Cooking Oil Price: ಜನಸಾಮಾನ್ಯರಿಗೆ ಶುಭಸುದ್ದಿ, ಅಡುಗೆ ಎಣ್ಣೆ ದರಗಳಲ್ಲಿ 10-15% ಭಾರೀ ಕಡಿತ

ಹೆಚ್ಚಿನ ಅಂತಾರಾಷ್ಟ್ರೀಯ ಬೆಲೆಗಳ ಕಾರಣದಿಂದಾಗಿ ಕಳೆದ ಕೆಲವು ತಿಂಗಳುಗಳಲ್ಲಿ ಖಾದ್ಯ ತೈಲಗಳ ಅತಿಯಾದ ಬೆಲೆ ಏರಿಕೆಯು ದೇಶೀಯ ಗ್ರಾಹಕರು ಮತ್ತು ನೀತಿ ನಿರೂಪಕರನ್ನು ನಿರಾಶೆಗೊಳಿಸುತ್ತಿದೆ ಎಂದು SEA ಹೇಳಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತದ ಸಾಲ್ವೆಂಟ್ ಎಕ್ಸ್‌ಟ್ರಾಕ್ಟರ್ಸ್ ಅಸೋಸಿಯೇಷನ್‌ನ ( Solvent Extractors Association of India) (SEA) ಹಲವಾರು ಸದಸ್ಯರು ಹಬ್ಬದ ಋತುವಿನಲ್ಲಿ(Festive season) ಗ್ರಾಹಕರಿಗೆ (Customers) ಕೊಂಚ ನೆಮ್ಮದಿಯನ್ನುಂಟು ಮಾಡುವುದಕ್ಕಾಗಿ ಖಾದ್ಯ ತೈಲಗಳ ಮೇಲಿನ ಗರಿಷ್ಠ ಚಿಲ್ಲರೆ ಬೆಲೆಯನ್ನು ( Edible Oils) (MRP) 10-15%ರಷ್ಟು ಕಡಿಮೆ ಮಾಡಿದ್ದಾರೆ ಎಂದು ಹೇಳಿಕೊಂಡಿದೆ. SEA ಅಧ್ಯಕ್ಷರಾದ ಅತುಲ್ ಚತುರ್ವೇದಿಯವರು (Atul Chaturvedi) ತಿಳಿಸಿರುವಂತೆ ಖಾದ್ಯ ತೈಲಗಳನ್ನು ನೈಜವಾದ MRP ಬೆಲೆಯೊಂದಿಗೆ ಮಾರಾಟ ಮಾಡಲು ಸಂಘವು ಮಾಡಿದ ವಿನಂತಿಗೆ ಸದಸ್ಯರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದ್ದಾರೆ.

ತೈಲ ಬ್ರ್ಯಾಂಡ್‌ಗಳ ಮೇಲಿನ MRP ಕಡಿಮೆ ಮಾಡಿದ ಬ್ರ್ಯಾಂಡ್‌ಗಳು:
ಅದಾನಿ ವಿಲ್ಮರ್ (ಫಾರ್ಚ್ಯೂನ್ ಬ್ರ್ಯಾಂಡ್‌ಗಳು), ರುಚಿ ಸೋಯಾ (ಮಹಾಕೋಶ್, ಸನ್‌ರಿಚ್, ರುಚಿ ಗೋಲ್ಡ್, ನ್ಯೂಟ್ರೆಲ್ಲಾ ಬ್ರ್ಯಾಂಡ್‌ಗಳು) ಇಮಾಮಿ (ಹೆಲ್ದಿ ಅಂಡ್ ಟೇಸ್ಟಿ ಬ್ರ್ಯಾಂಡ್‌ಗಳು), ಬಂಗೇ (ಡಾಲ್ಡಾ/ಗಗನ್/ಚಂಬಲ್ ಬ್ರ್ಯಾಂಡ್‌ಗಳು), ಜೆಮಿನಿ (ಫ್ರೀಡಮ್ ಸನ್‌ಫ್ಲವರ್ ಆಯಿಲ್ ಬ್ರ್ಯಾಂಡ್‌ಗಳು) COFCO (ನ್ಯೂಟ್ರಿಲೈವ್ ಬ್ರ್ಯಾಂಡ್), ಫ್ರಿಗೊರಿಫಿಕೊ ಅಲಾನಾ (ಸನ್ನಿ ಬ್ರ್ಯಾಂಡ್‌ಗಳು) ಮತ್ತು ಗೋಕುಲ್ ಆಗ್ರೋ (ವಿಟಾಲೈಫ್, ಮಾಹೆಕ್, ಜೈಕಾ ಬ್ರ್ಯಾಂಡ್‌ಗಳು) ಹೀಗೆ ಇತರ ಕೆಲವೊಂದು ಬ್ರ್ಯಾಂಡ್‌ಗಳು ಆಯಾ ಖಾದ್ಯ ತೈಲ ಬ್ರ್ಯಾಂಡ್‌ಗಳ ಮೇಲಿನ MRP ಕಡಿಮೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Petrol, Diesel Price: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 5 ರೂಪಾಯಿ ಕಡಿಮೆ ಆಗಬಹುದು? ದರ ಕುಸಿತದ ಲಾಭ ಜನರಿಗೆ ಸಿಗುತ್ತಾ?

ಸುಂಕ ಕಡಿತ ಪರಿಶೀಲಿಸಲು ಸಭೆ
ಗ್ರಾಹಕರು ಪಾವತಿಸಬೇಕಾದ ನೈಜ MRP ಬೆಲೆಯಲ್ಲಿ ಖಾದ್ಯ ತೈಲಗಳನ್ನು ಮಾರಾಟ ಮಾಡಲು ಸಂಘವು ತನ್ನ ಸದಸ್ಯರಿಗೆ ತಿಳಿಸಿತ್ತು. SEAಯ ಸದಸ್ಯರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿರುವಂತೆ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಕಾರ್ಯದರ್ಶಿ ಸುಧಾಂಶು ಪಾಂಡೆ ಇತ್ತೀಚೆಗೆ SEAಯೊಂದಿಗೆ ಖಾದ್ಯ ತೈಲದ ಬೆಲೆಗಳ ಸುಂಕ ಕಡಿತ ಪರಿಶೀಲಿಸಲು ಸಭೆ ನಡೆಸಿದ್ದಾರೆ ಎಂದು SEAಯ ಅಧ್ಯಕ್ಷ ಅತುಲ್ ಚತುರ್ವೇದಿಯವರು ತಿಳಿಸಿದ್ದಾರೆ. ಸಭೆಯ ಸಂದರ್ಭದಲ್ಲಿ ಗ್ರಾಹಕರಿಗೆ ವಿತರಿಸುವ ಪ್ಯಾಕೆಟ್‌ಗಳಲ್ಲಿ ನಮೂದಿಸಿರುವ MRPಗಳು ಸುಂಕದ ಕಡಿತಕ್ಕೆ ಅನುಗುಣವಾಗಿಲ್ಲ ಎಂದು ತಿಳಿಸಿದ್ದಾರೆ. ತಯಾರಕ ಸಂಸ್ಥೆಗಳ ಇಶ್ಯೂ ಬೆಲೆ ಕಡಿಮೆ ಇದ್ದರೂ, ಹೆಚ್ಚಿನ ಗ್ರಾಹಕರು MRP ಬೆಲೆ ಪಾವತಿಸುವಂತೆ ಒತ್ತಾಯಕ್ಕೊಳಪಟ್ಟಿದ್ದಾರೆ ಎಂದು ತಿಳಿಸಿದರು.

ರಿಯಾಯಿತಿ ದರ ಎದ್ದುಗಾಣಿಸಲು ಜಾಹೀರಾತು:
ಗ್ರಾಹಕರು ಪಾವತಿಸಬೇಕಾದ ನೈಜ MRPಯೊಂದಿಗೆ ಖಾದ್ಯ ತೈಲಗಳನ್ನು ಮಾರುಕಟ್ಟೆಗೆ ವಿತರಿಸಲು ನಮ್ಮ ಸದಸ್ಯರಿಗೆ ನಾವು ಸಲಹೆ ನೀಡುತ್ತಿದ್ದೇವೆ ಹಾಗೂ ಈ ಕೂಡಲೇ ರಿಯಾಯಿತಿ ದರವನ್ನು ಎದ್ದುಗಾಣಿಸಲು ಸಂಬಂಧಿತ ಮಾರುಕಟ್ಟೆ ಪ್ರದೇಶಗಳಲ್ಲಿ ವಿವಿಧ ಮಾಧ್ಯಮಗಳ ಮೂಲಕ ಜಾಹೀರಾತುಗಳನ್ನು ನೀಡುತ್ತೇವೆ ಎಂದು ಚತುರ್ವೇದಿಯವರು SEA ಸದಸ್ಯರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಆಮದು ಸುಂಕ ಕಡಿಮೆ
ಹೆಚ್ಚಿನ ಅಂತಾರಾಷ್ಟ್ರೀಯ ಬೆಲೆಗಳ ಕಾರಣದಿಂದಾಗಿ ಕಳೆದ ಕೆಲವು ತಿಂಗಳುಗಳಲ್ಲಿ ಖಾದ್ಯ ತೈಲಗಳ ಅತಿಯಾದ ಬೆಲೆ ಏರಿಕೆಯು ದೇಶೀಯ ಗ್ರಾಹಕರು ಮತ್ತು ನೀತಿ ನಿರೂಪಕರನ್ನು ನಿರಾಶೆಗೊಳಿಸುತ್ತಿದೆ ಎಂದು SEA ಹೇಳಿದೆ. ಅದೂ ಅಲ್ಲದೆ ಖಾದ್ಯ ತೈಲಗಳ ಬೆಲೆಗಳನ್ನು ನಿಯಂತ್ರಿಸಲು, ಸಂಸ್ಕರಿಸಿದ ಮತ್ತು ಕಚ್ಚಾ ಖಾದ್ಯ ತೈಲಗಳ ಮೇಲೆ ಆಮದು ಸುಂಕವನ್ನು ಹಲವಾರು ಬಾರಿ ಸರಕಾರವು ಕಡಿಮೆ ಮಾಡಿದೆ.

ಇದನ್ನೂ ಓದಿ: Cooking: ಎಣ್ಣೆ-ತುಪ್ಪ ಬಳಸದೆಯೂ ರುಚಿಕರ ಅಡುಗೆ ಮಾಡಬಹುದು: ಇಲ್ಲಿವೆ ಸಲಹೆಗಳು

ಡಿಸೆಂಬರ್ 20 ರಂದು ಸರ್ಕಾರವು ಆಮದು ಸುಂಕದ ಕೊನೆಯ ಕಡಿತ ಮಾಡಿದ್ದು, ಸಂಸ್ಕರಿಸಿದ ತಾಳೆ (ಪಾಮ್) ಎಣ್ಣೆಯ ಮೂಲ ಕಸ್ಟಮ್ಸ್ ಸುಂಕವನ್ನು ಮಾರ್ಚ್ 2022ರ ಅಂತ್ಯದವರೆಗೆ 17.5% ರಿಂದ 12.5% ಕ್ಕೆ ಇಳಿಸಲಾಯಿತು.
Published by:vanithasanjevani vanithasanjevani
First published: