• Home
  • »
  • News
  • »
  • business
  • »
  • ITR ಫೈಲ್ ಮಾಡುತ್ತಿದ್ದೀರಾ? ಈ ಭತ್ಯೆ ಪ್ರಯೋಜನಗಳೊಂದಿಗೆ ತೆರಿಗೆ ಉಳಿತಾಯ ಮಾಡಿ!

ITR ಫೈಲ್ ಮಾಡುತ್ತಿದ್ದೀರಾ? ಈ ಭತ್ಯೆ ಪ್ರಯೋಜನಗಳೊಂದಿಗೆ ತೆರಿಗೆ ಉಳಿತಾಯ ಮಾಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಂಬಳ ಪಡೆಯುವ ಉದ್ಯೋಗಿಗಳಿಗೆ ಭತ್ಯೆ (Allowances) ಎಂಬುದು ತಮ್ಮ ಉದ್ಯೋಗದಾತರಿಂದ ದೊರೆಯುವ ಆರ್ಥಿಕ ನೆರವಾಗಿದೆ. ಭತ್ಯೆಗಳನ್ನು ಹಲವು ವರ್ಗಗಳಾಗಿ ವಿಂಗಡಿಸಲಾಗಿದೆ ಹಾಗೂ ಉದ್ಯೋಗಿಗಳು ಈ ಭತ್ಯೆಗಳನ್ನು ಮಾಸಿಕವಾಗಿ ಕೂಡ ಪಡೆದುಕೊಳ್ಳಬಹುದಾಗಿದೆ.

  • Trending Desk
  • 5-MIN READ
  • Last Updated :
  • Share this:

ಸಂಬಳ (Money) ಪಡೆಯುವ ಉದ್ಯೋಗಿಗಳು ದೇಶದ ಒಟ್ಟಾರೆ ತೆರಿಗೆದಾರರ ಪ್ರಮುಖ ಭಾಗವನ್ನು ರೂಪಿಸುತ್ತಾರೆ ಮತ್ತು ತೆರಿಗೆ ಸಂಗ್ರಹಕ್ಕೆ ಅವರು ನೀಡುವ ಕೊಡುಗೆ ಸಾಕಷ್ಟು ಮಹತ್ವದ್ದಾಗಿದೆ. ಆದಾಯ ತೆರಿಗೆ ವಿನಾಯಿತಿಗಳು ಉದ್ಯೋಗಿಗಳಿಗೆ ತೆರಿಗೆ ಉಳಿಸಲು ಅನೇಕ ಅವಕಾಶಗಳನ್ನು ಒದಗಿಸುತ್ತವೆ.ಈ ಕಡಿತಗಳು ಹಾಗೂ ವಿನಾಯಿತಿಗಳ ಸಹಾಯದಿಂದ ಉದ್ಯೋಗಿಗಳು ತೆರಿಗೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದಾಗಿದೆ. ಸಂಬಳ ಪಡೆಯುವ ಉದ್ಯೋಗಿಗಳಿಗೆ ಭತ್ಯೆ (Allowances) ಎಂಬುದು ತಮ್ಮ ಉದ್ಯೋಗದಾತರಿಂದ ದೊರೆಯುವ ಆರ್ಥಿಕ ನೆರವಾಗಿದೆ. ಭತ್ಯೆಗಳನ್ನು ಹಲವು ವರ್ಗಗಳಾಗಿ ವಿಂಗಡಿಸಲಾಗಿದೆ ಹಾಗೂ ಉದ್ಯೋಗಿಗಳು ಈ ಭತ್ಯೆಗಳನ್ನು ಮಾಸಿಕವಾಗಿ ಕೂಡ ಪಡೆದುಕೊಳ್ಳಬಹುದಾಗಿದೆ.


ಭತ್ಯೆ ಎಂಬುದು ಆರ್ಥಿಕ ನೆರವು


ಆದಾಯ ತೆರಿಗೆ ರಿಟರ್ನ್ಸ್ (ITR) ಉಳಿಸುವಾಗ ಈ ಭತ್ಯೆಗಳು ಸಹಕಾರಿ ಎಂದೆನಿಸಿದ್ದು, ನಿವ್ವಳ ತೆರಿಗೆ, ತೆರಿಗೆ ಕಡಿತ ಕ್ಲೇಮ್‌ಗಳು, ಒಟ್ಟು ತೆರಿಗೆ ಆದಾಯ ಒಳಗೊಂಡಿರುತ್ತದೆ.


ಭತ್ಯೆಗಳ ವಿಧಗಳು


ಭತ್ಯೆಯಲ್ಲಿ ಹಲವಾರು ವಿಧಗಳಿದ್ದು ತೆರಿಗೆ ಭತ್ಯೆ, ಭಾಗಶಃ ತೆರಿಗೆ ಭತ್ಯೆ, ತೆರಿಗೆ ರಹಿತ ಭತ್ಯೆ ಮೊದಲಾದವು. ಹೆಚ್ಚು ಸಾಮಾನ್ಯವಾಗಿರುವ ಭತ್ಯೆ ಎಂದರೆ ಸೆಕ್ಷನ್ 10 ರ ಅಡಿಯಲ್ಲಿ ಸಂಬಳ ಪಡೆಯುವ ಉದ್ಯೋಗಿಗಳು ತಮ್ಮ ಉದ್ಯೋಗದಾತರಿಂದ ಪಡೆಯುವ ಭತ್ಯೆಗಳಾಗಿದೆ. ಈ ಭತ್ಯೆಗಳ ವಿವರಗಳನ್ನು ಫಾರ್ಮ್ 16 ರಲ್ಲಿ ಪಟ್ಟಿ ಮಾಡಲಾಗಿದೆ.


ಹೌಸ್ ರೆಂಟ್ ಅಲೊವೆನ್ಸ್ (ಎಚ್‌ಆರ್‌ಎ)


ಬಾಡಿಗೆ ಮನೆಯಲ್ಲಿ ವಾಸಿಸುವ ಸಂಬಳ ಪಡೆಯುವ ಉದ್ಯೋಗಿಗಳು ಎಚ್‌ಆರ್‌ಎ ತೆರಿಗೆ ವಿನಾಯಿತಿಯನ್ನು ಕ್ಲೇಮ್ ಮಾಡಬಹುದಾಗಿದೆ. ನೀವು ಮಹಾನಗರಗಳಲ್ಲಿ (ಮೆಟ್ರೋಪಾಲಿಟನ್) ವಾಸಿಸುತ್ತಿದ್ದರೆ ನಿಮ್ಮ ಪಾವತಿಯ (ಮೂಲ ಸಂಬಳ + ಡಿಎ) 50% ಎಚ್‌ಆರ್‌ಎ ನೀವು ಪಡೆಯುತ್ತೀರಿ.


ಇದನ್ನೂ ಓದಿ: ಗಿಫ್ಟ್​ ಇಸ್ಕೊಳ್ಳೋ ಮುನ್ನ ಹುಷಾರ್​, ಕಾಸ್ಟ್ಲಿ ಅಂತ ಖುಷಿಪಟ್ರೆ ಬೀಳುತ್ತೆ ಟ್ಯಾಕ್ಸ್​ ಬರೆ!


ಇನ್ನು ಮೆಟ್ರೋ ಪಾಲಿಟನ್ ಅಲ್ಲದ ಪ್ರದೇಶಗಳಲ್ಲಿ ವಾಸಿಸುತ್ತಿದ್ದರೆ 40% ಹೌಸ್ ರೆಂಟ್ ಅಲೊವೆನ್ಸ್ ಅನ್ನು ಅಂದರೆ ಬಾಡಿಗೆ ಭತ್ಯೆಯನ್ನು ಪಡೆದುಕೊಳ್ಳುತ್ತೀರಿ. ಎರಡನೆಯದಾಗಿ, ವಾರ್ಷಿಕ ಆದಾಯದ 10% ಮೀರುವ ಹೆಚ್ಚುವರಿ ಬಾಡಿಗೆ ಪಾವತಿಗಳಿಗೆ (ಮೂಲ ವೇತನ ಮತ್ತು ಡಿಎ) ಅರ್ಹರಾಗಿರುತ್ತೀರಿ.


ವೆಕೇಶನ್ ಪ್ರಯಾಣ ನೆರವು ಅಥವಾ ರಿಯಾಯಿತಿಗಳು


ಇದಕ್ಕೆ ಅನುಗುಣವಾಗಿ ಭಾರತದಲ್ಲಿ ವೆಕೇಶನ್‌ (ರಜೆ) ಉದ್ಯೋಗಿಯ ಪ್ರಯಾಣ ವೆಚ್ಚಗಳನ್ನು ತೆರಿಗೆ-ಮುಕ್ತ ವೆಚ್ಚಗಳಾಗಿ ಸ್ವೀಕರಿಸಲಾಗುತ್ತದೆ.


ಉದ್ಯೋಗಿಗಳು ಕೆಲಸದ ವೇಳೆಯಲ್ಲಿ ಪ್ರಯಾಣಗಳನ್ನು ಮಾಡಬಹುದು ಹಾಗೂ ರಜಾದಿನಗಳನ್ನು ಕಳೆಯಬಹುದು. ಈ ಸಮಯದಲ್ಲಿ ಸಂಸ್ಥೆಯು ಅವರ ಪ್ರಯಾಣದ ವೆಚ್ಚವನ್ನು ತೆರಿಗೆ ಮುಕ್ತವಾಗಿ ಮರುಪಾವತಿಸುತ್ತದೆ.ಇದನ್ನು ಕ್ಲೇಮ್ ಮಾಡಲು ನೀವು ರೈಲು, ವಿಮಾನ ಅಥವಾ ಸಾರ್ವಜನಿಕ ಸಾರಿಗೆಯನ್ನು ಸಾರಿಗೆ ವಿಧಾನವಾಗಿ ಬಳಸಬೇಕಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ.


ಮಕ್ಕಳ ವಿದ್ಯಾಭ್ಯಾಸ ಭತ್ಯೆ/ಅಲೊವೆನ್ಸ್


ಪ್ರತಿ ಮಗುವಿಗೆ ತಿಂಗಳಿಗೆ ರೂ 100 ರವರೆಗೆ ಪಾವತಿ ಮುಕ್ತರೆಂದೆನಿಸಿದ್ದು ಈ ಸೌಲಭ್ಯ ಗರಿಷ್ಠ ಎರಡು ಮಕ್ಕಳಿಗೆ ಮಾತ್ರ ಸೀಮಿತವಾಗಿದೆ.


ಸಮವಸ್ತ್ರ ಭತ್ಯೆ


ಕಚೇರಿ ಅಥವಾ ಉದ್ಯೋಗ ಸಂಬಂಧಿತ ಸ್ಥಳಗಳಲ್ಲಿ ಧರಿಸುವ ಸಮವಸ್ತ್ರ ವೆಚ್ಚವು ಖರ್ಚಾದ ನಿಜವಾದ ಮೊತ್ತದಿಂದ ವಿನಾಯಿತಿ ಪಡೆದಿದೆ.


ಪುಸ್ತಕಗಳು ಮತ್ತು ನಿಯತಕಾಲಿಕ ಭತ್ಯೆ:


ಆದಾಯ ತೆರಿಗೆ ಕಾನೂನಿಗೆ ಅನುಸಾರವಾಗಿ, ಪುಸ್ತಕಗಳು, ಪತ್ರಿಕೆಗಳು, ನಿಯತಕಾಲಿಕಗಳು, ದಿನಪತ್ರಿಕೆಗಳು ಇತ್ಯಾದಿಗಳಿಗೆ ತಗಲುವ ವೆಚ್ಚವನ್ನು ತೆರಿಗೆ ಮುಕ್ತವಾಗಿ ಮರುಪಾವತಿ ಮಾಡಲಾಗುತ್ತದೆ. ಮರುಪಾವತಿ ಮಾಡಲಾದ ಮೊತ್ತವು ಶುಲ್ಕ ಮೊತ್ತಕ್ಕಿಂತ ಕಡಿಮೆ ಅಥವಾ ಪರಿಹಾರ ಪ್ಯಾಕೇಜ್‌ನಲ್ಲಿ ಸೇರಿಸಲಾದ ಮೊತ್ತವಾಗಿದೆ.


ಇದನ್ನೂ ಓದಿ: ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ, ಆಮೇಲೆ ಟ್ಯಾಕ್ಸ್​ ಕಟ್ಟೋ ಟೆನ್ಶನ್​ ಇರಲ್ಲ!


ಮೊಬೈಲ್ ಮರುಪಾವತಿ ಭತ್ಯೆ:


ನಿವಾಸದಲ್ಲಿ ಬಳಸುವ ಮೊಬೈಲ್ ಮತ್ತು ಟೆಲಿಫೋನ್‌ನಲ್ಲಿ ತೆರಿಗೆ ವೆಚ್ಚವನ್ನು ಭರಿಸಬಹುದು. ಉದ್ಯೋಗಿಗೆ ಮಾಡಿದ ವೆಚ್ಚಗಳ ತೆರಿಗೆ ಮುಕ್ತ ಮರುಪಾವತಿಯನ್ನು ಪಡೆಯಲು ಆದಾಯ ತೆರಿಗೆ ಕಾನೂನು ಅನುಮತಿಸುತ್ತದೆ.ಉದ್ಯೋಗಿಯು ಪಾವತಿಸಿದ ನಿಜವಾದ ಬಿಲ್ ಮೊತ್ತ ಅಥವಾ ಸಂಬಳ ಪ್ಯಾಕೇಜ್‌ನಲ್ಲಿ ಒದಗಿಸಲಾದ ಮೊತ್ತದ ಮರುಪಾವತಿಯನ್ನು ಕ್ಲೈಮ್ ಮಾಡಬಹುದಾಗಿದೆ.

Published by:ವಾಸುದೇವ್ ಎಂ
First published: