Business Idea: ಕತ್ತೆ ಫಾರ್ಮ್ ಮಾಡೋಕೆ ಐಟಿ ಕೆಲ್ಸಾನೇ ಬಿಟ್ಟ ಕನ್ನಡಿಗ! ಹಾಲು ಮಾರಿಯೇ ತಿಂಗಳಿಗೆ ಇಷ್ಟು ಹಣ ದುಡಿತಾರೆ

ಇಲ್ಲೊಬ್ಬ ವ್ಯಕ್ತಿ  ಸ್ವಂತ ಬ್ಯುಸಿನೆಸ್ (Own Business) ಶುರು ಮಾಡಲು ಒಳ್ಳೆ ಸ್ಯಾಲರಿ (Salary) ಇದ್ದ ಕೆಲಸವನ್ನೇ ಬಿಟ್ಟು ಬಂದಿದ್ದಾರೆ.ಕರ್ನಾಟಕದ ವ್ಯಕ್ತಿಯೊಬ್ಬರು ಉತ್ತಮ ಸಂಬಳದ ಐಟಿ (IT) ಉದ್ಯೋಗವನ್ನು ತೊರೆದು ಕತ್ತೆ ಹಾಲಿನ ವ್ಯಾಪಾರ (Donkey Milk Business) ಆರಂಭಿಸಿದ್ದಾರೆ.

ಸದಾನಂದ ಗೌಡ

ಸದಾನಂದ ಗೌಡ

  • Share this:
ವ್ಯಾಪಾರ (Business) ಮಾಡಲು ಒಳ್ಳೆಯ ಆಲೋಚನೆ ಮತ್ತು ದೂರದೃಷ್ಟಿ ಬೇಕು. ಹಣ (Money) ಎಂದರೆ ಹೆಣ ಕೂಡ ಎದ್ದು ಕೂರುತ್ತೆ ಅಂತಾರೆ. ದುಡ್ಡು ಮಾಡುವುದಕ್ಕೆ ಸಾವಿರಾರು ದಾರಿಗಳಿವೆ. ಆದರೆ ಯಾವತ್ತೂ ಒಳ್ಳೆಯ ದಾರಿಯಲ್ಲಿ ಮಾಡಿದ ಹಣವೇ ಕೊನೆವರೆಗೂ ಇರುತ್ತೆ. ಹೀಗೆ ಕೊರೋನಾ (Corona) ಬಂದು ಹೋದಮೇಲೆ ಅದೆಷ್ಟೋ ಮಂದಿ ಹಣ ಇಲ್ಲದೆ ಪರದಾಡುತ್ತಿದ್ದಾರೆ. ದೊಡ್ಡ ದೊಡ್ಡವರ ಉದ್ಯೋಗಳೇ ನೆಲಕಚ್ಚಿವೆ.  ಏನಾದರೂ ಬ್ಯುಸಿನೆಸ್ (Business)​​ ಮಾಡೋಣ ಎಂದು ಕೊಂಡರೇ ಎಲ್ಲಿ ಲಾಸ್ (Loss)​ ಆಗುತ್ತೋ ಅನ್ನುವ ಭಯದಲ್ಲಿದ್ದಾರೆ. ಇನ್ನು ಕೆಲವರಿಗೆ ದುಡ್ಡು ಇದ್ದರೂ ತಲೆಯಲ್ಲಿ ಐಡಿಯಾ(Idea) ಇರೋದಿಲ್ಲ. ಆದ್ರೆ ಇಲ್ಲೊಬ್ಬ ವ್ಯಕ್ತಿ  ಸ್ವಂತ ಬ್ಯುಸಿನೆಸ್ (Own Business) ಶುರು ಮಾಡಲು ಒಳ್ಳೆ ಸ್ಯಾಲರಿ (Salary) ಇದ್ದ ಕೆಲಸವನ್ನೇ ಬಿಟ್ಟು ಬಂದಿದ್ದಾರೆ.ಕರ್ನಾಟಕದ ವ್ಯಕ್ತಿಯೊಬ್ಬರು ಉತ್ತಮ ಸಂಬಳದ ಐಟಿ (IT) ಉದ್ಯೋಗವನ್ನು ತೊರೆದು ಕತ್ತೆ ಹಾಲಿನ ವ್ಯಾಪಾರ (Donkey Milk Business) ಆರಂಭಿಸಿದ್ದಾರೆ.

ಕರ್ನಾಟಕದ ಮೊದಲ ಕತ್ತೆ ಸಾಕಾಣಿಕೆ!

42 ವರ್ಷದ ಶ್ರೀನಿವಾಸ್ ಗೌಡ ಅವರು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿಯೊಂದರಲ್ಲಿ ಕತ್ತೆ ಸಾಕಾಣಿಕೆ ಪ್ರಾರಂಭಿಸಲು ಸಾಫ್ಟ್‌ವೇರ್ ಕಂಪನಿಯ ಕೆಲಸವನ್ನು ತೊರೆದರು. ಇದು ಕರ್ನಾಟಕದ ಮೊದಲ ಕತ್ತೆ ಸಾಕಾಣಿಕೆ ಮತ್ತು ತರಬೇತಿ ಕೇಂದ್ರ ಮತ್ತು ಭಾರತದಲ್ಲಿ ಎರಡನೆಯದು ಎಂಬುಂದು ಹೆಮ್ಮೆಯ ವಿಚಾರ. ಎಎನ್‌ಐ ಪ್ರಕಾರ, ಶ್ರೀನಿವಾಸ್ ಗೌಡ ಈ ಯೋಜನೆಯಲ್ಲಿ ಸುಮಾರು 40 ಲಕ್ಷ ರೂಪಾಯಿ ಹೂಡಿಕೆ ಮಾಡಿ ಸ್ವಂತ ಜಮೀನಿನಲ್ಲಿ ಈ ಫಾರ್ಮ್ ಹೌಸ್ ಆರಂಭಿಸಿದ್ದಾರೆ. ಸದ್ಯ ಇವರ ಬಳಿ 20 ಕತ್ತೆಗಳಿವೆ. ಎಲ್ಲ ಜನರಿಗೂ ಕತ್ತೆ ಹಾಲು ಸಿಗುವಂತೆ ಮಾಡಲು ಗೌಡರು ಯೋಜಿಸಿದ್ದಾರೆ. ಸದ್ಯ 17 ಲಕ್ಷ ರೂ.ಗಳ ಆರ್ಡರ್ ಕೂಡ ಪಡೆದಿದ್ದಾರೆ. ಇದು ವಿಚಿತ್ರವೆನಿಸಬಹುದು, ಆದರೆ ಇದು ನಿಜ.

ಐಟಿ  ಕೆಲಸ ಬಿಟ್ಟು ಕತ್ತೆ ಫಾರ್ಮ್ ತೆಗೆದ ಸದಾನಂದಗೌಡ!

ಸದಾನಂದ ಗೌಡ ಅವರು ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಬಿಟ್ಟರು. ನಂತರ 2020 ರಲ್ಲಿ ಇರಾ ಗ್ರಾಮದ ತಮ್ಮ 2.3 ಎಕರೆ ಜಮೀನಿನಲ್ಲಿ ಕೃಷಿ, ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳನ್ನು ಪ್ರಾರಂಭಿಸಿದರು. ಕೆಲವು ದಿನಗಳ ಹಿಂದೆ ಜೂನ್ 8 ರಂದು ತೆರೆಯಲಾದ ಈ ಫಾರ್ಮ್ ಕರ್ನಾಟಕದಲ್ಲಿ ಮೊದಲನೆಯದು ಮತ್ತು ಕೇರಳದ ಎರ್ನಾಕುಲಂ ನಂತರ ದೇಶದ ಎರಡನೇಯದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸದಾನಂದಗೌಡರು ಕತ್ತೆ ಫಾರಂ ಹೌಸ್ ಆರಂಭಿಸಲು ನಿರ್ಧರಿಸಿದಾಗ ಅನೇಕರಿಂದ ಅಪಹಾಸ್ಯಕ್ಕೀಡಾಗಿದ್ದರು.


ಇದನ್ನೂ ಓದಿ: ಭೂಮಿ ಮೇಲೆ ಇವನಂತೆ ಬದುಕೋರು ಯಾರು ಇಲ್ಲ! ಸದಾ ಇವನ ಸುತ್ತ ಇರ್ತಾರೆ ರಂಭೆ, ಊವರ್ಶಿಯರು

ಕತ್ತೆ ಹಾಲು ದುಬಾರಿ ಮಾತ್ರವಲ್ಲ ಟೇಸ್ಟಿ ಕೂಡ


ಸದಾನಂದಗೌಡ ಅವರು ಕತ್ತೆ ಹಾಲನ್ನು ಮನೆಗಳಿಗೆ ತಲುಪಿಸಲು ಪ್ಯಾಕೆಟ್‌ಗಳಲ್ಲಿ ಮಾರಾಟ ಮಾಡಲು ಯೋಜಿಸಿದ್ದಾರೆ.  ಸದ್ಯಕ್ಕೆ 30 ಎಂಎಲ್​ ಪ್ಯಾಕೆಟ್​ ಹಾಲನ್ನು ಮಾಲ್​ಗಳು, ಅಂಗಡಿಗಳು, ಸೂಪರ್​ ಸ್ಟೋರ್​​ಗಳಿಗೆ ಸರಬರಾಜು ಮಾಡುತ್ತಿದ್ದಾರೆ. ಕತ್ತೆ ಹಾಲು ದುಬಾರಿ ಮಾತ್ರವಲ್ಲ ಟೇಸ್ಟಿ ಕೂಡ. ಪ್ರಯೋಜನಗಳು ಕೂಡ ಹಲವು.

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್​ನ ಹೇಗೆ ಬಳಸಬಾರದು? ಈ ಲೆಕ್ಕಾಚಾರಗಳನ್ನು ಕಲಿಯಿರಿ!

ಸಂಶೋಧನೆಯ ಪ್ರಕಾರ ಕತ್ತೆ ಹಾಲಿನಲ್ಲಿ ಹಸುವಿನ ಹಾಲಿಗಿಂತ ಕಡಿಮೆ ಪ್ರಮಾಣದ ಕೊಬ್ಬಿನ ಅಂಶ ಇರುತ್ತದೆ. ಆದರೆ ಒಬ್ಬ ತಾಯಿಯ ಎದೆ ಹಾಲಿನ ಪೌಷ್ಟಿಕ ಸತ್ವಗಳಿಗೆ ಸಮನಾಗಿ ಅಂದರೆ ವಿಟಮಿನ್ ಅಂಶಗಳು ಮತ್ತು ಅಗತ್ಯವಾದ ಫ್ಯಾಟಿ ಆಸಿಡ್ ಅಂಶಗಳನ್ನು ಒಳಗೊಂಡಿದೆ. ಕ ಚರ್ಮ ಸಂಬಂಧಿತ ಹಲವಾರು ಸಮಸ್ಯೆಗಳನ್ನು ಇದು ಬಗೆಹರಿಸುತ್ತದೆ ಮತ್ತು ಹಸುವಿನ ಹಾಲಿಗಿಂತ ದೇಹದಲ್ಲಿ ಬಹಳ ಬೇಗನೆ ಜೀರ್ಣ ಆಗುತ್ತದೆ.

Published by:Vasudeva M
First published: