• Home
 • »
 • News
 • »
 • business
 • »
 • Mahindra Cars: ಈ 3 ಮಾದರಿಯ ಮಹೀಂದ್ರಾ ಕಾರುಗಳನ್ನು ಖರೀದಿಸುವವರೇ ಇಲ್ಲ, ಸದ್ಯದಲ್ಲೇ ಸ್ಥಗಿತ

Mahindra Cars: ಈ 3 ಮಾದರಿಯ ಮಹೀಂದ್ರಾ ಕಾರುಗಳನ್ನು ಖರೀದಿಸುವವರೇ ಇಲ್ಲ, ಸದ್ಯದಲ್ಲೇ ಸ್ಥಗಿತ

KUV 100 ಮಾಡೆಲ್‌

KUV 100 ಮಾಡೆಲ್‌

ಕಂಪನಿಯ ಹೊಸ ಮಾಡೆಲ್‌ ಗಳ ಜನಪ್ರಿಯತೆಯ ಹೊರತಾಗಿಯೂ, ಈ ಹಿಂದೆ ಬಿಡುಗಡೆಯಾದ ಕೆಲವು SUVಗಳ ಮಾರಾಟ ಕಷ್ಟಕರವಾಗಿದೆ ಅನ್ನೋದು ವಾಸ್ತವ. ಹೀಗಾಗಿ ಕಂಪನಿಯು ತನ್ನ ಪೋರ್ಟ್‌ಫೋಲಿಯೊದಲ್ಲಿನ ಕೆಲವು ಮಾಡೆಲ್‌ ಗಳನ್ನು ಶೀಘ್ರದಲ್ಲೇ ಸ್ಥಗಿತಗೊಳಿಸಲಿದೆ ಎನ್ನಲಾಗಿದೆ.

 • Share this:

  ದೇಶದಲ್ಲೇ ಅತಿ ದೊಡ್ಡ SUV ನಿರ್ಮಾಪಕರೆಂದು ಹೆಸರುವಾಸಿಯಾದ ಸ್ವದೇಶಿ ಕಂಪನಿಯೆಂದರೆ ಅದು ಮಹೀಂದ್ರಾ (Mahindra Cars).  XUV 700, ಥಾರ್ ಮತ್ತು ಸ್ಕಾರ್ಪಿಯೋ N ನಂತಹ ಅತ್ಯಂತ ಯಶಸ್ವಿ ಮಾದರಿಗಳೊಂದಿಗೆ ಇದು ಜನರಿಗೆ ಅತ್ಯಂತ ಚಿರಪರಿಚಿತ ಬ್ರಾಂಡ್.‌ ಈ ಕಂಪನಿಯು ತನ್ನ ಹೊಸ-ಜನ್ SUV ಗಳ ಮಾರಾಟವನ್ನು ಹೆಚ್ಚಿಸುವುದರೊಂದಿಗೆ ಮತ್ತೆ ಯಶಸ್ಸಿನ ಕುದುರೆಯೇರಿದೆ. ಆದಾಗ್ಯೂ, ಆ ಸಾಲಿನಲ್ಲಿ ಕೆಲವು ಮಾಡೆಲ್‌ ಗಳು ಜನರಿಗೆ ಇಷ್ಟವಾಗಿಲ್ಲ ಎಂಬುದನ್ನು ತೆಗೆದು ಹಾಕುವಂತಿಲ್ಲ.


  ಕಂಪನಿಯ ಹೊಸ ಮಾಡೆಲ್‌ ಗಳ ಜನಪ್ರಿಯತೆಯ ಹೊರತಾಗಿಯೂ, ಈ ಹಿಂದೆ ಬಿಡುಗಡೆಯಾದ ಕೆಲವು SUV ಗಳ ಮಾರಾಟ ಕಷ್ಟಕರವಾಗಿದೆ ಅನ್ನೋದು ವಾಸ್ತವ. ಇದನ್ನು ನಿವಾರಿಸಲು ಕಂಪನಿಯು ತನ್ನ ಪೋರ್ಟ್‌ಫೋಲಿಯೊದಲ್ಲಿನ ಕೆಲವು ಮಾಡೆಲ್‌ ಗಳನ್ನು ಶೀಘ್ರದಲ್ಲೇ ಸ್ಥಗಿತಗೊಳಿಸಲಿದೆ ಎನ್ನಲಾಗಿದೆ.


  1) KUV 100 ಮಾಡೆಲ್‌


  ಪ್ರಸ್ತುತ ಸ್ಥಗಿತಗೊಳ್ಳಲು ಪರಿಗಣನೆಯಲ್ಲಿರುವ ಮಾದರಿಗಳಲ್ಲಿ ಮೊಟ್ಟ ಮೊದಲನೆಯದು - KUV 100 ಮಾಡೆಲ್.‌ ಕಂಪನಿಯ ಚಿಕ್ಕ SUV ಎಂಬುದಾಗಿ ಕರೆಯಲ್ಪಟ್ಟ KUV 100 ಅನ್ನು ಮಹೀಂದ್ರಾ ಪರಿಚಯಿಸಿದ್ದು 2016 ರಲ್ಲಿ. ಅಲ್ದೇ ಆ ಸಮಯದಲ್ಲಿ ಅದು ಅಷ್ಟು ಸಣ್ಣ ಗಾತ್ರದ ಮೊದಲ SUV ಗಳಲ್ಲಿ ಒಂದಾಗಿತ್ತು. KUV 100 ಆಯಾ ಸೆಗ್ಮೆಂಟ್‌ ನಲ್ಲಿ ಮಾರಾಟ ಚೆನ್ನಾಗಿತ್ತು. ಭಾರತದಲ್ಲಿ SUV ಕ್ರೇಜ್‌ ನ ಹೊರತಾಗಿಯೂ ನಂತರದಲ್ಲಿ ಖರೀದಿದಾರರು ಅದನ್ನು ಅಷ್ಟಾಗಿ ಇಷ್ಟಪಡಲಿಲ್ಲ.
  ಅದರ ಮಾರಾಟ ಕೂಡ ಕ್ರಮೇಣ ಕುಸಿಯಿತು. ಈ ವರ್ಷದ ನವೆಂಬರ್‌ನಲ್ಲಿ ಕಂಪನಿಯು KUV 100 ನ ಎರಡು ಯುನಿಟ್‌ ಮಾತ್ರ ಕಳುಹಿಸುವಲ್ಲಿ ಯಶಸ್ವಿಯಾಗಿದೆ. ಆದ್ದರಿಂದ ಮಹೀಂದ್ರಾ ಕಂಪನಿ ಶೀಘ್ರದಲ್ಲೇ KUV 100 ಮಾದರಿಯನ್ನು ನಿಲ್ಲಿಸಬಹುದು ಎಂದು ಹೇಳಲಾಗಿದೆ.


  ಇದನ್ನೂ ಓದಿ: Tata EV Car: ಗುಡ್​ ನ್ಯೂಸ್​, ಶೀಘ್ರದಲ್ಲೇ ಮಾರುಕಟ್ಟೆಗೆ ಟಾಟಾದ ಮತ್ತೊಂದು ಎಲೆಕ್ಟ್ರಿಕ್​ ಕಾರು!


  2) ಮಹೀಂದ್ರಾ ಮರಾಜೋ


  ಇನ್ನು ಸ್ಥಗಿತಗೊಳ್ಳುವ ಲಿಸ್ಟ್‌ ನಲ್ಲಿರುವ 2ನೇ ಕಾರ್‌ ಮಾಡೆಲ್‌ ಮಹೀಂದ್ರಾ ಮರಾಜೋ. ನವೆಂಬರ್ 2022 ರಲ್ಲಿ ಕೇವಲ 201 ಯುನಿಟ್‌ಗಳು ಮಾರಾಟವಾಗುವುದರೊಂದಿಗೆ ತಿಂಗಳ ಆಧಾರದ ಮೇಲೆ 5.63 ಪ್ರತಿಶತದಷ್ಟು ಕುಸಿತ ಕಂಡಿದೆ ಮೊರಾಜೋ.
  ಮರಾಜೋ ಉತ್ಪನ್ನ ಶ್ರೇಣಿಯಲ್ಲಿನ ಮಾದರಿಗಳಲ್ಲಿ ಒಂದಾಗಿದ್ದು ಅದನ್ನು ಶೀಘ್ರದಲ್ಲೇ ಕಡಿತಗೊಳಿಸಲಾಗುತ್ತದೆ ಎನ್ನಲಾಗಿದೆ. ಪೆಟ್ರೋಲ್ ಅಟೋಮ್ಯಾಟಿಕ್‌ ಆಯ್ಕೆಯ ಕೊರತೆಯು ಇದಕ್ಕೆ ಕಾರಣವಾಗಿದ್ದಿರಬಹುದು.


  3) ಅಲ್ಟುರಾಸ್ ಜಿ 4


  ಅಂತಿಮವಾಗಿ, ಬ್ರ್ಯಾಂಡ್‌ನ ಅಧಿಕೃತ ವೆಬ್‌ಸೈಟ್‌ನಿಂದ ಈಗಾಗಲೇ ತೆಗೆದುಹಾಕಲಾದ ಕೊನೆಯ ಮಾದರಿಯು ಅಲ್ಟುರಾಸ್ ಜಿ 4. XUV 700 ಪ್ರಾರಂಭವಾದಾಗಿನಿಂದ ಅಲ್ಟುರಾಸ್ G4 ಮಾರಾಟ ಕುಂಠಿತವಾಗಿದೆ.


  ಟಾಪ್-ಆಫ್-ಲೈನ್ SUV ಯ ನೇರ ಎದುರಾಳಿಯಾದ ಫಾರ್ಚುನರ್ ಕೂಡ ಅಲ್ಟುರಾಸ್‌ ಮಾರಾಟ ಕಡಿಮೆಯಾಗುವುದಕ್ಕೆ ಕೊಡುಗೆ ನೀಡಿತು ಎನ್ನಬಹುದು. ಜೊತೆಗೆ ಈಗ ಅದು ಸ್ಯಾಂಗ್‌ಯಾಂಗ್ ಬ್ರಾಂಡ್‌ನೊಂದಿಗೆ ಬೇರ್ಪಡುತ್ತಿರುವ ಕಾರಣ ವಾಹನವನ್ನು ಉತ್ಪಾದನೆಯನ್ನು ಮುಂದುವರಿಸಲು ಬ್ರ್ಯಾಂಡ್‌ಗೆ ಸವಾಲಾಗಿದೆ.
  ಅಂದಹಾಗೆ SsangYong Rexton ಅಲ್ಟುರಾಸ್ G4 ಗೆ ಆಧಾರವಾಗಿ ಕಾರ್ಯನಿರ್ವಹಿಸುತ್ತದೆ. ದಕ್ಷಿಣ ಕೊರಿಯಾದ ಸ್ಯಾಂಗ್‌ಯಾಂಗ್ ಸ್ಥಾವರದಿಂದ ಸಿಕೆಡಿ ಕಿಟ್‌ಗಳನ್ನು ಮಹೀಂದ್ರಾ ಈ ಹಿಂದೆ ಭಾರತದಲ್ಲಿ ವಾಹನವನ್ನು ನಿರ್ಮಿಸಲು ಬಳಸಿಕೊಂಡಿತ್ತು. ಇನ್ನು, ಗ್ಲೋಬಲ್ ಎನ್‌ಸಿಎಪಿ ನಡೆಸಿದ ಇತ್ತೀಚಿನ ಕ್ರ್ಯಾಶ್ ಟೆಸ್ಟ್‌ಗಳಲ್ಲಿ ಹೊಚ್ಚ ಹೊಸ ಸ್ಕಾರ್ಪಿಯೋ-ಎನ್ ಇತ್ತೀಚೆಗೆ ಫೈವ್‌ ಸ್ಟಾರ್‌ ರೇಟಿಂಗ್ ಅನ್ನು ಪಡೆದುಕೊಂಡಿದೆ.


  ಪರಿಷ್ಕೃತ ಪರೀಕ್ಷಾ ಪ್ರಕ್ರಿಯೆಯನ್ನು ಅನುಸರಿಸಿ, ಹೊಚ್ಚಹೊಸ SUV ಅನ್ನು ಮಕ್ಕಳ ಸುರಕ್ಷತೆಗಾಗಿ ಮೂರು ಸ್ಟಾರ್‌ ಹಾಗೂ ವಯಸ್ಕರ ಸುರಕ್ಷತೆಗಾಗಿ ಸಂಪೂರ್ಣ ಐದು ಸ್ಟಾರ್‌ ರೇಟ್ ಮಾಡಲಾಗಿದೆ. ಹೊಸ ಮಹೀಂದ್ರ ಸ್ಕಾರ್ಪಿಯೊ-ಎನ್ ಫೈವ್‌ ಸ್ಟಾರ್‌ ಸುರಕ್ಷತಾ ರೇಟಿಂಗ್ ಅನ್ನು ಪಡೆದ ಕಂಪನಿಯ ಮೂರನೇ SUV ಆಗಿದೆ ಅನ್ನೋದು ವಿಶೇಷ.

  Published by:Kavya V
  First published: