ITC, Titanಗಿಂತಲೂ Adani Green ಈಗ ಹೆಚ್ಚು ಬೆಲೆಬಾಳೋ ಕಂಪನಿಯಂತೆ, ಫುಲ್ ಡೀಟೆಲ್ಸ್ ಇಲ್ಲಿದೆ

ಭಾರತದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಕಂಪನಿಗಳಲ್ಲಿ ಇದು ಒಂದಾಗಿದೆ. ಇದರ ಜೊತೆಗೆ, ವಿಶ್ವದ ಅತಿದೊಡ್ಡ ಹಸಿರು ವಿದ್ಯುತ್ ಖರೀದಿ ಒಪ್ಪಂದಕ್ಕಾಗಿ SECIಯೊಂದಿಗೆ ಒಪ್ಪಂದವನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಒಟ್ಟಾರೆ ಮಾರುಕಟ್ಟೆಯ ಕಾರ್ಯಕ್ಷಮತೆ(performance) ಹೇಗೆಯೇ ಇರಲಿ ಕೆಲವು ಷೇರುಗಳು ಮಾತ್ರ ತಮ್ಮ ಖರೀದಿಯನ್ನು ಮುಂದುವರಿಸುತ್ತಲೇ ಇವೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ, ಅದಾನಿ ಗ್ರೀನ್ ಎನರ್ಜಿ ಕಳೆದ ಮೂರು ವರ್ಷಗಳಿಂದ ಅದಾನಿ ಗ್ರೀನ್ ಎನರ್ಜಿ(Adani Green Energy) 4,800-ಬ್ಯಾಗರ್‌ಗಳನ್ನು ಸಾಧಿಸುವ ಮೂಲಕ ಉನ್ನತ ಪ್ರದರ್ಶನ ಗಳಿಸಿದೆ. ಮಂಗಳವಾರ, ಕಂಪನಿಯ ಷೇರುಗಳು ಮತ್ತೊಂದು ಹೆಗ್ಗುರುತನ್ನು ತಲುಪುವುದರೊಂದಿಗೆ ಷೇರಿನ ಬೆಲೆಯು ಪ್ರತಿ ಷೇರಿಗೆ 1,919 ರೂ.ಗೆ ಏರಿಕೆಯಾಗುವುದರೊಂದಿಗೆ 3 ಲಕ್ಷ ಕೋಟಿ ರೂ. ಮಾರುಕಟ್ಟೆ (Market Value) ಮೌಲ್ಯವನ್ನು ತಲುಪಿತು. ಅಂತಿಮವಾಗಿ, ಸ್ಟಾಕ್ (Stock Closed) ಮೌಲ್ಯ 4.31 ರಷ್ಟು ಏರಿಕೆಯಾಗಿ 1,906.80 ರೂ.ಗೆ ಕೊನೆಗೊಂಡಿತು.

BUY ರೇಟಿಂಗ್
ಹೆಚ್ಚಿನ ಹೂಡಿಕೆದಾರರು ಈ ಸ್ಟಾಕ್‌ನ ಬಗ್ಗೆ ಒಲವು ತೋರಿಸುತ್ತಿದ್ದಾರೆ , ಆದರೆ ಸ್ಟಾಕ್‌ನ ಹಿಂದಿನ ತ್ವರಿತ ಏರಿಕೆಯ ಗುಟ್ಟು ನಿಗೂಢವಾಗಿರುವುದರಿಂದ ಅದರ ಜನಪ್ರಿಯತೆಯ ಹೊರತಾಗಿಯೂ ಕೆಲವು ವಿಶ್ಲೇಷಕರು ಅದನ್ನು ಟ್ರ್ಯಾಕ್ ಮಾಡುತ್ತಿದ್ದಾರೆ. ವೆಂಚುರಾ ಸೆಕ್ಯುರಿಟೀಸ್ ಕಳೆದ ತಿಂಗಳು ಅಪರೂಪದ ಶಿಫಾರಸನ್ನು ನೀಡಿ ಸ್ಟಾಕ್‌ಗೆ 'BUY' ರೇಟಿಂಗ್ ನೀಡಿತು ಮತ್ತು ಎರಡು ವರ್ಷಗಳ ಗುರಿ ಬೆಲೆಯನ್ನು 2,810 ರೂ. ಗೆ ನಿಗದಿ ಪಡಿಪಡಿಸಿತು .

ಹಸಿರು ವಿದ್ಯುತ್ ಖರೀದಿ ಒಪ್ಪಂದ
ಅದಾನಿ ಗ್ರೀನ್ ಎನರ್ಜಿಯು ಈಗ ಬಜಾಜ್ ಫಿನ್‌ಸರ್ವ್, ಅವೆನ್ಯೂ ಸೂಪರ್‌ಮಾರ್ಟ್ಸ್, ಲಾರ್ಸೆನ್ ಮತ್ತು ಟೂಬ್ರೊ, ಐಟಿಸಿ, ಮಾರುತಿ ಸುಜುಕಿ ಮತ್ತು ಟೈಟಾನ್‌ನಂತಹ ಕಂಪನಿಗಳಿಗಿಂತ ಹೆಚ್ಚು ಮೌಲ್ಯಯುತವಾಗಿದೆ. ಇದು 20,284 MW ಬೆಳವಣಿಗೆಯ ಬದ್ಧತೆಯೊಂದಿಗೆ ಪ್ರಸ್ತುತ 13,990 MW ಪ್ರಾಜೆಕ್ಟ್ ಪೋರ್ಟ್‌ಫೋಲಿಯೋದೊಂದಿಗೆ ಭಾರತದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಕಂಪನಿಗಳಲ್ಲಿ ಇದು ಒಂದಾಗಿದೆ. ಇದರ ಜೊತೆಗೆ, ವಿಶ್ವದ ಅತಿದೊಡ್ಡ ಹಸಿರು ವಿದ್ಯುತ್ ಖರೀದಿ ಒಪ್ಪಂದಕ್ಕಾಗಿ SECIಯೊಂದಿಗೆ ಒಪ್ಪಂದವನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

ಇದನ್ನೂ ಓದಿ: Multibagger Stocks: ಹೂಡಿಕೆದಾರರನ್ನು ಲಕ್ಷಾಧೀಶರನ್ನಾಗಿ ಮಾಡಿದ 5 ಸ್ಟಾಕ್ ಗಳ ಮಾಹಿತಿ ಇಲ್ಲಿದೆ

R J ಪ್ರಭಾವ:
ಜುಬಿಲಂಟ್ ಇಂಗ್ರೆವಿಯಾದ ಅಗ್ರ ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ ಅವರು ಡಿಸೆಂಬರ್ ತ್ರೈಮಾಸಿಕದಲ್ಲಿ 1.3 ಮಿಲಿಯನ್ ಷೇರುಗಳನ್ನು ಮಾರಾಟ ಮಾಡುವ ಮೂಲಕ ಕಂಪನಿಯಲ್ಲಿನ ಅವರ ಪಾಲನ್ನು ಶೇಕಡಾ 0.81ಕ್ಕೆ ಇಳಿಕೆ ಮಾಡಿದರು. ರಾಕೇಶ್ ಜುಂಜುನ್ವಾಲಾ ಅವರಿಂದ ಖರೀದಿ ಮತ್ತು ಮಾರಾಟಕ್ಕೆ ಷೇರು ಬೆಲೆಗಳು ಸಾಮಾನ್ಯವಾಗಿ ಪ್ರತಿಕ್ರಿಯಿಸುತ್ತವೆ. ಇದರ ಪರಿಣಾಮವಾಗಿ ಜುಬಿಲೆಂಟ್ ಇಂಗ್ರೆವಿಯಾ ಷೇರು ಬೆಲೆಯು ಶೇಕಡಾ 3ಕ್ಕಿಂತ ಹೆಚ್ಚು ಕುಸಿಯಿತು.

79.44 ಕೋಟಿ ಮೌಲ್ಯದ ಷೇರುಗಳನ್ನು ಜುಂಜುನ್‌ವಾಲಾ ಮಾರಾಟ ಮಾಡಿದ್ದಾರೆ. ಮತ್ತೀಗ ಸಂಸ್ಥೆಯಲ್ಲಿ ಅವರು 3.14 ರಷ್ಟು ಅಂದರೆ 50 ಲಕ್ಷ ಷೇರುಗಳನ್ನು ಹೊಂದಿದ್ದಾರೆ. ಕಳೆದ ಮೂರು ತಿಂಗಳಲ್ಲಿ, ಇದು 22 ಪ್ರತಿಶತ ಋಣಾತ್ಮಕ ಆದಾಯವನ್ನು ನೀಡಿದೆ ಮತ್ತು ಇವರಿಂದ ಹೊಸದಾಗಿ ಪಟ್ಟಿ ಮಾಡಲಾದ ಸ್ಟಾಕ್ಗೆ ಯಾವುದೇ ವಿಶ್ಲೇಷಕ ಕವರೇಜ್ ಇಲ್ಲ ಎಂದು ತಿಳಿದುಬಂದಿದೆ.

ಟ್ರೈಡೆಂಟ್‌ನ ಡೈವ್:
ಬೆಳವಣಿಗೆಯ ಸಂಖ್ಯೆಗಳು ಎಷ್ಟೇ ಉತ್ತಮವಾಗಿದ್ದರೂ ಸಹ ಮಾರುಕಟ್ಟೆಯು ಕುಸಿಯುತ್ತಿರುವ ಸಂದರ್ಭದಲ್ಲಿ ಕೆಲವು ಷೇರುಗಳಿಗೆ ಅದರಿಂದ ಜಾಸ್ತಿ ಏನು ಪ್ರಯೋಜನವಾಗುವುದಿಲ್ಲ. ಟ್ರೈಡೆಂಟ್ ಟೆಕ್ಸ್‌ಟೈಲ್ಸ್ ತನ್ನ ಡಿಸೆಂಬರ್ ತ್ರೈಮಾಸಿಕದಲ್ಲಿ ಬಲವಾದ ಗಳಿಕೆಯ ಬೆಳವಣಿಗೆಯನ್ನು ವರದಿ ಮಾಡಿತ್ತು. ಇದರ ಏಕೀಕೃತ ನಿವ್ವಳ ಲಾಭವು ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದೆ ಎಂಬ ಸಂಖ್ಯೆಗಳನ್ನು ಸಂಸ್ಥೆ ಪ್ರಕಟಿಸಿದ ನಂತರ ಏಕಾಏಕಿಯಾಗಿ ಸ್ಟಾಕ್ 5 ಪ್ರತಿಶತದಷ್ಟು ಕುಸಿಯಿತು.

ಇದನ್ನೂ ಓದಿ: Multibagger Stocks: ಈ ವರ್ಷಕ್ಕೆ ತಜ್ಞರು ಶಿಫಾರಸು ಮಾಡಿರುವ ಪ್ರಮುಖ ಷೇರುಗಳು ಇವು.. ಹೂಡಿಕೆ ಮಾಡುವ ಮುನ್ನ ತಿಳಿಯಿರಿ

ಕಳೆದ ಮೂರು ತಿಂಗಳಲ್ಲಿ ಶೇ. 64ರಷ್ಟು ಏರಿಕೆ ಕಂಡಿರುವ ಜವಳಿ ಷೇರುಗಳು ಭಾರಿ ಖರೀದಿಯ ನಂತರ ಮಾರಾಟವಾದವು. ಸ್ಟಾಕ್‌ಗಳು ವಿಶ್ಲೇಷಕರ 12-ತಿಂಗಳ ಗುರಿಗಳನ್ನು ಅತಿಕ್ರಮಿಸಿ ಬೆಳೆದು ನಿಂತವು. ಟಾರ್ಗೆಟ್ ಬೆಲೆ ಪ್ರಸ್ತುತ ಬೆಲೆಗಳಿಗಿಂತ 30-40 ಪ್ರತಿಶತದಷ್ಟು ಕಡಿಮೆಯಾಗಿತ್ತು .
Published by:vanithasanjevani vanithasanjevani
First published: