Make Money: ಅಜ್ಜಿ ಹೇಳಿಕೊಟ್ಟ ಕಸೂತಿಯಲ್ಲೂ ಇದೇ ಸಂಪಾದನೆ ಮಾರ್ಗ; ಮಾಡಬೇಕಿರುವುದು ಇಷ್ಟೇ

ನೀವು ಹೆಣೆದ ವಸ್ತುಗಳನ್ನು ಸ್ಥಳೀಯ ಮೇಳ, ಜಾತ್ರೆಗಳಲ್ಲಿ ಮಾರಾಟ ಮಾಡಲು ಮಳಿಗೆ ಹಾಕಲು ಪ್ರಯತ್ನಿಸಿ. ಅರೆಕಾಲಿಕ, ಪೂರ್ಣ ಪ್ರಮಾಣದ ಉದ್ಯೋಗ, ವ್ಯಾಪಾರ ವಹಿವಾಟಿನಿಂದ ಆದಾಯ ಗಳಿಸಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನಾವು ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ (Home) ತಾಯಿ, ಅಕ್ಕ-ತಂಗಿಯರು ಹೆಣಿಕೆ (Knitting) ಮಾಡುತ್ತಿರುವುದನ್ನು ಕಾಣುತ್ತೇವೆ. ಹಳ್ಳಿಗಳಲ್ಲಿ (Villages) ಮಹಿಳೆಯರು (Women's) ತಮ್ಮ ಬಿಡುವಿನ ಸಮಯದಲ್ಲಿ ಸೀರೆಗೆ (Saree) ಎಂಬ್ರಾಯಿಡರ್ ಮಾಡುವುದು, ಹೆಣಿಕೆ ಹಾಕುವುದು, ಉಲನ್ ನಿಂದ ಡ್ರೆಸ್ (Dress) ಹೆಣೆಯುವುದು, ಮಕ್ಕಳಿಗೆ ಟೋಪಿ ಹೆಣೆಯುವುದನ್ನು ನೋಡಿದ್ದೇವೆ. ಉಲನ್ ಶಾಲು, ದೇವಸ್ಥಾನಕ್ಕೆ ಕೊಂಡೊಯ್ಯುವ ಪ್ಲೇಟ್ ಮೇಲೆ ಮುಚ್ಚಲು ಅಂದವಾಗಿ ಹೆಣೆದ ಡಿಸೈನಿಂಗ್ (Designing) ಬಟ್ಟೆಯನ್ನು ಹಾಕುವುದನ್ನು ನೋಡಿದ್ದೇವೆ. ಈಗ ನಾವು ನಮ್ಮಲ್ಲಿರುವ ಈ ಹೆಣಿಕೆಯನ್ನು ವ್ಯಾಪಾರಕ್ಕೆ ಬಳಸಿಕೊಳ್ಳುವುದನ್ನು ಕಲಿಯಬೇಕು. ನಿಮ್ಮಲ್ಲಿ ಹೆಣಿಕೆ ಮಾಡುವ ಕಲೆಯಿದ್ದು, ಉತ್ತಮವಾಗಿ, ವಿವಿಧ ವಿನ್ಯಾಸದ ಹೆಣಿಕೆ ಮಾಡುವಲ್ಲಿ ನೀವು ನಿಪುಣರಾಗಿದ್ದರೆ , ನೀವು ಹೆಣೆದ ವಸ್ತುಗಳನ್ನು ಮಾರಾಟ ಮಾಡಿ ಹಣ ಗಳಿಸುವ ಕೆಲ ಮಾರ್ಗೋಪಾಯಗಳನ್ನು ಹುಡುಕಿಕೊಳ್ಳುವುದು ನಿಮ್ಮ ಆರ್ಥಿಕ (Economy) ಸುಧಾರಣೆ ಮತ್ತು ಕಲೆಗೆ (Art) ಸಹಕಾರಿಯಾಗಿದೆ.

    ಸಣ್ಣ ಮಳಿಗೆ ಹಾಕಲು ಪ್ರಯತ್ನಿಸಿ

    ನೀವು ಹೆಣೆದ ವಸ್ತುಗಳನ್ನು ಸ್ಥಳೀಯ ಮೇಳ, ಜಾತ್ರೆಗಳಲ್ಲಿ ಮಾರಾಟ ಮಾಡಲು ಸಣ್ಣ ಮಳಿಗೆ ಹಾಕಲು ಪ್ರಯತ್ನಿಸಿ. ನಿಮ್ಮ ವಸ್ತುಗಳನ್ನು ಮತ್ತು ನೀವು ಹೆಣೆಯುವ ವಸ್ತುಗಳ ಬಗ್ಗೆ ಇತರರಲ್ಲಿ ಹೆಚ್ಚು ಪ್ರಚಾರ ಮಾಡಿ. ಕರಕುಶಲ ಮೇಳಗಳಲ್ಲಿ ಅಥವಾ Etsy ನಂತಹ ವೆಬ್‌ಸೈಟ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಸೂಕ್ತ ವೇದಿಕೆಯನ್ನು ಕಂಡುಕೊಳ್ಳಿ.

    ನಿಮ್ಮ ಹೆಣಿಕೆಯ ವಸ್ತುಗಳನ್ನು ಮಾರಾಟ ಮಾಡುವುದರಿಂದ ನಿಮಗೆ ಅರೆಕಾಲಿಕ ಅಥವಾ ಪೂರ್ಣ ಪ್ರಮಾಣದ ಉದ್ಯೋಗ ಮತ್ತು ವ್ಯಾಪಾರ ವಹಿವಾಟು ನಡೆಸಲು ಅನುಕೂಲವಾಗುತ್ತದೆ. ಕೈಯಿಂದ ಹೆಣೆದ ಕರಕುಶಲ ವಸ್ತುಗಳಿಗೆ ಸ್ಪಷ್ಟ ಮಾರುಕಟ್ಟೆ ಇದೆ. ಮಗುವಿನ ಬಟ್ಟೆಗಳು ಮತ್ತು ಹೊದಿಕೆಗಳು, ಟೋಪಿಗಳು ಮತ್ತು ಪರಿಕರಗಳು, ವಧುವಿನ ಶಾಲು, ಉಡುಪುಗಳನ್ನು ಹೆಣೆದು ಮಾರಾಟ ಮಾಡುವ ಮೂಲಕ ಆರ್ಥಿಕ  ಲಾಭ ಪಡೆಯಬಹುದು. ನಿಮ್ಮ ಹೆಣಿಕೆ ಹವ್ಯಾಸ ನಿಮಗೆ ಆರ್ಥಿಕ ಲಾಭ ತಂದು ಕೊಡುವ ಮಾರ್ಗವಾಗಲಿದೆ.

    ಇದನ್ನೂ ಓದಿ: ಗುಡ್ ನ್ಯೂಸ್, ಇವರಿಗೆಲ್ಲ ರಿಯಾಯ್ತಿ ದರದಲ್ಲಿ ಸಿಗಲಿವೆ ಷೇರುಗಳು

    ನೀವು ಹೆಣೆದ ವಸ್ತುಗಳ ಪ್ರಚಾರಕ್ಕೆ ಬ್ಲಾಗ್ ಆರಂಭಿಸಿ

    ನೀವು ಹೆಣೆದ ವಸ್ತುಗಳ ಮಾರಾಟಕ್ಕಾಗಿ, ಪ್ರಚಾರಕ್ಕಾಗಿ ಬ್ಲಾಗ್ ಒಂದನ್ನು ಆರಂಭಿಸಿ. ನೀವು ಹೆಣೆದ ವಸ್ತುಗಳ ವಿವರಣೆಯನ್ನು ಚಿತ್ರ ಸಮೇತವಾಗಿ ಬ್ಲಾಗ್ ನಲ್ಲಿ ಉಲ್ಲೇಖಿಸಿ. ನಿಮ್ಮ ಯೋಜನೆಗಳನ್ನು ಮತ್ತು ಹೆಣಿಕೆ ಮಾಡುವ ವಿಧಾನವನ್ನು ಹಂಚಿಕೊಳ್ಳಿ. ಮತ್ತು ಕೆಲವು ಟ್ಯುಟೋರಿಯಲ್‌ಗಳನ್ನು ಪೋಸ್ಟ್ ಮಾಡಬಹುದು. ಇದರಿಂದ ನಿಮಗೆ ಹಣ ಗಳಿಸಲು ಸಹಾಕವಾಗುತ್ತದೆ.

    ಬ್ಲಾಗ್ ನಿಂದ ಜಾಹೀರಾತು ಪಡೆದು ಹಣ ಗಳಿಕೆ ಮತ್ತು ಮಾರ್ಕೆಟಿಂಗ್

    ನಿಮ್ಮ ಉತ್ಪನ್ನಗಳನ್ನು ಪ್ರಚಾರ ಮಾಡಲು ಮತ್ತು ಜಾಹೀರಾತು ನಿಮ್ಮ ಬ್ಲಾಗ್ ಗೆ ಬಂದರೆ ಅದು ಹಣ ಗಳಿಕೆಗೆ ಸಹಕಾರಿ. ಹೆಣಿಕೆ ಬ್ಲಾಗ್‌ನಿಂದ ನೀವು ಆದಾಯವನ್ನು ಗಳಿಸುವ ಇನ್ನೊಂದು ಮಾರ್ಗವೆಂದರೆ ಅಂಗಸಂಸ್ಥೆ ಮಾರ್ಕೆಟಿಂಗ್. ನಿಮ್ಮ ಹೆಣಿಕೆಗಳನ್ನು ಅಂತರ್ಜಾಲದಲ್ಲಿ ಮಾರಾಟ ಮಾಡಬಹುದು. Etsy ಇದನ್ನು ಮಾಡಲು ಉತ್ತಮ ಸ್ಥಳವಾಗಿದೆ.

    ಇಬೇಯಲ್ಲಿ ಹೆಣಿಕೆ ಮಾದರಿಗಳನ್ನು ಮಾರಾಟ ಮಾಡಬಹುದು. ನೇರವಾಗಿ ಸ್ವಂತ ವೆಬ್‌ಸೈಟ್ ಮೂಲಕ ನಿಮ್ಮ ವಸ್ತುಗಳನ್ನು ಮಾರಾಟ ಮಾಡಬಹುದು. ಇದು ಮೊದ ಮೊದಲು ಕಠಿಣ ವಾದರೂ ಉತ್ತಮ ಪ್ರಯೋಜನ ಪಡೆಯಬಹುದು.

    ಹೆಣಿಕೆ ಬಗ್ಗೆ ಪುಸ್ತಕ ಬರೆಯಿರಿ

    ನಿಮ್ಮ ಹೆಣಿಕೆ ಬಗ್ಗೆ ಪುಸ್ತಕ ಬರೆದು, ಅದರಲ್ಲಿ ಟ್ಯುಟೋರಿಯಲ್‌ಗಳು ಮತ್ತು ಹೊಲಿಗೆ ಲೈಬ್ರರಿಗಳಂತಹ ಇತರ ಹೆಣಿಕೆ ಸಂಬಂಧಿತ ವಿಷಯಗಳ ಸಂಗ್ರಹಗಳನ್ನು ಪ್ರಕಟಿಸಬಹುದು. ಹೆಣಿಕೆಯಿಂದ ಹಣ ಸಂಪಾದಿಸಲು ಇದು ಮತ್ತೊಂದು ಉತ್ತಮ ಮಾರ್ಗವಾಗಿದೆ. ನೇರವಾಗಿ Amazon ನಲ್ಲಿ ಮಾರಾಟ ಮಾಡಬಹುದು. ನೀವು ಕಿಂಡಲ್ ಇ-ಪುಸ್ತಕಗಳು ಮತ್ತು ಪೇಪರ್‌ಬ್ಯಾಕ್‌ಗಳನ್ನು ಅಲ್ಲಿ ಮಾರಾಟ ಮಾಡಬಹುದು.

    ಯೂಟ್ಯೂಬರ್ ಆಗಿ ಹೆಣಿಕೆ ಪ್ರಚಾರ ಮಾಡಿ

    ನಿಮ್ಮ ವೀಡಿಯೊಗಳಲ್ಲಿ ಜಾಹೀರಾತುಗಳನ್ನು ಇರಿಸುವ ಮೂಲಕ ನೀವು YouTube ನಿಂದ ಹಣವನ್ನು ಗಳಿಸಬಹುದು. ಹೊಸ knitters ಕಲಿಯಲು ಯುಟ್ಯೂಬ್ ಅವಲಂಬಿಸಿದ್ದಾರೆ. ಹಾಗಾಗಿ ಯುಟ್ಯೂಬ್ ನಲ್ಲಿ ನಿಮ್ಮ ಪ್ರೊಫೈಲ್ ಕ್ರಿಯೇಟ್ ಮಾಡಿ ಅಲ್ಲಿ ನಿಮ್ಮ ಹೆಣಿಕೆಯ ವಿಡಿಯೋಗಳನ್ನು ಬಿತ್ತರಿಸಿ. ನಿಮ್ಮ ಅನುಭವ, ಕುಶಲಕರ್ಮಿಗಳಿಗೆ ಇಂಟಾರ್ಸಿಯಾ ಅಥವಾ ಫೇರ್ ಐಲ್ ಹೆಣಿಕೆಯಂತಹ ಕೌಶಲ್ಯಗಳ ಸಹಾಯದ ಅಗತ್ಯವಿದೆ.

    ಇದನ್ನೂ ಓದಿ: 2022ರಲ್ಲಿ ಹೆಚ್ಚುವರಿ ಆದಾಯ ಮೂಲಗಳೊಂದಿಗೆ ನಿಮ್ಮ ಹೂಡಿಕೆಯನ್ನು ಹೇಗೆ ವೈವಿಧ್ಯಗೊಳಿಸುವುದು ಎಂಬುದು ಇಲ್ಲಿದೆ

    ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿ

    ಸಾಮಾಜಿಕ ಮಾಧ್ಯಮದಲ್ಲಿ ಇತರ ಕಂಪನಿಗಳು ಮತ್ತು ಉತ್ಪನ್ನಗಳನ್ನು ಪ್ರಚಾರ ಮಾಡುವ ಮೂಲಕ ಪ್ರಭಾವಿಗಳು ಹಣ ಗಳಿಸುತ್ತಾರೆ. ಇದನ್ನು ಮಾಡಲು ನೀವು ಉಚಿತ ಉಡುಗೊರೆಗಳನ್ನು ಸಹ ಪಡೆಯಬಹುದು. ನಿಮ್ಮ ಹೆಣಿಕೆಯ ಫೋಟೋಗಳನ್ನು , ವಸ್ತುಗಳನ್ನು ಪೋಸ್ಟ್ ಮಾಡಿ, ವಿವರಣೆ ನೀಡಿ.
    Published by:renukadariyannavar
    First published: