Murder: ಮಗನ ಕಾಲೇಜ್ ಫೀಸ್ ಕಟ್ಟೋದಕ್ಕೆ ಕೊಲೆ ಮಾಡ್ಬಿಟ್ಟ ಅಪ್ಪ! ಅಸಲಿಗೆ ಅಂದು ಅಲ್ಲಿ ನಡೆದಿದ್ದು ಊಹೆಗೂ ಮೀರಿದ್ದು

ತಂದೆ ತನ್ನ ಮಗನ ಕಾಲೇಜಿನ ಫೀಸ್ ಕಟ್ಟಲು ಆಗದೆ ಎಂತಹ ದುಷ್ಕೃತ್ಯಕ್ಕೆ ಕೈ ಹಾಕಿದ್ದಾನೆ ಎಂಬುದನ್ನು ನೀವು ಕೇಳಿದರೆ ಒಂದು ಕ್ಷಣ ನಿಮಗೆ ಶಾಕ್ ಆಗುವುದಂತೂ ಗ್ಯಾರಂಟಿ. 52 ವರ್ಷದ ವ್ಯಕ್ತಿಯೊಬ್ಬ ಮುಂಬೈ ನಿವಾಸಿಯೊಬ್ಬರನ್ನು ಕೊಲೆಗೈದು ನಂತರ ಅವರನ್ನು ದೋಚಿ ಅಲ್ಲಿಂದ ಪರಾರಿಯಾಗಿದ್ದಾನೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತನ್ನ ಮಕ್ಕಳ ಶಾಲೆಯ ಫೀಸ್ ಕಟ್ಟಲು ತಂದೆ (Father) ತಾಯಂದಿರು (Mother) ಪಡುವ ಪಾಡು ಅಷ್ಟಿಷ್ಟಲ್ಲ ಬಿಡಿ, ಏಕೆಂದರೆ ಅನೇಕ ಪೋಷಕರು (Parents) ಕಷ್ಟಪಟ್ಟು ಕೆಲಸ (Hard Work) ಮಾಡುತ್ತಾ ತಮ್ಮ ಮಕ್ಕಳ (Children) ಹೊಟ್ಟೆ ತುಂಬಿಸುವುದಕ್ಕೆ ಮತ್ತು ಅವರಿಗೆ ಉತ್ತಮ ಶಿಕ್ಷಣವನ್ನು (Education) ಕೊಡಿಸಲು ಸದಾ ಹಾತೊರೆಯುತ್ತಿರುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಕೆಲವರಂತೂ ತಮ್ಮ ಒಡವೆಗಳನ್ನು (Ornament) ಸಹ ಮಾರಿ ಅಥವಾ ಬಂಗಾರದ ಅಂಗಡಿಯಲ್ಲಿ ಗಿರವಿಯಿಟ್ಟು ತಮ್ಮ ಮಕ್ಕಳ ಶಾಲೆಯ ಫೀಸ್ (School Fees) ತುಂಬುವುದನ್ನು ನಾವು ಅನೇಕ ಬಾರಿ ಕೇಳಿರುತ್ತೇವೆ ಮತ್ತು ನೋಡಿರುತ್ತೇವೆ.

ಫೀಸ್ ಕಟ್ಟಲು ಆಗದೆ ದುಷ್ಕೃತ್ಯಕ್ಕೆ ಕೈ ಹಾಕಿದ ತಂದೆ
ಆದರೆ ಇಲ್ಲೊಬ್ಬ ತಂದೆ ತನ್ನ ಮಗನ ಕಾಲೇಜಿನ ಫೀಸ್ ಕಟ್ಟಲು ಆಗದೆ ಎಂತಹ ದುಷ್ಕೃತ್ಯಕ್ಕೆ ಕೈ ಹಾಕಿದ್ದಾನೆ ಎಂಬುದನ್ನು ನೀವು ಕೇಳಿದರೆ ಒಂದು ಕ್ಷಣ ನಿಮಗೆ ಶಾಕ್ ಆಗುವುದಂತೂ ಗ್ಯಾರಂಟಿ. 52 ವರ್ಷದ ವ್ಯಕ್ತಿಯೊಬ್ಬ ಮುಂಬೈ ನಿವಾಸಿಯೊಬ್ಬರನ್ನು ಕೊಲೆಗೈದು ನಂತರ ಅವರನ್ನು ದೋಚಿ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ಈ 60 ವರ್ಷದ ಮುಂಬೈ ಮೂಲದ ವ್ಯಕ್ತಿಯನ್ನು ಏಪ್ರಿಲ್ 25ನೇ ತಾರೀಖಿನಂದು ಕೊಲೆ ಮಾಡಲಾಗಿದ್ದು, ಪ್ರಕರಣವು ನಿನ್ನೆ ಎಂದರೆ ಭಾನುವಾರದಂದು ಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದೆ. ನಂತರ ಪೊಲೀಸರು ಕೊಲೆ ಮಾಡಿದ ವ್ಯಕ್ತಿಯನ್ನು ವಾಲಾ ಗಾದ್ವಿ ಎಂದು ಗುರುತಿಸಿದ್ದು ಅವರನ್ನು ಬಂಧಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:  Hubballi Crime News: ಬನ್ರೋ ಹೋಗೋಣ ಅಂದ್ರು: ಹೋದ ಮೂವರು ಗೆಳೆಯರು ಜೈಲು ಪಾಲಾದ್ರು!

ವಾಲಾ ಈಗಾಗಲೇ ಮೈ ತುಂಬಾ ಸಾಲ ಮಾಡಿಕೊಂಡು ಒದ್ದಾಡುತ್ತಿರುವಾಗಲೇ ಅವರ ಹಿರಿಯ ಮಗ ಮುಂಡ್ರಾದ ಕಾಲೇಜೊಂದರಲ್ಲಿ 12ನೆಯ ತರಗತಿಯಲ್ಲಿ ಓದುತ್ತಿದ್ದಾನೆ ಮತ್ತು ಆತನ ಕಾಲೇಜು ಫೀಸ್ ಮತ್ತು ಹೊಟೇಲ್ ಖರ್ಚು ಸೇರಿ ಸುಮಾರು 35,000 ರೂಪಾಯಿ ಕೂಡಲೇ ಹೊಂದಿಸಬೇಕಾದ ಅನಿವಾರ್ಯತೆ ಬಂದೊದಗಿತ್ತು ಎಂದು ವಿಚಾರಣೆಯ ಸಮಯದಲ್ಲಿ ಪೊಲೀಸರಿಗೆ ತಿಳಿದು ಬಂದಿದೆ.

ಜಾಗ ತೋರಿಸುವ ನೆಪ ಹಿಡಿದು ಕೊಲೆ
ಸಾವಿಗೀಡಾದ ವ್ಯಕ್ತಿ ಮನ್‌ಸುಖ್ ಸತಾರ. ಅವರು ಅವರ ಸ್ವಂತ ಊರಾದ ವಡಾಲಾದಲ್ಲಿ ಒಂದು ಸ್ಥಳವನ್ನು ಖರೀದಿ ಮಾಡುವ ಉದ್ದೇಶದಿಂದ ಬಂದಿದ್ದರು ಎಂದು ಹೇಳಲಾಗುತ್ತಿದೆ. ಕೊಲೆ ಮಾಡಿ ಸಿಕ್ಕಿ ಬಿದ್ದ ಗಾದ್ವಿ ಈ ವ್ಯಕ್ತಿಯನ್ನು ಗಮನಿಸಿದ್ದಾನೆ. ಮನ್‌ಸುಖ್ ಸತಾರ ಅವರ ಮೈ ಮೇಲೆ ಧರಿಸಿರುವಂತಹ ಬಂಗಾರದ ಚೈನ್, ಬ್ರಾಸ್‌ಲೆಟ್ ಮತ್ತು ಪೆಂಡೆಂಟ್ ಅನ್ನು ಗಮನಿಸಿದ್ದಾನೆ. ಇವರಿಗೆ ಒಳ್ಳೆಯ ಸ್ಥಳವೊಂದನ್ನು ತೋರಿಸುವುದಾಗಿ ಏಪ್ರಿಲ್ 25ನೇ ತಾರೀಖಿನಂದು ಸತಾರ ನಗರದ ಹತ್ತಿರವಿರುವ ಹಳ್ಳಿಯೊಂದರ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ ಎಂದು ವಿಚಾರಣೆಯ ವೇಳೆ ತಿಳಿದು ಬಂದಿದೆ.

ಮನ್‌ಸುಖ್ ಸತಾರ ಬೆದರಿಕೆಯೊಡ್ಡಿದ ಗಾದ್ವಿ
ಆ ನಿರ್ಜನ ಪ್ರದೇಶಕ್ಕೆ ಹೋದ ನಂತರ ಮನ್‌ಸುಖ್ ಸತಾರ ಅವರ ಮೈ ಮೇಲಿರುವ ಬಂಗಾರವನ್ನು ಬಿಚ್ಚಿ ತನ್ನ ಕೈಗೆ ಕೊಡುವಂತೆ ಗಾದ್ವಿ ಕೇಳಿದ್ದಾನೆ. ಇದನ್ನು ನಿರಾಕರಿಸಿದಾಗ ಗಾದ್ವಿ ತನ್ನ ಬಳಿ ಇರುವಂತಹ ಚಾಕುವಿನಿಂದ ಮನ್‌ಸುಖ್ ಸತಾರ ಅವರಿಗೆ ಒಂದಲ್ಲ, ಎರಡಲ್ಲ ಬರೋಬ್ಬರಿ 12 ಬಾರಿ ಚುಚ್ಚಿ ಸಾಯಿಸಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:Explained: 22 ನಾಯಿಗಳ ಮಧ್ಯೆ 2 ವರ್ಷ ಕೋಣೆಯಲ್ಲಿ ಬಂಧಿಯಾಗಿದ್ದ ಬಾಲಕ! ಪಾಪಿ ತಂದೆ-ತಾಯಿ ಈ ಶಿಕ್ಷೆ ಕೊಟ್ಟಿದ್ದೇಕೆ? 

ಮನ್‌ಸುಖ್ ಸತಾರ ಅವರ ಸಂಬಂಧಿಯಾದ ಮುಖೇಶ್ ಚಡ್ಡಾ ಅವರ ಹೇಳಿಕೆಯ ಮೇಲೆ ಮುಂಡ್ರಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಯಾವುದೇ ಸಾಕ್ಷಿಗಳಿಲ್ಲದೆಯೇ ವಿಚಾರಣೆಯನ್ನು ಶುರು ಮಾಡಿದ್ದರು. ನಂತರ ಗಾದ್ವಿಯನ್ನು ಪೊಲೀಸರು ವಿಚಾರಣೆ ಮಾಡಿದ್ದಾಗ, ತಾನೇ ಈ ಅಪರಾಧವನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಕಚ್ ನ ಪೊಲೀಸ್ ಅಧಿಕಾರಿಯಾದ ಜೆ ಎನ್ ಪಂಚಾಲ್ ಅವರು ತಿಳಿಸಿದ್ದಾರೆ. ಕೊಲೆ ಮಾಡಿದ ನಂತರ ಮನ್‌ಸುಖ್ ಸತಾರ ಅವರ ಬಳಿಯಿದ್ದಂತಹ ಮೊಬೈಲ್ ಫೋನ್ ಮತ್ತು ಬಂಗಾರದ ಒಡವೆಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಸತ್ಯ ಒಪ್ಪಿಕೊಂಡ ಅಪರಾಧಿ
“ಕೂಲಿ ಕೆಲಸವನ್ನು ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಗಾದ್ವಿ ತುಂಬಾನೇ ಸಾಲ ಮಾಡಿಕೊಂಡಿದ್ದನು. ಇವನಿಗೆ ಇಬ್ಬರು ಮಕ್ಕಳಿದ್ದು, ಕಿರಿಯ ಮಗ 9ನೇ ತರಗತಿಯಲ್ಲಿ ಓದುತ್ತಿದ್ದರೆ, ಹಿರಿಯ ಮಗನು 12ನೇ ತರಗತಿಯಲ್ಲಿ ಓದುತ್ತಿದ್ದಾನೆ. ಮಗನ ಕಾಲೇಜು ಫೀಸ್ ಕಟ್ಟೋದಕ್ಕೆ ಹಣ ಇರದೇ ಇದ್ದಾಗ ಈ ಅಪರಾಧ ಮಾಡಿದ್ದಾಗಿ ತಾನೇ ಒಪ್ಪಿಕೊಂಡಿದ್ದಾನೆ” ಎಂದು ಪೊಲೀಸ್ ಅಧಿಕಾರಿ ಪಾಂಚಾಲ್ ಅವರು ಹೇಳಿದರು.
Published by:Ashwini Prabhu
First published: