Meesho App: ಶಾಪಿಂಗ್ ಮಾತ್ರ ಅಲ್ಲ, ಸ್ಥಳೀಯ ವ್ಯಾಪಾರಿಗಳಿಗೆ ಬದುಕು ಕೊಟ್ಟ ಆ್ಯಪ್

ಮೀಶೋ ಆ್ಯಪ್ ತನ್ನ ಹೊಸ ಹೊಸ ಪರಿಕಲ್ಪನೆಗಳಿಂದಾಗಿ ಬಹಳಷ್ಟು ಮಟ್ಟಿಗೆ ಬಳಕೆದಾರರನ್ನು ಹೊಂದಿದೆ. ಹಲವಾರು ಸ್ಥಳೀಯ ವ್ಯಾಪಾರಿಗಳಿಗೆ ಬದುಕು ಕಟ್ಟಿಕೊಡಲು ಸಹಕಾರಿಯಾಗಿದೆ ಮಿಶೋ. ಇದೇ ರೀತಿಯಾಗಿ ಸಂಪಾದನೆ ಮಾಡುತ್ತಿರುವ ಶಾನ್ ಅನ್ಸಾರಿ ಎಂಬುವವರ ಬಗ್ಗೆ ಮೀಶೋ ಸಹ-ಸಂಸ್ಥಾಪಕ ಮತ್ತು ಸಿಇಒ ವಿದಿತ್ ಆತ್ರೆ ಪಾಟಿಪತ್ ಪ್ರವಾಸಕ್ಕೆ ಹೋದಾಗ ತಿಳಿದುಕೊಂಡಿದ್ದಾರೆ.

Vidit Aatrey CEO and Sanjeev Barnwal CTO, and founders of Meesho app. 13 January 2018. Photograph by Nishant Ratnakar for Forbes India

Vidit Aatrey CEO and Sanjeev Barnwal CTO, and founders of Meesho app. 13 January 2018. Photograph by Nishant Ratnakar for Forbes India

  • Share this:
ಮೀಶೋ (Meesho), ಪ್ರಸ್ತುತ ಹೆಚ್ಚು ಚಾಲ್ತಿಯಲ್ಲಿರುವ ಶಾಪಿಂಗ್ ಆ್ಯಪ್ (Shopping App). ಫ್ಯಾಶನ್ ಬಟ್ಟೆಯಿಂದ ಹಿಡಿದು ಮನೆಗೆ ಬೇಕಾದ ಎಲ್ಲ ವಸ್ತುಗಳು ಲಭಿಸುವ ವೇದಿಕೆ. ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ಗೆ (Flipkart) ಪ್ರಬಲ ಪ್ರತಿಸ್ಫರ್ಧಿಯಾಗಿರುವ ಮೀಶೋ ಮಹಿಳೆಯರ ನೆಚ್ಚಿನ ಶಾಫಿಂಗ್ ಫ್ಲಾಟ್ ಫಾರ್ಮ್ ಎನ್ನಬಹುದು. ಕೇವಲ ಶಾಫಿಂಗ್ ಮಾತ್ರವಲ್ಲದೇ ಮನೆಯಲ್ಲಿಯೇ ಕೂತು ಅಂಗಡಿಗಳನ್ನು (Shops) ಮೀಶೋ ಮೂಲಕ ತೆರೆಯುವ ಅವಕಾಶ ಸಹ ಅವರಿಗಿದೆ. ಅಂದರೆ ಮೀಶೋದಲ್ಲಿ ಉತ್ಪನ್ನಗಳನ್ನು ಖರೀದಿಸಿ ಬೇರೆಯವರಿಗೆ ಮರುಮಾರಾಟ ಮಾಡುವ ಆಯ್ಕೆ. ಇದು ಮಹಿಳೆಯರಿಗೆ (Women's) ಆದಾಯದ ಮಾರ್ಗವಾಗಿ ಸಹಾಯ ಮಾಡುವ ಮೂಲಕ ಮೀಶೋ ಬೆಂಬಲವಾಗಿದೆ.

ಸ್ಥಳೀಯ ವ್ಯಾಪಾರಿಗಳಿಗೆ ಬದುಕು ಕಟ್ಟಿಕೊಡಲು ಸಹಕಾರಿಯಾದ ಆ್ಯಪ್
ಮೀಶೋ ಆ್ಯಪ್ ತನ್ನ ಹೊಸ ಹೊಸ ಪರಿಕಲ್ಪನೆಗಳಿಂದಾಗಿ ಬಹಳಷ್ಟು ಮಟ್ಟಿಗೆ ಬಳಕೆದಾರರನ್ನು ಹೊಂದಿದೆ. ಹಲವಾರು ಸ್ಥಳೀಯ ವ್ಯಾಪಾರಿಗಳಿಗೆ ಬದುಕು ಕಟ್ಟಿಕೊಡಲು ಸಹಕಾರಿಯಾಗಿದೆ ಮಿಶೋ. ಇದೇ ರೀತಿಯಾಗಿ ಸಂಪಾದನೆ ಮಾಡುತ್ತಿರುವ ಶಾನ್ ಅನ್ಸಾರಿ ಎಂಬುವವರ ಬಗ್ಗೆ ಮೀಶೋ ಸಹ-ಸಂಸ್ಥಾಪಕ ಮತ್ತು ಸಿಇಒ ವಿದಿತ್ ಆತ್ರೆ ಪಾಟಿಪತ್ ಪ್ರವಾಸಕ್ಕೆ ಹೋದಾಗ ತಿಳಿದುಕೊಂಡಿದ್ದಾರೆ. ಮೀಶೋದ ಮೂಲಕ ಹೇಗೆ ಒಬ್ಬ ವ್ಯಕ್ತಿ ಬದುಕು ಕಟ್ಟಿಕೊಂಡಿದ್ದಾನೆ ಎಂಬುವುದನ್ನು ಇತ್ತೀಚೆಗೆ ಅವರು ಹಂಚಿಕೊಂಡಿದ್ದಾರೆ.

ಅನ್ಸಾರಿ ಸಣ್ಣ ವ್ಯಾಪಾರ ಶುರು ಮಾಡಿ, ಸ್ಥಳೀಯವಾಗಿ ತಯಾರಿಸಿದ ಬಾತ್ ಮ್ಯಾಟ್ಗಳು ಮತ್ತು ಡೋರ್ ಮ್ಯಾಟ್ಗಳನ್ನು ಸಂಗ್ರಹಿಸಿ ಮೀಶೋನಲ್ಲಿ ಮಾರಾಟ ಮಾಡಲು ಪ್ರಾರಂಭಿಸಿದರು. ಅವರ ಪೂರೈಕೆದಾರರು ಬೇಡಿಕೆಯನ್ನು ಪೂರೈಸಲು ಸಾಧ್ಯವಾಗದಿದ್ದಾಗ, ಅನ್ಸಾರಿ ತಮ್ಮ ಸ್ವಂತ ಕಾರ್ಖಾನೆಯನ್ನು ಪ್ರಾರಂಭಿಸಲು ಹಣವನ್ನು ಎರವಲು ಪಡೆದರು. ಇಂದು ಅವರು ಬಾಡಿಗೆ ಕಾರ್ಖಾನೆಯಿಂದ ಈ ಮ್ಯಾಟ್ಗಳನ್ನು ತಯಾರಿಸುತ್ತಾರೆ, 50 ಜನರಿಗೆ ಉದ್ಯೋಗ ನೀಡಿದ್ದಾರೆ ಮತ್ತು ತಿಂಗಳಿಗೆ ₹ 30 ಲಕ್ಷ ಆದಾಯವನ್ನು ಗಳಿಸುತ್ತಿದ್ದಾರೆ ಎಂದು ಆತ್ರೆ ಹೇಳಿದ್ದಾರೆ.

ನಮ್ಮ ಪ್ಲಾಟ್ಫಾರ್ಮಿನಲ್ಲಿ ಅನ್ಸಾರಿಯಂತಹ ಮಾರಾಟಗಾರರ ಬಗ್ಗೆ ತಿಳಿದುಕೊಳ್ಳಲು ನಾವು ಪ್ರತಿ ತಿಂಗಳು ಕಾರ್ಯಾಚರಣೆಗೆ ಹೋಗುತ್ತೇವೆ ಎಂದು ಸಹ ತಿಳಿಸಿದ್ದಾರೆ ಮಿಶೋ ಸಿಇಒ.

ಇದನ್ನೂ ಓದಿ: Smart Business idea: ಅಲೆಲೆಲೇ ಏನ್​ ತಲೆ ಗುರು ನಿಮ್ದು! ನಿಜಕ್ಕೂ ನೀವು ವೆರೈಟಿ ಫಾರ್ಮರ್​, ಹೀಗೂ ದುಡ್ಡು ಮಾಡ್ಬಹುದು

ಒಂದು ಬಿಲಿಯನ್ ಖರೀದಿದಾರರನ್ನು ತಲುಪಲು 100 ಮಿಲಿಯನ್ ಮಾರಾಟಗಾರರು
ಮೀಶೋ ಸಂಸ್ಥೆಯ ಕನಸು ಒಂದು ಮಿಲಿಯನ್ ಸ್ಥಳೀಯ ವ್ಯವಹಾರಗಳನ್ನು ಆನ್‌ಲೈನ್‌ನಲ್ಲಿ ಸ್ಥಾಪಿಸುವುದಾಗಿದೆ. ಇದರಿಂದಾಗಿ ವ್ಯಾಪಾರಿಗಳು ಎಲ್ಲೇ ಇದ್ದರೂ ಭಾರತದಾದ್ಯಂತ ಸರಕುಗಳನ್ನು ಮಾರಾಟ ಮಾಡುವ ಮೂಲಕ ತಮ್ಮ ಮಾರುಕಟ್ಟೆಗಳನ್ನು ವಿಸ್ತರಿಸಬಹುದು ಎಂಬುವುದಾಗಿದೆ. ಆತ್ರೆ ಅವರ ಈ ಉದ್ದೇಶ ಪ್ರಸ್ತುತ ಇ-ಕಾಮರ್ಸ್‌ನ ದೈತ್ಯರಿಗೆ ಸವಾಲಾಗಿ ಹೊರಹೊಮ್ಮಿದೆ ಎನ್ನಬಹುದು.

ಮೀಶೋ - ಇದು 'ನನ್ನ ಅಂಗಡಿ'
ಮೀಶೋ - ಇದು 'ನನ್ನ ಅಂಗಡಿ', ಈ ವೇದಿಕೆಯು ದಿನೇ ದಿನೇ ವೇಗವಾಗಿ ಬೆಳೆಯುತ್ತಿದ್ದು, ಕಡಿಮೆ ಅವಧಿಯಲ್ಲಿ 120 ಮಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರೊಂದಿಗೆ ಕೋರೋನಾ ನಂತರ ಸಾಕಷ್ಟು ಜನಪ್ರಿಯವಾಗುತ್ತಿದೆ.

ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ತಲಾ 200 ಮಿಲಿಯನ್ ನೋಂದಾಯಿತ ಬಳಕೆದಾರರನ್ನು ಹೊಂದಿವೆ. ಮೀಶೋನ ಗುರಿಯು 100 ಮಿಲಿಯನ್ ಮಾರಾಟಗಾರರನ್ನು ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಂದುವುದು ಮತ್ತು ಒಂದು ಬಿಲಿಯನ್ ಗ್ರಾಹಕರನ್ನು ಹೊಂದುವ ಗುರಿ ಇಟ್ಟುಕೊಂಡಿದ್ದು, ಇದು ಸ್ವಲ್ಪ ಮಟ್ಟಿಗೆ ಸಾಕಾರವಾಗಿದೆ. ಮತ್ತು ಇದನ್ನು ಸಾಧಿಸಲು ಮೀಶೋ ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಲೇ ಇದೆ.

ಅಸಂಘಟಿತ ಚಿಲ್ಲರೆ ವ್ಯಾಪಾರವು ಭಾರತದ ಖರ್ಚುಗಳಲ್ಲಿ 90% ರಷ್ಟಿದೆ. ಆದರೆ ಖರೀದಿದಾರರು ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡದ ಕಾರಣ ಮಾರಾಟಗಾರರು ಆನ್‌ಲೈನ್‌ಗೆ ಬರುತ್ತಿಲ್ಲ ಎಂಬ ವಿಷಯವನ್ನು ಅರಿತುಕೊಂಡ ನಂತರ ಆತ್ರೆ ಮತ್ತು ಸಹ-ಸಂಸ್ಥಾಪಕ ಸಂಜೀವ್ ಬಮ್ವಾಲ್ ಮೀಶೋಗೆ ಹೆಚ್ಚಿನ ಸ್ಥಳೀಯ ವ್ಯವಹಾರಗಳನ್ನು ಆನ್‌ಲೈನ್‌ನಲ್ಲಿ ತರಲು ಅನುವು ಮಾಡಿಕೊಟ್ಟರು.

ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗೆ ಪೈಪೋಟಿ
ಮೀಶೋ ಈ ಎರಡೂ ದೈತ್ಯರಿಗೆ ಹತ್ತಿರತ್ತಿರದಲ್ಲಿದ್ದು, ಇಬ್ಬರಿಗೂ ಸವಾಲಾಗಿ ಪರಿಣಮಿಸಿದೆ. ಆರಂಭಿಕ ದಿನಗಳಲ್ಲಿ, ಮೀಶೋ ಮಾರಾಟವನ್ನು 15 ಮಿಲಿಯನ್ ಮಹಿಳಾ ಮರುಮಾರಾಟಗಾರರು ನಡೆಸುತ್ತಿದ್ದರು, ಅವರು ಪ್ಲಾಟ್‌ಫಾರ್ಮ್‌ನಿಂದ ಉತ್ಪನ್ನಗಳನ್ನು ಖರೀದಿಸಿ ಮತ್ತು ಅದನ್ನು ವಾಟ್ಸಾಪ್ ಮತ್ತು ಫೇಸ್‌ಬುಕ್ ಗುಂಪುಗಳ ಮೂಲಕ ಮಾರಾಟ ಮಾಡಿದರು. ಮರು-ಮಾರಾಟಗಾರರಿಂದ ನಡೆಸಲ್ಪಡುವ ಸಾಮಾಜಿಕ ವಾಣಿಜ್ಯ ವೇದಿಕೆಯಾಗಿರುವುದರಿಂದ, ಇದು ಇಂದು ಒಟ್ಟು ದೈನಂದಿನ ಆನ್‌ಲೈನ್ ವಿತರಣೆಗಳಲ್ಲಿ ಸುಮಾರು 30% ಪಾಲನ್ನು ಹೊಂದಿದೆ.

ಇದನ್ನೂ ಓದಿ:  Diamond Startup: ಇನ್ಮುಂದೆ ಕೈಗೆಟಕುವ ದರದಲ್ಲೂ ಸಿಗಲಿದೆ ವಜ್ರಗಳು! ಸಿಕ್ಕಾಪಟ್ಟೆ ಸೌಂಡ್​ ಮಾಡ್ತಿದೆ ಈ ಸ್ಟಾರ್ಟ್​ಅಪ್​

9 ಮಿಲಿಯನ್ ಇ-ಕಾಮರ್ಸ್ ಆರ್ಡರ್‌ಗಳಲ್ಲಿ, ಮೀಶೋದ್ದು 2.7 ರಷ್ಟು ಪಾಲು
ಪ್ರತಿದಿನ ಪ್ರಕ್ರಿಯೆಗೊಳಿಸಲಾದ 9 ಮಿಲಿಯನ್ ಇ-ಕಾಮರ್ಸ್ ಆರ್ಡರ್‌ಗಳಲ್ಲಿ, ಮೀಶೋ 2.7 ಮಿಲಿಯನ್‌ನಷ್ಟಿದ್ದರೆ, ಅಮೆಜಾನ್, ಫ್ಲಿಫ್ ಕಾರ್ಟ್ 5 ಮಿಲಿಯನ್‌ನಷ್ಟಿದ್ದಾರೆ. ಮತ್ತೊಂದು ಕುತೂಹಲಕಾರಿ ಅಂಕಿಅಂಶ ಹೇಳುವಂತೆ ಆನ್‌ಲೈನ್‌ನಲ್ಲಿ 70 ಮಿಲಿಯನ್ ಶಾಪರ್‌ಗಳಲ್ಲಿ, ಕೇವಲ 10 ಮಿಲಿಯನ್ ಜನರು ಡಿಜಿಟಲ್ ಸ್ಥಳೀಯರಾಗಿದ್ದಾರೆ. ಮೀಶೋ 2015 ರಲ್ಲಿ ಇಲ್ಲಿಗೆ ಮಾರಾಟಗಾರರನ್ನು ಪ್ರವೇಶಿಸುವಂತೆ ಮಾಡಲು ಪ್ರಯತ್ನಿಸಿತಾದರೂ ಅದು ವಿಫಲವಾಯಿತು. ಸಣ್ಣ ಉದ್ಯಮಿಗಳನ್ನು ಆನ್‌ಲೈನ್‌ಗೆ ಬರಲು ಮನವೊಲಿಸುವುದು ಕಠಿಣವಾಗಿದೆ ಏಕೆಂದರೆ ಅವರ ಗ್ರಾಹಕರು ಆನ್‌ಲೈನ್‌ನಲ್ಲಿರುವುದಿಲ್ಲ ಅಥವಾ ಭಾಷೆಯ ಅಡೆತಡೆಗಳು ಮತ್ತು ಇಂಟರ್ನೆಟ್ ವೇಗದ ಗುಣಮಟ್ಟವು ಕಾರಣವಾಗುತ್ತವೆ. ಕೊರೋನಾ ನಂತರ ಇದು ಬದಲಾಯಿತು.

ಅದಕ್ಕೂ ಮೊದಲು ಮೀಶೋನ 15 ಮಿಲಿಯನ್ ಮಹಿಳಾ ಮರುಮಾರಾಟಗಾರರ ತಂಡವು 2020 ರವರೆಗೆ ಅದರ ಒಟ್ಟು ವ್ಯಾಪಾರದ ಮೌಲ್ಯವನ್ನು ಹೆಚ್ಚಿಸಿತು. ವಾಟ್ಸಾಪ್ ಮತ್ತು ಫೇಸ್‌ಬುಕ್ ಗುಂಪುಗಳಲ್ಲಿ ಪ್ಲಾಟ್‌ಫಾರ್ಮ್‌ನಿಂದ ಖರೀದಿಸಿದ ಸರಕುಗಳನ್ನು ಮರುಮಾರಾಟ ಮಾಡುವ ಮೂಲಕ ವೃತ್ತಿ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಕಂಡುಕೊಂಡ ಮಹಿಳಾ ಮರುಮಾರಾಟಗಾರರು ಇದನ್ನು ನಿರ್ಮಿಸಿದ ಕಾರಣ ಮೀಶೋ ಅನ್ನು ‘ಸಾಮಾಜಿಕ ವಾಣಿಜ್ಯ ಚಾನಲ್’ ಎಂದು ಕರೆಯಲಾಗುತ್ತದೆ.

2017 ಮತ್ತು 2020 ರ ನಡುವೆ, 100% ಮಾರಾಟವು ಮರುಮಾರಾಟಗಾರರ ಮೂಲಕ ನಡೆಯುತ್ತಿದೆ. ಗ್ರಾಹಕರು ಈಗ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಪ್ರಾರಂಭಿಸಿರುವುದರಿಂದ ಈ ಮಹಿಳಾ ಮರುಮಾರಾಟಗಾರರ ಪಾಲು ಈಗ 20% ಕ್ಕೆ ಇಳಿದಿದೆ. ಮೀಶೋ ಅಪ್ಲಿಕೇಶನ್‌ನಲ್ಲಿ ಮಾಸಿಕ ಸರಾಸರಿ 120 ಮಿಲಿಯನ್ ಬಳಕೆದಾರರು ಪ್ರತಿ ತಿಂಗಳು ವಹಿವಾಟು ನಡೆಸುತ್ತಾರೆ. ಕಳೆದ ವರ್ಷ ಸರಾಸರಿ 110 ಮಿಲಿಯನ್ ಭಾರತೀಯ ಶಾಪರ್‌ಗಳು ಮೀಶೋನಲ್ಲಿ ಖರೀದಿಸಿದ್ದಾರೆ.

$4.9 ಬಿಲಿಯನ್ ಮೌಲ್ಯ ಹೊಂದಿದ ಮೀಶೋ
ಹೂಡಿಕೆದಾರರು ಕೂಡ ಕಂಪನಿಯಲ್ಲಿ ಹೂಡಿಕೆ ಮಾಡಲು ಸರತಿ ಸಾಲಿನಲ್ಲಿ ನಿಂತಿರುವುದು ಮೀಶೋಗೆ ಮತ್ತೊಂದು ಹಿರಿಮೆ. ಇತ್ತೀಚಿನ ವರದಿ ಪ್ರಕಾರ ಮೀಶೋ $4.9 ಬಿಲಿಯನ್ ಮೌಲ್ಯವನ್ನು ಹೊಂದಿದೆ.

ಇದನ್ನೂ ಓದಿ:  Vintage Electric Cars: ರೈತನ ಮಗನಿಂದ 9 ವಿಂಟೇಜ್ ಎಲೆಕ್ಟ್ರಿಕ್ ಕಾರುಗಳ ಆವಿಷ್ಕಾರ! ಬರ್ತಿರೋ ಆರ್ಡರ್​ ಕಂಡು ಶಾಕ್​ ಆದ ಯುವಕ

ಬ್ರಾಂಡ್ ರಾಯಭಾರಿಗಳಾದ ಮಾರಾಟಗಾರರು
ಪ್ರಸ್ತುತ, ಮೀಶೋನಲ್ಲಿ ಅನ್ಸಾರಿಯಂತಹ ಆರು ಲಕ್ಷ ಮಾರಾಟಗಾರರಿದ್ದಾರೆ ಮತ್ತು ಸ್ಟಾರ್ಟ್ ಅಪ್ ಇದನ್ನು ಒಂದು ಮಿಲಿಯನ್‌ಗೆ ತೆಗೆದುಕೊಳ್ಳಲು ಬಯಸಿದೆ. ಮಾರಾಟಗಾರರಿಗೆ ಸಹಾಯ ಮಾಡಲು ಮೀಶೋ ತನ್ನದೇ ಕೆಲಸ ಮಾಡುತ್ತಿದ್ದರೆ, ಇತ್ತ ಅಸ್ತಿತ್ವದಲ್ಲಿರುವ ಮಾರಾಟಗಾರರು ಇತರರಿಗೆ ಆನ್‌ಲೈನ್‌ನಲ್ಲಿ ಸಹಾಯ ಮಾಡುವ ಬ್ರ್ಯಾಂಡ್ ಅಂಬಾಸಿಡರ್‌ಗಳಾಗಿದ್ದಾರೆ. ಪ್ಲಾಟ್‌ಫಾರ್ಮ್ ಪ್ರಾರಂಭಿಸಲು ಬಯಸುವವರಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ.
Published by:Ashwini Prabhu
First published: