• Home
  • »
  • News
  • »
  • business
  • »
  • Sarah Toukan: ಸಾಲು ಸಾಲು ಸೋಲುಗಳ ನಂತರ ಸ್ಟಾರ್ಟ್​ಅಪ್​ನಲ್ಲಿ ಯಶಸ್ಸು, ಸಾರಾ ಟೌಕನ್‌ ಎಂಬ ಮಹಿಳೆಯ ಸಾಧನೆ ಕಥೆ

Sarah Toukan: ಸಾಲು ಸಾಲು ಸೋಲುಗಳ ನಂತರ ಸ್ಟಾರ್ಟ್​ಅಪ್​ನಲ್ಲಿ ಯಶಸ್ಸು, ಸಾರಾ ಟೌಕನ್‌ ಎಂಬ ಮಹಿಳೆಯ ಸಾಧನೆ ಕಥೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತಂತ್ರಜ್ಞಾನದ ಉನ್ನತ ಮಹಿಳಾ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಉದ್ಯಮಿ ಸಾರಾ, ತನ್ನ ಶಾಲಾ ದಿನಗಳಲ್ಲಿ ವಿಜ್ಞಾನ ಮತ್ತು ಗಣಿತದ ವಿಷಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರಂತೆ. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಅಭ್ಯಾಸ ಮಾಡಿದರು.

ಮುಂದೆ ಓದಿ ...
  • Share this:

ಕೆಲವೇ ಕ್ಷೇತ್ರಗಳಿಗೆ ಸೀಮಿತವಾಗಿದ್ದ ಮಹಿಳೆಯರು (Women) ಇಂದು ಪ್ರತಿಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸುವ ಮೂಲಕ ಯಶಸ್ವಿಯಾಗುತ್ತಿದ್ದಾರೆ. ಉದ್ಯಮ ಕ್ಷೇತ್ರ ಇದಕ್ಕೆ ಹೊರತಾಗಿಲ್ಲ. ಅದೆಷ್ಟೋ ಸ್ಟಾರ್ಟ್‌ಅಪ್‌ (Start Up) , ಅದೆಷ್ಟೋ ಸಂಸ್ಥೆಗಳನ್ನು ಕಟ್ಟಿ ಬೆಳೆಸುವಲ್ಲಿ ಮಹಿಳೆಯರು ಮುನ್ನಡೆ ಸಾಧಿಸುತ್ತಿದ್ದಾರೆ. ಟೆಕ್ಕಿ ಸಾರಾ ಟೌಕನ್‌ (Sarah Toukan) ಎಂಬ ಮಹಿಳೆ ಫಿನ್‌ಟೆಕ್ ಕ್ಷೇತ್ರದಲ್ಲಿ ಉದ್ಯಮಶೀಲತೆಯ ಹಾದಿಯಲ್ಲಿ ಯಶಸ್ವಿಯಾಗಿದ್ದಾರೆ. ಇಂದು ತನ್ನ ಸಹೋದರರಾದ ಫೈಸಲ್ ಟೌಕನ್ ಮತ್ತು ಆಂಡ್ರ್ಯೂ ಗೋಲ್ಡ್ ಜೊತೆಗೆ ಸಾರಾ ವೇಗವಾಗಿ ಬೆಳೆಯುತ್ತಿರುವ ಪಾವತಿಸುವ ಸೇವಾ ಪ್ರಕ್ರಿಯೆ ಹೊಂದಿರುವಂತಹ ಫಿನ್‌ಟೆಕ್‌ ಕ್ಷೇತ್ರದಲ್ಲಿ ʼಝಿನಾʼ (ziina app) ಎಂಬ ಪಾವತಿ ಅಪ್ಲಿಕೇಷನ್ ಸ್ಟಾರ್ಟ್‌ಅಪ್‌ ಅನ್ನು ಆರಂಭಿಸಿ ಅದರ ಹೊಣೆ ಹೊತ್ತಿದ್ದಾರೆ.


ಝಿನಾ ಸ್ಟಾರ್ಟಪ್ ಇದುವರೆಗೆ $9.4 ಮಿಲಿಯನ್ ಹಣವನ್ನು ಗಳಿಕೆಮಾಡಿದ್ದು ಶೀಘ್ರದಲ್ಲೇ ಸೌದಿ ಅರೇಬಿಯಾ ಮತ್ತು ಜೋರ್ಡಾನಿನಲ್ಲೂ ಪರಿಚಯಿಸಲು ಕೆಲಸ ಮಾಡುತ್ತಿದ್ದಾರೆ.


ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿರುವ ಸಾರಾ


ತಂತ್ರಜ್ಞಾನದ ಉನ್ನತ ಮಹಿಳಾ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಉದ್ಯಮಿ ಸಾರಾ, ತನ್ನ ಶಾಲಾ ದಿನಗಳಲ್ಲಿ ವಿಜ್ಞಾನ ಮತ್ತು ಗಣಿತದ ವಿಷಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರಂತೆ. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಅಭ್ಯಾಸ ಮಾಡಿದರು.


"ಮೆಕ್ಯಾನಿಕಲ್ ಅಪ್ಲಿಕೇಶನ್ ವಿಷಯ ಹೆಚ್ಚು ವಿಸ್ತಾರವನ್ನು ಹೊಂದಿತ್ತು. ನಾನು ಸವಾಲಿನ ಸಮಸ್ಯೆಗಳ ಮೇಲೆ ಕೆಲಸ ಮಾಡಲು ಬಯಸುತ್ತೇನೆ. ಇಲ್ಲಿ ನಾನು ಸೂಕ್ಷ್ಮದರ್ಶಕದ ನಿಖರತೆಗಾಗಿ ಉತ್ಪನ್ನಗಳನ್ನು ತಯಾರಿಸಲು ಬಳಸುವ ತಂತ್ರಗಳು ಮತ್ತು ತಂತ್ರಜ್ಞಾನವನ್ನು ಕಲಿತೆ" ಎಂದು ಉದ್ಯಮಿ ಹೇಳುತ್ತಾರೆ.


ಸಾರಾ ಕಾಲೇಜು ದಿನಗಳಲ್ಲಿ ಅವರು ತಂಡದೊಂದಿಗೆ ಉತ್ತರ ಘಾನಾಕ್ಕೆ ನೀರಾವರಿ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿದರು ಮತ್ತು ಟ್ರಾಫಿಕ್‌ನಲ್ಲಿ ಸಿಲುಕಿರುವ ಸ್ವಯಂ-ಚಾಲನಾ ಕಾರುಗಳಿಗೆ ಬಳಕೆದಾರರ ಅನುಭವವನ್ನು ಮರುವಿನ್ಯಾಸಗೊಳಿಸಲು ಉತ್ಪನ್ನದಲ್ಲಿ ಕೆಲಸ ಮಾಡಿದರು.


ಸ್ನೇಹಿತರ ಜೊತೆ ಮೊದಲ ಉದ್ಯಮ ಆರಂಭಿಸಿದ ಸಾರಾ


ಪದವಿ ಮುಗಿಸಿದ ಸಾರಾ ಟೆಕ್ಸಾಸ್ ಮತ್ತು ಪ್ಯಾರಿಸ್ನಲ್ಲಿ ದೊಡ್ಡ ಕೈಗಾರಿಕಾ ಕಂಪನಿ ಜೊತೆ ಕೆಲಸ ಮಾಡಿದರು. ಆದರೆ ಸಾರಾ ಉದ್ಯಮಿಗಳ ಕುಟುಂಬದಿಂದ ಬಂದಿದ್ದರಿಂದ, ಅವರು ತಮ್ಮದೆ ಆದ ಉದ್ಯಮ, ಸಂಸ್ಥೆ ಏನಾದರೂ ಒಂದನ್ನು ಮಾಡಲು ಬಯಸಿದ್ದರು.


ಆದ್ದರಿಂದ ಕೆಲಸ ಮಾಡುತ್ತಿದ್ದ ಕಂಪನಿಗೆ ವಿದಾಯ ಹೇಳಿದ ಸಾರಾ ಉದ್ಯಮದತ್ತ ತಿರುಗಿದರು. ಸ್ನೇಹಿತರ ಜೊತೆಗೂಡಿ ಆಹಾರ ಮತ್ತು ಪಾನೀಯ ಉದ್ಯಮಕ್ಕೆ ಕೈ ಹಾಕಿದರು.


ಮೊದಲಿಗೆ ಎಲ್ಲವೂ ಅಂದುಕೊಂಡಂತೆ ಸರಾಗವಾಗಿ ನಡೆಯುತ್ತಿತ್ತು. ನಂತರ ಸಾರಾ ಅವರ ವ್ಯಾಪಾರ ಪಾಲುದಾರರು ಕೌಟುಂಬಿಕ ಕಾರಣಗಳಿಗಾಗಿ ಕ್ಯಾಲಿಫೋರ್ನಿಯಾಗೆ ಹಿಂತಿರುಗಬೇಕಾಯಿತು ಮತ್ತು ಉದ್ಯಮಕ್ಕೆ ಹೂಡಿಕೆ ಸವಾಲಾಗಿತ್ತು. ದುರದೃಷ್ಟವಶಾತ್, ಸಾರಾ ಮತ್ತು ಸ್ನೇಹಿತರು ಕಂಪನಿಯನ್ನು ಮುಚ್ಚುವಂತಾಯಿತು.


ಸ್ಟಾರ್ಟ್‌ಅಪ್‌ ಕಂಪನಿಯಲ್ಲಿ ಕೆಲಸ


ಈ ಎಲ್ಲಾ ಸವಾಲು, ಸೋಲುಗಳಿಂದ ಸ್ವಲ್ಪ ವಿರಾಮ ತೆಗೆದುಕೊಂಡ ಸಾರಾ ಅವರು ನಂತರ ಲಂಡನ್‌ನಲ್ಲಿ ಪ್ರಾಪರ್ಟಿ ವರ್ಕ್ಸ್ ಎಂಬ ಸ್ಟಾರ್ಟ್‌ಅಪ್‌ಗೆ ಸೇರಿದರು, ಚಿಲ್ಲರೆ ಸ್ಥಳ, ಫ್ಯಾಕ್ಟರಿ ಸ್ಥಳ ಅಥವಾ ಗೋದಾಮಿನ ಸ್ಥಳವನ್ನು ಹುಡುಕುವ ವ್ಯವಹಾರಗಳಿಗೆ ಪ್ರಾಪರ್ಟಿ ಫೈಂಡರ್ ಸ್ಟಾರ್ಟ್‌ಅಪ್‌ನ ಭಾಗವಾಗಿ ಕೆಲಸ ಮಾಡಿದರು. ಆದಾಗ್ಯೂ, ಸಾರಾ ಕಂಪನಿ ಸೇರಿಕೊಂಡ ಒಂದು ವರ್ಷದ ನಂತರ ಸ್ಟಾರ್ಟ್ಅಪ್ ಅನ್ನು ಕಾರಣಾಂತರಗಳಿಂದ ಮುಚ್ಚಲಾಯಿತು.


ಮತ್ತೊಂದು ಹೊಡೆತ ಅನುಭವಿಸಿದ ಸಾರಾ ಹೊಸದೊಂದು ತನ್ನದೇ ಸ್ಟಾರ್ಟ್‌ಅಪ್‌ ಬಗ್ಗೆ ಯೋಚಿಸಲು ಆರಂಭಿಸಿದರು. ಸಾರಾ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯ ಬಗ್ಗೆ ಎಷ್ಟು ಸಾಧ್ಯವೋ ಅಷ್ಟು ಕಲಿಯಲು ಪ್ರಾರಂಭಿಸಿದರು. ಈವೆಂಟ್‌ಗಳು ಮತ್ತು ಮೀಟ್‌ಅಪ್‌ಗಳಲ್ಲಿ ಭಾಗವಹಿಸುತ್ತಾ ಸಮಯ ಕಳೆಯುತ್ತಿದ್ದರು. ಆಗ ಲಂಡನ್‌ನ ಜಾಗತಿಕ ಫಿನ್‌ಟೆಕ್ ಹಬ್‌ನಲ್ಲಿರುವ ಫಿನ್‌ಟೆಕ್ ವಿಭಾಗದಲ್ಲಿ ಅವರ ಆಸಕ್ತಿ ಹೆಚ್ಚಿತು.


ಸಾಲು ಸಾಲು ಸೋಲುಗಳ ನಂತರ ʼಝಿನಾʼ ಆರಂಭ


ಸಾರಾ ಅವರು ಫಿನ್‌ಟೆಕ್ ಪರಿಸರ ವ್ಯವಸ್ಥೆಯ ಬಗ್ಗೆ ಹೆಚ್ಚು ಅರ್ಥಮಾಡಿಕೊಂಡ ನಂತರ ತಮ್ಮ ಸಹೋದರ ಫೈಸಲ್ ಅವರೊಂದಿಗೆ ಫಿನ್ಟೆಕ್ ಸ್ಟಾರ್ಟ್ಅಪ್ ಕಲ್ಪನೆಯನ್ನು ಚರ್ಚಿಸಿ ಕೊನೆಗೆ ಫೈಸಲ್ ಮತ್ತು ಆತನ ಸಹೋದ್ಯೋಗಿ ಆಂಡ್ರ್ಯೂ ಜೊತೆಗೂಡಿ ʼಝಿನಾʼ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು.


ಇದನ್ನೂ ಓದಿ: ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಫ್ರೀ ಶವರ್, ಒಡೆದ ನಲ್ಲಿಯ ವಿಡಿಯೋ ಫುಲ್ ವೈರಲ್


ಪೇಟಿಎಂ ಮತ್ತು ಅಮೆಜಾನ್ ಪೇಯಂತೆಯೇ ಝಿನಾ ಡಿಜಿಟಲ್ ವ್ಯಾಲೆಟ್ ಆಗಿದೆ. ಇದು ಬಳಕೆದಾರರಿಗೆ ಕೆಲವು ಟ್ಯಾಪ್‌ಗಳಲ್ಲಿ ಪಾವತಿಗಳನ್ನು (ಹಣ) ಕಳುಹಿಸಲು ಮತ್ತು ಸ್ವೀಕರಿಸಲು ಅನುಮತಿಸುತ್ತದೆ. ಇದು IBAN ಮತ್ತು ಸ್ವಿಫ್ಟ್ ಕೋಡ್‌ಗಳ ಪ್ರಕ್ರಿಯೆಯನ್ನು ತೆಗೆದುಹಾಕುವುದಲ್ಲದೆ, ಬಳಕೆದಾರರಿಗೆ ಪಠ್ಯಗಳು, ಎಮೋಜಿಗಳು, ಫೋಟೋಗಳು ಮತ್ತು GIF ಗಳನ್ನು ಕಳುಹಿಸಲು ಅನುಮತಿಸುವ ಮೂಲಕ ಪಾವತಿಯ ಅನುಭವವನ್ನು ಸಾಮಾಜಿಕವಾಗಿಸುತ್ತದೆ. ತಂಡವು ಸಾಮಾಜಿಕ ಡೆಬಿಟ್ ಕಾರ್ಡ್ ಮಾದರಿಯಲ್ಲಿಯೂ ಕಾರ್ಯನಿರ್ವಹಿಸುತ್ತಿದೆ.


ಸೋಲು, ಯಶಸ್ಸುಗಳ ಬಗ್ಗೆ ಸಾರಾ ಮಾತು


ತಮ್ಮ ಸೋಲು, ಯಶಸ್ಸುಗಳ ಬಗ್ಗೆ ಮಾತನಾಡಿದ ಸಾರಾ ಉತ್ಪನ್ನ ಕಂಪನಿಗಳಲ್ಲಿ ತೊಡಗಿರುವ ಜನರು ಅವರು ಯಾರೊಂದಿಗೆ ಕೆಲಸ ಮಾಡುತ್ತಿದ್ದಾರೆ ಮತ್ತು ಅವರ ಪಾಲುದಾರರು ಯಾರು ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ತಮ್ಮ ಜೀವನದಲ್ಲಿ ಕಲಿತ ಪಾಠಗಳ ಬಗ್ಗೆ ಹೇಳುತ್ತಾರೆ.


ಇದು ಯಶಸ್ಸಿಗೆ ಮೂಲಭೂತ ಅವಶ್ಯಕತೆಯಾಗಿದೆ ಎಂದು ಸಲಹೆ ನೀಡಿದ್ದಾರೆ. ಒಬ್ಬ ವಾಣಿಜ್ಯೋದ್ಯಮಿಯಾಗಿ, ನೀವು ಸ್ವಾಭಾವಿಕವಾಗಿ ಮೊಂಡುತನ ಹೊಂದಿರುತ್ತೀರಿ. ಇಲ್ಲಿ ನೀವು ಕೆಲಸ ಮಾಡಲು ಮತ್ತು ಕಲಿಯಲು ಇಷ್ಟಪಡುವ ಸವಾಲನ್ನು ಆಯ್ಕೆ ಮಾಡುವುದು ಮುಖ್ಯ ಎಂದು ಉದ್ಯಮಿ ಸಾರಾ ಹೇಳುತ್ತಾರೆ.


ಇದನ್ನೂ ಓದಿ: ಇದು ಅಂತಿಂತ ಕಣ್ಣಲ್ಲ ಬ್ಯಾಟರಿ ಕಣ್ಣು, ಕ್ಯಾನ್ಸರ್‌ನಿಂದ ದೃಷ್ಟಿ ಕಳೆದುಕೊಂಡ ವ್ಯಕ್ತಿಯ ಆವಿಷ್ಕಾರ ನೋಡಿ


ಸಾರಾ ಮಧ್ಯಪ್ರಾಚ್ಯದಲ್ಲಿ ಅಗ್ರ ಉತ್ಪನ್ನ ನಾಯಕರಲ್ಲಿ ಒಬ್ಬರಾದರೂ, ನಾನು ಕೂಡ ಇತರೆ ಮಹಿಳೆಯರಂತೆ ಮತ್ತು ಮಹಿಳಾ ನಾಯಕಿಯಾಗಿ ಹಲವು ಸವಾಲುಗಳನ್ನು ಹೊಂದಿದ್ದೇನೆ. ಅದರಲ್ಲಿ ಕುಟುಂಬ ಮುಖ್ಯವಾಗಿದೆ. ಕುಟುಂಬ, ಸಂಸ್ಥೆ ಎಲ್ಲವನ್ನೂ ನಿಭಾಯಿಸುವುದು ಕಷ್ಟ. ಇಂತಹ ಸವಾಲುಗಳನ್ನು ಎದುರಿಸಲು ಕುಟುಂಬ, ಸ್ನೇಹಿತರ ಬೆಂಬಲ ಮುಖ್ಯವಾಗಿ ಅಗತ್ಯ ಎನ್ನುತ್ತಾರೆ ಸಾರಾ.

Published by:Sandhya M
First published: