• Home
 • »
 • News
 • »
 • business
 • »
 • Own Business: ಸ್ವಂತ ಬ್ಯುಸಿನೆಸ್ ಮಾಡೋ ನಿಮ್ಮ ಕನಸಿಗೆ ಹಣ ಕೊಡಲಿವೆ ಸರ್ಕಾರದ ಈ ಯೋಜನೆಗಳು

Own Business: ಸ್ವಂತ ಬ್ಯುಸಿನೆಸ್ ಮಾಡೋ ನಿಮ್ಮ ಕನಸಿಗೆ ಹಣ ಕೊಡಲಿವೆ ಸರ್ಕಾರದ ಈ ಯೋಜನೆಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನೀವು ಸಣ್ಣ ಹೂಡಿಕೆಯೊಂದಿಗೆ ವ್ಯವಹಾರವನ್ನು ಪ್ರಾರಂಭಿಸುವ ಬಗ್ಗೆ ಯೋಚಿಸಿದ್ದೀರಾ? ಸರ್ಕಾರದ ಯೋಜನೆಗಳು ಅಂತಹ ಸಣ್ಣ ವ್ಯಾಪಾರ ಆಲೋಚನೆಗಳು ಮತ್ತು ಕೈಗಾರಿಕೆಗಳನ್ನು ಬೆಂಬಲಿಸುತ್ತವೆ.

 • Share this:

  ಈ ಕೋವಿಡ್-19 (Coronavirus) ಸಾಂಕ್ರಾಮಿಕ ರೋಗದ ನಂತರವಂತೂ ಈ ಖಾಸಗಿ ಕಂಪನಿಯ (Private Company) ಕೆಲಸಗಳು ನೀರಿನ ಮೇಲಿನ ಗುಳ್ಳೆಯಂತೆ ಆಗಿವೆ. ಏಕೆಂದರೆ ಈಗಾಗಲೇ ನಾವು ದೊಡ್ಡ ದೊಡ್ಡ ಐಟಿ ಕಂಪನಿಗಳಲ್ಲಿ (IT Company) ಅನೇಕ ಜನ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುತ್ತಿರುವುದನ್ನು ನಾವು ಕೇಳಿದ್ದೇವೆ. ದಿನನಿತ್ಯ ನೋಡುತ್ತಲೂ ಇದ್ದೇವೆ. ನಮ್ಮ ಸುತ್ತಮುತ್ತಲಿರುವ ಅನೇಕ ಜನರೇ ತಮ್ಮ ಕೆಲಸವನ್ನು ಕಳೆದುಕೊಂಡಿರುತ್ತಾರೆ. ಹೀಗಾಗಿ ಅನೇಕ ಜನರು ತಮ್ಮ ಕೆಲಸ ಕಳೆದುಕೊಂಡ ನಂತರ ತಮ್ಮ ಹೊಟ್ಟೆಪಾಡಿಗಾಗಿ ಅಲ್ಲೇ ತಮ್ಮ ಸ್ವಂತ ಊರಿನಲ್ಲಿ ಯಾವುದಾದರೂ ಒಂದು ಸ್ವಂತ ವ್ಯವಹಾರ ಎಂದರೆ  ಬ್ಯುಸಿನೆಸ್ ಅನ್ನು ಶುರು ಮಾಡುತ್ತಿರುವುದನ್ನು ನಾವು ನೋಡಬಹುದು.


  ಕೆಲವರಿಗೆ ಯಾವ  ಬ್ಯುಸಿನೆಸ್ ಮಾಡಿದರೆ ಚೆನ್ನಾಗಿರುತ್ತದೆ ಅಂತ ತಿಳುವಳಿಕೆ ಇದ್ದರೆ, ಇನ್ನೂ ಕೆಲವರಿಗೆ ಸಣ್ಣದಾಗಿ ಹೂಡಿಕೆ ಮಾಡಿ ವ್ಯವಹಾರವನ್ನು ಶುರು ಮಾಡಬೇಕೇ ಅಥವಾ ತುಂಬಾ ಹಣ ಹೂಡಿಕೆ ಮಾಡಿ ದೊಡ್ಡ ಮಟ್ಟದಲ್ಲಿಯೇ ತಮ್ಮ ವ್ಯವಹಾರವನ್ನು ಶುರು ಮಾಡಬೇಕೇ ಅನ್ನೋದರ ಬಗ್ಗೆ ತುಂಬಾನೇ ಗೊಂದಲಗಳಿರುತ್ತವೆ.


  ಇದನ್ನೂ ಓದಿ: Own Business: ಸ್ವಂತ ಉದ್ದಿಮೆ ಶುರು ಮಾಡಿ, ಉದ್ಯಮಿಗಳಾಗ್ಬೇಕಾ? ಹಾಗಿದ್ರೆ ಇಲ್ಲಿದೆ ಒಳ್ಳೆಯ ಅವಕಾಶ!


  ಕಾಕ್ಸ್  ಬ್ಯುಸಿನೆಸ್ ನಡೆಸಿದ ಅಧ್ಯಯನ ಏನು ಹೇಳುತ್ತೇ?


  ಕಾಕ್ಸ್  ಬ್ಯುಸಿನೆಸ್ ನಡೆಸಿದ ಅಧ್ಯಯನದ ಪ್ರಕಾರ, ಅರ್ಧಕ್ಕಿಂತ ಹೆಚ್ಚು ಸಣ್ಣ ಉದ್ಯಮ ಮಾಲೀಕರು ತಮ್ಮ ಸ್ಟಾರ್ಟ್ಅಪ್ ಅನ್ನು ತಾವು ಸಹ ಒಬ್ಬ ಬಾಸ್ ಆಗಬೇಕು ಅಂತಾನೆ ಪ್ರಾರಂಭಿಸುತ್ತಾರೆ. ಸುಮಾರು 8 ಪ್ರತಿಶತದಷ್ಟು ಜನರು ಲಾಭವನ್ನು ತಮ್ಮ ಮುಖ್ಯ ಪ್ರೇರಕ ಎಂದು ನಂಬುತ್ತಾರೆ. ಆದರೆ ಇತರರು ಏನು ಹೇಳುತ್ತಾರೆಂದು ನಿಮಗೆ ತಿಳಿದಿದೆಯೇ? ಕೆಲಸದಲ್ಲಿ ಬೇಕಾಗಿರುವ ಸ್ವಾತಂತ್ರ್ಯ ಮತ್ತು ಅವರಿಗಿರುವ ಅತಿಯಾದ ಉತ್ಸಾಹದಿಂದ ಸ್ಟಾರ್ಟ್‌ಅಪ್ ಅನ್ನು ಸ್ಥಾಪಿಸಲು ಮುಂದಾಗುತ್ತಾರೆ ಮತ್ತು ಇವೆರಡು ಪ್ರಾಥಮಿಕ ಅಂಶಗಳಾಗಿವೆ ಎಂದು ಹೇಳುತ್ತಾರೆ. ಯಾವುದೇ ಒಂದು ವ್ಯವಹಾರವನ್ನು ಸ್ಥಾಪಿಸುವುದು ಅಪಾಯ, ಬಂಡವಾಳ ಮತ್ತು ಮಾರುಕಟ್ಟೆ ಪ್ರವೃತ್ತಿಯನ್ನು ಒಳಗೊಂಡಿರುತ್ತದೆ ಅಂತ ಹೇಳಬಹುದು.


  Business Idea Engineer Spent 14 Years Growing 500 Rare Medicinal Plants
  ಸಾಂದರ್ಭಿಕ ಚಿತ್ರ


  ಸಣ್ಣ ಹೂಡಿಕೆಯೊಂದಿಗೆ ವ್ಯವಹಾರ ಆರಂಭಿಸಿ


  ನೀವು ಸಣ್ಣ ಹೂಡಿಕೆಯೊಂದಿಗೆ ವ್ಯವಹಾರವನ್ನು ಪ್ರಾರಂಭಿಸುವ ಬಗ್ಗೆ ಯೋಚಿಸಿದ್ದೀರಾ? ಕಡಿಮೆ ಬಂಡವಾಳವನ್ನು ಹೊಂದಿರುವ ಅನೇಕ ವ್ಯವಹಾರ ಕಲ್ಪನೆಗಳಿವೆ, ಅದು ನಂತರ ನೀವು ಅದನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ವಿಸ್ತರಿಸಿಕೊಳ್ಳಬಹುದು. ಹೆಚ್ಚುವರಿಯಾಗಿ, ಸರ್ಕಾರದ ಯೋಜನೆಗಳು ಅಂತಹ ಸಣ್ಣ ವ್ಯಾಪಾರ ಆಲೋಚನೆಗಳು ಮತ್ತು ಕೈಗಾರಿಕೆಗಳನ್ನು ಬೆಂಬಲಿಸುತ್ತವೆ. ಉದ್ಯಮಶೀಲತಾ ಪ್ರಯತ್ನಗಳನ್ನು ಬೆಂಬಲಿಸುವ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶದ ಯೋಜನೆಗಳ ಮೂಲಕ ಭಾರತ ಸರ್ಕಾರವು ಉದ್ಯಮಿಗಳಿಗೆ ವಿತ್ತೀಯ ನೆರವು ಮತ್ತು ತೆರಿಗೆ ಪ್ರಯೋಜನಗಳೊಂದಿಗೆ ಬೆಂಬಲ ನೀಡಬಹುದು.


  ಸಣ್ಣ ಉದ್ದಿಮೆಗಳನ್ನು ಬೆಂಬಲಿಸುವ ಸರ್ಕಾರದ ಯೋಜನೆಗಳು


  ಅಟಲ್ ಇನ್ನೋವೇಶನ್ ಮಿಷನ್, ಪಿಎಂ ಮುದ್ರಾ ಯೋಜನೆ (ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಸಾಲದ ಲಭ್ಯತೆಯನ್ನು ಸುಲಭಗೊಳಿಸುವುದು), ಸ್ಟಾರ್ಟ್‌ಅಪ್ ಇಂಡಿಯಾ ಸೀಡ್ ಫಂಡ್ (ಪರಿಕಲ್ಪನೆಯ ಪುರಾವೆ, ಮೂಲಮಾದರಿ ಅಭಿವೃದ್ಧಿ, ಉತ್ಪನ್ನ ಪ್ರಯೋಗಗಳು, ಮಾರುಕಟ್ಟೆ-ಪ್ರವೇಶ, ಮತ್ತು ವಾಣಿಜ್ಯೀಕರಣಕ್ಕಾಗಿ ಆರ್ಥಿಕ ಸಹಾಯವನ್ನು ಒದಗಿಸುವುದು) ಮತ್ತು ಕ್ರೆಡಿಟ್ ಲಿಂಕ್ಡ್ ಕ್ಯಾಪಿಟಲ್ ಸಬ್ಸಿಡಿ (ಸಣ್ಣ ಉದ್ಯಮಗಳಲ್ಲಿ ತಂತ್ರಜ್ಞಾನ ಮತ್ತು ಉತ್ಪಾದಕತೆಯನ್ನು ಮೇಲ್ದರ್ಜೆಗೇರಿಸಲು ಮತ್ತು ಅವುಗಳನ್ನು ಹೆಚ್ಚು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸಲು ಸಹಾಯ ಮಾಡುವ ಉಪಕ್ರಮವಾಗಿದೆ).


  application invited for various loan facility for youth in vijayapura
  ಸಾಂದರ್ಭಿಕ ಚಿತ್ರ


  ಕಡಿಮೆ ಹೂಡಿಕೆಯ ವ್ಯವಹಾರದ ಆಲೋಚನೆಗಳು


  1) ಟೆರಸ್ ಗಾರ್ಡನಿಂಗ್: ಹಣ್ಣುಗಳು ಮತ್ತು ತರಕಾರಿಗಳ ಜಾಗತಿಕ ಬೆಲೆ ಏರಿಕೆಯಾಗುತ್ತಿರುವ ಸಮಯದಲ್ಲಿ, ಅಂತಹ ಬೆಳೆಗಳನ್ನು ಮನೆಯಲ್ಲಿ ಬೆಳೆಯುವುದು ನಂತರದ ಹಂತಗಳಲ್ಲಿ ತುಂಬಾನೇ ಸಹಾಯ ಮಾಡುತ್ತದೆ. ಸಣ್ಣ ಹೂಡಿಕೆ ಮಾಡುವುದರೊಂದಿಗೆ ಮತ್ತು ಕಾರ್ಮಿಕರೊಂದಿಗೆ, ಮನೆಯಲ್ಲಿಯೇ ತರಕಾರಿಗಳನ್ನು ಬೆಳೆಸಿ, ಆ ಉತ್ಪನ್ನಗಳನ್ನು ಮಾರಾಟ ಮಾಡಿ ಒಳ್ಳೆಯ ಹಣವನ್ನು ಗಳಿಸಬಹುದು. ಇದಲ್ಲದೆ, ಉತ್ಪನ್ನಗಳ ಗುಣಮಟ್ಟವು ದೇಶೀಯ ಮತ್ತು ಅಂತರರಾಷ್ಟ್ರೀಯ ಮಟ್ಟಗಳಿಗೆ ಹೊಂದಿಕೆಯಾಗಿದ್ದರೆ, ಅವುಗಳನ್ನು ಬೇರೆ ದೇಶಗಳಿಗೆ ರಫ್ತು ಸಹ ಮಾಡಬಹುದು.


  2) ಟ್ಯೂಷನ್ ಮತ್ತು ಕೋಚಿಂಗ್ ತರಗತಿಗಳು: ಈಗಂತೂ ಈ ವಿದೇಶಿ ಭಾಷೆಗಳನ್ನು ಕಲಿಯಲು ವಿದ್ಯಾರ್ಥಿಗಳಲ್ಲಿ ತುಂಬಾನೇ ಆಸಕ್ತಿಯಿದೆ ಮತ್ತು ಆ ಭಾಷೆಗಳಿಗೆ ಕೆಲಸಗಳು ಸಹ ಸಿಗುತ್ತವೆ. ವಿದೇಶಿ ಭಾಷೆಗಳನ್ನು ಕಲಿಯಲು ಬಯಸುವವರಿಗಾಗಿ ಟ್ಯೂಷನ್ ಮತ್ತು ಕೋಚಿಂಗ್ ತರಗತಿಗಳನ್ನು ತೆರೆಯಲು ತುಂಬಾನೇ ಕಡಿಮೆ ಪ್ರಮಾಣದ ಬಂಡವಾಳದ ಅಗತ್ಯವಿದೆ. ನೀವು ಮಕ್ಕಳಿಗೆ ಪಾಠಗಳನ್ನು ಕಲಿಸಲು ಶಿಕ್ಷಕರನ್ನು ಇಟ್ಟುಕೊಳ್ಳಬಹುದು ಅಥವಾ ನೀವೇ ಅವರಿಗೆ ಹೇಳಿ ಕೊಡಬಹುದು.

  Published by:Kavya V
  First published: