ಬರೋಬ್ಬರಿ 7 ಸಾವಿರ ಸಾಲ ಉಳಿಸಿಕೊಂಡು ಕೆಫೆ ಕಾಫಿ ಡೇ (Cafe Coffee day) ಮಾಲೀಕ ಸಿದ್ದಾರ್ಥ ಹೆಗ್ಡೆ(Siddhartha Hegde) ಆತ್ಮಹತ್ಯೆ ಮಾಡಿಕೊಂಡ್ರು ಬಳಿಕ ಕಷ್ಷಕರ ಪರಿಸ್ಥಿತಿಯಲ್ಲೇ ಮಾಳವಿಕಾ ಹೆಗ್ಡೆ(Malavika Hegde) ಕಾಫಿ ಡೇ ಸಂಸ್ಥೆಯ ಜವಾಬ್ದಾರಿ ಹೊತ್ತು ಸಾಧಿಸಿ ತೋರಿಸಿದ್ದಾರೆ. ಸಾಲದ ಸುಳಿಯಲ್ಲಿ ಸಿಲುಕಿದ್ದ ಕಂಪನಿಯನ್ನ ಹೊರತರುವಲ್ಲಿ ಸಕಸ್ಸ್(Success) ಆಗಿದ್ದು, 7,200 ಕೋಟಿ ಇದ್ದ ಸಾಲವನ್ನು 3100 ಕೋಟಿಗೆ ಇಳಿಸಿದ್ದಾರೆ. ಈ ಮೂಲಕ ನಿರೀಕ್ಷೆಗೂ ಮೀರಿದ ಸಾಧನೆಗೈದು ಮಳವಿಕಾ ಸುದ್ದಿಯಾಗಿದ್ದಾರೆ. ಸಿದ್ಧಾರ್ಥ ಆತ್ಮಹತ್ಯೆ(Siddhartha suicide) ಬಳಿಕ ಕಾಫಿ ಡೇ ಸಂಸ್ಥೆ ಬಾಗಿಲು ಮುಚ್ಚುತ್ತೆ, ಸಾಲದ ಸುಳಿಯಲ್ಲಿರೋ ಸಂಸ್ಥೆಯನ್ನು ಮುಂದುವರಿಸೋದು ಕಷ್ಟ ಅನ್ನೋ ಅಭಿಪ್ರಾಯ ಕೇಳಿ ಬಂದಿತ್ತು. ಈ ವೇಳೆ ಗಾಳಿ ಮಾತುಗಳಿಗೆ ಕುಗ್ಗದೆ ಸಂಸ್ಥೆಯ ಹೊಣೆ ಹೊತ್ತರು ಮಾಳವಿಕಾ ಹೆಗ್ಡೆ.
ಸಾಲದ ಭಯವೋ ವಿಧಿಯ ಆಟಕ್ಕೊ ಸಿದ್ಧಾರ್ಥ ಬಲಿಯಾದ್ರು. ಪತಿಯ ಅಗಲಿಕೆಯ ನೋವು, ವ್ಯವಹಾರದಲ್ಲಿನ ನಷ್ಟ, ಸಾವಿರಾರು ಉದ್ಯೋಗಿಗಳ ಬದುಕು ಹೀಗೆ ಹಲವು ಸವಾಲುಗಳ ನಡುವೆ ಮಾಳವಿಕ ಸಂಸ್ಥೆಗೆ ಬೆನ್ನೆಲುಬಾಗಿ ನಿಂತ್ರು. ಕೊಟ್ಟ ಮಾತು ಉಳಿಸಿಕೊಂಡಿರೋ ಮಾಳವಿಕಾ ಕಂಪನಿಯ ಭವಿಷ್ಯದ ಬಗ್ಗೆ ಸ್ಪಷ್ಟವಾಗಿದ್ದಾರೆ. ದಿ ಎಕನಾಮಿಕ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಕಳೆದ 2 ವರ್ಷಗಳಲ್ಲಿ ತಾನು ನಡೆದು ಬಂದ ಹಾದಿ ಹಾಗೂ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ.
ತಾಳ್ಮೆಯಿಂದ ಕಾದವರಿಗೆ ಧನ್ಯವಾದ
ಕಷ್ಟದ ಸಮಯದಲ್ಲಿ ಉದ್ಯೋಗಿಗಳು ಉತ್ಸುಕರಾಗಿದ್ರು ಹಾಗೂ ಬ್ಯಾಂಕ್ ಗಳು ತಾಳ್ಮೆಯಿಂದ ಕಾಯುತ್ತಿವೆ. ಹೀಗಾಗಿ ಅವರಿಗೆಲ್ಲಾ ಮಾಳವಿಕಾ ಧನ್ಯವಾದ ತಿಳಿಸಿದ್ರು. ಇನ್ನು ಹಲವು ಯೋಜನೆಗಳನ್ನ ಸಮರ್ಪಕವಾಗಿ ಜಾರಿಗೆ ತರಬೇಕಿದೆ. ಕಂಪನಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತೇನೆ ಮತ್ತು ತನ್ನ ಗಂಡನ ಕನಸುಗಳನ್ನು ನನಸು ಮಾಡುತ್ತೇನೆ. ಕಂಪನಿಗಾಗಿ ಶ್ರಮಿಸುತ್ತೇನೆ ಅಂತ ಮಾಳವಿಕಾ ಹೇಳಿದರು. ಅವ್ರ ಮಾತುಗಳಲ್ಲೇ ಮಾಳವಿಕಾ ಅವ್ರ ದಿಟ್ಟತನ ಪ್ರದರ್ಶನಗೊಂಡಿದೆ.
ಇದನ್ನೂ ಓದಿ: ಕೆಫೆ ಕಾಫಿ ಡೇ ಚೆಕ್ ಬೌನ್ಸ್ ಪ್ರಕರಣ; ಮಾಳವಿಕಾ ಸಿದ್ಧಾರ್ಥ್ ಹೆಗ್ಡೆಗೆ ಜಾಮೀನು ಮಂಜೂರು
ಕೆಫೆ ಕಾಫಿ ಡೇ ಎಂಟರ್ ಪ್ರೈಸಸ್ ಲಿಮಿಟೆಡ್ ಕಂಪನಿಯ ವಾರ್ಷಿಕ ವರದಿ ಪ್ರಕಾರ 2021ರ ಮಾರ್ಚ್ 31ಕ್ಕೆ ಕಂಪನಿಯ ಸಾಲದ ಮೊತ್ತ 1,779 ಕೋಟಿ. ಇದರಲ್ಲಿ ₹ 1,263 ಕೋಟಿ ದೀರ್ಘಾವಧಿ ಸಾಲವಾದರೆ, ₹ 516 ಕೋಟಿ ಅಲ್ಪಾವಧಿ ಸಾಲವಾಗಿತ್ತು. 2020ರ ಹಣಕಾಸು ವರ್ಷದಲ್ಲಿ ಕಂಪನಿಯು ₹ 2909 ಕೋಟಿ ಸಾಲ ಹೊಂದಿತ್ತು. ಕಳೆದ ಎರಡೇ ವರ್ಷಗಳಲ್ಲಿ ಕೆಫೆ ಡೇ ಎಂಟರ್ ಪ್ರೈಸಸ್ ಲಿಮಿಟೆಡ್ ದೊಡ್ಡ ಪ್ರಮಾಣದ ಸಾಲವನ್ನು ಮರುಪಾವತಿ ಮಾಡುವ ಮೂಲಕ ತನ್ನ ಸಾಲದ ಪ್ರಮಾಣವನ್ನು ಕುಗ್ಗಿಸಿದೆ.
ಸಿದ್ಧಾರ್ಥ ಆತ್ಮಹತ್ಯೆಯಿಂದ ಕುಸಿದ ಸಂಸ್ಥೆ
ಕರ್ನಾಟಕದ ಪ್ರತಿಷ್ಠಿತ ಕೆಫೆ ಕಾಫಿ ಡೇ ಒಂದು ಕಾಲದಲ್ಲಿ ಯಶಸ್ಸು ಕಂಡಿದ್ದ ಕಂಪನಿ. ಆದರೆ, ಬಳಿಕ ನಷ್ಟದ ಸುಳಿಗೆ ಸಿಲುಕಿತು. 2019ರ ಆಗಸ್ಟ್ನಲ್ಲಿ ಸಿದ್ದಾರ್ಥ ಮಂಗಳೂರು ಬಳಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು. ಪ್ರೈವೇಟ್ ಈಕ್ವಿಟಿ ಪಾರ್ಟನರ್ಗಳು, ಸಾಲಗಾರರ ಕಿರುಕುಳ ಹಾಗೂ ಆದಾಯ ತೆರಿಗೆ ಇಲಾಖೆಯ ಕಿರುಕುಳ ತಾಳಲಾಗದೇ ತಾವು ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಸಿದ್ದಾರ್ಥ ಡೆತ್ ನೋಟ್ ಬರೆದಿಟ್ಟಿದ್ದರು.
ಇದನ್ನೂ ಓದಿ: Cafe Coffee Day: ಕೆಫೆ ಕಾಫಿ ಡೇ ನೂತನ ಸಿಇಓ ಆಗಿ ವಿ.ಜಿ. ಸಿದ್ಧಾರ್ಥ್ ಪತ್ನಿ ಮಾಳವಿಕಾ ಹೆಗ್ಡೆ ನೇಮಕ
ಸಿದ್ದಾರ್ಥನ ಸಾವಿನ ಬಳಿಕ ಬಳಿಕ ಕೆಫೆ ಕಾಫಿ ಡೇ ಕಥೆ ಮುಗಿಯಿತು ಎಂದೇ ಎಲ್ಲರೂ ಭಾವಿಸಿದ್ದರು. ಆದ್ರೆ ತನ್ನ ದಿಟ್ಟ ನಿರ್ಧಾರಗಳಿಂದ ಮಾಳವಿಕಾ ಕಾಫಿ ಡೇಗೆ ಮರುಜೀವ ನೀಡಿ ಸಾಧಿಸಿ ತೋರಿಸಿದ್ದಾರೆ. ಮಾಳವಿಕಾ ಪ್ರಯತ್ನಗಳ ಫಲವಾಗಿ ಕೆಫೆ ಕಾಫಿ ಡೇ ಕಂಪನಿಯ ಬಗ್ಗೆ ಹೂಡಿಕೆದಾರರು, ಬ್ಯಾಂಕ್ಗಳು, ಷೇರು ಮಾರುಕಟ್ಟೆಯಲ್ಲೂ ಹೊಸ ಭರವಸೆ ಬಂದಿದೆ. ₹ 23ಕ್ಕೆ ಕುಸಿದಿದ್ದ ಕೆಫೆ ಕಾಫಿ ಡೇ ಷೇರುಗಳು ಈಗ ₹ 51ಕ್ಕೆ ಏರಿಕೆಯಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ