• Home
  • »
  • News
  • »
  • business
  • »
  • Mark Zuckerberg: ಭಾರಿ ಕುಸಿತಕ್ಕೊಳಗಾದ ಮಾರ್ಕ್ ಜುಕರ್‌ಬರ್ಗ್ ಆದಾಯ! ಏನಾಯ್ತು?

Mark Zuckerberg: ಭಾರಿ ಕುಸಿತಕ್ಕೊಳಗಾದ ಮಾರ್ಕ್ ಜುಕರ್‌ಬರ್ಗ್ ಆದಾಯ! ಏನಾಯ್ತು?

ಮಾರ್ಕ್ ಜುಕರ್‌ಬರ್ಗ್

ಮಾರ್ಕ್ ಜುಕರ್‌ಬರ್ಗ್

ಈ ವರ್ಷ ಪ್ರತಿಯೊಬ್ಬ ಯುಎಸ್ ಟೆಕ್ ದೈತ್ಯನಿಗೂ ಅತ್ಯಂತ ಕಠಿಣ ಎಂದೆನಿಸಿದರೂ, ಮೆಟಾ ಪ್ಲ್ಯಾಟ್‌ಫಾರ್ಮ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಸಂಪತ್ತು ಅಳಿಸಿರುವುದು ನಿಚ್ಚಳವಾಗಿ ಎದ್ದುಕಾಣುತ್ತಿದೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ ಪ್ರಕಾರ ಆಗರ್ಭ ಶ್ರೀಮಂತರ ಪೈಕಿ ಜುಕರ್‌ಬರ್ಗ್ ಸಂಪತ್ತು ತೀವ್ರ ಇಳಿಕೆ ಕಂಡಿದೆ.

ಮುಂದೆ ಓದಿ ...
  • Share this:

ಮಾರ್ಕ್‌ ಜುಕರ್‌ಬರ್ಗ್ (Mark Zuckerberg) ನಿವ್ವಳ ಮೌಲ್ಯವು ಈ ವರ್ಷ ಅರ್ಧಕ್ಕಿಂತ ಹೆಚ್ಚು ಇಳಿಕೆಯಾಗಿದ್ದು ಮೆಟಾ (Meta) ಹೆಚ್ಚಿನ ಬಿಕ್ಕಟ್ಟಿನ ಸಮಸ್ಯೆಯಿಂದ ಬಳಲುತ್ತಿರುವುದರಿಂದ ವಿಶ್ವದ ಶ್ರೀಮಂತರ ಉನ್ನತ ಶ್ರೇಣಿಯಿಂದ ಮಾರ್ಕ್ ಅನ್ನು ಹೊರಹಾಕಲಾಗಿದೆ. ಈ ವರ್ಷ ಪ್ರತಿಯೊಬ್ಬ ಯುಎಸ್ ಟೆಕ್ ದೈತ್ಯನಿಗೂ ಅತ್ಯಂತ ಕಠಿಣ ಎಂದೆನಿಸಿದರೂ, ಮೆಟಾ ಪ್ಲ್ಯಾಟ್‌ಫಾರ್ಮ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಸಂಪತ್ತು ಅಳಿಸಿರುವುದು ನಿಚ್ಚಳವಾಗಿ ಎದ್ದುಕಾಣುತ್ತಿದೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ (Bloomberg Billionaires Index) ಪ್ರಕಾರ ಆಗರ್ಭ ಶ್ರೀಮಂತರ ಪೈಕಿ ಜುಕರ್‌ಬರ್ಗ್ ಸಂಪತ್ತು ತೀವ್ರ ಇಳಿಕೆ ಕಂಡಿದೆ. $55.9 ಶತಕೋಟಿಯಲ್ಲಿ, ಅವರ ನಿವ್ವಳ ಮೌಲ್ಯವು ಜಾಗತಿಕ ಬಿಲಿಯನೇರ್‌ಗಳಲ್ಲಿ 20 ನೇ ಸ್ಥಾನದಲ್ಲಿದ್ದು 2014 ರಿಂದ ಅವರು ಕೆಳ ಸ್ಥಾನದಲ್ಲಿದ್ದಾರೆ.


ಮೆಟಾ ಆದ ಫೇಸ್‌ಬುಕ್
38 ರ ಹರೆಯದ ಮಾರ್ಕ್ ಎರಡು ವರ್ಷಗಳ ಹಿಂದೆ $106 ಶತಕೋಟಿ ಮೌಲ್ಯವನ್ನು ಹೊಂದಿದ್ದರು ಮತ್ತು ಜೆಫ್ ಬೆಜೋಸ್ ಮತ್ತು ಬಿಲ್ ಗೇಟ್ಸ್‌ನಂತಹ ಜಾಗತಿಕ ಬಿಲಿಯನೇರ್‌ಗಳ ಗಣ್ಯ ಗುಂಪಿನಲ್ಲಿ ದೊಡ್ಡ ಅದೃಷ್ಟವನ್ನು ಸಂಪಾದಿಸಿದ್ದರು. ಕಂಪೆನಿಯ ಷೇರುಗಳು $382 ಕ್ಕೆ ತಲುಪಿದಾಗ ಅವರ ಸಂಪತ್ತು ಸಪ್ಟೆಂಬರ್‌ 2021ರಲ್ಲಿ $142 ಬಿಲಿಯನ್‌ಗೆ ಏರಿತು. ಅದರ ನಂತರದ ತಿಂಗಳಲ್ಲಿ ಮಾರ್ಕ್ ಜುಕರ್‌ಬರ್ಗ್ ಮೆಟಾ ಸಂಸ್ಥೆಯನ್ನು ಪರಿಚಯಿಸಿದರು ಹಾಗೂ ಫೇಸ್‌ಬುಕ್‌ನಿಂದ ಮೆಟಾಗೆ ಸಂಸ್ಥೆಯನ್ನು ಬದಲಾಯಿಸಿದರು. ಸಂಸ್ಥೆಯ ಇತ್ತೀಚಿನ ಗಳಿಕೆಯು ಅಷ್ಟೊಂದು ತೃಪ್ತಿದಾಯಕವಾಗಿಲ್ಲ ಎಂದೇ ವರದಿಗಳು ಉಲ್ಲೇಖಿಸಿವೆ.


ಷೇರು ಬೆಲೆಯಲ್ಲಿ ಗಣನೀಯ ಕುಸಿತ
ಫೆಬ್ರವರಿಯಲ್ಲಿ ಆರಂಭವಾದ ಸಂಸ್ಥೆಯು ಮಾಸಿಕ ಫೇಸ್‌ಬುಕ್ ಬಳಕೆದಾರರ ಬೆಳವಣಿಗೆಯನ್ನು ಬಹಿರಂಗಪಡಿಸಲಿಲ್ಲ ಅದಾಗ್ಯೂ ಷೇರು ಬೆಲೆಯಲ್ಲಿ ಗಣನೀಯ ಕುಸಿತ ಕಂಡ ಕಂಪೆನಿ ಐತಿಹಾಸಿಕ ನಷ್ಟಕ್ಕೆ ಕಾರಣವಾಯಿತು. ಇದರಿಂದ ಜುಕರ್‌ಬರ್ಗ್ ಅವರ ಸಂಪತ್ತು $31 ಶತಕೋಟಿಗಳಷ್ಟು ಇಳಿಕೆ ಕಂಡಿತು.


ಇದನ್ನೂ ಓದಿ: 2 ದಿನಗಳಲ್ಲಿ ಶಾಶ್ವತವಾಗಿ ಮುಚ್ಚಲಿದೆ ಈ ಬ್ಯಾಂಕ್, ಹಣವನ್ನು ಹಿಂಪಡೆಯಲು ಗ್ರಾಹಕರಿಗೆ RBI ಆದೇಶ!


ಸಮೀಕ್ಷೆಯು ಈ ಇಳಿಕೆಯನ್ನು ಸಂಪತ್ತಿನ ಅತಿದೊಡ್ಡ ಏಕದಿನ ಕುಸಿತವೆಂದು ಬಣ್ಣಿಸಿದೆ. ಟಿಕ್‌ಟಾಕ್‌ನ ಸಣ್ಣ ಸ್ವರೂಪವಾದ ವಿಡಿಯೋ ಪ್ಲ್ಯಾಟ್‌ಫಾರ್ಮ್‌ಗೆ ಉತ್ತರವಾಗಿ ಇನ್‌ಸ್ಟಾಗ್ರಾಮ್ ಪರಿಚಯಿಸಿದ ರೀಲ್ಸ್ ಜಾಹೀರಾತು ಆದಾಯದಲ್ಲಿ ಕಡಿಮೆ ಮೌಲ್ಯವನ್ನು ಹೊಂದಿದ್ದರೂ ಸಂಸ್ಥೆಯು ಕಡಿಮೆ ಮಾರ್ಕೆಟಿಂಗ್ ವೆಚ್ಚದಿಂದ ಪ್ರಭಾವಿತವಾಗಿದೆ.


ಗಮನಾರ್ಹ ಮೊತ್ತ ಕಳೆದುಕೊಳ್ಳಲಿರುವ ಕಂಪೆನಿ
ಮೆಟಾವರ್ಸ್‌ನಲ್ಲಿನ ಕಂಪೆನಿಯ ಹೂಡಿಕೆಗಳಿಂದ ಸ್ಟಾಕ್ ಅನ್ನು ಸೆಳೆಯಲಾಗುತ್ತಿದ್ದು ಮುಂದಿನ ಮೂರರಿಂದ ಐದು ವರ್ಷಗಳಲ್ಲಿ ಪ್ರಾಜೆಕ್ಟ್ ಗಮನಾರ್ಹ ಮೊತ್ತವನ್ನು ಕಳೆದುಕೊಳ್ಳಲಿದೆ ಎಂದು ನೀಧಮ್ ಮತ್ತು ಕಂ ಜುಕರ್‌ಬರ್ಗ್‌ನ ಹಿರಿಯ ಇಂಟರ್ನೆಟ್ ವಿಶ್ಲೇಷಕಿ ಲಾರಾ ಮಾರ್ಟಿನ್ ತಿಳಿಸಿದ್ದಾರೆ.


ಕ್ಯಾಲಿಫೋರ್ನಿಯಾ ಮೂಲದ ಕಂಪೆನಿ ಮೆನ್ಲೊ ಪಾರ್ಕ್ 2022 ರಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸಿದ್ದು ಈ ವರ್ಷ 57% ಇಳಿಕೆ ಕಂಡಿದೆ ಇದು ಆ್ಯಪಲ್ ಇಂಕ್‌ನ 14%, ಅಮೆಜಾನ್.ಕಾಮ್‌ನ 26% ಹಾಗೂ ಗೂಗಲ್‌ನ ಆಲ್ಫಾಬೆಟ್ ಇಂಕ್‌ನ 29% ಕುಸಿತಕ್ಕಿಂತ ಹೆಚ್ಚಾಗಿದೆ. ನೆಟ್‌ಫ್ಲಿಕ್ಸ್ ಇಂಕ್ 60% ಇಳಿಕೆಯನ್ನು ಕಂಡಿದೆ. ಮೆಟಾ ತನ್ನ ಇತರ ಕೆಲವು ವ್ಯವಹಾರಗಳಾದ ವಾಟ್ಸ್‌ ಆ್ಯಪ್ ಅಥವಾ ಇನ್‌ಸ್ಟಾಗ್ರಾಮ್‌ ಅನ್ನು ವೈವಿಧ್ಯಗೊಳಿಸುವ ಮೂಲಕ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು ಎಂಬುದು ಬ್ಲೂಮ್‌ಬರ್ಗ್ ಇಂಟೆಲಿಜೆನ್ಸ್‌ನ ತಂತ್ರಜ್ಞಾನ ವಿಶ್ಲೇಷಕ ಮನ್‌ದೀಪ್ ಸಿಂಗ್ ಮಾತಾಗಿದೆ.


ಮಾರ್ಕ್ ಜುಕರ್‌ಬರ್ಗ್ ಅವರ ಸಂಪೂರ್ಣ ಸಂಪತ್ತು ಮೆಟಾ ಸ್ಟಾಕ್‌ನಲ್ಲಿದೆ. ಮಾರ್ಕ್ ಅವರು 350 ಮಿಲಿಯನ್‌ಗಿಂತಲೂ ಹೆಚ್ಚಿನ ಷೇರುಗಳನ್ನು ಹೊಂದಿದ್ದಾರೆ ಎಂಬುದು ಕಂಪೆನಿಯ ಇತ್ತೀಚಿನ ಹೇಳಿಕೆಯಾಗಿದೆ.


ತಂಡದಲ್ಲಿ ಎದ್ದುಕಾಣುತ್ತಿರುವ ಅನುಭವಸ್ಥರ ಕೊರತೆ
ಮಾರ್ಕ್ ಜುಕರ್‌ಬರ್ಗ್ ತಮ್ಮ ಹಿರಿಯ ಅನುಭವಿ ತಂಡವನ್ನು ಹೊರಹಾಕಿರುವುದೇ ಈ ಆರ್ಥಿಕ ಕುಸಿತಕ್ಕೆ ಕಾರಣವಿರಬಹುದು ಎಂಬ ಸುದ್ದಿ ಕೂಡ ಉದ್ಯಮ ರಂಗದಲ್ಲಿ ಹರಿದಾಡುತ್ತಿದೆ. ವ್ಯವಹಾರದತ್ತ ಸರಿಯಾಗಿ ಗಮನ ಹರಿಸದೆಯೇ ಮಾರ್ಕ್ ಬರೀ ದುಡ್ಡು ಸಂಪಾದನೆಯೊಂದನ್ನೇ ಗುರಿಯಾಗಿಸಿಕೊಂಡಿದ್ದಾರೆ.


ಇದನ್ನೂ ಓದಿ: Dye Neuroscience Kit: ಭಾರತದ ಮೊಟ್ಟ ಮೊದಲ ಡೈ ನ್ಯೂರೋಸೈನ್ಸ್‌ ಕಿಟ್‌ ತಯಾರಿಸಿದ ಇಂಜಿನಿಯರಿಂಗ್ ವಿದ್ಯಾರ್ಥಿ


ತಮ್ಮ ಸಂಸ್ಥೆಯಲ್ಲಿ ಹಿರಿಯ ನುರಿತ ಅಧಿಕಾರಿಗಳನ್ನೆಲ್ಲಾ ಮಾರ್ಕ್ ಜುಕರ್‌ಬರ್ಗ್ ಹೊರದಬ್ಬಿದರು ಹಾಗೂ ಇದೀಗ ಕಂಪೆನಿಯಲ್ಲಿರುವವರೆಲ್ಲರೂ ಮಾರ್ಕ್‌ನಂತೆಯೇ ಹಣಮಾಡುವ ಗುರಿ ಹೊಂದಿರುವವರು ಮಾತ್ರವೇ ಹೊರತು ವ್ಯವಹಾರಸ್ಥರಲ್ಲ ಎಂದಾಗಿದೆ. ಸಂಪತ್ತು ಮಾರ್ಕ್ ಜುಕರ್‌ಬರ್ಗ್ ಅವರ ತಲೆಕೆಡಿಸಿದೆ ಎಂಬ ಹೇಳಿಕೆಗಳೂ ಇಲ್ಲದಿಲ್ಲ.

Published by:Ashwini Prabhu
First published: