• Home
  • »
  • News
  • »
  • business
  • »
  • Organic farming: ಸಾವಯವ ತರಕಾರಿ ಬೆಳೆದು 36 ಲಕ್ಷ ರೂಪಾಯಿ ಲಾಭ ಪಡೆದ ಎಂಬಿಎ ಪದವೀಧರ!

Organic farming: ಸಾವಯವ ತರಕಾರಿ ಬೆಳೆದು 36 ಲಕ್ಷ ರೂಪಾಯಿ ಲಾಭ ಪಡೆದ ಎಂಬಿಎ ಪದವೀಧರ!

ಫಿಲಿಪ್ ಮ್ಯಾಥ್ಯೂ ಅವರು ಪಾಲಕ್ಕಾಡ್ ಮತ್ತು ಊಟಿಯಲ್ಲಿ 34 ಎಕರೆ ಗುತ್ತಿಗೆ ಆಸ್ತಿಯಲ್ಲಿ ಎಲ್ಲಾ ರೀತಿಯ ತರಕಾರಿಗಳನ್ನು ಬೆಳೆಯಲು ಮತ್ತು ಹಣ್ಣಿನ ಪ್ರಭೇದಗಳನ್ನು ಆಯ್ಕೆ ಮಾಡಲು ಕೃಷಿ ನಡೆಸುತ್ತಿದ್ದಾರೆ.

ಫಿಲಿಪ್ ಮ್ಯಾಥ್ಯೂ ಅವರು ಪಾಲಕ್ಕಾಡ್ ಮತ್ತು ಊಟಿಯಲ್ಲಿ 34 ಎಕರೆ ಗುತ್ತಿಗೆ ಆಸ್ತಿಯಲ್ಲಿ ಎಲ್ಲಾ ರೀತಿಯ ತರಕಾರಿಗಳನ್ನು ಬೆಳೆಯಲು ಮತ್ತು ಹಣ್ಣಿನ ಪ್ರಭೇದಗಳನ್ನು ಆಯ್ಕೆ ಮಾಡಲು ಕೃಷಿ ನಡೆಸುತ್ತಿದ್ದಾರೆ.

ಎಂಬಿಎ ಓದುತ್ತಿರುವಾಗ ಮತ್ತು ಕಾರ್ಪೊರೇಟ್ (Corporate) ಕ್ಷೇತ್ರದಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡುವಾಗ, ಅವರು ಕೃಷಿಯನ್ನು ತಮ್ಮ ಜೀವನದ ವೃತ್ತಿಯಾಗಿ ಮಾಡಿಕೊಳ್ಳಬೇಕೆಂದು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದರು ಅಂತ ಹೇಳಲಾಗಿದೆ.

  • Share this:

ಕೆಲವೊಮ್ಮೆ ನಾವು ಓದುತ್ತಿರುವುದೇ ಬೇರೆ ಆಗಿರುತ್ತದೆ ಮತ್ತು ನಮಗಿಷ್ಟವಾಗುವ ಕೆಲಸಾನೇ ಬೇರೆ ಆಗಿರುತ್ತದೆ ಅಂತ ಹೇಳಬಹುದು. ಇಲ್ಲಿಯೂ ಒಬ್ಬ ಎಂಬಿಎ (MBA) ಪದವೀಧರ ಫಿಲಿಪ್ ಚಾಕೊ (Philip Chacko) ಅವರು ಓದಿದ್ದು, ಎಂಬಿಎ ಆಗಿದ್ದರೂ ವೃತ್ತಿಯಾಗಿ ಅರಿಸಿಕೊಂಡದ್ದು ಮಾತ್ರ ಸಾವಯವ ಕೃಷಿ ಅಂತ ಹೇಳಬಹುದು ನೋಡಿ. ಕೇರಳದ ಅಲಪ್ಪುಳದ ಫಿಲಿಪ್ ಚಾಕೊ ಯಾವಾಗಲೂ ತಮ್ಮನ್ನು ತಾವು ಒಬ್ಬ ವಾಣಿಜ್ಯ ಕೃಷಿಕನೆಂದು ಬಿಂಬಿಸಿಕೊಳ್ಳುತ್ತಿದ್ದರು. ಎಂಬಿಎ ಓದುತ್ತಿರುವಾಗ ಮತ್ತು ಕಾರ್ಪೊರೇಟ್ (Corporate) ಕ್ಷೇತ್ರದಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡುವಾಗ, ಅವರು ಕೃಷಿಯನ್ನು ತಮ್ಮ ಜೀವನದ ವೃತ್ತಿಯಾಗಿ ಮಾಡಿಕೊಳ್ಳಬೇಕೆಂದು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದರು ಅಂತ ಹೇಳಲಾಗಿದೆ.


ಫಿಲಿಪ್ ನ ಪೂರ್ವಜರು ವ್ಯವಸಾಯದಲ್ಲಿ ತೊಡಗಿದ್ದರಂತೆ!


ಫಿಲಿಪ್ ನ ಪೂರ್ವಜರು ವ್ಯವಸಾಯದಲ್ಲಿ ತೊಡಗಿದ್ದರು ಮತ್ತು ಅವರ ಹೆತ್ತವರು ಒಂದು ಸಣ್ಣ ತುಂಡು ಭೂಮಿಯನ್ನು ಮತ್ತು ಜಾನುವಾರುಗಳನ್ನು ಹೊಂದಿದ್ದರು. ಆದರೆ ಫಿಲಿಪ್ ಕೃಷಿಯಲ್ಲಿ ತೊಡಗಲು ಆಸಕ್ತಿ ತೋರಿಸಿದಾಗ, ಅವರ ಪಾಲಕರು ಮೊದಲಿಗೆ ಬೆಂಬಲಿಸಲಿಲ್ಲ. "ನಾನು ಕಾರ್ಪೊರೇಟ್ ಕಚೇರಿಯಲ್ಲಿ ಉತ್ತಮ ಸಂಬಳದೊಂದಿಗೆ ಆರಾಮವಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಎಲ್ಲರೂ ತಿಳಿದಿದ್ದರು. ಆದರೆ ಅವರ ನಿರಾಕರಣೆಯ ಹೊರತಾಗಿಯೂ ನಾನು ನನ್ನ ಉತ್ಸಾಹದೊಂದಿಗೆ ಮುಂದೆ ಸಾಗಿದೆ" ಎಂದು 33 ವರ್ಷದ ಫಿಲಿಪ್ ಅವರು ಹೇಳುತ್ತಾರೆ.


ಕೃಷಿಯನ್ನು ಮಾಡಲು ಫಿಲಿಪ್ ತನ್ನ ಉತ್ತಮ ಸಂಬಳದ ಕೆಲಸವನ್ನು ಬಿಟ್ಟರು ಮತ್ತು ಕೊಟ್ಟಾಯಂನಲ್ಲಿ ಮೂರು ವರ್ಷಗಳ ಕಾಲ ನೆಡುತೋಪುವೊಂದರಲ್ಲಿ ಕೆಲಸ ಮಾಡಿದರು. ಅವರು ಅಲ್ಲಿ ಕೃಷಿಯ ಬಗ್ಗೆ ತುಂಬಾನೇ ಹೆಚ್ಚು ಕಲಿತರು ಅಂತ ಹೇಳಬಹುದು. ಅಂತಿಮವಾಗಿ, 2019 ರಲ್ಲಿ, ತರಕಾರಿ ಕೃಷಿಯನ್ನು ಪ್ರಾರಂಭಿಸಲು ಅವರು ಅಲಪ್ಪುಳದಲ್ಲಿ ಸುಮಾರು 30 ಎಕರೆ ಭೂಮಿಯನ್ನು ಗುತ್ತಿಗೆಗೆ ಪಡೆದರು.


ತರಕಾರಿ ಎಸ್ಟೇಟ್ ಅನ್ನು ಹೇಗೆ ನಿರ್ಮಿಸಿದರು ನೋಡಿ.


ಇಂದು, ಯುವ ರೈತ, ಲಕ್ಕಿಡಿ ಮತ್ತು ಮಲಂಪುಳ ಸೇರಿದಂತೆ ಪಾಲಕ್ಕಾಡ್ ನ ವಿವಿಧ ಭಾಗಗಳಲ್ಲಿ ಹರಡಿರುವ 34 ಎಕರೆ ಭೂಮಿಯಲ್ಲಿ ಕೃಷಿಯನ್ನು ನಡೆಸುತ್ತಾನೆ. "ಮೊದಲಿನಿಂದಲೂ, ನನ್ನ ಕಲ್ಪನೆಯು ದೊಡ್ಡ ಪ್ರಮಾಣದಲ್ಲಿ ಕೃಷಿ ಮಾಡಬೇಕು ಅಂತಾಗಿತ್ತು. ಅದರ ಪ್ರಕಾರವೇ ಈ ತರಕಾರಿ ಎಸ್ಟೇಟ್ ಅನ್ನು ನಿರ್ಮಿಸಿದೆವು” ಎಂದು ಹೇಳಿದರು.


ಇದನ್ನೂ ಓದಿ: ಸಾಲು ಸಾಲು ಸೋಲುಗಳ ನಂತರ ಸ್ಟಾರ್ಟ್​ಅಪ್​ನಲ್ಲಿ ಯಶಸ್ಸು, ಸಾರಾ ಟೌಕನ್‌ ಎಂಬ ಮಹಿಳೆಯ ಸಾಧನೆ ಕಥೆ


“ನಾನು ಒಂದು ಬ್ರ್ಯಾಂಡ್ ಅನ್ನು ರಚಿಸಲು ಮತ್ತು ಅದರ ಅಡಿಯಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಲು ಬಯಸಿದ್ದೆ. ಈ ರೀತಿಯಾಗಿ 'ಪ್ಯೂರ್ ಹಾರ್ವೆಸ್ಟ್' ಅಸ್ತಿತ್ವಕ್ಕೆ ಬಂದಿತು. ಸೋರೆಕಾಯಿಯಿಂದ ಹಿಡಿದು ಗೆಡ್ಡೆ ಗೆಣಸುಗಳವರೆಗೆ ಮತ್ತು ಋತುಮಾನದ ತರಕಾರಿಗಳನ್ನು ಹೊಲಗಳಲ್ಲಿ ಬೆಳೆಯಲಾಗುತ್ತದೆ ಮತ್ತು ರಾಜ್ಯದಾದ್ಯಂತ ಸಗಟು ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳ ಮೂಲಕ ಮಾರಾಟ ಮಾಡಲಾಗುತ್ತದೆ" ಎಂದು ಅವರು ವಿವರಿಸುತ್ತಾರೆ.


ಹತ್ತಿರದ ಅನೇಕ ಪ್ರದೇಶದ ರೈತರು ಬೆಳೆಗಳನ್ನು ಬೆಳೆಯಲು ಅವರೊಂದಿಗೆ ಸಹಯೋಗದೊಂದಿಗೆ ಕೆಲಸ ಮಾಡುತ್ತಾರೆ ಮತ್ತು ಅವರು ಅವರಿಗೆ ಮಾರುಕಟ್ಟೆ ಬೆಲೆಗಿಂತ 1 ರೂಪಾಯಿ ಹೆಚ್ಚು ನೀಡುತ್ತಾರೆ. "ರೈತರಿಗೆ ಅಗತ್ಯವಿರುವ ಸಲಕರಣೆಗಳು ಮತ್ತು ಯಂತ್ರೋಪಕರಣಗಳನ್ನು ನಾನು ಒದಗಿಸಿದ್ದೇನೆ. ಇಲ್ಲಿ ಬೆಲೆ ಉತ್ತಮವಾಗಿರುವುದರಿಂದ ಹೆಚ್ಚಾಗಿ, ರೈತರು ಸ್ವಯಂ ಪ್ರೇರಿತರಾಗಿ ನನ್ನ ಬಳಿಗೆ ಬರುತ್ತಾರೆ" ಎಂದು ಅವರು ಹೇಳುತ್ತಾರೆ.


ಕೃಷಿಯಿಂದಲೇ 36 ಲಕ್ಷ ರೂಪಾಯಿ ಲಾಭ ಪಡೆದ ಫಿಲಿಪ್


ಕೃಷಿ ವ್ಯವಹಾರವನ್ನು ಪ್ರಾರಂಭಿಸಿದ ಐದು ತಿಂಗಳೊಳಗೆ, ಫಿಲಿಪ್ 56 ಟನ್ ಗಳ ಸುಗ್ಗಿಯನ್ನು ಪಡೆದರು. ಇಂದು ಈ ಸಂಖ್ಯೆ 390 ಟನ್ ಗಳಿಗೆ ಏರಿಕೆಯಾಗಿದೆ. "ಕಳೆದ ವರ್ಷ ನಾನು ಕೃಷಿಯಿಂದ 36 ಲಕ್ಷ ರೂಪಾಯಿಗಳ ಲಾಭವನ್ನು ಗಳಿಸಿದ್ದೇನೆ" ಎಂದು ಅವರು ಹೇಳುತ್ತಾರೆ.


2021 ರಲ್ಲಿ ಕೇರಳದ ಅಂದಿನ ಕೃಷಿ ಸಚಿವ ವಿ.ಎಸ್.ಸುನಿಲ್ ಕುಮಾರ್ ಅವರು ಫಿಲಿಪ್ ಅವರ ಜಮೀನಿಗೆ ಭೇಟಿ ನೀಡಿದ್ದರು. ತಮ್ಮ ಬ್ರ್ಯಾಂಡ್ ನ ಹೆಸರನ್ನು ಇನ್ನಷ್ಟು ಹರಡಲು ಸೂಪರ್ ಮಾರ್ಕೆಟ್ ಗಳಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಬಯಸುವ ಇತರ ವಾಣಿಜ್ಯ ರೈತರಂತೆ, ಫಿಲಿಪ್ ತನ್ನ ಬೆಳೆಗಳನ್ನು ಸಣ್ಣ ಅಂಗಡಿಗಳು ಮತ್ತು ಮಾರುಕಟ್ಟೆಗಳಿಗೆ ತೆಗೆದುಕೊಂಡು ಹೋಗುತ್ತಾನೆ.


"ಪ್ರತಿಯೊಬ್ಬರೂ ನನ್ನ ತರಕಾರಿಗಳ ಗುಣಮಟ್ಟವನ್ನು ಗೌರವಿಸಬೇಕೆಂದು ನಾನು ಬಯಸುತ್ತೇನೆ. ಸೂಪರ್ ಮಾರ್ಕೆಟ್ ಗಳ ವಿಷಯದಲ್ಲಿ, ಅವರು ಹುಡುಕುವುದು ದಪ್ಪ ಮತ್ತು ವರ್ಣರಂಜಿತ ತರಕಾರಿಗಳು. ಗುಣಮಟ್ಟವು ಎಂದಿಗೂ ಅವರ ಕಾಳಜಿಯಾಗುವುದಿಲ್ಲ. ಈ ಕಾರಣಕ್ಕಾಗಿ, ಅವರು ಒದಗಿಸುವ ಬೆಲೆಯೂ ಕಡಿಮೆ" ಎಂದು ಕೃಷಿ ತಜ್ಞರು ಹಂಚಿಕೊಳ್ಳುತ್ತಾರೆ.


ಬೆಂಡೆಕಾಯಿ, ಉದ್ದಿನ ಬೀನ್ಸ್, ಕುಂಬಳಕಾಯಿ, ಹಾಗಲಕಾಯಿ, ರಿಡ್ಜ್ ಸೋರೆಕಾಯಿ, ಸೌತೆಕಾಯಿ, ಪಾಲಕ್, ಉದ್ದು, ಎಳ್ಳು, ಉದ್ದಿನಬೇಳೆ, ಈರುಳ್ಳಿ, ಆಲೂಗಡ್ಡೆ ಮತ್ತು ಶಾಲೋಟ್ ಅವರ ಜಮೀನಿನಲ್ಲಿನ ಕೆಲವು ಬೆಳೆಗಳಾಗಿವೆ. ಪಪ್ಪಾಯಿ, ಕಲ್ಲಂಗಡಿ ಮತ್ತು ಇನ್ನಿತರೆ ಹಣ್ಣುಗಳನ್ನು ಸಹ ಇವರು ತಮ್ಮ ಹೊಲದಲ್ಲಿ ಬೆಳೆಯುತ್ತಾರೆ.


ಇವೆಲ್ಲವನ್ನೂ ಫಿಲಿಪ್ ಅವರು ಸಾವಯವವಾಗಿ ಬೆಳೆಯುತ್ತಾರೆ ಮತ್ತು ಇಂದು ಫಿಲಿಪ್ ಅವರಿಗೆ ತನ್ನ ಇಡೀ ಕುಟುಂಬದ ಬೆಂಬಲವಿದೆ. ಕೃಷಿಯನ್ನು ಹೊರತುಪಡಿಸಿ, ಫಿಲಿಪ್ ವಾಣಿಜ್ಯ ಕೃಷಿಯನ್ನು ಪ್ರಾರಂಭಿಸಲು ರೈತರಿಗೆ ಸಲಹೆಗಳನ್ನು ಸಹ ನೀಡುತ್ತಾರೆ.


MBA graduate who grew organic vegetables, Philip and his wife on their farm, earned 36 lakh rupees, Kannada News, Karnataka News, ಕನ್ನಡ ಮ್ಯೂಸ್, ಕರ್ನಾಟಕ ನ್ಯೂಸ್, ಎಮ್​ಬಿಎ ಮುಗಿಸಿ ವ್ಯವಸಾಯದತ್ತ ಮುಖ, 36 ಲಕ್ಷ ರುಪಾಯಿಗಳನ್ನು ಸಂಪಾದಿಸುತ್ತಿದ್ದಾರೆ ಇವರು
ಫಿಲಿಪ್ ಮತ್ತು ಅವರ ಪತ್ನಿ ತಮ್ಮ ಜಮೀನಿನಲ್ಲಿ


"ಫಲವತ್ತತೆ, ಬಿತ್ತನೆ ಮತ್ತು ಕೃಷಿಯಲ್ಲಿನ ಇತರ ಪ್ರತಿಯೊಂದು ಪ್ರಕ್ರಿಯೆಯ ಬಗ್ಗೆ ಹಲವಾರು ತಪ್ಪು ಕಲ್ಪನೆಗಳಿವೆ. ಇತರ ರೈತರು ತಮ್ಮ ಫಸಲನ್ನು ಹೆಚ್ಚಿಸಲು ಮತ್ತು ಹೆಚ್ಚಿನ ಮಾರಾಟಗಾರರನ್ನು ತಲುಪಲು ನಾನು ಅವರನ್ನು ಬೆಂಬಲಿಸಲು ಪ್ರಯತ್ನಿಸುತ್ತೇನೆ" ಎಂದು ಅವರು ಹೇಳುತ್ತಾರೆ.


ಕೃಷಿಯ ಬಗ್ಗೆ ಫಿಲಿಪ್ ಅವರು ಹೇಳುವುದೇನು?


"ಕೃಷಿ ಎಂದರೆ ಅವಿದ್ಯಾವಂತರಿಗಾಗಿ ಎಂಬ ಪರಿಕಲ್ಪನೆಯನ್ನು ಪ್ರತಿಯೊಬ್ಬರೂ ಹೊಂದಿದ್ದಾರೆ. ಇದು ಮೊದಲು ಬದಲಾಗಬೇಕು ಮತ್ತು ಹೆಚ್ಚಿನ ಯುವಕರು ಕೃಷಿಯಲ್ಲಿ ತೊಡಗಬೇಕು. ಸರಿಯಾದ ದಾರಿಯಲ್ಲಿ ಕೃಷಿ ಮಾಡಿದರೆ, ಅದು ಅತ್ಯಂತ ಲಾಭದಾಯಕ ವ್ಯವಹಾರಗಳಲ್ಲಿ ಒಂದಾಗಿದೆ. ಎಂಬಿಎ ಓದಿ ನಾನು ಕೃಷಿಯಲ್ಲಿ ಹಲವಾರು ವ್ಯವಹಾರ ತಂತ್ರಗಳನ್ನು ಅಳವಡಿಸಿಕೊಂಡಿದ್ದೇನೆ" ಎಂದು ಅವರು ಹೇಳುತ್ತಾರೆ.


ಇದನ್ನೂ ಓದಿ: ನಿಮ್ಮ ಜಿಲ್ಲೆಯ ಪೆಟ್ರೋಲ್ - ಡೀಸೆಲ್​ ಬೆಲೆ ಇಲ್ಲಿದೆ, ಎಷ್ಟಿದೆ ಚೆಕ್ ಮಾಡ್ಕೊಳಿ


"ನನ್ನ ಕೃಷಿ ಚಟುವಟಿಕೆಗಳನ್ನು 100 ಎಕರೆಗೆ ವಿಸ್ತರಿಸುವುದು ನನ್ನ ದೊಡ್ಡ ಕನಸು. ಮಧ್ಯವರ್ತಿಗಳಿಲ್ಲದೆ ನೇರವಾಗಿ ಗ್ರಾಹಕರಿಗೆ ಉತ್ಪನ್ನಗಳನ್ನು ವಿತರಿಸಲು ವಿತರಣಾ ಕಂಪನಿಯೊಂದಿಗೆ ಸಹಕರಿಸಲು ನಾನು ಪ್ರಯತ್ನಿಸುತ್ತಿದ್ದೇನೆ. ಇದು ತರಕಾರಿಗಳ ಬೆಲೆಯನ್ನು ಸಾಕಷ್ಟು ಕಡಿಮೆ ಮಾಡಬಹುದು" ಎಂದು ಅವರು ಹೇಳಿದರು.

First published: