• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Mcdonalds: 1500 ಜನರಿಗೆ ಕೆಲಸ ಕೊಡ್ತಾರಂತೆ ಮೆಕ್‌ಡೊನಾಲ್ಡ್ ಇಂಡಿಯಾ, ಇದಕ್ಕಿಂತ ಒಳ್ಳೆ ಸುದ್ದಿ ಮತ್ತೊಂದಿಲ್ಲ!

Mcdonalds: 1500 ಜನರಿಗೆ ಕೆಲಸ ಕೊಡ್ತಾರಂತೆ ಮೆಕ್‌ಡೊನಾಲ್ಡ್ ಇಂಡಿಯಾ, ಇದಕ್ಕಿಂತ ಒಳ್ಳೆ ಸುದ್ದಿ ಮತ್ತೊಂದಿಲ್ಲ!

ಮೆಕ್‌ಡೊನಾಲ್ಡ್

ಮೆಕ್‌ಡೊನಾಲ್ಡ್

ಕಳೆದ ಕೆಲವು ವರ್ಷಗಳಿಂದ ಬ್ರ್ಯಾಂಡ್ ಕೆಲವೊಂದು ಗೌರವಾನ್ವಿತ ಲಾಭದಾಯಕವಲ್ಲದ ಸಂಸ್ಥೆಗಳಾದ ಮ್ಯಾಜಿಕ್ ಬಸ್, ಟೆಕ್ ಮಹೀಂದ್ರಾ ಫೌಂಡೇಶನ್, ಕ್ವೆಸ್ ಗ್ರೂಪ್ ಫೌಂಡೇಶನ್, ಹಾಗೂ ತಾರಕಿಯೊಂದಿಗೆ ಪಾಲುದಾರಿಕೆಯನ್ನು ಹೊಂದಿದ್ದು, 500 ಉದ್ಯೋಗಿಗಳನ್ನು ನೇಮಿಸಿದೆ.

  • Share this:

ಮೆಕ್‌ಡೊನಾಲ್ಡ್ ಇಂಡಿಯಾ  (McDonalds) ದ ಉತ್ತರ ಮತ್ತು ಪೂರ್ವ ತನ್ನ ಕಾರ್ಯಪಡೆಯ 50% ದಷ್ಟನ್ನು ಹೆಚ್ಚಿಸುವ ನಿಟ್ಟಿನಲ್ಲಿ 1500 ಉದ್ಯೋಗಿಗಳನ್ನು (Employee) ಸರಕಾರೇತರ ಸಂಸ್ಥೆಗಳ ಮೂಲಕ 2025 ರಲ್ಲಿ ನೇಮಕಾತಿ ಮಾಡುವ ಯೋಜನೆ ಹಮ್ಮಿಕೊಂಡಿದೆ. ಈ ಗುರಿಯನ್ನು ಈಡೇರಿಸುವುದಕ್ಕಾಗಿ ಮೆಕ್‌ಡೊನಾಲ್ಡ್ ಇಂಡಿಯಾದ ಉತ್ತರ ಹಾಗೂ ಪೂರ್ವ ಯುವಕರಿಗಾಗಿ ಕಮ್ಯುನಿಟಿ ಕ್ಯಾಂಪೇನ್ (Community Campagin) ಅನ್ನು ಆರಂಭಿಸಿದೆ.ಕಡಿಮೆ ಸೌಲಭ್ಯಗಳಿರುವ ಸ್ಥಳೀಯ ಸಮುದಾಯಗಳಿಗೆ ಉದ್ಯೋಗ ಅವಕಾಶಗಳನ್ನು ಒದಗಿಸುವ ಮೂಲಕ ಭಾರತದ (India) ಬೆಳವಣಿಗೆಯನ್ನು ಅತ್ಯುನ್ನತಗೊಳಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.


ಉದ್ಯೋಗ ದೊರಕಿಸಿಕೊಡಲಿರುವ ಮೆಕ್‌ಡೊನಾಲ್ಡ್ ಇಂಡಿಯಾ


ಇಂತಹ ಪ್ರದೇಶಗಳಲ್ಲಿರುವ ಯುವಕರಿಗೆ ಶಿಕ್ಷಣ ಹಾಗೂ ಇನ್ನಿತರ ಮೂಲ ಸೌಕರ್ಯಗಳು ಇರುವುದಿಲ್ಲ. ಉತ್ತಮ ಉದ್ಯೋಗವಕಾಶಗಳು ಅವರಿಗೆ ದೊರೆಯುವುದಿಲ್ಲ ಹಾಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.


ಕಳೆದ ಕೆಲವು ವರ್ಷಗಳಿಂದ ಬ್ರ್ಯಾಂಡ್ ಕೆಲವೊಂದು ಗೌರವಾನ್ವಿತ ಲಾಭದಾಯಕವಲ್ಲದ ಸಂಸ್ಥೆಗಳಾದ ಮ್ಯಾಜಿಕ್ ಬಸ್, ಟೆಕ್ ಮಹೀಂದ್ರಾ ಫೌಂಡೇಶನ್, ಕ್ವೆಸ್ ಗ್ರೂಪ್ ಫೌಂಡೇಶನ್, ಹಾಗೂ ತಾರಕಿಯೊಂದಿಗೆ ಪಾಲುದಾರಿಕೆಯನ್ನು ಹೊಂದಿದ್ದು, 500 ಉದ್ಯೋಗಿಗಳನ್ನು ನೇಮಿಸಿದೆ.


ಮೆಕ್‌ಡೊನಾಲ್ಡ್ ಫಾರ್ ಯುತ್ ಯೋಜನೆ


ಮೆಕ್‌ಡೊನಾಲ್ಡ್ ಫಾರ್ ಯುತ್ ಯೋಜನೆಯು ಪ್ರಥಮ ಬಾರಿಗೆ ಉದ್ಯೋಗ ಗಿಟ್ಟಿಸಿಕೊಂಡ ಹಲವಾರು ಜನರ ಬಾಳಲ್ಲಿ ಆಶಾಕಿರಣವನ್ನು ಮೂಡಿಸಿರುವುದಲ್ಲದೆ ಹೆಚ್ಚಿನವರ ಜೀವನ ನಿರ್ವಹಣೆಗೆ ಸಹಕಾರಿಯಾಗಿರುವ ಆಧಾರಸ್ತಂಭ ಎಂದೆನಿಸಿದೆ.


ಉದ್ಯೋಗಿಗಳಿಗೆ ವೇತನವನ್ನು ನೀಡುವುದು ಮಾತ್ರವಲ್ಲದೆ ಮೆಕ್‌ಡೊನಾಲ್ಡ್ ಗ್ಲೋಬಲ್ ಟ್ರೈನಿಂಗ್ ಸುತ್ತೋಲೆಯ ಮೂಲಕ ಉದ್ಯೋಗಿಗಳಿಗೆ ಅಗತ್ಯ ಕೌಶಲ್ಯ ಹಾಗೂ ತರಬೇತಿ ಇದರೊಂದಿಗೆ ವೃತ್ತಿ ಜ್ಞಾನವನ್ನು ಒದಗಿಸುತ್ತದೆ. ಉದ್ಯೋಗಿಗಳು ವೃತ್ತಿ ಸಂಬಂಧಿತ ಜ್ಞಾನವನ್ನು ಹೊಂದುವುದು ಅವರ ಮುಂದಿನ ವೃತ್ತಿಬದುಕಿಗೆ ಸಹಕಾರಿಯಾಗಿದೆ.


ಇದನ್ನೂ ಓದಿ: ಈ ಕೃಷಿ ಮಾಡಿದ್ರೆ ನೀವ್​ ಮಾತ್ರ ಅಲ್ಲ ನಿಮ್ಮ ಮಕ್ಕಳೂ ಕೂಡ ಕೋಟ್ಯಧಿಪತಿಗಳಾಗ್ತಾರೆ, ನಷ್ಟದ ಮಾತು ಇಲ್ಲಿಲ್ಲ!


ನೌಕರರಿಗೆ ನೈರ್ಮಲ್ಯ ಹಾಗೂ ಸುರಕ್ಷತೆಯ ಪಾಠ


ಫುಡ್ ಏಂಡ್ ಸೇಫ್ಟಿ ಹಾಗೂ ನೈರ್ಮಲ್ಯ ಅಭ್ಯಾಸಗಳು, ಸುರಕ್ಷಿತ ಆಹಾರ ನಿರ್ವಹಣೆ, ಕಸ್ಟಮರ್ ಸರ್ವೀಸ್, ಕಮ್ಯುನಿಕೇಶನ್, ಟೀಮ್‌ವರ್ಕ್ ಹಾಗೂ ಇನ್ನೊ ಮೊದಲಾದ ಕ್ಷೇತ್ರಗಳಲ್ಲಿ ಉದ್ಯೋಗಿಗಳ ಜ್ಞಾನವನ್ನು ಕೌಶಲ್ಯವನ್ನು ವೃದ್ಧಿಸುತ್ತದೆ.


ಮೆಕ್‌ಡೊನಾಲ್ಡ್ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ರಾಜೀವ್ ರಂಜನ್ ಸಂಸ್ಥೆಯ ಯೋಜನೆಯ ಬಗ್ಗೆ ಕೆಲವೊಂದು ವಿವರಗಳನ್ನು ನೀಡಿದ್ದು, ಮೆಕ್‌ಡೊನಾಲ್ಡ್ ಇಂಡಿಯಾ – ಉತ್ತರ ಹಾಗೂ ಪೂರ್ವ ತನ್ನ ಯೋಜನೆಯಾದ ಮೆಕ್‌ಡೊನಾಲ್ಡ್ ಫಾರ್ ಯುತ್ ಮೂಲಕ ಯುವಕರಿಗೆ ಉತ್ತಮ ಉದ್ಯೋಗವಕಾಶಗಳನ್ನು ಒದಗಿಸುವ ಇರಾದೆ ಹೊಂದಿದೆ ಎಂದು ತಿಳಿಸಿದ್ದಾರೆ.


ಅದರಲ್ಲೂ ಮೂಲ ಸೌಕರ್ಯಗಳ ಕೊರತೆಗಳಿಂದ ಬಳಲುತ್ತಿರುವ ಸ್ಥಳಗಳಲ್ಲಿರುವ ಯುವಕರನ್ನೇ ಮುಖ್ಯ ಗುರಿಯಾಗಿಸಿಕೊಂಡಿರುವ ಈ ಯೋಜನೆ ಅಂತಹವರನ್ನು ಸಬಲೀಕರಣಗೊಳಿಸುವ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಿದ್ದಾರೆ.


ಸ್ಥಳೀಯ ಸಮುದಾಯದ ಭಾಗವಾಗುವ ಪ್ರಯತ್ನ


ಇಂತಹ ಪ್ರದೇಶದಲ್ಲಿರುವ ಯುವಕರಿಗೆ ವಿದ್ಯಾಭ್ಯಾಸ ಹಾಗೂ ಉದ್ಯೋಗ ಅವಕಾಶಗಳು ಸೀಮಿತವಾಗಿರುತ್ತವೆ ಹಾಗಾಗಿ ಸೌಕರ್ಯಗಳ ಕೊರತೆ ಇರುವ ಪ್ರದೇಶಗಳನ್ನೇ ನಾವು ಯೋಜನೆಯ ಮುಖ್ಯ ಭಾಗವಾಗಿರಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.


ಹುದ್ದೆಗಳನ್ನು ಭರ್ತಿಮಾಡುವ ಉದ್ದೇಶಕ್ಕಿಂತಲೂ ಹೆಚ್ಚಾಗಿ ನಾವು ಸ್ಥಳೀಯ ಸಮುದಾಯದ ಭಾಗವಾಗಲು ಬಯಸಿದ್ದೇವೆ ಅಂತೆಯೇ ಅವರನ್ನು ನಮ್ಮ ಒಂದು ಭಾಗವನ್ನಾಗಿಸುವ ಪ್ರಯತ್ನ ಈ ಯೋಜನೆಯದ್ದಾಗಿದೆ ಎಂದು ತಿಳಿಸಿದ್ದಾರೆ.


ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಇರಾದೆ


ಪ್ರತಿಯೊಬ್ಬರಿಗೂ ಸಮಾನ ಅವಕಾಶವನ್ನೊದಗಿಸುವ ನಿಟ್ಟಿನಲ್ಲಿ ಹೆಚ್ಚಿನ ಸಂಸ್ಥೆಗಳನ್ನು ನಮ್ಮೊಂದಿಗೆ ಕೈಜೋಡಿಸಲು ನಾವು ಅಹ್ವಾನಿಸುತ್ತಿದ್ದು, ದೇಶದ ಯುಕವರನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುವ ಹಾಗೂ ಆರ್ಥಿಕ ಪ್ರಗತಿಗೆ ಅಡ್ಡಿಯಾಗಿರುವ ಕೆಲವೊಂದು ನ್ಯೂನತೆಗಳನ್ನು ತೊಡೆದುಹಾಕಲು ಇನ್ನಷ್ಟು ಸಂಘ ಸಂಸ್ಥೆಗಳು ನಮ್ಮೊಂದಿಗೆ ಕಾರ್ಯನಿರ್ವಹಿಸಬೇಕಾಗಿದೆ ಎಂದು ರಾಜೀವ್ ಅಭಿಪ್ರಾಯಿಸಿದ್ದಾರೆ.


ಮೆಕ್‌ಡೊನಾಲ್ಡ್ ಇಂಡಿಯಾ – ಉತ್ತರ ಹಾಗೂ ಪೂರ್ವ ಯುವಕರ ಅತ್ಯುನ್ನತ ಭವಿಷ್ಯಕ್ಕಾಗಿ ಧನಾತ್ಮಕ ಬದಲಾವಣೆಯನ್ನುಂಟು ಮಾಡುವ ಪ್ರಗತಿಯತ್ತ ಹೆಜ್ಜೆ ಹಾಕುವ ನಿಟ್ಟಿನಲ್ಲಿ ಮೆಕ್‌ಡೊನಾಲ್ಡ್ ಫಾರ್ ಯುತ್ ಯೋಜನೆಯನ್ನು ಕಾರ್ಯಗತಗೊಳಿಸಿದೆ.

Published by:ವಾಸುದೇವ್ ಎಂ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು