Side Business: ಸೈಡ್ ಬ್ಯುಸಿನೆಸ್ ಮಾಡಿ ಹೆಚ್ಚು ಹಣ ಮಾಡಿ! ದುಡ್ಡು ಗಳಿಸಲು 10 ದಾರಿ ಇಲ್ಲಿದೆ ಓದಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಏರುತ್ತಿರುವ ಹಣದುಬ್ಬರ, ಜೀವನ ವೆಚ್ಚ, ಆರ್ಥಿಕ ಸಂಕಷ್ಟ, ನಿರುದ್ಯೋಗಗಳ ನಡುವೆ ಜೀವನವನ್ನು ಭದ್ರ ಮಾಡಿಕೊಳ್ಳುವುದು ಪ್ರತಿಯೊಬ್ಬರಿಗೂ ಸವಾಲಿನ ಸಂಗತಿಯೇ ಹೌದು. ಹೀಗಿರುವಾಗ ನಾವು ಸೈಡ್​ ಬಿಸಿನೆಸ್​ ಮಾಡುವ ಯೋಚನೆ ಮಾಡುವುದು ಸರ್ವೆ ಸಾಮಾನ್ಯ ಹಾಗಾದ್ರೆ ನೀವಿಲ್ಲಿ 10 ಸೈಡ್​ ಬಿಸಿನೆಸ್​ ಬಗ್ಗೆ ತಿಳಿಯಬಹುದು.

ಮುಂದೆ ಓದಿ ...
 • Share this:

  ಏರುತ್ತಿರುವ ಹಣದುಬ್ಬರ (Rising inflation), ಜೀವನ ವೆಚ್ಚ (Cost Of leaving), ಆರ್ಥಿಕ ಸಂಕಷ್ಟ (Financial distress), ನಿರುದ್ಯೋಗಗಳ ನಡುವೆ ಜೀವನವನ್ನು ಭದ್ರ ಮಾಡಿಕೊಳ್ಳುವುದು ಪ್ರತಿಯೊಬ್ಬರಿಗೂ ಸವಾಲಿನ ಸಂಗತಿಯೇ ಹೌದು. ಹಾಗಾಗಿ ನೀವು ಒಂದು ಸ್ಥಿರವಾದ ಆದಾಯ (Income) ಮೂಲವನ್ನು ಹೊಂದುವುದು ಬಹಳ ಮುಖ್ಯ. ಅದರ ಜೊತೆಗೆ ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಕೆಲಸ ಮಾಡಿ ಆದಾಯವನ್ನೂ ಗಳಿಸುವಂಥ ಸೈಡ್‌ ಬ್ಯುಸಿನೆಸ್‌ (Side Business) ಕೂಡ ಆರಂಭಿಸಬಹುದು. ನೀವು ಸ್ವತಂತ್ರರಾಗಿ ಕೆಲಸ ಮಾಡಿದರೆ ನಿಮಗೂ ಹೆಚ್ಚು ತೃಪ್ತಿ ಸಿಗುತ್ತದೆ. ಜೊತೆಗೆ ಸಣ್ಣ ಉದ್ಯಮದಿಂದಾಗಿ ಹಣವನ್ನೂ (Money) ಗಳಿಸಬಹುದು. ಹಾಗಿದ್ದರೆ 2023ರಲ್ಲಿ ಸ್ವಂತ ಉದ್ದಿಮೆ ಆರಂಭಿಸಬೇಕು ಎಂದು ಅಂದುಕೊಂಡವರಿಗಾಗಿ 10 ಸೈಡ್‌ ಬ್ಯುಸಿನೆಸ್‌ ಐಡಿಯಾಗಳು ಇಲ್ಲಿವೆ ನೋಡಿ.


  1.ವರ್ಚುವಲ್ ಅಸಿಸ್ಟೆಂಟ್: ವರ್ಚುವಲ್ ಅಸಿಸ್ಟೆಂಟ್ ಅಥವಾ ವರ್ಚುವಲ್ ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ ಆಗುವ ಮೂಲಕ ನಿಮ್ಮ ಕೌಶಲ್ಯಗಳನ್ನು ನೀವು ಬಳಸಿಕೊಳ್ಳಬಹುದು.


  ಇದರಲ್ಲಿ ವ್ಯವಹಾರಗಳು ಅಥವಾ ವ್ಯಾಪಾರ ಮುಖ್ಯಸ್ಥರಿಗೆ ಉನ್ನತ ಮಟ್ಟದ ಬೆಂಬಲವಾಗಿ ನೀವು ಕಾರ್ಯನಿರ್ವಹಿಸುತ್ತೀರಿ. ಅಂದಹಾಗೆ ಇದಕ್ಕಾಗಿ ಆಫೀಸ್‌ ಇರಲೇಬೇಕು ಎಂದೇನಿಲ್ಲ. ಇದ್ದರಂತೂ ಒಳ್ಳೆಯದು. ಇದು ಆಫೀಸ್‌ನ ಹೊರತಾಗಿಯೂ ಮಾಡುವಂಥ ಕೆಲಸವಾಗಿದೆ.


  ವೇಳಾಪಟ್ಟಿಗಳನ್ನು ಆಯೋಜಿಸುವುದು, ಸಭೆಗಳನ್ನು ಕರೆಯುವುದು, ಕಾನ್ಫರೆನ್ಸ್ ಕರೆಗಳನ್ನು ಮಾಡುವುದು, ಫೋನ್‌ಗಳು ಮತ್ತು ಇಮೇಲ್‌ಗಳ ಮೂಲಕ ಪತ್ರವ್ಯವಹಾರ ಮಾಡುವುದು ಮುಂತಾದ ಕೆಲಸಗಳನ್ನು ನೀವು ಸುಲಭವಾಗಿ ಮಾಡಬಹುದು ಎಂಬ ವಿಶ್ವಾಸವಿದ್ದರೆ ವರ್ಚುವಲ್‌ ಅಸಿಸ್ಟಂಟ್‌ ಆಗಿ ನೀವು ಸೈಡ್‌ ಬ್ಯುಸಿನೆಸ್‌ಅನ್ನು ಪ್ರಾರಂಭಿಸಬಹುದು.


  2.ನಿಮ್ಮ ಕಲೆಯ ಮಾರಾಟ: ನಿಮ್ಮ ಕಲೆಯನ್ನು ಅಥವಾ ನೀವು ಕೈಯಿಂದ ಮಾಡಿದ ಕಲಾತ್ಮಕ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಸೈಡ್‌ ಬ್ಯುಸಿನೆಸ್‌ ಆರಂಭಿಸಬಹುದು.


  ಸರಿಯಾಗಿ ಬಳಸಿಕೊಂಡರೆ ಹವ್ಯಾಸವು ಲಾಭ ತಂದುಕೊಡುತ್ತದೆ. ನಿಮ್ಮಲ್ಲಿ ಅಂಥ ಕೌಶಲ್ಯಗಳಿದ್ದರೆ ಅದರಿಂದ ಆದಾಯ ಗಳಿಸಬಹುದು. ನೀವು ನಿಮ್ಮ ಸ್ವಂತ ವೆಬ್‌ಸೈಟ್ ಅನ್ನು ಪ್ರಾರಂಭಿಸಿ ಅವುಗಳನ್ನು ಮಾರಾಟ ಮಾಡಬಹುದು.


  ಅಲ್ದೇ Etsy ನಂತಹ ಪ್ಲಾಟ್‌ಫಾರ್ಮ್ ಮೂಲಕ ಮಾರಾಟ ಮಾಡಬಹುದು. ಕಲೆ ಮತ್ತು ಕೈಯಿಂದ ಮಾಡಿದ ಉತ್ಪನ್ನಗಳಿಗೆ ಯಾವಾಗಲೂ ಮಾರುಕಟ್ಟೆಯಲ್ಲಿ ಬೇಡಿಕೆ ಇರುತ್ತದೆ.


  ಉದಾಹರಣೆಗೆ ಆಭರಣಗಳು, ಛಾಯಾಗ್ರಹಣ, ಉಡುಪು ತಯಾರಿಕೆ, ಮೇಣದ ಬತ್ತಿ ತಯಾರಿಕೆ, ತ್ವಚೆಯ ಉತ್ಪನ್ನಗಳು, ವಿಶೇಷ ಅಥವಾ ವೈಯಕ್ತಿಕಗೊಳಿಸಿದ ವಸ್ತುಗಳನ್ನು ಮಾಡುವಂಥ ಕೌಶಲ್ಯ ನಿಮ್ಮಲ್ಲಿದ್ದರೆ ನೀವು ಅದನ್ನು ಮಾರಾಟ ಮಾಡುವಂಥ ಉದ್ದಿಮೆಯನ್ನು ಆರಂಭಿಸಬಹುದು.


  Make more money by doing a side business Read here 10 ways to earn money
  ಸಾಂಕೇತಿಕ ಚಿತ್ರ


  3. ಹೌಸ್ ಸಿಟ್ಟಿಂಗ್ ಅಥವಾ ಪೆಟ್ ಸಿಟ್ಟಿಂಗ್ ಕಂಪನಿ: ಹೌಸ್ ಸಿಟ್ಟಿಂಗ್ ಎನ್ನುವುದು ಒಬ್ಬ ವ್ಯಕ್ತಿಯು ತನ್ನ ಮನೆಯನ್ನು ನೋಡಿಕೊಳ್ಳಲು ಬೇರೊಬ್ಬರಿಗೆ ವಹಿಸಿಕೊಡುವುದಾಗಿದೆ.


  ಇವುಗಳಲ್ಲಿ ಮನೆ ಮಾಲೀಕರ ಸಾಕುಪ್ರಾಣಿಗಳನ್ನು ನೋಡಿಕೊಳ್ಳುವುದು, ಮನೆಯ ಸಾಮಾನ್ಯ ನಿರ್ವಹಣೆ, ಸಾಮಾನ್ಯವಾಗಿ, ಎಲ್ಲವೂ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವುದಾಗಿದೆ.


  ಹೌಸ್ ಸಿಟ್ಟಿಂಗ್ ಅನುಕೂಲಕರವಾಗಿರುತ್ತದೆ. ಏಕೆಂದರೆ ನೀವು ಅದಕ್ಕಾಗಿ ಹಣ ಪಡೆಯುತ್ತೀರಿ. ಆದರೆ ವಾಸ್ತವ್ಯದ ಅವಧಿಗೆ ನೀವು ಉಚಿತ ಕೊಠಡಿ ಮತ್ತು ಬೋರ್ಡ್ ಅನ್ನು ಸಹ ಪಡೆಯುತ್ತೀರಿ.


  ನೀವು ನೋಡಿಕೊಳ್ಳುವ ಮನೆಯು ಪ್ರಾಣಿಗಳನ್ನು ಹೊಂದಿದ್ದರೆ, ನೀವು ಹೆಚ್ಚುವರಿ ಶುಲ್ಕವನ್ನು ಪಡೆಯಬಹುದು. ಇನ್ನು, ಸಾಕುಪ್ರಾಣಿಗಳ ಆರೈಕೆಯ ವೆಚ್ಚವು ಹೆಚ್ಚಾಗಿರುತ್ತದೆ. ಅನೇಕ ಸಾಕುಪ್ರಾಣಿಗಳ ಮಾಲೀಕರು ತಮ್ಮ ಸಾಕುಪ್ರಾಣಿಗಳನ್ನು ಪರಿಚಿತ, ಸುತ್ತಮುತ್ತಲಿನ ಮನೆಯಲ್ಲಿ ಬಿಡಲು ಬಯಸುತ್ತಾರೆ.


  4.ಆನ್‌ಲೈನ್‌ನಲ್ಲಿ ಕಲಿಸಿ ಅಥವಾ ಶಿಕ್ಷಕರಾಗಿ: ಎಲ್ಲಾ ವಯಸ್ಸಿನ ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಪರಿಣಿತರ ಸಹಾಯವನ್ನು ಬಯಸುತ್ತಾರೆ. ನೀವು ಸಾಮಾನ್ಯ ಪಠ್ಯಕ್ರಮದ ವಿಷಯಗಳಲ್ಲಿ ಬೋಧಿಸಬಹುದು, ಭಾಷೆಯನ್ನು ಕಲಿಸಬಹುದು ಅಥವಾ ಗ್ರಾಹಕರಿಗೆ ಅಧ್ಯಯನ ಮಾಡಲು ಸಹಾಯ ಮಾಡುವಂತಹ ಹೆಚ್ಚು ನಿರ್ದಿಷ್ಟ ಕ್ಷೇತ್ರಗಳಲ್ಲಿ ಕಲಿಸಬಹುದು.


  ಇಂದು ನೀವು ಆನ್‌ಲೈನ್‌ನಲ್ಲಿ ವಿವಿಧ ವಿಷಯಗಳಿಗೆ ಕಲಿಸಬಹುದಾದ ಸಾಕಷ್ಟು ಅವಕಾಶಗಳಿವೆ. ನಿಮ್ಮ ಕೌಶಲ್ಯವನ್ನು ಅವಲಂಬಿಸಿ ನೀವು ಇದನ್ನು ಪ್ರುಯತ್ನಿಸಬಹುದು. ಸೆಕೆಂಡ್‌ ಲ್ಯಾಂಗ್ವೇಜ್‌, ಅಡುಗೆ, ಡ್ರಾಯಿಂಗ್‌, ಮ್ಯೂಸಿಕಲ್‌ ಇನ್‌ಸ್ಟ್ರುಮೆಂಟ್‌ ಗಳಂಥ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು.


  5. ನಿಮ್ಮ ಕೌಶಲ್ಯವನ್ನು ಮಾರಾಟ ಮಾಡಿ: ನೀವು ನಿರ್ದಿಷ್ಟ ಕರಕುಶಲತೆಯಲ್ಲಿ ಪರಿಣತಿ ಹೊಂದಿದ್ದರೆ, ಉದ್ಯೋಗಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ನಿಮ್ಮ ಸ್ವಂತ ವ್ಯಾಪಾರವನ್ನು ಸುಲಭವಾಗಿ ಪ್ರಾರಂಭಿಸಬಹುದು. ನೀವು ಕಾರ್ಪೆಂಟರ್‌, ಮೆಕ್ಯಾನಿಕಲ್‌, ಹೇರ್ ಸ್ಟೈಲಿಂಗ್, ಹೌಸ್‌ ಪೇಂಟಿಂಗ್‌ ಮುಂತಾದ ಕ್ಷೇತ್ರಗಳಲ್ಲಿ ಕೌಶಲ್ಯಗಳನ್ನು ಹೊಂದಿದ್ದರೆ ನೀವೇ ಸ್ವಂತವಾಗಿ ಕೆಲಸ ಮಾಡುವಂಥ ಸಣ್ಣ ಉದ್ಯಮವನ್ನು ಆರಂಭಿಸಬಹುದು.


  6. ನಿಮ್ಮ ಸ್ಥಳ ಅಥವಾ ಕೊಠಡಿಯನ್ನು ಬಾಡಿಗೆ ನೀಡುವುದು: ನಿಮ್ಮ ಮನೆಯಲ್ಲಿ ನೀವು ಬಳಸದ ಕೋಣೆಯನ್ನು ಹೊಂದಿರಬಹುದು. ಅದು ಸುಮ್ಮನೇ ವ್ಯರ್ಥವಾಗಿ ಖಾಲಿಯಿಡುವ ಬದಲು ಅದರಿಂದ ಆದಾಯವನ್ನು ಸಂಪಾದಿಸಬಹುದು.


  ನೀವು ಅದನ್ನು ಬೆಡ್‌ರೂಂ ಆಗಿ ಪರಿವರ್ತಿಸಬಹುದು. ದೀರ್ಘಾವಧಿಗೆ ಬಳಸುವ ಯಾರಿಗಾದರೂ ಅದನ್ನು ಬಾಡಿಗೆಗೆ ನೀಡಬಹುದು. ನೀವು ಟೆರೆಸ್‌ ಮೇಲಿನ ಕೋಣೆಗಳನ್ನೋ ಅಥವಾ ಗ್ಯಾರೇಜ್ಅನ್ನು ಗೆಸ್ಟ್‌ ರೂಂ ಆಗಿ ಪರಿವರ್ತಿಸಬಹುದು.


  ಇದರಿಂದ ನಿಮಗೆ ನಿರಂತರವಾಗಿ ಆದಾಯ ಬರುತ್ತದೆ. ಅದರಲ್ಲೂ ನಗರಗಳಲ್ಲಿ ಜಾಗ ಅನ್ನೋದು ಬಹಳ ಬೆಲೆಬಾಳುವಂಥದ್ದು. ಗೇಣು ಜಾಗವೂ ಇಲ್ಲಿ ಬಹಳಷ್ಟು ಮೌಲ್ಯ ಹೊಂದಿರುತ್ತದೆ. ಆದ್ದರಿಂದ ನೀವು ಅದನ್ನು ಬಳಸದಿದ್ದರೆ, ಕೆಲವು ಹೆಚ್ಚುವರಿ ಹಣವನ್ನು ಗಳಿಸುವಂತೆ ಅದನ್ನು ಪರಿವರ್ತಿಸಬಹುದು.


  Make more money by doing a side business Read here 10 ways to earn money
  ಸಾಂಕೇತಿಕ ಚಿತ್ರ


  7. ಕ್ಲೀನಿಂಗ್‌ ವ್ಯವಹಾರವನ್ನು ಪ್ರಾರಂಭಿಸಿ: ಶುಚಿಗೊಳಿಸುವ ವ್ಯವಹಾರವನ್ನು ಪ್ರಾರಂಭಿಸುವುದು ಕಡಿಮೆ-ವೆಚ್ಚದ ಆರಂಭಿಕ ಕಲ್ಪನೆಯಾಗಿದೆ. ಇದು ಕಡಿಮೆ ಕಷ್ಟದ್ದಾಗಿದೆ.


  ಮನೆಗಳನ್ನು ಶುಚಿಗೊಳಿಸುವುದು ಬೇಗನೇ ಹಣ ಗಳಿಸಲು ಬೇಡಿಕೆಯ ಮಾರ್ಗವಾಗಿದೆ. ನಿಯಮಿತ ಗ್ರಾಹಕರ ನೆಲೆಯನ್ನು ನಿರ್ಮಿಸುವ ಮೂಲಕ, ನೀವು ಈ ಸೈಡ್‌ ಬ್ಯುಸಿನೆಸ್‌ಗಾಗಿ ಗಮನಾರ್ಹ ಮತ್ತು ಸ್ಥಿರವಾದ ಹೆಚ್ಚುವರಿ ಆದಾಯವನ್ನು ಗಳಿಸಬಹುದು.


  8. ಆಹಾರ ಅಥವಾ ಸರಕುಗಳನ್ನು ತಲುಪಿಸುವುದು: ಕಾರು ಅಥವಾ ಬೈಕ್‌ನಂತಹ ವ್ಯವಸ್ಥೆ ಹೊಂದಿರುವವರಿಗೆ ಆಹಾರ ಅಥವಾ ಸರಕುಗಳನ್ನು ತಲುಪಿಸುವುದು ಉತ್ತಮ ಕೆಲಸವಾಗಿದೆ.


  ನಿಮ್ಮ ವ್ಯಾಪಾರವನ್ನು ಪ್ರಾರಂಭಿಸಿದರೆ ನೀವು ಸಾಕಷ್ಟು ಗ್ರಾಹಕರನ್ನು ಹೊಂದುತ್ತೀರಿ ಎಂದು ನೀವು ಭಾವಿಸಿದರೆ, ಟಾಸ್ಕ್‌ರ್ಯಾಬಿಟ್ ಅಥವಾ ಫೇವರ್‌ನಂತಹ ಪ್ಲ್ಯಾಟ್‌ಫಾರ್ಮ್‌ಗಳ ಮೂಲಕ ಸೈನಪ್‌ ಮಾಡಬಹುದು. ಈ ಮೂಲಕ ನಿಮ್ಮ ಸ್ವಂತ ವಿತರಣಾ ವ್ಯವಸ್ಥೆಯನ್ನು ಪ್ರಾರಂಭಿಸಬಹುದು.


  9. ರಿಸೇಲ್‌ ಬ್ಯುಸಿನೆಸ್‌ : ನೀವು ಶಾಪಿಂಗ್‌ನಲ್ಲಿ ಚೌಕಾಶಿ ಮಾಡಲು ಬಯಸುವವರಾಗಿದ್ದರೆ ಮಿತವ್ಯಯ ಅಂಗಡಿಯ ಬಟ್ಟೆಗಳನ್ನು ಮರುಮಾರಾಟ ಮಾಡುವುದು ನಿಮಗೆ ಒಂದೊಳ್ಳೆಯ ಸೈಡ್‌ ಬ್ಯುಸಿನೆಸ್‌ ಆಗುತ್ತದೆ.


  ನೀವು ಕಡಿಮೆ ವೆಚ್ಚದಲ್ಲಿ ಕೊಂಡುಕೊಂಡ ಬಟ್ಟೆಗಳನ್ನು ಮಾರಾಟ ಮಾಡಬಹುದು. ಕೆಲವೊಮ್ಮೆ ಡಿಸೈನರ್ ಬಟ್ಟೆಗಳೂ ಸಹ ರಿಸೇಲ್‌ಗೆ ಬರುತ್ತವೆ. ಇದನ್ನು ನೀವು Poshmark ನಂತಹ ಸೈಟ್‌ಗಳಲ್ಲಿ ಮಾರಾಟ ಮಾಡಬಹುದು.


  ಅಥವಾ ನೀವು ಇದನ್ನು ಮಾರಾಟ ಮಾಡುವ ವೆಬ್‌ಸೈಟ್ ಅನ್ನು ಪ್ರಾರಂಭಿಸಬಹುದು. ನೀವು ವಿನ್ಯಾಸಕರಾಗಿದ್ದರೆ ಹೆಚ್ಚುವರಿಯಾಗಿ ಉಳಿದಂತಹ ಬಟ್ಟೆಗಳು ಅಥವಾ ಕಟ್‌ಪೀಸ್‌ಗಳನ್ನೂ ಬಳಸಿಕೊಳ್ಳಬಹುದು.


  10. ಡ್ರಾಪ್‌ಶಿಪಿಂಗ್ ಅನ್ನು ಪ್ರಾರಂಭಿಸಬಹುದು: ಡ್ರಾಪ್ ಶಿಪ್ಪಿಂಗ್ ಎನ್ನುವುದು ಚಿಲ್ಲರೆ ವ್ಯಾಪಾರದ ಒಂದು ರೂಪವಾಗಿದೆ. ಇದರಲ್ಲಿ ಮಾರಾಟಗಾರನು ಸ್ಟಾಕ್ ಅನ್ನು ಕೈಯಲ್ಲಿ ಇಟ್ಟುಕೊಳ್ಳದೆ ಗ್ರಾಹಕರ ಆದೇಶಗಳನ್ನು ಸ್ವೀಕರಿಸುವ ಮಧ್ಯವರ್ತಿಯಾಗಿರುತ್ತಾನೆ.


  ಡ್ರಾಪ್‌ಶಿಪಿಂಗ್‌ನಲ್ಲಿ ಉತ್ತಮವಾದದ್ದು, ಮೂಲಭೂತವಾಗಿ, ನಿಮ್ಮ ಸೈಡ್ ಬ್ಯುಸಿನೆಸ್‌ ಅನ್ನು ಸ್ಟಾಕ್‌ನಲ್ಲಿ ಇರಿಸದೆಯೇ ಗ್ರಾಹಕರಿಗಾಗಿ ಕೆಲಸ ಮಾಡುವುದಾಗಿದೆ. ಇದರಲ್ಲಿ ಹೆಚ್ಚಿನ ಬಂಡವಾಳದ ಅಗತ್ಯವೇ ಬರುವುದಿಲ್ಲ.


  ಏಕೆಂದರೆ ಇ-ಕಾಮರ್ಸ್ ವ್ಯವಹಾರ ಮಾದರಿಗೆ ಯಾವುದೇ ಆರಂಭಿಕ ವೆಚ್ಚಗಳಿಲ್ಲ ಅನ್ನೋದು ಗಮನಾರ್ಹ ಅಂಶ. ಈ ಪ್ಲಾಟ್‌ಫಾರ್ಮ್ ಅನ್ನು ಬಳಸುವ ಮೂಲಕ, ನೀವು ಮೂಲಭೂತವಾಗಿ ಮಧ್ಯಮ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತೀರಿ. ಅಲ್ಲದೇ ಸುಲಭವಾಗಿ ಲಾಭವನ್ನು ಕೂಡ ಗಳಿಸಬಹುದು.


  ಇದನ್ನೂ ಓದಿ:Heroes Business: ಬರೀ ಸಿನಿಮಾದಿಂದಲ್ಲ, ಇಲ್ಲಿಂದಲೂ ಸಿಕ್ಕಾಪಟ್ಟೆ ದುಡ್ಡು ಮಾಡ್ತಿರೋ ಸ್ಟಾರ್​ ನಟರಿವರು!


  ಒಟ್ಟಾರೆಯಾಗಿ ಅನೇಕರಿಗೆ ಹೀಗೆ ಸೈಡ್‌ ಬ್ಯುಸಿನೆಸ್‌ ಆರಂಭಿಸುವ ಉತ್ಸಾಹವಿರುತ್ತದೆ. ಆದರೆ ಸರಿಯಾದ ಮಾಹಿತಿ ಇರುವುದಿಲ್ಲ. ಆದರೆ ವಿಶೇಷ ಕಲೆಗಳನ್ನು ಹೊಂದಿರುವವರು ಅಥವಾ ಕೆಲವೊಂದು ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವವರು ಹೀಗೆ ಸ್ವಂತವಾಗಿ ಆದಾಯ ಬರುವಂಥ ಉದ್ದಿಮೆಗಳನ್ನು ಆರಂಭಿಸಬಹುದು.


  ಈಗಂತೂ ತಂತ್ರಜ್ಞಾನದ ಯುಗ. ಆದ್ದರಿಂದ ಅನೇಕ ಕೆಲಸಗಳು ಮೊಬೈಲ್‌ನಲ್ಲಿಯೇ ಆಗುತ್ತವೆ. ನಿಮಗೇ ಗೊತ್ತಿರುವ ಹಾಗೆ ಸಾಮಾಜಿಕ ಜಾಲತಾಣಗಳು ಒಳ್ಳೆಯ ವೇದಿಕೆಗಳಾಗಿವೆ.
  ಉಚಿತವಾಗಿಯೇ ನೀವು ನಿಮ್ಮ ವಸ್ತುಗಳ, ಕಲೆಗಳ ಹಾಗೂ ಸ್ವಂತ ಉದ್ದಿಮೆಗಳನ್ನು ಪ್ರಮೋಟ್‌ ಮಾಡಿಕೊಳ್ಳಬಹುದು. ಈ ಮೂಲಕ ನಿಮ್ಮ ಉತ್ಪನ್ನವನ್ನು ಅಥವಾ ಕಲೆಯನ್ನು ಅನೇಕ ಜನರಿಗೆ ತಲುಪಿಸಬಹುದು.


  ಹಾಗಾಗಿ ಕಡಿಮೆ ಬಂಡವಾಳದಲ್ಲಿ ನೀವು ನಿಮ್ಮ ಉದ್ಯಮಗಳನ್ನು ಆರಂಭಿಸಲು ಇದು ಸಕಾಲ. ಹಾಗಾದ್ರೆ ಹೆಚ್ಚುವರಿ ಆದಾಯ ಗಳಿಸಬೇಕು, ಸೈಡ್‌ ಬ್ಯುಸಿನೆಸ್‌ ಮಾಡಬೇಕು ಎಂದು ಯೋಜಿಸಿದ್ದರೆ ಇನ್ಯಾಕೆ ತಡ, ಈಗಲೇ ಅದಕ್ಕೆ ಸರಿಯಾದ ಯೋಜನೆ ರೂಪಿಸಿ ಕಾರ್ಯಗತಗೊಳಿಸುವಲ್ಲಿ ಹೆಜ್ಜೆ ಇಡಿ.

  Published by:Gowtham K
  First published: