Employee Layoff: ಮೀಶೋ ಕಂಪನಿ ದಿನಸಿ ವ್ಯಾಪಾರ ಸ್ಥಗಿತ, 300 ಉದ್ಯೋಗಿಗಳ ವಜಾ!

ಹೋಮ್‌ಗ್ರೋನ್ ಸೋಷಿಯಲ್ ಕಾಮರ್ಸ್ ಪ್ಲಾಟ್‌ಫಾರ್ಮ್ ಮೀಶೋ ತನ್ನ ದಿನಸಿ ವ್ಯಾಪಾರವನ್ನು ಸ್ಥಗಿತಗೊಳಿಸಿದೆ ಎಂದು ವರದಿಯೊಂದು ತಿಳಿಸಿದೆ. ಸೂಪರ್‌ಸ್ಟೋರ್ ಎಂದು ಕರೆಯಲ್ಪಡುವ ಈ ಆನ್‌ಲೈನ್‌ ವ್ಯವಹಾರವು ನಾಗ್ಪುರ ಮತ್ತು ಮೈಸೂರು ಹೊರತುಪಡಿಸಿ ಭಾರತದ ಶೇಕಡಾ 90 ಕ್ಕಿಂತ ಹೆಚ್ಚು ನಗರಗಳಲ್ಲಿ ಮುಚ್ಚಲ್ಪಟ್ಟಿದೆ, ಇದರ ಪರಿಣಾಮವಾಗಿ ಹಲವರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ.

 ಮೀಶೋ

ಮೀಶೋ

  • Share this:
ಇಂದಿನ ಕಾಲದಲ್ಲಿ ನಮಗೆ ಬೇಕಾಗುವ ವಸ್ತುಗಳನ್ನು ಆನ್ಲೈನ್‌ (Online) ಮೂಲಕ ಎಲ್ಲಿ ಬೇಕಾದರೂ ತರಿಸಿಕೊಳ್ಳಬಹುದು. ಕೋವಿಡ್‌-19 ಸಾಂಕ್ರಾಮಿಕ ರೋಗ ಬರುವುದಕ್ಕೂ ಮುಂಚೆ ಈ ಆನ್‌ಲೈನ್‌ ವ್ಯವಹಾರ (Business) ಅಷ್ಟೊಂದು ಜನಪ್ರಿಯ ಗಳಿಸಿದ್ದಿಲ್ಲ. ಆದರೆ ಯಾವಾಗ ಕೊರೋನಾ (Corona) ರೋಗ ಜಗತ್ತಿನಲ್ಲಿ ತನ್ನ ಅಟ್ಟಹಾಸ ಮೆರೆಯಲು ಆರಂಭಿಸಿತೋ ಆಗ ಶುರುವಾಯಿತು ನೋಡಿ ಈ ಆನ್‌ಲೈನ್‌ ವ್ಯವಹಾರ. ಒಂದು ಸಣ್ಣ ಪೆನ್ಸಿಲ್‌ ಬೇಕೆಂದರೂ ಕೂಡ ಆನ್‌ಲೈನ್‌ ನಲ್ಲಿ ತರಿಸಿಕೊಳ್ಳೊ ಪರಿಪಾಠವನ್ನು ಈಗ ಎಲ್ಲ ಕಡೆ ನಾವು ಕಾಣಬಹುದು. ಆದರೆ ಈಗೀಗ ಕೆಲವು ಆನ್‌ಲೈನ್‌ ವ್ಯವಹಾರಗಳು ತಮ್ಮ ಕೆಲವು ವ್ಯಾಪಾರ ಮತ್ತು ವ್ಯವಹಾರಗಳನ್ನು ಸ್ಥಗಿತಗೊಳಿಸುತ್ತಿವೆ (Breakdown).

ಮೀಶೋ:  ದಿನಸಿ ವ್ಯಾಪಾರವನ್ನು ಸ್ಥಗಿತ
ಹೋಮ್‌ಗ್ರೋನ್ ಸೋಷಿಯಲ್ ಕಾಮರ್ಸ್ ಪ್ಲಾಟ್‌ಫಾರ್ಮ್ ಮೀಶೋ ತನ್ನ ದಿನಸಿ ವ್ಯಾಪಾರವನ್ನು ಸ್ಥಗಿತಗೊಳಿಸಿದೆ ಎಂದು ವರದಿಯೊಂದು ತಿಳಿಸಿದೆ. ಸೂಪರ್‌ಸ್ಟೋರ್ ಎಂದು ಕರೆಯಲ್ಪಡುವ ಈ ಆನ್‌ಲೈನ್‌ ವ್ಯವಹಾರವು ನಾಗ್ಪುರ ಮತ್ತು ಮೈಸೂರು ಹೊರತುಪಡಿಸಿ ಭಾರತದ ಶೇಕಡಾ 90 ಕ್ಕಿಂತ ಹೆಚ್ಚು ನಗರಗಳಲ್ಲಿ ಮುಚ್ಚಲ್ಪಟ್ಟಿದೆ, ಇದರ ಪರಿಣಾಮವಾಗಿ ಹಲವರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ.

300 ಉದ್ಯೋಗಿಗಳನ್ನು ವಜಾ
ಕೆಲವು ಮೂಲಗಳ ಪ್ರಕಾರ “ಮೀಶೋದ ಸೂಪರ್‌ಸ್ಟೋರ್ ದಿನಸಿ ವ್ಯಾಪಾರವನ್ನು ಮೀಶೋ ಕಂಪನಿಯು ಸ್ಥಗಿತಗೊಳಿಸಿದೆ. ಇದರಿಂದ ಭಾರತದ ಹಲವು ನಗರಗಳಲ್ಲಿ ಮೀಶೋ ಕಂಪನಿಯು 300 ಉದ್ಯೋಗಿಗಳನ್ನು ವಜಾಗೊಳಿಸಿದೆ. ಕೆಲಸದಿಂದ ವಜಾಗೊಳಿಸಲಾದ 300 ಉದ್ಯೋಗಗಳು ಆನ್-ರೋಲ್ ಮತ್ತು ಆಫ್-ರೋಲ್ ಕೆಲಸಗಾರರನ್ನು ಒಳಗೊಂಡಿದ್ದು, ಸಿಟಿ ಲಾಂಚ್ ಮ್ಯಾನೇಜರ್‌ಗಳು, ಪ್ರೈಸಿಂಗ್ ಟೀಮ್ ಲೀಡ್‌ಗಳು, ವೇರ್‌ಹೌಸ್ ಮ್ಯಾನೇಜರ್‌ಗಳು, ಸೇಲ್ಸ್ ಎಕ್ಸಿಕ್ಯೂಟಿವ್‌ಗಳು, ಸೋರ್ಸಿಂಗ್ ಎಕ್ಸಿಕ್ಯೂಟಿವ್‌ಗಳು, ಮಾರ್ಕೆಟ್ ಇಂಟಲಿಜೆನ್ಸ್ ಎಕ್ಸಿಕ್ಯೂಟಿವ್‌ಗಳು ಎಂಬ ಹಲವು ಬಗೆಯ ಉದ್ಯೋಗಿಗಳು ಇದರಲ್ಲಿ ಇದ್ದರು. ಆದರೆ ಇದುವರೆಗೂ ಈ ವಿಚಾರವಾಗಿ ಕಂಪನಿ ಯಾವುದೇ ಹೇಳಿಕೆ ನೀಡಿಲ್ಲ.

200 ನಗರಗಳಿಗೆ ಉದ್ಯಮವನ್ನು ವಿಸ್ತರಿಸುವುದಾಗಿ ಭರವಸೆ ನೀಡಿದ್ದ ಕಂಪನಿ
ಮೀಶೋ ಸೂಪರ್‌ಸ್ಟೋರ್ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಗುಜರಾತ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಸೇರಿದಂತೆ ಆರು ರಾಜ್ಯಗಳ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಎಪ್ರಿಲ್‌ನಲ್ಲಿ, ಮೀಶೋ ಫಾರ್ಮಿಸೊ ಅನ್ನು ಸೂಪರ್‌ಸ್ಟೋರ್‌ಗೆ ಮರುಬ್ರಾಂಡ್ ಮಾಡಿದರು. ಅದು ಕಳೆದ ವರ್ಷ ರೂ. 570 ಮಿಲಿಯನ್ ಅನ್ನು ಸಂಗ್ರಹಿಸಿತ್ತು ಮತ್ತು ಈ ಸಂದರ್ಭದಲ್ಲಿ ಮೀಶೋ ಸಂಸ್ಥೆ ಇನ್ನೂ 200 ನಗರಗಳಿಗೆ ಉದ್ಯಮವನ್ನು ವಿಸ್ತರಿಸುವುದಾಗಿ ಭರವಸೆ ನೀಡಿತ್ತು.

ಇದನ್ನೂ ಓದಿ:  Blink It: ಇನ್ಮುಂದೆ ಮನೆ ಬಾಗಿಲಿಗೆ ಬರುತ್ತೆ ನಿಮ್ಗೆ ಬೇಕಾದ ಪ್ರಿಂಟ್​ಔಟ್​​! ಬ್ಲಿಂಕ್ ಇಟ್​ನಿಂದ ಹೊಸ ಸೇವೆ

“ಮಾರುಕಟ್ಟೆಗಳಲ್ಲಿ ದೈನಂದಿನ ಅಗತ್ಯ ವಸ್ತುಗಳ ಗ್ರಾಹಕರ ಬೇಡಿಕೆಯನ್ನು ಪೂರೈಸಲು ಅದರ ನಿರಂತರ ಗಮನವನ್ನು ಹೈಲೈಟ್ ಮಾಡಲು ಮೀಶೋ ಕಂಪನಿಯು ಫಾರ್ಮಿಸೊವನ್ನು ಸೂಪರ್‌ಸ್ಟೋರ್‌ಗೆ ಮರುಬ್ರಾಂಡ್ ಮಾಡಿದ ನಂತರ, ಮೀಶೋ ಅದೇ ತಿಂಗಳಲ್ಲಿ 150 ಉದ್ಯೋಗಿಗಳನ್ನು ವಜಾಗೊಳಿಸಿದೆ. ಅದು ಆ ಸಮಯದಲ್ಲಿ ತನ್ನ ಕಿರಾಣಿ ವ್ಯಾಪಾರವನ್ನು ಕೋರ್ ಅಪ್ಲಿಕೇಶನ್‌ನಲ್ಲಿ ಸಂಯೋಜಿಸುವ ಗುರಿಯನ್ನು ಹೊಂದಿತ್ತು” ಎಂದು ಮೀಶೋ ಸಂಸ್ಥಾಪಕ ಮತ್ತು ಸಿಇಒ ವಿದಿತ್ ಆತ್ರೆ ಈ ಬಗ್ಗೆ ಹೇಳಿಕೆ ನೀಡಿದ್ದರು.

ಈ ಬಗ್ಗೆ ಕಂಪನಿಯ ಸಿಇಓ ವಿದಿತ್‌ ಆತ್ರೆ ಏನು ಹೇಳಿದ್ದಾರೆ?
“ಕರ್ನಾಟಕದಲ್ಲಿ ಮೊದಲ ಬಾರಿಗೆ ಈ ಆನ್‌ಲೈನ್‌ ಸೂಪರ್‌ಸ್ಟೋರ್‌ ದಿನಸಿ ವ್ಯಾಪಾರ ಪ್ರಾರಂಭವಾದದ್ದು, ಈಗ ಆರು ರಾಜ್ಯಗಳಲ್ಲಿ ಲಾಭದಾಯಕ ಏಳಿಗೆಯನ್ನು ಕಾಣುತ್ತಿದೆ. ನಮ್ಮ ಬಳಕೆದಾರರ ಮೊದಲ ಮನಸ್ಥಿತಿಯಿಂದ ಪ್ರೇರೇಪಿಸಲ್ಪಟ್ಟ ಈ ಏಕೀಕರಣವು ಲಕ್ಷಾಂತರ ಮೀಶೋ ಬಳಕೆದಾರರಿಗೆ ಏಕೀಕೃತ ಶಾಪಿಂಗ್ ಅನುಭವವನ್ನು ನೀಡುತ್ತದೆ ಮತ್ತು ಗ್ರಾಹಕರ ಸ್ವಾಧೀನ, ತಂತ್ರಜ್ಞಾನ ಮತ್ತು ಉತ್ಪನ್ನ ಮತ್ತು ಪ್ರತಿಭೆಯಂತಹ ಕ್ಷೇತ್ರಗಳಲ್ಲಿ ಬಲವಾದ ಸಿನರ್ಜಿಗಳನ್ನು ಚಾಲನೆ ಮಾಡಲು ನಮಗೆ ಅವಕಾಶವನ್ನು ನೀಡುತ್ತದೆ ”ಎಂದು ವಿದಿತ್‌ ಆತ್ರೆ ತಿಳಿಸಿದ್ದರು.

ಕೋವಿಡ್ -19 ಸಾಂಕ್ರಾಮಿಕ ರೋಗದ ಮೊದಲ ಅಲೆಯ ಸಮಯದಲ್ಲಿ ಮೀಶೋ ಈ ಹಿಂದೆ 200 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಕೆಲವು ವರದಿಗಳ ಪ್ರಕಾರ, ಈ ಬಾರಿ, ಮೀಶೋ ಕಂಪನಿಯು ಎರಡು ತಿಂಗಳ ವೇತನವನ್ನು ವಜಾಗೊಳಿಸಿದ ಆನ್-ರೋಲ್ ಉದ್ಯೋಗಿಗಳಿಗೆ ಬೇರ್ಪಡಿಕೆ ಪ್ಯಾಕೇಜ್‌ನಂತೆ ನೀಡಿತು ಎಂದು ಉಲ್ಲೇಖಿಸಿದೆ.

ಇದನ್ನೂ ಓದಿ:   Education: ಸಾಧನೆಗೆ ಅಡ್ಡಿಯಾಗದ ಅಂಗವೈಕಲ್ಯ! ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದೇ ಉದ್ಯಮಿಯ ಉದ್ದೇಶ

ಉದ್ಯೋಗಿಗಳನ್ನು ಕಂಪನಿಯಿಂದ ವಜಾ ಮಾಡಲು ಪ್ರಮುಖವಾಗಿ ಇರುವ ಎರಡು ಕಾರಣಗಳೆಂದರೆ “ವ್ಯವಹಾರ ಸರಿಯಾಗಿ ನಡೆಯುತ್ತಿರಲಿಲ್ಲ. ಅದರ ಪರಿಣಾಮವಾಗಿ ಹಣದ ಹರಿವು ಕೂಡ ಅಷ್ಟೊಂದು ಇರಲಿಲ್ಲ. ಅದಕ್ಕಾಗಿಯೇ ಅವರು ಹೆಚ್ಚಿನ ನಗರಗಳಲ್ಲಿ ಕಾರ್ಯಾಚರಣೆಯನ್ನು ಮುಚ್ಚಲು ನಿರ್ಧರಿಸಿದ್ದಾರೆ” ಎಂದು ಮೂಲವೊಂದು ಮಾಧ್ಯಮ ಸಂಸ್ಥೆಗೆ ತಿಳಿಸಿದೆ. ಈ ವ್ಯವಹಾರದಿಂದ ಮೀಶೋ ಸಾಕಷ್ಟು ಹಣವನ್ನು ವ್ಯಯ ಮಾಡಿದೆ. ಸರಿಯಾದ ಯೋಜನೆ ಇಲ್ಲದೆ ಆರು ರಾಜ್ಯಗಳಲ್ಲಿ ಮೀಶೋ ಕಂಪನಿಯು ಈ ವ್ಯವಹಾರ ಆರಂಭಿಸಿದೆ. ಗ್ರಾಹಕರ ಬೇಡಿಕೆ ಆಧಾರದ ಮೇಲೆ ಪೂರೈಕೆ ಮಾಡುವುದು ಒಂದು ದೊಡ್ಡ ಸಮಸ್ಯೆ ಆಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
Published by:Ashwini Prabhu
First published: