• Home
  • »
  • News
  • »
  • business
  • »
  • Thai Guava: ಉದ್ಯೋಗ ತೊರೆದು ಥಾಯ್ ಪೇರಳೆ ಬೆಳೆಸಿ ಯಶಸ್ಸು ಕಂಡ ಎಂಬಿಎ ಪದವೀಧರ! ಈಗ ಈತನ ಆದಾಯ ಎಷ್ಟು ಕೋಟಿ ಗೊತ್ತಾ?

Thai Guava: ಉದ್ಯೋಗ ತೊರೆದು ಥಾಯ್ ಪೇರಳೆ ಬೆಳೆಸಿ ಯಶಸ್ಸು ಕಂಡ ಎಂಬಿಎ ಪದವೀಧರ! ಈಗ ಈತನ ಆದಾಯ ಎಷ್ಟು ಕೋಟಿ ಗೊತ್ತಾ?

ರಾಜೀವ್ ಬೆಳೆಸಿದ ಪೇರಳೆ ಹಣ್ಣು

ರಾಜೀವ್ ಬೆಳೆಸಿದ ಪೇರಳೆ ಹಣ್ಣು

ರಾಜೀವ್ ಭಾಸ್ಕರ್ ಅವರು ತಮ್ಮ ಜೀವನದಲ್ಲಿ ಒಬ್ಬ ಯಶಸ್ವಿ ರೈತನಾಗುತ್ತಾರೆ ಅಂತ ಬಹುಶಃ ಎಂದೂ ಊಹಿಸಿರಲಿಲ್ಲ ಅಂತ ಕಾಣಿಸುತ್ತೆ. ರಾಯಪುರ್ ದಲ್ಲಿರುವ ಒಂದು ಬೀಜದ ಕಂಪನಿಯಲ್ಲಿ ಕೆಲಸ ಮಾಡಿದ ಅನುಭವವು ಮುಂದೊಂದು ದಿನ ಯಶಸ್ವಿ ರೈತ ಮತ್ತು ಉದ್ಯಮಿಯಾಗಲು ಸಹಾಯ ಮಾಡುತ್ತದೆ.

  • Share this:

ನೈನಿತಾಲ್ ಮೂಲದ ರಾಜೀವ್ ಭಾಸ್ಕರ್ (Rajeev Bhaskar) ಅವರು ತಮ್ಮ ಜೀವನದಲ್ಲಿ ಒಬ್ಬ ಯಶಸ್ವಿ ರೈತನಾಗುತ್ತಾರೆ ಅಂತ ಬಹುಶಃ ಎಂದೂ ಊಹಿಸಿರಲಿಲ್ಲ ಅಂತ ಕಾಣಿಸುತ್ತೆ. ರಾಯಪುರ್ ದಲ್ಲಿರುವ ಒಂದು ಬೀಜದ ಕಂಪನಿಯಲ್ಲಿ (Company) ಕೆಲಸ ಮಾಡಿದ ಅನುಭವವು ಮುಂದೊಂದು ದಿನ ಯಶಸ್ವಿ ರೈತ ಮತ್ತು ಉದ್ಯಮಿಯಾಗಲು ಸಹಾಯ ಮಾಡುತ್ತದೆ ಎಂದು ಅವರು ನಿಜಕ್ಕೂ ಭಾವಿಸಿರಲಿಲ್ಲ. ಸುಮಾರು ನಾಲ್ಕು ವರ್ಷಗಳ ಕಾಲ ವಿಎನ್ಆರ್ ಸೀಡ್ಸ್ ಕಂಪನಿಯ ಮಾರಾಟ ಮತ್ತು ಮಾರುಕಟ್ಟೆ ತಂಡದ ಭಾಗವಾಗಿ, ಅವರು ದೇಶದ ವಿವಿಧ ಭಾಗಗಳಿಗೆ ಹೋಗಿ ಹಲವಾರು ರೈತರೊಂದಿಗೆ (Farmers) ಸಂವಹನ ನಡೆಸುವ ಅವಕಾಶವನ್ನು ಪಡೆದರು ಎಂದು ಅವರು ಹೇಳುತ್ತಾರೆ. ಇದನ್ನು ಮಾಡುತ್ತಲೇ ಅವರು ಕೃಷಿಯ ಬಗ್ಗೆ ಒಲವು ಬೆಳೆಸಿಕೊಂಡರು ಮತ್ತು ಕೃಷಿಯನ್ನು (Agriculture) ಮಾಡಲು ಪ್ರೇರೇಪಿಸಲ್ಪಟ್ಟರು.


ಎಂಬಿಎ ಪದವೀಧರ ಈಗ ಯಶಸ್ವಿ ರೈತ
"ನಾನು ಕೃಷಿಯಲ್ಲಿ ಬಿಎಸ್ಸಿ ಓದಿದ್ದರೂ, ನಾನು ವಿಎನ್ಆರ್ ಸೀಡ್ಸ್ ಕಂಪನಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸುವವರೆಗೆ ಕೃಷಿಯನ್ನು ನನ್ನ ವೃತ್ತಿಯಾಗಿ ತೆಗೆದುಕೊಳ್ಳುವ ಯಾವುದೇ ಯೋಜನೆಯನ್ನು ನಾನು ಹೊಂದಿರಲಿಲ್ಲ. ಆ ಸಮಯದಲ್ಲಿ ನಾನು ದೂರ ಶಿಕ್ಷಣದ ಮೂಲಕ ಎಂಬಿಎ ಸಹ ಮಾಡಿದ್ದೆ. ಆದರೆ ನಾನು ಬೀಜಗಳು ಮತ್ತು ಸಸಿಗಳ ಮಾರಾಟದೊಂದಿಗೆ ವ್ಯವಹರಿಸುತ್ತಿದ್ದಂತೆ, ನಾನು ಕೃಷಿಯಲ್ಲಿ ಹೆಚ್ಚು ಆಸಕ್ತಿ ವಹಿಸಿದೆ, ಅಂತಿಮವಾಗಿ ಅದನ್ನೇ ನನ್ನ ವೃತ್ತಿಯಾಗಿಸಿಕೊಳ್ಳಲು ಬಯಸಿದೆ" ಎಂದು ಅವರು ಹೇಳಿದರು.


ಕೃಷಿಯನ್ನು ಮಾಡಲು ಶುರು ಮಾಡಿದ್ದಾಗಿನಿಂದಲೂ ಅವರು ಥಾಯ್ ತಳಿಯ ಪೇರಳೆ ಹಣ್ಣುಗಳನ್ನು ಬೆಳೆಯಲು ಆರಂಭಿಸಿದರು. "ನಾನು ಈಗಾಗಲೇ ಅವುಗಳನ್ನು ಬೆಳೆಸಿದ ರೈತರೊಂದಿಗೆ ಸಂವಹನ ನಡೆಸಿದ್ದೇನೆ ಮತ್ತು ಅವರಿಗೆ ನಾನು ಸಹ ಈ ವಿಷಯದಲ್ಲಿ ಮಾರ್ಗದರ್ಶನ ನೀಡಿದ್ದೇನೆ" ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ:  Business Idea: ಕಾರ್ಪೊರೇಟ್​​ ಕೆಲ್ಸ ಬಿಟ್ಟು, ಲಕ್ಷ ಲಕ್ಷ ದುಡಿಯುತ್ತಿದ್ದಾರೆ ಬೆಂಗಳೂರು ಹುಡುಗಿ!


ತಮ್ಮ ಆಸಕ್ತಿಯನ್ನು ಮುಂದಿಟ್ಟುಕೊಂಡು, ರಾಜೀವ್ 2017 ರಲ್ಲಿ ತಮ್ಮ ಕೆಲಸವನ್ನು ತೊರೆದು ಹರಿಯಾಣದ ಪಂಚಕುಲದಲ್ಲಿ ಗುತ್ತಿಗೆ ಪಡೆದ ಐದು ಎಕರೆ ಭೂಮಿಯಲ್ಲಿ ಥಾಯ್ ಪೇರಳೆ ಬೆಳೆಯಲು ಪ್ರಾರಂಭಿಸಿದರು. ಅವರು ಇದನ್ನು 'ಶೇಷ-ಮುಕ್ತ' ಕೃಷಿ ಎಂದು ಕರೆಯಲಾಗುವ ವಿಧಾನದ ಮೂಲಕ ಮಾಡುತ್ತಾರೆ. ಇಂದು, 30 ವರ್ಷದ ಈ ವ್ಯಕ್ತಿ 25 ಎಕರೆ ಭೂಮಿಗೆ ವಿಸ್ತರಿಸಿದ್ದಾರೆ, ಅದರಲ್ಲಿ ಅವರು ಸುಮಾರು 12,000 ಮರಗಳನ್ನು ಬೆಳೆಸುತ್ತಾರೆ, ಇದು ಎಕರೆಗೆ ಸರಾಸರಿ 6 ಲಕ್ಷ ರೂಪಾಯಿಗಳ ಲಾಭವನ್ನು ಗಳಿಸಿ ಕೊಡುತ್ತದೆ ಎಂದು ಅವರು ತಿಳಿಸಿದ್ದಾರೆ.


ಕೃಷಿಯಲ್ಲಿ ಇವರಿಗೆ ಸಿಕ್ಕಂತಹ ದೊಡ್ಡ ತಿರುವು
ರಾಜೀವ್ ಅವರು ಕೆಲವು ಸಮಯದಿಂದ ಕೃಷಿಯನ್ನು ಕೈಗೆತ್ತಿಕೊಳ್ಳಲು ಬಯಸುತ್ತಿದ್ದಾಗ, ಬೀಜಗಳ ಕಂಪನಿಯಲ್ಲಿ ಸ್ಥಿರ ಕೆಲಸವನ್ನು ತೊರೆಯುವ ಬಗ್ಗೆ ಖಚಿತತೆ ಇರಲಿಲ್ಲ ಎಂದು ಹೇಳುತ್ತಾರೆ. ಆದರೆ 2017 ರಲ್ಲಿ, ಅವರು ಕೆಲಸ ಮಾಡಿದ ಥಾಯ್ ಪೇರಳೆ ಬೆಳೆಗಾರರೊಬ್ಬರು ಪಂಚಕುಲದಲ್ಲಿ 5 ಎಕರೆ ಪೇರಳೆ ತೋಟವನ್ನು ನೀಡಿದರು, ಏಕೆಂದರೆ ಅವರು ಅದನ್ನು ಚೆನ್ನಾಗಿ ನೋಡಿಕೊಳ್ಳಲು ಸಾಧ್ಯವಾಗಲಿಲ್ಲ.
ಇದು ರಾಜೀವ್ ಅವರ ಜೀವನದಲ್ಲಿ ಒಂದು ತಿರುವು ನೀಡಿತು. ಅದೇ ವರ್ಷ, ಅವರು ತಮ್ಮ ಕೆಲಸವನ್ನು ತ್ಯಜಿಸಿದರು ಮತ್ತು ಪೂರ್ಣ ಸಮಯದ ರೈತನಾಗಿ ಹೊಸ ವೃತ್ತಿಜೀವನವನ್ನು ಶುರು ಮಾಡಿದರು.


"ಅವರ ಜಮೀನಿನಲ್ಲಿದ್ದ ಪೇರಳೆ ಮರಗಳು ಮೂರು ವರ್ಷಗಳಷ್ಟು ಹಳೆಯದಾಗಿದ್ದು, ಹಣ್ಣುಗಳನ್ನು ನೀಡುತ್ತಿದ್ದವು. ನಾನು ಭೂಮಿಯನ್ನು ಗುತ್ತಿಗೆಗೆ ತೆಗೆದುಕೊಂಡು ಮರಗಳನ್ನು ಪೋಷಿಸಲು ಪ್ರಾರಂಭಿಸಿದೆ" ಎಂದು ಅವರು ಹೇಳಿದ್ದಾರೆ.


ಏನಿದು ಥಾಯ್ ಪೇರಳೆ ಪ್ರಭೇದ?
ಹೆಸರೇ ಸೂಚಿಸುವಂತೆ, ಥಾಯ್ ಪೇರಳೆ ಪ್ರಭೇದಗಳು ಥೈಲ್ಯಾಂಡ್ ಗೆ ಸ್ಥಳೀಯವಾಗಿವೆ ಮತ್ತು ಭಾರತದಾದ್ಯಂತ ಹೆಚ್ಚಿನ ಬೇಡಿಕೆಯನ್ನು ಹೊಂದಿವೆ. ಈ ಬಿಳಿ ಪೇರಳೆ ಹಣ್ಣುಗಳು ಸಾಮಾನ್ಯ ಪ್ರಭೇದಗಳಿಗಿಂತ ದೊಡ್ಡದಾಗಿದ್ದು, ಹಸಿರು ತೊಗಟೆಯನ್ನು ಹೊಂದಿವೆ. ಅವು ಸ್ವಲ್ಪ ಸಿಹಿಯಾಗಿದ್ದು, ಕಡಿಮೆ ಪರಿಮಳವನ್ನು ಹೊಂದಿರುತ್ತವೆ.


"ಹಣ್ಣಿನ ಪ್ರಮುಖ ವಿಶೇಷತೆಯೆಂದರೆ, ಇದು 25 ಡಿಗ್ರಿ ಸೆಲ್ಸಿಯಸ್ ಕೋಣೆಯ ತಾಪಮಾನದಲ್ಲಿ ಇರಿಸಿದಾಗ 12 ದಿನಗಳವರೆಗೆ ಚೆನ್ನಾಗಿರುತ್ತದೆ" ಎಂದು ರಾಜೀವ್ ತಿಳಿಸಿದ್ದಾರೆ.


ಇದನ್ನೂ ಓದಿ:  Business Idea: ಈ ಬೆಳೆ ಬೆಳೆದ್ರೆ ರೈತರ ಬದುಕೆ ಬದಲಾಗುತ್ತೆ, ಕೆಜಿಗೆ 800 ರೂಪಾಯಿ ಅಂದ್ರೆ ಯೋಚನೆ ಮಾಡಿ!


"ನಾನು ಜಮೀನನ್ನು ವಹಿಸಿಕೊಂಡಾಗ, ಅಂತಹ ಹಣ್ಣಿನ ಬೆಳೆಗಳ ಬೆಳವಣಿಗೆಗೆ ಅಗತ್ಯವಾದ ರಸಗೊಬ್ಬರಗಳು ಮತ್ತು ಸರಿಯಾದ ನೀರಾವರಿಯ ಅಗತ್ಯವನ್ನು ನಾನು ಅರಿತುಕೊಂಡೆ. ನನ್ನ ಉತ್ಪನ್ನಗಳು ಬಳಕೆಗೆ ಸುರಕ್ಷಿತ ಮತ್ತು ಸ್ವಚ್ಛವಾಗಿವೆ ಎಂದು ಖಚಿತಪಡಿಸಿಕೊಳ್ಳಲು ನಾನು ಬಯಸುತ್ತೇನೆ. ಆದ್ದರಿಂದ, ನಾನು ಉಳಿಕೆ-ಮುಕ್ತ ಕೃಷಿಯನ್ನು ಅಳವಡಿಸಿಕೊಂಡಿದ್ದೇನೆ" ಎಂದು ಅವರು ವಿವರಿಸುತ್ತಾರೆ.


ಶೇಷ ರಹಿತ ಕೃಷಿ ಎಂದರೇನು?
ಉಳಿಕೆ-ಮುಕ್ತ ಬೇಸಾಯವು ಬೆಳೆಗಳನ್ನು ರಕ್ಷಿಸಲು ಮತ್ತು ಅವು ಬೆಳೆಯಲು ಸಹಾಯ ಮಾಡಲು ಸಾವಯವವಾಗಿ ಪಡೆದ ಜೈವಿಕ ಕೀಟನಾಶಕಗಳು ಮತ್ತು ಜೈವಿಕ ಗೊಬ್ಬರಗಳನ್ನು ಒಳಗೊಂಡಿರುತ್ತದೆ. ಅವು ಕೆಲವೊಮ್ಮೆ ರಾಸಾಯನಿಕಗಳ ಬಳಕೆಯನ್ನು ಒಳಗೊಳ್ಳುತ್ತವೆ, ಆದರೆ ಮಾನವನ ಆರೋಗ್ಯಕ್ಕೆ ಹಾನಿಯಾಗದ ಪ್ರಮಾಣದಲ್ಲಿರುತ್ತವೆ.
"ರಾಸಾಯನಿಕ ಕೃಷಿಯನ್ನು ಹೆಚ್ಚು ಅಭ್ಯಾಸ ಮಾಡದ ಪ್ರದೇಶ ಅಥವಾ ಸುತ್ತಮುತ್ತಲಿನ ಪ್ರದೇಶದಲ್ಲಿ ನೀವು ಕೃಷಿ ಮಾಡುತ್ತಿರುವಾಗ ಸಾವಯವ ಕೃಷಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ನಿಮ್ಮ ಸುತ್ತಮುತ್ತಲಿನ ಹೊಲಗಳು ರಾಸಾಯನಿಕಗಳನ್ನು ಬಳಸುತ್ತಿದ್ದರೆ, ಆಗ ಸಾವಯವ ಫಾರ್ಮ್ ಅನ್ನು ನಿರ್ವಹಿಸುವುದು ಕಷ್ಟವಾಗುತ್ತದೆ, ಇದು ಕೀಟಗಳ ದಾಳಿಗೆ ಹೆಚ್ಚು ತುತ್ತಾಗುತ್ತದೆ" ಎಂದು ರಾಜೀವ್ ವಿವರಿಸುತ್ತಾರೆ.


"ದೊಡ್ಡ ಪ್ರಮಾಣದಲ್ಲಿ ಸಾವಯವ ಅಥವಾ ನೈಸರ್ಗಿಕ ಕೃಷಿಯು ದುಬಾರಿ ವ್ಯವಹಾರವಾಗಿದೆ ಮತ್ತು ಶ್ರಮದಾಯಕವಾಗಿದೆ. ಇದಲ್ಲದೆ, ಅಂತಿಮ ಇಳುವರಿಯೂ ಕಡಿಮೆ ಇರುತ್ತದೆ" ಎಂದು ಇವರು ಹೇಳಿದ್ದಾರೆ. ಒಂದು ವರದಿಯ ಪ್ರಕಾರ, ಶೇಷ ರಹಿತ ಕೃಷಿಯು ಮಿತವ್ಯಯಕಾರಿಯಾಗಿದೆ ಮತ್ತು ಹೆಚ್ಚಿನ ಉತ್ಪನ್ನಗಳನ್ನು ನೀಡುತ್ತದೆ. ಇದಲ್ಲದೆ, ಇದು ಯಾವುದೇ ರಾಸಾಯನಿಕ ಅವಶೇಷವನ್ನು ಹಿಂದೆ ಬಿಡುವುದಿಲ್ಲ.


ಹಸಿರು-ಲೇಬಲ್ ಕೀಟನಾಶಕ ಬಳಕೆ
"ಪ್ರತಿ ಕೀಟನಾಶಕವು ನಿರ್ದಿಷ್ಟ ಸುಗ್ಗಿ-ಪೂರ್ವ ಮಧ್ಯಂತರವನ್ನು (ಪಿಎಚ್ಐ) ಹೊಂದಿರುತ್ತದೆ, ಇದು ಸಿಂಪಡಣೆ ಮತ್ತು ಕೊಯ್ಲು ನಡುವಿನ ಅಂತರವಾಗಿದೆ, ಅಥವಾ ಬೆಳೆಯನ್ನು ಕಟಾವು ಮಾಡುವ ಮೊದಲು ಕೀಟನಾಶಕ ಉಳಿಕೆ ಸವೆಯಲು ಕನಿಷ್ಠ ಪ್ರಮಾಣದ ಸಮಯ ಬೇಕಾಗುತ್ತದೆ. ನಾನು ಕೇವಲ ಹಸಿರು-ಲೇಬಲ್ ಕೀಟನಾಶಕಗಳನ್ನು ಮಾತ್ರ ಬಳಸುತ್ತೇನೆ, ಅದು ಕಡಿಮೆ ವಿಷಕಾರಿ ಮತ್ತು ಕಡಿಮೆ ಪಿಹೆಚ್ಐ ಅನ್ನು ಹೊಂದಿರುತ್ತದೆ" ಎಂದು ಅವರು ವಿವರಿಸುತ್ತಾರೆ, ಕೊನೆಯಲ್ಲಿ ಕೇವಲ 15 ದಿನಗಳ ಅಂತರದ ನಂತರ ಮಾತ್ರ ಅವರು ತಮ್ಮ ಉತ್ಪನ್ನಗಳನ್ನು ಕೊಯ್ಲು ಮಾಡುತ್ತಾರೆ.
ಇವರು ಅನುಸರಿಸುವುದು ಮತ್ತೊಂದು ಕೃಷಿ ಪದ್ದತಿ
ರಾಜೀವ್ ಅವರು ಅನುಸರಿಸುವ ಮತ್ತೊಂದು ಅಗತ್ಯ ಕೃಷಿ ಪದ್ಧತಿಯೆಂದರೆ ಮೂರು ಪದರಗಳ ಬ್ಯಾಗಿಂಗ್ ಅಂತ ಹೇಳಬಹುದು. "ಹೂವುಗಳು ಹಣ್ಣುಗಳಾಗಿ ತಿರುಗಿದಾಗ, ಅದಕ್ಕೆ ಗಾಯಗಳು ಮತ್ತು ಕೀಟಗಳ ದಾಳಿಯಿಂದ ಅವುಗಳನ್ನು ರಕ್ಷಿಸಲು ನಾವು ತಕ್ಷಣವೇ ಅವುಗಳನ್ನು ಬ್ಯಾಗ್ ಮಾಡುತ್ತೇವೆ.


ಇದನ್ನೂ ಓದಿ:  Dye Neuroscience Kit: ಭಾರತದ ಮೊಟ್ಟ ಮೊದಲ ಡೈ ನ್ಯೂರೋಸೈನ್ಸ್‌ ಕಿಟ್‌ ತಯಾರಿಸಿದ ಇಂಜಿನಿಯರಿಂಗ್ ವಿದ್ಯಾರ್ಥಿ


ನಾವು ಮೊದಲು ಹಣ್ಣನ್ನು ಫೋಮ್ ಬಲೆಯಿಂದ ಮುಚ್ಚುತ್ತೇವೆ, ನಂತರ ಮಂಜು ವಿರೋಧಿ ಪಾಲಿಥೀನ್ ಚೀಲದಿಂದ ಮತ್ತು ಅಂತಿಮವಾಗಿ ಪತ್ರಿಕೆಯ ತುಣುಕಿನಿಂದ ಮುಚ್ಚುತ್ತೇವೆ. ಈ ಮೂರು ಪದರಗಳ ಪ್ಯಾಕೇಜಿಂಗ್ ಏಕರೂಪದ ಬಣ್ಣ ವಿತರಣೆಯನ್ನು ಖಚಿತಪಡಿಸುತ್ತದೆ ಮತ್ತು ಸುಗ್ಗಿಯವರೆಗೆ ಹಣ್ಣಿನ ಸುರಕ್ಷಿತ ಬೆಳವಣಿಗೆಯನ್ನು ಖಚಿತಪಡಿಸುತ್ತದೆ" ಎಂದು ಅವರು ವಿವರಿಸುತ್ತಾರೆ.
2017 ರಲ್ಲಿ ಪೇರಳೆ ಬೆಳೆಯುವುದನ್ನು ಶುರು ಮಾಡಿದ ನಂತರ ಮೊದಲ ಇಳುವರಿಯನ್ನು ಕೊಯ್ಲು ಮಾಡಲಾಯಿತು ಮತ್ತು ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ಹಣ್ಣುಗಳನ್ನು ಮಾರಾಟ ಮಾಡಲಾಯಿತು ಎಂದು ಅವರು ಹೇಳಿದ್ದಾರೆ . "ಆ ವರ್ಷ, ನಾನು 20 ಲಕ್ಷ ರೂಪಾಯಿಗಳ ಒಟ್ಟು ಆದಾಯವನ್ನು ಗಳಿಸಿದೆ. ಇದು ನನಗೆ ತುಂಬಾನೇ ವಿಶ್ವಾಸವನ್ನು ನೀಡಿತು. ಆದ್ದರಿಂದ ನಾನು ಮೊಹಾಲಿ ವಿಮಾನ ನಿಲ್ದಾಣದ ಬಳಿ 15 ಎಕರೆ ಭೂಮಿ ಖರೀದಿಸಿದೆ. ಅದರಲ್ಲಿ ನಾನು ತರಕಾರಿ ಬೆಳೆಯಲು ಶುರು ಮಾಡಿದೆ, ಆದರೆ ನನ್ನ ಉತ್ಪನ್ನಗಳನ್ನು ಸರಿಯಾಗಿ ಮಾರಾಟ ಮಾಡಲು ಸಾಧ್ಯವಾಗದ ಕಾರಣ ನಾನು ನಿರೀಕ್ಷಿಸಿದ ಲಾಭ ಪಡೆಯಲಿಲ್ಲ" ಎಂದು ಅವರು ತಿಳಿಸಿದ್ದಾರೆ.


ಪೇರಳೆ ಹಣ್ಣುಗಳನ್ನು ಬೆಳೆಯುವುದನ್ನು ಮುಂದುವರೆಸಿದ ರಾಜೀವ್
ತರಕಾರಿಗಳಿಂದ ನಷ್ಟವನ್ನು ಎದುರಿಸಿದ ರಾಜೀವ್, ತದನಂತರ ಇನ್ನೂ ಮೂವರು ಹೂಡಿಕೆದಾರರನ್ನು ಸೆಳೆಯುವ ಮೂಲಕ ಥಾಯ್ ಪೇರಳೆ ಕೃಷಿಯನ್ನೆ ಮುಂದುವರೆಸಿಕೊಂಡು ಹೋಗಲು ನಿರ್ಧರಿಸಿದರು. ಹೀಗಾಗಿ, 2019 ರಲ್ಲಿ, ಅವರು ಪಂಜಾಬ್ ನ ರೂಪನಗರದಲ್ಲಿ 55 ಎಕರೆ ಭೂಮಿಯನ್ನು ಗುತ್ತಿಗೆಗೆ ತೆಗೆದುಕೊಂಡರು ಮತ್ತು ಪೇರಳೆ ಮರಗಳನ್ನು ನೆಟ್ಟರು.


"ನಾವು 25 ಎಕರೆಯಲ್ಲಿ ಪೇರಳೆ ಮರಗಳನ್ನು ನೆಟ್ಟಿದ್ದೇವೆ ಮತ್ತು 2021 ರವರೆಗೆ ನಾನು ಪಂಚಕುಲದಲ್ಲಿ 5 ಎಕರೆ ತೋಟವನ್ನು ಹಾಗೆಯೇ ಮುಂದುವರಿಸಿದೆ, ಮಾಲೀಕರು ಭೂಮಿಯನ್ನು ಮಾರಾಟ ಮಾಡಲು ನಿರ್ಧರಿಸಿದರು. ನಾನು 25 ಎಕರೆಗಳ ಮೇಲೆ ಗಮನ ಹರಿಸಲು ಬಯಸಿದ್ದೆ, ಆದ್ದರಿಂದ ನಾನು ಮೊದಲ ಜಮೀನನ್ನು ಬಿಟ್ಟುಕೊಡಬೇಕಾಯಿತು" ಎಂದು ರಾಜೀವ್ ಹೇಳಿದ್ದಾರೆ.
ಪೇರಳೆ ಗಿಡಗಳನ್ನು ನೆಟ್ಟ ನಂತರ 2-3 ವರ್ಷಗಳಲ್ಲಿ ಹಣ್ಣಾಗಲು ಪ್ರಾರಂಭಿಸುತ್ತವೆ, ಪ್ರತಿ ಗಿಡಕ್ಕೆ ಸುಮಾರು 10 ಕೆಜಿ ಇಳುವರಿ ನೀಡುತ್ತವೆ ಎಂದು ಅವರು ಹೇಳುತ್ತಾರೆ. ಪೇರಳೆ ಗಿಡಗಳನ್ನು ವರ್ಷಕ್ಕೆ ಎರಡು ಬಾರಿ ಕೊಯ್ಲು ಎಂದರೆ ಒಮ್ಮೆ ಮಳೆಗಾಲದಲ್ಲಿ ಮತ್ತು ನಂತರ ಚಳಿಗಾಲದಲ್ಲಿ ಮಾಡಲಾಗುತ್ತದೆ. "ಆದರೆ ಇತರ ತಳಿಗಳು ಮತ್ತು ಮಾರಾಟಗಾರರಿಂದ ಸ್ಪರ್ಧೆಯನ್ನು ತಪ್ಪಿಸಲು ನಾವು ಮಳೆಗಾಲದಲ್ಲಿ ಮಾತ್ರ ಕೊಯ್ಲು ಮಾಡುತ್ತೇವೆ. ಅದರ ನಂತರ ನಾವು ಗಿಡಗಳಿಗೆ ವಿಶ್ರಾಂತಿ ಪಡೆಯಲು ಬಿಡುತ್ತೇವೆ" ಎಂದಿದ್ದಾರೆ.


ಇದನ್ನೂ ಓದಿ:  Truly Desi: ತಾಯಿ ಸಾಧನೆಗೆ ಕಾರಣವಾಯ್ತು ಮಗಳ ಅಲರ್ಜಿ! ಸ್ಟಾರ್ಟ್‌ ಅಪ್ ಶುರು ಮಾಡಿ 2 ಕೋಟಿ ವಹಿವಾಟು!


"ನಾವು ನಮ್ಮ ಎಲ್ಲಾ ಉತ್ಪನ್ನಗಳನ್ನು ದೆಹಲಿ ಎಪಿಎಂಸಿ ಮಾರುಕಟ್ಟೆಗೆ 10 ಕೆಜಿ ಪೆಟ್ಟಿಗೆಗಳಲ್ಲಿ ಮಾರಾಟ ಮಾಡುತ್ತೇವೆ ಮತ್ತು ಒಂದು ವಾರದೊಳಗೆ ಅವರು ನಮಗೆ ಹಣವನ್ನು ನೀಡುತ್ತಾರೆ. ಋತುಮಾನ ಮತ್ತು ಗುಣಮಟ್ಟದ ಆಧಾರದ ಮೇಲೆ ಪ್ರತಿ ಕೆಜಿ ಗೆ 40 ರಿಂದ 100 ರೂಪಾಯಿಯವರೆಗೆ ಬೆಲೆ ಇರುತ್ತದೆ" ಎಂದು ಅವರು ಹೇಳುತ್ತಾರೆ. ರಾಜೀವ್ ಅವರ ಪ್ರಕಾರ, ಥಾಯ್ ಪೇರಳೆ ಕೃಷಿಯು ಅಪಾಯಕಾರಿ ವ್ಯವಹಾರವಾಗಿದೆ, ಏಕೆಂದರೆ ಲಾಭದಲ್ಲಿ ಕೆಲವೊಮ್ಮೆ ಹೆಚ್ಚು ಕಮ್ಮಿ ಆಗುವ ಸಾಧ್ಯತೆ ಇದೆ ಅಂತ ತಿಳಿಸಿದ್ದಾರೆ.

Published by:Ashwini Prabhu
First published: