ಏನಾದರೊಂದು ವಿಶಿಷ್ಟವಾದ ಸಾಧನೆಯನ್ನು ಮಾಡಬೇಕು, ನಾಲ್ಕು ಜನರು ತಮ್ಮನ್ನು ಗುರುತಿಸಬೇಕು ಎಂಬ ಹಂಬಲ ಮತ್ತು ತುಡಿತವು ಅನೇಕರಿಗೆ ತಮ್ಮ ಬದುಕಿನಲ್ಲಿ ಸಾಧನೆ (Achievement) ಮಾಡಲು ಒಂದು ಪ್ರೇರಕಶಕ್ತಿಯಾಗುತ್ತದೆ. ಹೀಗೆ ದೃಢ ನಿಶ್ಚಯದಿಂದ ಮತ್ತು ತಾಳ್ಮೆಯಿಂದ ಯಶಸ್ಸಿನ ಶಿಖರವನ್ನು ಹತ್ತಿದ ಅನೇಕ ಜನರು ತಾವು ತಮ್ಮ ಜೀವನದಲ್ಲಿ ಹೇಗೆ ಯಶಸ್ಸನ್ನು (Success) ಕಂಡೆವು ಎಂಬುದರ ಬಗ್ಗೆ ತಿಳಿಸುತ್ತಾರೆ.
ಹೀಗೆ ಜೀವನದಲ್ಲಿ ಒಂದೊಂದು ಹಂತವನ್ನು ಸಹ ಒಂದೊಂದು ಮೆಟ್ಟಿಲುಗಳಾಗಿ ಪರಿವರ್ತಿಸಿಕೊಂಡು ಯಶಸ್ಸಿನ ಶಿಖರವನ್ನು ಏರಿದವರಲ್ಲಿ ಎಂಬಿಎ ಚಾಯ್ ವಾಲಾ ಸ್ಥಾಪಕರಾದ ಪ್ರಫುಲ್ ಬಿಲ್ಲೋರ್ ಅವರು ಒಬ್ಬರು.
ಒಬ್ಬ ಉದ್ಯಮಿ, ಹೂಡಿಕೆದಾರ ಮತ್ತು ಯುವಕರಿಗೆ ಪ್ರೇರಣೆ ನೀಡುವ ಭಾಷಣಕಾರನೂ ಆಗಿರುವ ಪ್ರಫುಲ್ ಅವರು ಈಗ ಮತ್ತೆ ಸುದ್ದಿಯಲ್ಲಿದ್ದಾರೆ.
ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಇ ಕಾರನ್ನು ಖರೀದಿಸಿದ ಎಂಬಿಎ ಚಾಯ್ ವಾಲಾ ಸ್ಥಾಪಕ
ತಮ್ಮ ಗ್ಯಾರೇಜ್ ಗೆ ಹೊಚ್ಚ ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಇ ಕಾರನ್ನು ಸೇರಿಸಿರುವುದರಿಂದ ಈ ಬಾರಿ ಎಂಬಿಎ (MBA) ಚಾಯ್ ವಾಲಾ (Chaiwala) ಸ್ಥಾಪಕ ಪ್ರಫುಲ್ ಬಿಲ್ಲೋರ್ ಅವರು ಸುದ್ದಿಯಲ್ಲಿದ್ದಾರೆ.
ಅವರು ಇತ್ತೀಚೆಗೆ ತಮ್ಮ ಐಷಾರಾಮಿಯಾಗಿರುವ ಏಳು ಆಸನಗಳ ಎಸ್‌ಯುವಿಯನ್ನು ಖರೀದಿ ಮಾಡಿದ್ದಾರೆ. ಅದರ ಫೋಟೋಗಳು ಮತ್ತು ವೀಡಿಯೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮದ ಪ್ಲಾಟ್ ಫಾರ್ಮ್ ಗಳಲ್ಲಿ ಹಂಚಿಕೊಂಡರು. ಅದು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆದವು.
27 ವರ್ಷದ ಈ ಉದ್ಯಮಿ ಪೋಲಾರ್ ವೈಟ್ ಬಣ್ಣದ ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‌ಯುವಿಯನ್ನು ಖರೀದಿಸಿದ್ದಾರೆ. ಅವರು ಖರೀದಿಸಿದ ನಿಖರವಾದ ರೂಪಾಂತರವು ತಿಳಿದಿಲ್ಲವಾದರೂ, ಜಿಎಲ್ಇಯನ್ನು ಭಾರತದಲ್ಲಿ ಎರಡು ಡೀಸೆಲ್ ಮತ್ತು ಒಂದು ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಮೂರು ರೂಪಾಂತರಗಳಲ್ಲಿ ನೀಡಲಾಗುತ್ತದೆ.
ಪ್ರಫುಲ್ ‘ಎಂಬಿಎ ಚಾಯ್ ವಾಲಾ’ ಎಂದು ಖ್ಯಾತಿ ಪಡೆದದ್ದು ಹೇಗೆ?
ಎಂಬಿಎ ಮುಂದುವರಿಸಲು ಸಿಎಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲವಾದ ನಂತರ 2017 ರಲ್ಲಿ ಐಐಎಂ ಅಹಮದಾಬಾದ್ ನ ಹೊರಗೆ ಚಹಾ ಅಂಗಡಿಯನ್ನು ಪ್ರಾರಂಭಿಸಿದಾಗಿನಿಂದ ಪ್ರಫುಲ್ ಎಂಬಿಎ ಚಾಯ್ ವಾಲಾ ಎಂದು ಖ್ಯಾತಿಯನ್ನು ಪಡೆದರು.
ಅವರ ಉದ್ಯಮದ ಹೆಸರಿನಲ್ಲಿ ಎಂಬಿಎ ಎಂದರೆ 'ಮಿಸ್ಟರ್ ಬಿಲ್ಲೋರ್ ಅಹಮದಾಬಾದ್' ಎಂದಾಗಿದ್ದು ಅದು 'ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್' ಶೈಕ್ಷಣಿಕ ಪದವಿ ಎಂದು ಸೂಚಿಸುವುದಿಲ್ಲ.
ಇದನ್ನೂ ಓದಿ: MBA Chai Wala: 8000 ರೂ.ನಿಂದ 3 ಕೋಟಿಯ ಬ್ಯುಸಿನೆಸ್; ಈ ಚಾಯ್ ವಾಲಾನ ಸಾಧನೆಗೆ ಮೆಚ್ಚಲೇಬೇಕು!
ಎಂಬಿಎ ಚಾಯ್ ವಾಲಾ ಈಗ ಸಾಮಾಜಿಕ ಮಾಧ್ಯಮದಲ್ಲಿ ಚಿರಪರಿಚಿತ ಹೆಸರು. ಪ್ರಫುಲ್ ತನ್ನ ವ್ಯವಹಾರವನ್ನು ದೇಶದ ವಿವಿಧ ಭಾಗಗಳಿಗೆ ವಿಸ್ತರಿಸಿದ್ದಾರೆ. ಅವರ ಕಂಪನಿಯು ಈಗ ದೇಶಾದ್ಯಂತ 50ಕ್ಕೂ ಹೆಚ್ಚು ನಗರಗಳಲ್ಲಿ 200ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದೆ.
ಕಾರು ಖರೀದಿಸಿದ ವೀಡಿಯೋವೊಂದನ್ನು ಇವರು ಸಾಮಾಜಿಕ ಮಾಧ್ಯಮದಲ್ಲಿ ನಾಲ್ಕು ದಿನಗಳ ಹಿಂದೆ ಹಂಚಿಕೊಂಡಿದ್ದು, ಇದುವರೆಗೆ ಈ ವೀಡಿಯೋ 3 ಲಕ್ಷಕ್ಕಿಂತಲೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ.
ಪ್ರಫುಲ್ ಖರೀದಿಸಿದ ಮರ್ಸಿಡಿಸ್ ಬೆಂಝ್ ಜಿಎಲ್ಇ ಬೆಲೆ ಮತ್ತು ವಿಶೇಷತೆಗಳೇನು?
ಮರ್ಸಿಡಿಸ್ ಬೆಂಝ್ ಜಿಎಲ್ಇಯನ್ನು 300ಡಿ, 400ಡಿ ಮತ್ತು 450 ಪೆಟ್ರೋಲ್ ಎಂಬ ಮೂರು ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತಿದೆ.
3.0 ಲೀಟರಿನ 6 ಸಿಲಿಂಡರ್ ಪೆಟ್ರೋಲ್ ಎಂಜಿನ್ 435 ಬಿಹೆಚ್‌ಪಿ ಪವರ್, 2.0 ಲೀಟರಿನ 4 ಸಿಲಿಂಡರ್ ಡೀಸೆಲ್ ಎಂಜಿನ್ ಹಾಗೂ 330 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಟ್ರಾನ್ಸ್ ಮಿಷನ್ ನಿರ್ವಹಣೆಯನ್ನು 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಮೂಲಕ ನಿರ್ವಹಿಸಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ