• Home
  • »
  • News
  • »
  • business
  • »
  • MS Dhoni: ಕೃಷಿಯತ್ತ ಹೆಚ್ಚಿದ ಧೋನಿ ಒಲವು, ಮೇಡ್​ ಇನ್​ ಇಂಡಿಯಾ ಡ್ರೋನ್​​ ಬಿಡುಗಡೆ ಮಾಡಿದ MSD!

MS Dhoni: ಕೃಷಿಯತ್ತ ಹೆಚ್ಚಿದ ಧೋನಿ ಒಲವು, ಮೇಡ್​ ಇನ್​ ಇಂಡಿಯಾ ಡ್ರೋನ್​​ ಬಿಡುಗಡೆ ಮಾಡಿದ MSD!

ಮಹೇಂದ್ರ ಸಿಂಗ್ ಧೋನಿ

ಮಹೇಂದ್ರ ಸಿಂಗ್ ಧೋನಿ

ಕ್ರಿಕೆಟ್ ಹೊರತಾಗಿಯೂ ಧೋನಿ ಹಲವು ಮಾರ್ಗಗಳಲ್ಲಿ ಆದಾಯ ಗಳಿಸುತ್ತಿದ್ದಾರೆ. ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರೂ ಅವರ ಸಂಪತ್ತು ಪ್ರತಿ ವರ್ಷ ಬೆಳೆಯುತ್ತಲೇ ಇದೆ. ಬ್ರ್ಯಾಂಡ್​ ಎಂಡಾರ್ಸ್​ಮೆಂಟ್​ಗಳು ಹಾಗೂ ವ್ಯಾಪಾರ ಎರಡೂ ಧೋನಿಯ ಆಸ್ತಿಯ ಮೌಲವ್ಯವನ್ನು ಹೆಚ್ಚಿಸುತ್ತಿದೆ.

  • News18
  • Last Updated :
  • Share this:

ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಭಾರತೀಯ ಕ್ರಿಕೆಟ್ (Indian Cricket) ಲೋಕಕ್ಕೆ ಹೊಸ ಆಯಾಮ ನೀಡಿದ ಆಟಗಾರ. ಭಾರತಕ್ಕೆ 28 ವರ್ಷಗಳ ಬಳಿಕ ವಿಶ್ವಕಪ್ (World Cup) ಗೆಲ್ಲಿಸಿಕೊಟ್ಟ ನಾಯಕ. ಐಸಿಸಿಯ ಮೂರು ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕ ಅಂದ್ರೆ ಅದು ಮಹೇಂದ್ರ ಸಿಂಗ್ ಧೋನಿ. ಕೋಟಿಗಟ್ಟಲೇ ಭಾರತೀಯರು ಮರೆಯಲಾಗದ ಆಟಗಾರ ಮಹೇಂದ್ರ ಸಿಂಗ್​ ಧೋನಿ. ಇವರ ಬಗ್ಗೆ ಪದಗಳಲ್ಲಿ ಹೇಳುವುದಕ್ಕೆ ಸಾಧ್ಯವಿಲ್ಲ. ಪ್ರಸ್ತುತ  ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ (Cricket) ​ಗೆ ವಿದಾಯ ಹೇಳಿ, ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಪರ ಆಡುತ್ತಿದ್ದಾರೆ. ಇಷ್ಟೇ ಅಲ್ಲದೇ ಕ್ರಿಕೆಟ್ ಹೊರತಾಗಿಯೂ ಧೋನಿ ಹಲವು ಮಾರ್ಗಗಳಲ್ಲಿ ಆದಾಯ ಗಳಿಸುತ್ತಿದ್ದಾರೆ. ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರೂ ಅವರ ಸಂಪತ್ತು ಪ್ರತಿ ವರ್ಷ ಬೆಳೆಯುತ್ತಲೇ ಇದೆ. ಬ್ರ್ಯಾಂಡ್​ ಎಂಡಾರ್ಸ್​ಮೆಂಟ್​ಗಳು ಹಾಗೂ ವ್ಯಾಪಾರ ಎರಡೂ ಧೋನಿಯ ಆಸ್ತಿಯ ಮೌಲವ್ಯವನ್ನು ಹೆಚ್ಚಿಸುತ್ತಿದೆ.


ಮೇಡ್​ ಇನ್​ ಇಂಡಿಯಾ ಡ್ರೋನ್​ ಬಿಡುಗಡೆ ಮಾಡಿದ ಧೋನಿ!


ಭಾನುವಾರದಂದು, ಧೋನಿ 'ಮೇಡ್​ ಇನ್​ ಇಂಡಿಯಾ ಕ್ಯಾಮರಾ ಡ್ರೋನ್' ಅನ್ನು ಬಿಡುಗಡೆ ಮಾಡಿದರು. ಡ್ರೋನ್‌ಗೆ ದ್ರೋಣಿ ಎಂದು ಹೆಸರಿಡಲಾಗಿದೆ. ಈ ಡ್ರೋನ್ ಅನ್ನು ಗರುಡಾ ಏರೋಸ್ಪೇಸ್ ಕಂಪನಿ ತಯಾರಿಸಿದೆ. ಪ್ರಮುಖ ಡ್ರೋನ್ ತಯಾರಿಕಾ ಕಂಪನಿ ಗರುಡಾ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಧೋನಿ ಹೂಡಿಕೆ ಮಾಡಿರುವುದು ಗೊತ್ತೇ ಇದೆ. ಅಲ್ಲದೆ, ಧೋನಿ ಈ ಡ್ರೋನ್ ಕಂಪನಿಯ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ.


ದೇಶದ 26 ನಗರಗಳಲ್ಲಿ 300 ಡ್ರೋನ್‌ಗಳು ಮತ್ತು 500 ಪೈಲಟ್‌ಗಳು ಈ ಕಂಪನಿಗಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಈ ಡ್ರೋನ್ ಕೃಷಿ ಕ್ಷೇತ್ರದಲ್ಲಿ ಹೆಚ್ಚು ಉಪಯುಕ್ತವಾಗಲಿದೆ. ಔಷಧ ಸಿಂಪರಣೆ, ಸೌರ ಫಲಕ ಸ್ವಚ್ಛಗೊಳಿಸುವಿಕೆ, ವಿತರಣಾ ಸೇವೆಗಳು, ಪೈಪ್‌ಲೈನ್ ತಪಾಸಣೆ ಮತ್ತು ಸಮೀಕ್ಷೆಯಂತಹ ಕ್ಷೇತ್ರಗಳಲ್ಲಿ ಇದು ಉಪಯುಕ್ತವಾಗಿರುತ್ತದೆ.


ಇದನ್ನೂ ಓದಿ: ಮಿಶ್ರಬೆಳೆಯಲ್ಲಿ ಯಶಸ್ವಿಯಾದ ಬಾಗಲಕೋಟೆ ರೈತ, ಇವರ ಹಾಗೇ ಮಾಡಿದ್ರೆ 20 ಲಕ್ಷ ಆದಾಯ ಫಿಕ್ಸ್​!


ರೈತರ ಬೆನ್ನಿಗೆ ನಿಂತ ಧೋನಿ!


ಧೋನಿ ಈ ಡ್ರೋನಿ ಎಂಬ ಮತ್ತೊಂದು ಡ್ರೋನ್ ಅನ್ನು ಸಹ ಬಿಡುಗಡೆ ಮಾಡಿದರು. ಮಹೇಂದ್ರ ಅವರು ಚೆನ್ನೈನಲ್ಲಿ ನಡೆದ ‘ಕಿಸಾನ್ ಡ್ರೋನ್’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೃಷಿ ಕ್ಷೇತ್ರದಲ್ಲಿ ಈ ಡ್ರೋನ್ ಹೆಚ್ಚು ಉಪಯುಕ್ತವಾಗಲಿದೆ. ಎಎನ್‌ಐ ವರದಿ ಪ್ರಕಾರ, ಈ ಡ್ರೋನ್ ಒಂದೇ ದಿನದಲ್ಲಿ ಮೂವತ್ತು ಎಕರೆ ಪ್ರದೇಶದಲ್ಲಿ ಔಷಧ ಸಿಂಪಡಿಸಬಲ್ಲದು. ಈ ವೇಳೆ ಧೋನಿ ಕೃಷಿಯಲ್ಲಿ ತಮಗಿರುವ ಆಸಕ್ತಿಯನ್ನು ಸ್ಮರಿಸಿದರು. ಕೋವಿಡ್-19 ಸಮಯದಲ್ಲಿ ಮಹೇಂದ್ರ ಕೃಷಿ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಗೊತ್ತೇ ಇದೆ. ಮತ್ತು, ಈ ವರ್ಷದ ಅಂತ್ಯದ ವೇಳೆಗೆ ಈ ಡ್ರೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ ಎಂದು ಗರುಡಾಸ್ಪೇಸ್ ಸಿಇಒ ಅಗ್ನೇಶ್ವರ್ ಜಯಪ್ರಕಾಶ್ ಹೇಳಿದ್ದಾರೆ.


ಕ್ರಿಕೆಟ್​ ಬಿಟ್ಟ ಬಳಿಕ ಕೃಷಿಯತ್ತ ಒಲವು!


ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ಧೋನಿ ಕೃಷಿ ಆಧಾರಿತ, ಜವಳಿ, ಮದ್ಯ ಮತ್ತು ಮೋಟಾರು ಕಾರು ಕ್ಷೇತ್ರಗಳಲ್ಲಿ ವ್ಯಾಪಕ ಹೂಡಿಕೆಗಳನ್ನು ಮಾಡುತ್ತಿದ್ದಾರೆ. ಜಾರ್ಖಂಡ್‌ನ ಸಣ್ಣ ಪಟ್ಟಣವಾದ ರಾಂಚಿಯಿಂದ ಬಂದಿರುವ ಧೋನಿ ಪ್ರಸ್ತುತ ದೇಶಾದ್ಯಂತ ಅನೇಕ ವ್ಯವಹಾರಗಳನ್ನು ನಡೆಸುತ್ತಿದ್ದಾರೆ.


ಇದನ್ನೂ ಓದಿ: ಧೋನಿ ಅಭಿಮಾನಿಗಳಿಗೆ ಗುಡ್​ ನ್ಯೂಸ್,​ ಐಪಿಎಲ್ 2023ರ ಕುರಿತು ಮಹತ್ವದ ಹೇಳಿಕೆ ನೀಡಿದ ಕ್ಯಾಪ್ಟನ್ ಕೂಲ್


ಸ್ಪೋರ್ಟ್ಸ್ ಫಿಟ್ ವರ್ಲ್ಡ್, ಅಕೌಂಟ್ ಬುಕ್, 7ಇಂಕ್ ಬ್ರೂಸ್, ಕಾರ್ಸ್ 24, ಹೋಮ್ ಲೋನ್, ಸ್ಪೋರ್ಟ್ಸ್ ಫಿಟ್, ಹೋಟೆಲ್ ಮಾಹಿ ರೆಸಿಡೆನ್ಸಿ ಸೇರಿ ಸಾಕಷ್ಟು ಕ್ಷೇತ್ರಗಳಲ್ಲಿ ಧೋನಿ ಹೂಡಿಕೆ ಮಾಡಿದ್ದಾರೆ. ಧೋನಿ ವಿವಿಧ ಕ್ರೀಡಾ ಲೀಗ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ.  ಚೆನ್ನೈ ಫುಟ್ಬಾಲ್ ಕ್ಲಬ್, ಹಾಕಿ ಕ್ಲಬ್ ರಾಂಚಿ ರೇಸ್ ಮತ್ತು ಮಹಿ ರೇಸಿಂಗ್ ಟೀಮ್ ಇಂಡಿಯಾದಲ್ಲಿ ಹೂಡಿಕೆ ಮಾಡಿದ್ದಾರೆ.

Published by:ವಾಸುದೇವ್ ಎಂ
First published: