲಿಯಗಟ್ಟಲೆ ಲಾಭ ಗಿಟ್ಟಿಸಿಕೊಂಡು ಬಿಲಿಯಾಧಿಪತಿಗಳು ಎಂದೆನಿಸಿದ್ದಾರೆ ಹಾಗೂ ಇವರು ಮುಟ್ಟಿದ್ದೆಲ್ಲಾ ಚಿನ್ನವೇ ಎಂಬಷ್ಟು ಯಶಸ್ವಿ ಪುರುಷರಾಗಿ (Man) ಇನ್ನೊಬ್ಬರಿಗೆ ಮಾದರಿಯಾಗುತ್ತಿದ್ದಾರೆ. ವ್ಯಾಪಾರ ನಡೆಸಲು ಕುಶಲತೆ ಹಾಗೂ ತರಬೇತಿ, ಬುದ್ಧಿವಂತಿಕೆ ಮುಖ್ಯವಾಗಿರುತ್ತದೆ ಅದೇ ರೀತಿ ಒಮ್ಮೊಮ್ಮೆ ಇತರರ ಸಹಾಯ ಕೂಡ ಅಗತ್ಯವಾಗಿರುತ್ತದೆ. ಬಿಲಿಯಗಟ್ಟಲೆ ವ್ಯಾಪಾರಗಳನ್ನು ನಿರ್ವಹಿಸುವ ಬಿಲಿಯಾಧಿಪತಿಗಳು ಕೂಡ ವ್ಯಾಪಾರ (Business) ಯೋಜನೆಗಳೊಂದಿಗೆ ಸಹಾಯ ಮಾಡಲು ವ್ಯಾಪಾರ ತರಬೇತುದಾರರನ್ನು ಹೊಂದಿದ್ದಾರೆ. ಯಾವುದೇ ಕಂಪನಿ ವ್ಯಾಪಾರ ತರಬೇತುದಾರರ ಮಾಗದರ್ಶನದೊಂದಿಗೆ ಕೆಲಸ ಮಾಡುವುದು ಒಳ್ಳೆಯ ಉದ್ದೇಶವನ್ನೇ ಉಂಟುಮಾಡುತ್ತದೆ. ಇಂತಹ ತರಬೇತುದಾರರು ಯಶಸ್ಸಿನ ಪಾಲುದಾರ ಎಂದೆನಿಸಿದ್ದು, ಗುರಿಗಳ ಮೇಲೆ ಕೇಂದ್ರೀಕರಿಸಲು ಜೊತೆಗೆ ಯಶಸ್ಸನ್ನು ಹಾಗೆಯೇ ಮುಂದುವರಿಸಿಕೊಂಡು ಹೋಗುವಲ್ಲಿ ಸಹಕಾರಿಯಾಗಿದ್ದಾರೆ.


ಬ್ಯುಸಿನೆಸ್ ತರಬೇತುದಾರರ ಪಾತ್ರ


ವ್ಯಾಪಾರ ತರಬೇತುದಾರರು ಉದ್ಯಮಿಗಳು, ವ್ಯಾಪಾರ ಮಾಲೀಕರು ಮತ್ತು ವೃತ್ತಿಪರರನ್ನು ಅಭಿವೃದ್ಧಿಪಡಿಸಲು ಹಲವಾರು ತಂತ್ರಗಳನ್ನು ಒದಗಿಸುತ್ತಾರೆ. ಅಂತೆಯೇ ಸಾಮಾನ್ಯವಾಗಿ ನಿಗದಿತ ವೇಳಾಪಟ್ಟಿಯ ಪ್ರಕಾರ ಕಾರ್ಯನಿರ್ವಹಿಸುತ್ತಾರೆ.


ಇಂದಿನ ಲೇಖನದಲ್ಲಿ ಕಂಪನಿಗೆ ಹಾಗೂ ಉದ್ಯಮಿಗಳಿಗೆ ಸಹಾಯ ಮಾಡುವ ಭಾರತದಲ್ಲಿನ 9 ವ್ಯಾಪಾರ ತರಬೇತುದಾರರ ಪರಿಚಯ ಮಾಡಿಕೊಳ್ಳೋಣ


ಸೌರಭ್ ಕೌಶಿಕ್ – ಆಸ್ತಿ ವ್ಯವಹಾರ ಮಾಲೀಕರಿಗೆ ಭಾರತದ ಅತ್ಯುತ್ತಮ ಕೋಚ್


ಸೌರಭ್ ಅವರು ಭಾರತದ ಪ್ರೀಮಿಯರ್ ಬ್ಯುಸಿನೆಸ್ ಕೋಚ್ ಆಗಿದ್ದು, ಉದ್ಯಮದ ಪ್ರಮುಖರು, ಪ್ರಸಿದ್ಧ ಉದ್ಯಮಿಗಳು ಹಾಗೂ ವ್ಯಾಪಾರ ಮಾಲೀಕರಿಗೆ ತಮ್ಮ ವ್ಯವಹಾರಗಳನ್ನು ಹಲವು ಪಟ್ಟು ಬೆಳೆಯಲು ಸಹಾಯ ಮಾಡುವಲ್ಲಿ ಹೆಸರುವಾಸಿಯಾಗಿದ್ದಾರೆ. ಕಳೆದ 16 ವರ್ಷಗಳಲ್ಲಿ ಸೌರಭ್ ಉನ್ನತ ಫಾರ್ಚೂನ್ 500 ನಾಯಕರು, ಪ್ರಮುಖ ವ್ಯಾಪಾರ ಸಂಸ್ಥೆಗಳು, ಯುನಿಕಾರ್ನ್‌ಗಳು, ಉದ್ಯಮಿಗಳಿಗೆ ಸೇವೆ ಸಲ್ಲಿಸಿದ್ದಾರೆ.


ಇದನ್ನೂ ಓದಿ: ವೀಕೆಂಡ್‌ನಲ್ಲಿ ನಿಮ್ಮ ನಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೇಗಿದೆ? ಇಲ್ಲಿದೆ ವಿವರ


ಡಾ. ವಿವೇಕ್ ಬಿಂದ್ರಾ - ಭಾರತದ ಟಾಪ್ ಮೋಟಿವೇಷನಲ್ ಸ್ಪೀಕರ್ ಹಾಗೂ ವ್ಯಾಪಾರ ಕೋಚ್


ವಿವೇಕ್ ಬಿಂದ್ರಾ ಚಿಂತಕರು, ಪ್ರೇರಕ ಭಾಷಣಕಾರ, ನಾಯಕತ್ವ ಸಲಹೆಗಾರ, ಕಾರ್ಪೊರೇಟ್ ತರಬೇತುದಾರ ಮತ್ತು ಸ್ಪೂರ್ತಿದಾಯಕ ವ್ಯಾಪಾರ ತರಬೇತುದಾರರಾಗಿದ್ದು ಅತ್ಯಂತ ವ್ಯಾಪಕವಾದ ವೆಬ್‌ನಾರ್‌ಗಳಿಗಾಗಿ ಏಳು ಗಿನ್ನೆಸ್ ವಿಶ್ವ ದಾಖಲೆಗಳನ್ನು ಸ್ಥಾಪಿಸಿದ್ದಾರೆ.


ಡಾ. ಉಜ್ವಲ್ ಪಟ್ನಿ - ಭಾರತದ ಪ್ರಮುಖ ಪ್ರೇರಕ ಸ್ಪೀಕರ್ ಮತ್ತು SME ಗಳಿಗೆ ಅತ್ಯುತ್ತಮ ವ್ಯಾಪಾರ ಕೋಚ್


ಡಾ. ಉಜ್ವಲ್ ಪಟ್ನಿ ಅಂತರಾಷ್ಟ್ರೀಯ ತರಬೇತುದಾರ, ಪ್ರಖ್ಯಾತ ಪ್ರೇರಕ ಲೇಖಕ, ಮತ್ತು ಉನ್ನತ ವ್ಯಾಪಾರ ತರಬೇತುದಾರರಾಗಿ ಖ್ಯಾತರಾದವರು. ಉಜ್ವಲ್ ಪಟ್ನಿ ಶೋ ಮೂಲಕ ಜೀವನ ಮತ್ತು ವ್ಯವಹಾರದ ಕುರಿತು ಉಚಿತ ಪ್ರೇರಕ ವೀಡಿಯೊಗಳ ಮೂಲಕ ಅವರು ಜಗತ್ತಿನಾದ್ಯಂತ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ಪ್ರೇರೇಪಿಸಿದ್ದಾರೆ.


ಇದನ್ನೂ ಓದಿ: ಇನ್ಮುಂದೆ ಮಾನವ ಮೂತ್ರದಿಂದಲೂ ಕೂಡ ಸ್ಮಾರ್ಟ್​ಫೋನ್ ಚಾರ್ಜ್ ಮಾಡ್ಬೋದು!


ರಾಹುಲ್ ಜೈನ್ - ಭಾರತದಲ್ಲಿ ವ್ಯಾಪಾರ ತರಬೇತಿಯ ಪ್ರವರ್ತಕ ಮತ್ತು SME ಗಳಿಗೆ ಅತ್ಯುತ್ತಮ ತರಬೇತುದಾರ


ರಾಹುಲ್ ಜೈನ್ ಅವರು ವ್ಯವಹಾರಗಳನ್ನು ಮುಂದಿನ ಹಂತಕ್ಕೆ ಹೆಚ್ಚಿಸಲು SME ಜಾಗದಲ್ಲಿ ವ್ಯಾಪಾರ ಮಾಲೀಕರಿಗೆ ತರಬೇತಿ ನೀಡುವುದರಲ್ಲಿ ಪರಿಣತಿ ಹೊಂದಿದ್ದಾರೆ. ಗ್ರೂಪ್ ಕೋಚಿಂಗ್‌ಗೆ ಅವರ ಕೋಚಿಂಗ್ ಶೈಲಿಯು ಹೆಚ್ಚು ಪರಿಣಾಮಕಾರಿಯಾಗಿದೆ


ಸುರೇಶ್ ಮನ್ಶರಮಣಿ - ಪ್ರಮುಖ ಮಾರಾಟ ಮತ್ತು OKR ತರಬೇತುದಾರ MSME/SME ಗಳಿಗೆ ಅತ್ಯುತ್ತಮ ಕೋಚ್


ಸುರೇಶ್ ಮನ್ಶರಮಣಿ ಒಬ್ಬ ಸರಣಿ ಉದ್ಯಮಿ ಮತ್ತು ಪ್ರಸಿದ್ಧ ಅನುಭವಿ ಗ್ಲೋಬಲ್ OKR (ಆಬ್ಜೆಕ್ಟಿವ್ ಕೀ ಫಲಿತಾಂಶಗಳು) ತರಬೇತುದಾರ ಮತ್ತು ಅನೇಕ ಭಾರತೀಯ ಉದ್ಯಮಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಅವರು 42 ವರ್ಷಗಳಿಗಿಂತಲೂ ಅಧಿಕ ವ್ಯಾಪಾರ ಅನುಭವವನ್ನು ಹೊಂದಿದ್ದಾರೆ.


ರಾಜೀವ್ ತಲ್ರೇಜಾ - ಏಷ್ಯಾದ ಪ್ರಮುಖ ನಾಯಕತ್ವ ತರಬೇತುದಾರ ಉದ್ಯಮಿಗಳಿಗೆ ಅತ್ಯುತ್ತಮ ಕೋಚ್


ರಾಜೀವ್ ತಲ್ರೇಜಾ ಅವರು ಭಾರತದ ಪ್ರಮುಖ ವ್ಯಾಪಾರ ಪರಿವರ್ತನೆ ತರಬೇತುದಾರ ಮತ್ತು ಕ್ವಾಂಟಮ್ ಲೀಪ್, ಕಾರ್ಪೊರೇಟ್ ತರಬೇತಿ ಕಂಪನಿಯ ಸಂಸ್ಥಾಪಕರು. 2006 ರಿಂದ 2014 ರವರೆಗೆ ಅವರು 110 ಕಾರ್ಪೊರೇಟ್ ಸಂಸ್ಥೆಗಳ ಗ್ರಾಹಕರನ್ನು ನಿರ್ಮಿಸಿದ್ದಾರೆ.


ವಿಕ್ರಮ್ ಧರ್ - ಪ್ರಮುಖ NLP ಕೋಚ್ CXO ಗಳಿಗೆ ಅತ್ಯುತ್ತಮ ತರಬೇತುದಾರರು


ವಿಕ್ರಮ್ ಇಂಟರ್ನ್ಯಾಷನಲ್ ಕೋಚ್ ಫೆಡರೇಶನ್ (ಐಸಿಎಫ್) ಮೆಂಟರ್ ಕೋಚ್ ಮತ್ತು ಏಷ್ಯಾದಲ್ಲಿ ಪ್ರಶಸ್ತಿ ವಿಜೇತ ಕೋಚ್ ಎಂದೆನಿಸಿದ್ದಾರೆ. ಹಾಗೂ ಭಾರತ ಸೇರಿದಂತೆ ದುಬೈ, ಯುಎಸ್ಎ, ಕೆನಡಾ, ಯುಕೆ, ಕುವೈತ್, ಶ್ರೀಲಂಕಾ, ಮ್ಯಾನ್ಮಾರ್, ಆಸ್ಟ್ರೇಲಿಯಾ, ಫಿಲಿಪೈನ್ಸ್, ಗ್ವಾಟೆಮಾಲಾ, ಥೈಲ್ಯಾಂಡ್ ದೇಶದಿಂದ ಅನೇಕ ಭಾಗವಹಿಸುವವರು ಇವರ ಅಡಿಯಲ್ಲಿ ತರಬೇತಿ ಪಡೆದುಕೊಂಡಿದ್ದಾರೆ.
ವಂದನಾ ಶಾ - ಟಾಪ್ ಎಕ್ಸಿಕ್ಯೂಟಿವ್ ಮತ್ತು ಕಾರ್ಪೊರೇಟ್ ಕೋಚ್ ಎಂಟರ್‌ಪ್ರೈಸಸ್‌ಗೆ ಬೆಸ್ಟ್


ವಂದನಾ ಶಾ ಅವರು ಇಂಟರ್ನ್ಯಾಷನಲ್ ಕೋಚ್ ಫೆಡರೇಶನ್ (ICF) ನೊಂದಿಗೆ ವೃತ್ತಿಪರ ಸರ್ಟಿಫೈಡ್ ಕೋಚ್ (PCC) ಆಗಿದ್ದಾರೆ. ಕಾರ್ಯನಿರ್ವಾಹಕ ತರಬೇತುದಾರರಾಗಿ, ಅವರು 3000 ಗಂಟೆಗಳ ತೀವ್ರವಾದ ತರಬೇತಿ ಅನುಭವವನ್ನು ಹೊಂದಿದ್ದಾರೆ.


ಎಸ್.ಎ ಆನಂದ್ - MSMEs/SMEs ಗಳಿಗೆ ಅತ್ಯುತ್ತಮ ಕೋಚ್


ಆನಂದ್ ಭಾರತದ ಪ್ರಸಿದ್ಧ ಪ್ರೇರಕ ಮತ್ತು ಸಾರ್ವಜನಿಕ ಭಾಷಣಕಾರರಾಗಿದ್ದಾರೆ. ಎರಡು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ, ಅವರು ಹತ್ತು ಗೌರವಗಳನ್ನು ಗಳಿಸಿದ್ದಾರೆ. ಅವರು IIT, L&T, GGS (MNC), BOT VFX (MNC), ಮತ್ತು ವಿವಿಧ ವಿಶ್ವದರ್ಜೆಯ ಸಂಸ್ಥೆಗಳಿಂದ ವ್ಯಕ್ತಿಗಳಿಗೆ ತರಬೇತಿ ನೀಡಿದ್ದಾರೆ.

First published: