• Home
 • »
 • News
 • »
 • business
 • »
 • ಭಾರತದಲ್ಲಿ ವೈದ್ಯಕೀಯ ಪ್ರವಾಸೋದ್ಯಮದ ವೇಗವರ್ಧಿತ ಬೆಳವಣಿಗೆ: ಆರೋಗ್ಯದಲ್ಲಿ ಭಾರತದ ಸ್ಥಾನವನ್ನು ಜಾಗತಿಕ ನಾಯಕನ ಸ್ಥಾನಕ್ಕೇರಿಸಿದೆ ಹೀಲ್ ಇನ್ ಇಂಡಿಯಾ ಉಪಕ್ರಮ

ಭಾರತದಲ್ಲಿ ವೈದ್ಯಕೀಯ ಪ್ರವಾಸೋದ್ಯಮದ ವೇಗವರ್ಧಿತ ಬೆಳವಣಿಗೆ: ಆರೋಗ್ಯದಲ್ಲಿ ಭಾರತದ ಸ್ಥಾನವನ್ನು ಜಾಗತಿಕ ನಾಯಕನ ಸ್ಥಾನಕ್ಕೇರಿಸಿದೆ ಹೀಲ್ ಇನ್ ಇಂಡಿಯಾ ಉಪಕ್ರಮ

 ‘ಹೀಲ್ ಇನ್ ಇಂಡಿಯಾ’ ಉಪಕ್ರಮದ ಮೂಲಕ ಭಾರತವು ವೈದ್ಯಕೀಯ ಮೌಲ್ಯದ ಪ್ರವಾಸದ ಜಗತ್ತನ್ನು ಹೇಗೆ ರೂಪಿಸುತ್ತಿದೆ ಎಂಬುದು ಇಲ್ಲಿದೆ

‘ಹೀಲ್ ಇನ್ ಇಂಡಿಯಾ’ ಉಪಕ್ರಮದ ಮೂಲಕ ಭಾರತವು ವೈದ್ಯಕೀಯ ಮೌಲ್ಯದ ಪ್ರವಾಸದ ಜಗತ್ತನ್ನು ಹೇಗೆ ರೂಪಿಸುತ್ತಿದೆ ಎಂಬುದು ಇಲ್ಲಿದೆ

‘ಹೀಲ್ ಇನ್ ಇಂಡಿಯಾ’ ಉಪಕ್ರಮದ ಮೂಲಕ ಭಾರತವು ವೈದ್ಯಕೀಯ ಮೌಲ್ಯದ ಪ್ರವಾಸದ ಜಗತ್ತನ್ನು ಹೇಗೆ ರೂಪಿಸುತ್ತಿದೆ ಎಂಬುದು ಇಲ್ಲಿದೆ

 • Share this:

  ಭಾರತದಲ್ಲಿ ಆರೋಗ್ಯಸೇವೆಯ ಬಗೆಗಿನ ಗಮನಾರ್ಹ ಬದಲಾವಣೆಯ ಬಗ್ಗೆ ಯಾವುದೇ ಅಜ್ಜ-ಅಜ್ಜಿಯಂದಿರ ಬಳಿ ಕೇಳಿ ನೋಡಿ, ಅವರ ಮುಖಗಳು ಬೆಳಗುವುದನ್ನು ನೀವು ನೋಡುತ್ತೀರಿ. ಜಟಿಲವಾದ ಶಸ್ತ್ರಚಿಕಿತ್ಸೆ ಅಥವಾ ಪ್ರಾಯೋಗಿಕ ಚಿಕಿತ್ಸೆಗಳ ಅಗತ್ಯಗಳನ್ನು ಒಳಗೊಂಡ ಕಾಯಿಲೆಗಳು ಅಥವಾ ಸ್ಥಿತಿಗಳು ಎದುರಾದಾಗ ಭಾರತೀಯರು ಪಾಶ್ಚಿಮಾತ್ಯ ದೇಶಗಳೆಡೆಗೆ ಮುಖಮಾಡುತ್ತಿದ್ದುದು ತೀರಾ ಹಿಂದಿನ ವಿಷಯವೇನಲ್ಲ.


  ಆದರೆ ಈಗ, ಜಗತ್ತೇ ಚಿಕಿತ್ಸೆಗಾಗಿ ಭಾರತದೆಡೆಗೆ ಬರುತ್ತಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಗುಣಮಟ್ಟದ ವೈದ್ಯಕೀಯ ಆರೈಕೆಯು ಹೆಚ್ಚು ಕಷ್ಟಕರವಾಗುತ್ತಿರುವ ಈ ಸಮಯದಲ್ಲಿ, ತನ್ನ ಉತ್ಕೃಷ್ಟ ಗುಣಮಟ್ಟದ ಮತ್ತು ಆರ್ಥಿಕವಾಗಿ ಕಾರ್ಯಸಾಧ್ಯವಾದ ಪರ್ಯಾಯವಾಗಿ ಭಾರತೀಯ ಆರೋಗ್ಯಸೇವಾ ಉದ್ಯಮವು ಜಗತ್ತಿನಾದ್ಯಂತ ತನ್ನ ಉಪಸ್ಥಿತಿಯನ್ನು ಪ್ರಸ್ತುತಪಡಿಸುತ್ತಿದೆ.


  ಭಾರತದಲ್ಲಿನ ಆರೋಗ್ಯಸೇವಾ ಉದ್ಯಮವು ಆಸ್ಪತ್ರೆಗಳು, ವೈದ್ಯಕೀಯ ಸಾಧನಗಳು, ವೈದ್ಯಕೀಯ ಪ್ರಯೋಗಗಳು, ಹೊರಗುತ್ತಿಗೆ, ಟೆಲಿಮೆಡಿಸಿನ್, ವೈದ್ಯಕೀಯ ಪ್ರವಾಸೋದ್ಯಮ, ಆರೋಗ್ಯ ವಿಮೆ ಮತ್ತು ವೈದ್ಯಕೀಯ ಉಪಕರಣಗಳನ್ನು ಒಳಗೊಂಡಿದೆ. ಹೆಚ್ಚುತ್ತಿರುವ ಜೀವನಶೈಲಿ ರೋಗಗಳು, ಕೈಗೆಟುಕುವ ಆರೋಗ್ಯಸೇವಾ ವಿತರಣೆ ವ್ಯವಸ್ಥೆಗಳಿಗೆ ಹೆಚ್ಚುತ್ತಿರುವ ಬೇಡಿಕೆಗಳು, ತಂತ್ರಜ್ಞಾನದ ಸುಧಾರಣೆ, ಟೆಲಿಮೆಡಿಸಿನ್‌ನ ಹೊರಹೊಮ್ಮುವಿಕೆ, ತ್ವರಿತ ಆರೋಗ್ಯ ವಿಮೆಯ ಪ್ರವೇಶಿಸುವಿಕೆ, ಮತ್ತು  ಇ-ಹೆಲ್ತ್‌ನಂತಹ (ತೆರಿಗೆ ಪ್ರಯೋಜನಗಳು ಮತ್ತು ಪ್ರೋತ್ಸಾಹಕಗಳೊಂದಿಗೆ) ಸರ್ಕಾರಿ ಉಪಕ್ರಮಗಳು ಭಾರತದಲ್ಲಿ ಆರೋಗ್ಯಸೇವಾ ಮಾರುಕಟ್ಟೆಯ ಚಾಲಕ ಶಕ್ತಿಗಳಾಗಿವೆ.

  ಭಾರತದ ಆರೋಗ್ಯಸೇವಾ ಉದ್ಯಮದ ಹೊರನೋಟ


   2020 ರಲ್ಲಿ Indian Healthtech industry was valued at $1.9bn. ಕೇವಲ 3 ವರ್ಷಗಳಲ್ಲಿ ಅಂದರೆ 2023 ರ ವೇಳೆಗೆ, ಇದು $5 ಬಿಲಿಯನ್‌ಗೆ ಬೆಳೆಯುವ ನಿರೀಕ್ಷೆ ಇದೆ. 2012ರಲ್ಲಿ ಕೇವಲ $5 ಬಿಲಿಯನ್‌ನಿಂದ CAGR of 20.4% to reach $32 bn in 2022   ನಂತೆ ಬೆಳೆಯುತ್ತಿರುವ ಡಯಾಗ್ನೋಸ್ಟಿಕ್ ಮಾರುಕಟ್ಟೆಯಲ್ಲಿ ನಾವು ಇದೇ ರೀತಿಯ ಪ್ರವೃತ್ತಿಗಳನ್ನು ನೋಡಬಹುದು. ಟೆಲಿಮೆಡಿಸಿನ್ $5.4 Bn by 2025 ತಲುಪುವ ನಿರೀಕ್ಷೆ ಇದೆ ಮತ್ತು ನ್ಯಾಷನಲ್ ಡಿಜಿಟಲ್ ಹೆಲ್ತ್ ಬ್ಲೂಪ್ರಿಂಟ್ $200bn in the next 10 years  ನಲ್ಲಿ ಹೆಚ್ಚಿನ ಆರ್ಥಿಕ ಮೌಲ್ಯವನ್ನು ತೆರೆಯುವ ನಿರೀಕ್ಷೆ ಇದೆ.


  ಈ ಸಂಖ್ಯೆಗಳು ಅಷ್ಟೊಂದು ಗಣನೀಯವಲ್ಲದೇ ಇದ್ದರೂ, ಭಾರತದಲ್ಲಿನ ಆರೋಗ್ಯಸೇವಾ ಉದ್ಯಮವು ಒಟ್ಟಾರೆಯಾಗಿ projected to reach $372 bn by 2022. ಭಾರತವು ಈಗಾಗಲೇ ವಿಶ್ವದ ಔಷಧಾಲಯವಾಗಿದೆ. ಸರ್ಕಾರದ 2022-23ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ Rs.86,200 crores for the Ministry of Health and Family Welfare  ಹಂಚಿಕೆಯು ಮೆಡಿಕಲ್ ವ್ಯಾಲ್ಯೂ ಟ್ರಾವೆಲ್ (MVT) ನಲ್ಲಿನ ನಿರೀಕ್ಷಿತ ಬೆಳವಣಿಗೆಗೆ ಭಾರತದ ಆರೋಗ್ಯಸೇವೆ ಮೂಲಸೌಕರ್ಯವನ್ನು ಸಿದ್ಧಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.


  ಪ್ರಸ್ತುತ, 2020-21ರ ಮೆಡಿಕಲ್ ಟೂರಿಸಮ್ ಇಂಡೆಕ್ಸ್‌ನಲ್ಲಿ (MTI)  India is ranked 10th . ಇದಕ್ಕೆ ಕಾರಣ ಮೂಲಸೌಕರ್ಯ ಮತ್ತು ಮಾನವ ಹೂಡಿಕೆಯ ಸಂಯೋಜನೆ. ಭಾರತವು ಇಂಗ್ಲಿಷ್‌ನಲ್ಲಿನ ನಿರರ್ಗಳತೆ ಮತ್ತು ಉತ್ತಮ ಗುಣಮಟ್ಟದ ವೈದ್ಯಕೀಯ ತರಬೇತಿಯೊಂದಿಗೆ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರು ಮತ್ತು ಅರೆವೈದ್ಯರನ್ನು ನೀಡುತ್ತದೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಹೊಂದಿದ್ದು, 1mn skilled healthcare providers by 2022 ಹೊಂದುವ ನಿರೀಕ್ಷೆಯಿದೆ. ಮತ್ತು ಈಗ, National Accreditation Board for Hospitals & Healthcare Providers  (NABH) ಅಡಿಯಲ್ಲಿ, ಸುಮಾರು 1400 hospitals ಜಾಗತಿಕ ಮಾನದಂಡಗಳಿಗೆ ಸಮಾನವಾಗಿ ಅಥವಾ ಅದಕ್ಕೂ ಮೀರಿದ ಆರೈಕೆಯನ್ನು ಒದಗಿಸುತ್ತವೆ ಎಂದು ಗುರುತಿಸಲಾಗಿದೆ.


  ಭಾರತ ಸರ್ಕಾರವು ವೈದ್ಯಕೀಯ ಮತ್ತು ಸ್ವಾಸ್ಥ್ಯ ಪ್ರವಾಸೋದ್ಯಮದ ವಿಶ್ವದ ಪ್ರಮುಖ ಕೇಂದ್ರವನ್ನಾಗಿ ಭಾರತವನ್ನು ಸಂಯೋಜಿಸಲು ಬದ್ಧವಾಗಿದ್ದು, ‘ಅತಿಥಿ ದೇವೋಭವ’ದೊಂದಿಗೆ ‘ಸೇವೆ’ಯ ನಿರ್ದೇಶನದೊಂದಿಗೆ  Heal in India ಕ್ಕೆ ಜಗತ್ತನ್ನು ಆಹ್ವಾನಿಸುತ್ತಿದೆ. ಈ ಉಪಕ್ರಮಗಳಲ್ಲಿ, MVT ಪೋರ್ಟಲ್ ಕೂಡಾ ಒಂದು ಹಂತವಾಗಿದ್ದು, ಇದು ಭಾರತಕ್ಕೆ ಬರುವ ವೈದ್ಯಕೀಯ ಪ್ರವಾಸಿಗರಿಗೆ ತಮ್ಮ ಪ್ರಯಾಣದ ಆರಂಭದಿಂದ ಅಂತ್ಯದವರೆಗೆ ಅವಶ್ಯಕತೆಗಳನ್ನು ಪೂರೈಸುವ ಮೂಲಕ ಅಸೀಮ ಅನುಭವವನ್ನು ಸೃಷ್ಟಿಸುವ ಗುರಿ ಹೊಂದಿದೆ. ರೋಗಿಗಳು ಮತ್ತು ಆರೈಕೆದಾರರು, ಕಾರ್ಯವಿಧಾನಗಳು, ನಗರಗಳು, ಆಸ್ಪತ್ರೆಗಳು ಅಲ್ಲದೇ ನಿರ್ದಿಷ್ಟ ವೈದ್ಯರ ಆಧಾರದ ಮೇಲೂ ಸೇವಾದಾತರನ್ನು ಹುಡುಕಲು ಸಾಧ್ಯವಾಗುತ್ತದೆ. ಕೇವಲ ಅಲೋಪಥಿ ಮತ್ತು ಸಂಯೋಜಿತ ಔಷಧಿಗೆ ಮಾತ್ರವಲ್ಲದೇ ಭಾರತದ ಸಾಂಪ್ರದಾಯಿಕ ಔಷಧಿ ಪದ್ಧತಿಗಳಿಗೂ ಅವರು ಆನ್‌ಲೈನ್‌ನಲ್ಲಿ ಪಾರದರ್ಶಕ ಬೆಲೆ ಪ್ಯಾಕೇಜ್‌ಗಳನ್ನು ಪಡೆಯಬಹುದಾಗಿದೆ. ಅವರು ತಮ್ಮ ಪ್ರಯಾಣ ವ್ಯವಸ್ಥೆಯನ್ನು  NABH ಪಟ್ಟಿಗೆ ಸೇರಿದ MVT ಫೆಸಿಲಿಟೇಟರ್‌ಗಳ ಮೂಲಕ ಮಾಡಿಕೊಳ್ಳಬಹುದು.


  ವಿದೇಶಿಯರು ಕೆಳಗಿನ ಮೂರು ವಿಭಾಗಗಳ ಅಡಿಯಲ್ಲಿ ವೈದ್ಯಕೀಯ ಮೌಲ್ಯ ಪ್ರಯಾಣವನ್ನು ಕೈಗೊಳ್ಳಬಹುದಾಗಿದೆ:


  • ವೈದಕೀಯ ಚಿಕಿತ್ಸೆ: ಶಸ್ತ್ರಚಿಕಿತ್ಸೆಗಳು, ಅಂಗಾಗ ಕಸಿ, ಕೀಲುಗಳ ಬದಲಾವಣೆ, ಕ್ಯಾನ್ಸರ್ ಮತ್ತು ದೀರ್ಘಕಾಲಿಕ ಚಿಕಿತ್ಸೆಗಳು ಇತ್ಯಾದಿಗಳನ್ನು ಒಳಗೊಂಡ ಗುಣಪಡಿಸುವ ಉದ್ದೇಶಗಳಿಗಾಗಿ ಚಿಕಿತ್ಸೆ

  • ಸ್ವಾಸ್ಥ್ಯ ಮತ್ತು ನವಚೈತನ್ಯ: ಕಾಸ್ಮೆಟಿಕ್ ಸರ್ಜರಿ, ಒತ್ತಡ ಶಮನ, ಸ್ಪಾ ಇತ್ಯಾದಿಗಳಂತಹ ಸೌಂದರ್ಯ ಕಾರಣಗಳಿಗಾಗಿ ನವಚೈತನ್ಯ ಪಡೆಯುವತ್ತ ಕೇಂದ್ರೀಕರಿಸಿದ ಕೊಡುಗೆಗಳು

  • ಸಾಂಪ್ರದಾಯಿಕ ಔಷಧಿ: ಆಯುಷ್ (ಆಯುರ್ವೇದ, ಯೋಗ ಮತ್ತು ನ್ಯಾಚುರೋಪತಿ,ಯುವಾನಿ, ಸಿದ್ಧ ಹಾಗೂ ಹೋಮಿಯೋಪತಿ) ಇಲಾಖೆಯ ಅಡಿಯಲ್ಲಿ ಒಳಗೊಂಡಿರುವ ಭಾರತದ ಸಾಂಪ್ರದಾಯಿಕ ಔಷಧಿ ಪದ್ಧತಿ.  ಭಾರತಕ್ಕೆ ವೈದ್ಯಕೀಯ ಮೌಲ್ಯದ ಪ್ರಯಾಣಕ್ಕೆ ಪ್ರೇರಣೆ ಏನು?


  ಪ್ರಾರಂಭಿಕರಿಗೆ, ಹಣಕಾಸಿನ ಉಳಿತಾಯಗಳು ಅತ್ಯಧಿಕವಾಗಿದೆ. ~65-90% as compared to the US ಉಳಿತಾಯದೊಂದಿಗೆ ಕಡಿಮೆ ವೆಚ್ಚದಲ್ಲಿ ವಿಶ್ವ ದರ್ಜೆಯ ಆರೈಕೆ ಮತ್ತು ಚಿಕಿತ್ಸೆಯನ್ನು ನೀಡುತ್ತಿದೆ. ಪಾಶ್ಚಿಮಾತ್ಯರು ತಮ್ಮ ದೇಶದಲ್ಲಿ ಹೆಚ್ಚು ಸಮಯ ಕಾಯಬೇಕಾದ ಅಥವಾ ಹೆಚ್ಚು ವೆಚ್ಚ ಭರಿಸಬೇಕಾಗುವ ಚಿಕಿತ್ಸಾ ಕಾರ್ಯವಿಧಾನಗಳನ್ನು ಭಾರತದಲ್ಲಿ ಉತ್ತಮ ಗುಣಮಟ್ಟ ಮತ್ತು ಕಡಿಮೆ ವೆಚ್ಚದ ಸಂಯೋಜನೆಯಲ್ಲಿ ಪಡೆಯಬಹುದಾದ್ದರಿಂದ ಅವರಿಗೆ ಇದು ಆಕರ್ಷಕ ತಾಣವೆನಿಸಿದೆ.


  ರೋಬೋಟಿಕ್ ಶಸ್ತ್ರಚಿಕಿತ್ಸೆಗಳು, ವಿಕಿರಣ, ಸೈಬರ್‌ನೈಫ್ ಸ್ಟೀರಿಯೋಸ್ಟಾಟಿಕ್ ಆಯ್ಕೆಗಳು, IMRT/IGRT, ಕಸಿ ಬೆಂಬಲ ವ್ಯವಸ್ಥೆಗಳು ಇತ್ಯಾದಿ ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಭಾರತೀಯ ಆಸ್ಪತ್ರೆಗಳು ಅತೀ ಹೆಚ್ಚು ಹೂಡಿಕೆ ಮಾಡಿವೆ. ಅಲ್ಲದೇ  ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI), ವರ್ಚುವಲ್ ರಿಯಾಲಿಟಿ (VR) ಮತ್ತು ಸಮಗ್ರ ಔಷಧ ಮುಂತಾದ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ರೋಗಿಗಳಿಗೆ ಇತ್ತೀಚಿನ ಮತ್ತು ಅತ್ಯಾಧುನಿಕ ಚಿಕಿತ್ಸಾ ಆಯ್ಕೆಗಳನ್ನು ನೀಡುವ ಕೆಲವು ಪ್ರಸಿದ್ಧ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಸೇವೆಗಳಿಗೆ ಭಾರತವು ನೆಲೆಯಾಗಿದೆ.


  ಭಾರತವು ವೈದ್ಯಕೀಯ ಚಿಕಿತ್ಸೆಗೆ ಆಕರ್ಷಕ ತಾಣವಾಗಲು ಇನ್ನೊಂದು ಕಾರಣವೆಂದರೆ, ಇಲ್ಲಿ ಲಭ್ಯವಿರುವ ವಿವಿಧ ಆಯ್ಕೆಗಳು. ಭಾರತವು ಆಯುರ್ವೇದ, ಯೋಗ ಮತ್ತು ನ್ಯಾಚುರೋಪತಿ, ಯುನಾನಿ, ಸಿದ್ಧ ಹಾಗೂ ಹೋಮಿಯೋಪತಿಯ ಕೇಂದ್ರಬಿಂದುವಾಗಿದ್ದು, ಇವೆಲ್ಲವನ್ನೂ ಈಗ Ministry of AYUSH ಅಧೀನದಲ್ಲಿ ತರಲಾಗಿದೆ ಮತ್ತು ಇದು ನಿರಂತರವಾಗಿ ರೋಗಿಗಳಿಗೆ ಅನುಕೂಲಕರ ಆರೋಗ್ಯಸೇವೆ ನೀಡುವಂತೆ ನಿಯಂತ್ರಿಸಲಾಗಿದೆ. ಅಲ್ಲದೇ ಸಮಗ್ರ ಚಿಕಿತ್ಸೆಗಳನ್ನು ನೀಡುವ ಯೋಗ ಆಶ್ರಮಗಳು, ಸ್ಪಾಗಳು ಮತ್ತು ಸ್ವಾಸ್ಥ್ಯ ಕೇಂದ್ರಗಳು ಕೂಡಾ ಸ್ವಾಸ್ಥ್ಯ ಮನೋಭಾವದ ವೈದ್ಯಕೀಯ ಪ್ರವಾಸಿಗರನ್ನು ಆಕರ್ಷಿಸುತ್ತದೆ.


  ರೋಗಿಗಳು ಮತ್ತು ಅವರ ಆರೈಕೆದಾರರನ್ನು ಭಾರತಕ್ಕೆ ಕರೆತರುವ ಅತ್ಯಂತ ನಿರ್ಣಾಯಕ ಅಂಶವೆಂದರೆ, ಗುಣಮಟ್ಟದ ಭರವಸೆ. ಭಾರತೀಯ ಔಷಧಿ ಪದ್ಧತಿಯನ್ನು ಒಳಗೊಂಡ ವೈದ್ಯಕೀಯ ಪ್ರವಾಸೋದ್ಯಮವನ್ನು ಉತ್ತೇಜಿಸುವ ಹಾಗೂ ವರ್ಧಿಸುವ ಸಲುವಾಗಿ ಅಂಕಿತಗೊಂಡ ಮತ್ತು ಸಮಗ್ರ ಸಾಂಸ್ಥಿಕ ಚೌಕಟ್ಟನ್ನು ಒದಗಿಸಲು, ಪ್ರವಾಸೋದ್ಯಮ ಸಚಿವಾಲಯದ ಅಧ್ಯಕ್ಷತೆಯಲ್ಲಿ ಭಾರತದ ರಾಷ್ಟ್ರೀಯ ವೈದ್ಯಕೀಯ ಮತ್ತು ಸ್ವಾಸ್ಥ್ಯ ಪ್ರವಾಸೋದ್ಯಮ ಮಂಡಳಿಯನ್ನು ರಚಿಸಲಾಗಿದೆ. ಈ ಮಂಡಳಿಯು ಆಯುಷ್ ಸಚಿವಾಲಯ ಮತ್ತು NABHನ ಪ್ರತಿನಿಧ್ಯಗಳೊಂದಿಗೆ ವೈದ್ಯಕೀಯ ಪ್ರವಾಸೋದ್ಯಮವನ್ನು ನಿಯಂತ್ರಿಸುವ ಮತ್ತು ಉತ್ತೇಜಿಸುವ ಆಶ್ರಯದಾತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.

  ಭಾರತದ ಗುಣಮಟ್ಟದ ಬೆಳವಣಿಗೆ


  ನಿರ್ದಿಷ್ಟವಾಗಿ ರೋಗಿಯ ಸುರಕ್ಷತೆಯ ಸನ್ನಿವೇಶದಲ್ಲಿ ಗುಣಮಟ್ಟದ ಚಟುವಟಿಕೆಗಳನ್ನು ನಿಗಾ ವಹಿಸಬೇಕಾದ ಅಗತ್ಯವನ್ನು ಭಾರತ ಗುರುತಿಸಿದೆ. ಕಳೆದ 25 ವರ್ಷಗಳಿಂದ ನಮ್ಮ ಸರಕುಗಳ ಗುಣಮಟ್ಟಗಳ ಮಾನದಂಡವನ್ನು ಖಾತ್ರಿಗೊಳಿಸುವ ಮತ್ತು ಅನೇಕ ಕ್ಷೇತ್ರಗಳಲ್ಲಿ ಉತ್ಪನ್ನಗಳನ್ನು ಪ್ರಮಾಣೀಕರಿಸುವ ಮೂಲಕ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ (QCI) ಭಾರತದಲ್ಲಿ ಗುಣಮಟ್ಟದ ಬೆಳವಣಿಗೆಗೆ ರೂಪ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದೆ. ಭಾರತದ ಸಂಸತ್ತಿನಲ್ಲಿ ಎತ್ತಿದ ಪ್ರಶ್ನೆಯ ಕಾರಣದಿಂದ 2005 ರ ಏಪ್ರಿಲ್‌ನಲ್ಲಿ QCI ನ ಆಶ್ರಯದ ಅಡಿಯಲ್ಲಿ NABH ಅನ್ನು ರೂಪಿಸಲಾಯಿತು.


  ಆರೋಗ್ಯಸೇವೆಗಳಲ್ಲಿ ಗುಣಮಟ್ಟ ಮತ್ತು ಸುರಕ್ಷತೆಯ ಜಾಗತಿಕ ಗುಣಮಟ್ಟ ಮಾನದಂಡವನ್ನು ಖಾತ್ರಿಗೊಳಿಸಲು ವ್ಯವಸ್ಥೆಯೊಂದನ್ನು ಅಭಿವೃದ್ಧಿಪಡಿಸುವ ದೃಷ್ಟಿಯೊಂದಿಗೆ NABH ತನ್ನ ಪಯಣವನ್ನು ಆರಂಭಿಸಿತು. 2006ರಲ್ಲಿ ಭಾರತದಲ್ಲಿ ಆರೋಗ್ಯಸೇವಾ ಸಂಸ್ಥೆಗಳಿಗೆ ಮಾನ್ಯತೆ ನೀಡಲು NABH ಆರಂಭಿಸಿತು ಮತ್ತು 2010ನೇ ಇಸವಿಯಲ್ಲಿ ಅಂತಾರಾಷ್ಟ್ರೀಯ ಮಾನ್ಯತೆಗೆ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿತು. ನರ್ಸಿಂಗ್ ಎಕ್ಸಲೆನ್ಸ್ ಪ್ರೋಗ್ರಾಂಗಳು, ಲ್ಯಾಬೊರೇಟರಿ ಸರ್ಟಿಫಿಕೇಶನ್ ಪ್ರೋಗ್ರಾಂಗಳಂತಹ ಇನ್ನಿತರ ಅನೇಕ ಗುಣಮಟ್ಟ ಉತ್ತೇಜನ ಉಪಕ್ರಮಗಳನ್ನು ಕೂಡಾ ಇದು ಕೈಗೊಳ್ಳುತ್ತದೆ. ಶಿಕ್ಷಣ ಮತ್ತು ತರಬೇತಿ ಉಪಕ್ರಮಗಳು ಹಾಗೂ ವಿವಿಧ ಆರೋಗ್ಯಸೇವಾ ಗುಣಮಟ್ಟ ಕೋರ್ಸ್‌ಗಳು ಮತ್ತು ಕಾರ್ಯಾಗಾರಗಳ ಮಾನ್ಯತೆ ಮತ್ತು ಅನುಮೋದನೆಯನ್ನೂ ಇದು ಕೈಗೊಳ್ಳುತ್ತದೆ.


  NABH ಮಾನ್ಯತೆಗಳು ಸಂಪೂರ್ಣ ಆರೋಗ್ಯಸೇವಾ ಶ್ರೇಣಿಯನ್ನು ಒಳಗೊಂಡಿವೆ: ಆಸ್ಪತ್ರೆಗಳು, ಸಣ್ಣ ಆರೋಗ್ಯಸೇವಾ ಸಂಸ್ಥೆಗಳು, ರಕ್ತನಿಧಿಗಳು ಮತ್ತು ರಕ್ತ ಸಂಗ್ರಹಣಾ ಘಟಕಗಳು, ಮೆಡಿಕಲ್ ಇಮೇಜಿಂಗ್ ಸೇವೆಗಳು, ದಂತ ವೈದ್ಯಕೀಯ ಸೇವಾದಾತರು, ಅಲೋಪತಿಕ್ ಕ್ಲಿನಿಕ್‌ಗಳು, ಆಯುಷ್ ಆಸ್ಪತ್ರೆಗಳು ಮತ್ತು ಪಂಚಕರ್ಮ ಕ್ಲಿನಿಕ್‌ಗಳು, ಕಣ್ಣಿನ ಆರೈಕೆ ಸಂಸ್ಥೆಗಳು, ಮೌಖಿಕ ಪರ್ಯಾಯ ಥೆರಪಿ ಕೇಂದ್ರಗಳು, ಪ್ರಾಥಮಿಕ ಆರೋಗ್ಯಸೇವಾ ಕೇಂದ್ರಗಳು, ಸ್ವಾಸ್ಥ್ಯ ಕೇಂದ್ರಗಳು, ವ್ಯಸನಿಗಳ ಸಮಗ್ರ ಪುನರ್ವಸತಿ ಕೇಂದ್ರಗಳು ಹಾಗೂ ವೈದ್ಯಕೀಯ ಪ್ರಯೋಗದ ನೈತಿಕ ಸಮಿತಿಗಳು.


  ಈ ಮಾನ್ಯತೆಗಳು ಅನೇಕ ಪ್ರಮಾಣೀಕರಣ, ವೈದ್ಯಕೀಯ ಸೇವಾದಾತರು ಮಾನ್ಯತೆಯನ್ನು ಸಾಧಿಸುವಲ್ಲಿ ಬೇಕಾಗುವ ಶಿಕ್ಷಣ ಮತ್ತು ತರಬೇತಿ ಕಾರ್ಯಕ್ರಮಗಳಿಂದ ಬೆಂಬಲಿತವಾಗಿವೆ. ಬದ್ಧವಾಗಿರಬೇಕಾದ ಮಾನದಂಡಗಳನ್ನು ನಿರ್ಮಿಸುವುದು, ಅನೇಕ ಸಂಪನ್ಮೂಲಗಳನ್ನು ಒದಗಿಸುವ ಮತ್ತು ಈ ಸೇವಾದಾತರಿಗೆ ತಜ್ಞರನ್ನು ಲಭ್ಯಗೊಳಿಸುವುದರ ಮಧ್ಯೆಯೇ ಗುಣಮಟ್ಟ, ಪಾರದರ್ಶಕತೆ ಮತ್ತು ಸಮಗ್ರತೆಯನ್ನು ಭಾರತದಲ್ಲಿ ಸೇವಾ ಆರ್ಥಿಕತೆಯ ಕೇಂದ್ರವಾಗಿಸುವ ಒಂದು ಪರಿಸರ ವ್ಯವಸ್ಥೆಯನ್ನು NABH ರಚಿಸಿದೆ.


  QCI ಮತ್ತು NABH ನಂತಹ ಅದರ ಅಂಗ ಮಂಡಳಿಗಳಿಂದ ಸಕ್ರಿಯಗೊಂಡ ಭಾರತದ ಗುಣಮಟ್ಟದ ಬೆಳವಣಿಗೆಯು ಭಾರತದ ವೈದ್ಯಕೀಯ ಪರಿಸರ ವ್ಯವಸ್ಥೆಯ ಗರಿಷ್ಠ ಮಟ್ಟಿಗೆ ಹೆಚ್ಚತ್ತಲೇ ಬಂದಿದೆ. ಈ "ಗುಣವತ್ತಾ ಸೇ ಆತ್ಮ ನಿರ್ಭರ್" ನಮ್ಮದೇ ಮಿತಿಗಳಿಂದಾಚೆಗೆ ನಮ್ಮನ್ನು ಕೊಂಡೊಯ್ದಿದೆ. ದುಬಾರಿ ವೈದ್ಯಕೀಯ ಕಾರ್ಯವಿಧಾನಗಳಿಗಾಗಿ ಭಾರತೀಯರು ವಿದೇಶಕ್ಕೆ ಪ್ರಯಾಣಿಸಬೇಕಾಗಿಲ್ಲ ಕಾಯ ಹೋಯಿತು. ಇದೀಗ ಗುಣಮಟ್ಟದ ಭಾರತೀಯ ಸಂಸ್ಥೆಗಳನ್ನು, ಸೇವಾದಾತರನ್ನು ಹಾಗೂ ವೈದ್ಯರನ್ನು ಬಯಸುವ ಸಾವಿರಾರು ರೋಗಿಗಳಿಗೆ ಮತ್ತು ಅವರ ಆರೈಕೆದಾರರಿಗೆ ಭಾರತವು ಆತಿಥ್ಯ ನೀಡುತ್ತಿದೆ, ಆರೋಗ್ಯವಂತ ನಾಳೆಯತ್ತ ಹೆಜ್ಜೆ ಹಾಕುವಂತೆ ಮಾಡುತ್ತಿದೆ.


  QCI ಮತ್ತು ಭಾರತದ ಗುಣವತ್ತಾ ಸೇ ಆತ್ಮ ನಿರ್ಭರ್ ಉಪಕ್ರಮ ಹಾಗೂ ನಮ್ಮ ಜೀವನದ ಮೇಲೆ ಪರಿಣಾಮ ಬೀರಿದ ಅನೇಕ ವಿಧಾನಗಳ ಕುರಿತು ಇನ್ನಷ್ಟು ತಿಳಿಯಲು ಭೇಟಿ ನೀಡಿ.

  Published by:Rahul TS
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು