Oil Loot: 12,000 ಲೀಟರ್ ತೈಲ ಇದ್ದ ಟ್ಯಾಂಕರ್ ಪಲ್ಟಿ; ಕ್ಯಾನ್, ಪಾತ್ರೆಗಳಲ್ಲಿ ತೈಲ ತುಂಬಿಕೊಂಡು ಪಾರಾದ ಸ್ಥಳೀಯರು!

ಅಪಘಾತದಲ್ಲಿ ಟ್ಯಾಂಕರ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯ ರಕ್ಷಣಾ ತಂಡವು ನಂತರ ಟ್ಯಾಂಕರ್ ಅನ್ನು ರಸ್ತೆಯಿಂದ ತೆಗೆದುಹಾಕಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ

ತೈಲ ಲೂಟಿ ಮಾಡುತ್ತಿರುವ ದೃಶ್ಯ

ತೈಲ ಲೂಟಿ ಮಾಡುತ್ತಿರುವ ದೃಶ್ಯ

 • Share this:
  ಮುಂಬೈ: ಮಹಾರಾಷ್ಟ್ರದ ಜನನಿಬಿಡ ಮುಂಬೈ ಅಹಮದಾಬಾದ್ ಹೆದ್ದಾರಿಯಲ್ಲಿ (Mumbai-Ahmedabad Highway) ಖಾದ್ಯ ತೈಲವನ್ನು ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿದ್ದು, ಸುಮಾರು ಮೂರು ಗಂಟೆಗಳ ಕಾಲ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿದೆ ಎಂದು ಮಹಾರಾಷ್ಟ್ರ ಪೊಲೀಸ್ ಇಲಾಖೆ (Maharashtra Police) ಭಾನುವಾರ ತಿಳಿಸಿದ್ದಾರೆ. ಶನಿವಾರ ಅಪಘಾತ ಸಂಭವಿಸಿದ ನಂತರ, ಹಲವಾರು ಸ್ಥಳೀಯರು ಸ್ಥಳಕ್ಕೆ ಧಾವಿಸಿ ಟ್ಯಾಂಕರ್‌ನಿಂದ ತುಂಬಿದ ತೈಲವನ್ನು ಲೂಟಿ ಮಾಡಿದ್ದಾರೆ (Oil Loot) ಎಂದು ಅವರು ಹೇಳಿದರು. ಗುಜರಾತ್‌ನ ಸೂರತ್‌ನಿಂದ ನೆರೆಯ ಮುಂಬೈಗೆ ಸಂಸ್ಕರಣೆಗಾಗಿ 12,000 ಲೀಟರ್ ಖಾದ್ಯ ತೈಲವನ್ನು ಸಾಗಿಸುತ್ತಿದ್ದ ಟ್ಯಾಂಕರ್‌ ಮೇಲೆ ಚಾಲಕನ   ನಿಯಂತ್ರಣ ತಪ್ಪಿದೆ.  ಇದರಿಂದ ವಾಹನ ಪಲ್ಟಿಯಾಗಿದ್ದು, ಅದರಿಂದ ತೈಲ ಸೋರಿಕೆಯಾಗಿದೆ.

  ಸೋರಿಕೆಯಾದ ತೈಲವನ್ನು ಸ್ಥಳೀಯರು ಬಾಚಿ ಒಯ್ದಿದ್ದಾರೆ ಎಂದು ವರದಿಯಾಗಿದೆ. ಅಪಘಾತದಲ್ಲಿ ಟ್ಯಾಂಕರ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ಪೊಲೀಸರಿಗೆ ಸಂಕಷ್ಟ
  ಅನೇಕ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ತಮ್ಮ ಕ್ಯಾನ್ ಮತ್ತು ಇತರ ಪಾತ್ರೆಗಳಲ್ಲಿ ಸೋರಿಕೆಯಾದ ಎಣ್ಣೆಯನ್ನು ತೆಗೆದುಕೊಂಡು ಹೋದರು ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ. ಸುಮಾರು ಮೂರು ಗಂಟೆಗಳ ಕಾಲ ಜನಸಂದಣಿ ಹಾಗೂ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಪೊಲೀಸರಿಗೆ ಕಷ್ಟವಾಗಿತ್ತು ಎಂದೂ ಅವರು ಮಾಹಿತಿ ನೀಡಿದ್ದಾರೆ.

  ಟ್ಯಾಂಕರ್ ಚಾಲಕನಿಗೆ ಸಣ್ಣ ಪುಟ್ಟ ಗಾಯ
  ಅಪಘಾತದಲ್ಲಿ ಟ್ಯಾಂಕರ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯ ರಕ್ಷಣಾ ತಂಡವು ನಂತರ ಟ್ಯಾಂಕರ್ ಅನ್ನು ರಸ್ತೆಯಿಂದ ತೆಗೆದುಹಾಕಲಾಯಿತು. ಆನಂತರ  ಸಾಮಾನ್ಯ ಸಂಚಾರ ಮಾಡಲು ಪ್ರಯಾಣಿಕರಿಗೆ ಅನುವು ಮಾಡಿಕೊಡಲಾಯಿತು  ಎಂದು ಸ್ಥಳೀಯ ಅಧಿಕಾರಿ ತಿಳಿಸಿದ್ದಾರೆ.

  ಇದನ್ನೂ ಓದಿ: Karnataka Fuel Tax: ಕರ್ನಾಟಕವೂ ಪೆಟ್ರೋಲ್, ಡೀಸೆಲ್ ತೆರಿಗೆ ಕಡಿಮೆ ಮಾಡಲಿದೆಯೇ? ಸಿಎಂ ಮಾತಿನ ಅರ್ಥವೇನು?

  ಜನಸಂದಣಿ ಹಾಗೂ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು, ಇದರಿಂದ ಸುಮಾರು ಮೂರು ಗಂಟೆಗಳ ಕಾಲ ತೊಂದರೆಯಾಯಿತು.  ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ತಮ್ಮ ಕ್ಯಾನ್ ಮತ್ತು ಇತರ ಪಾತ್ರೆಗಳಲ್ಲಿ ಸೋರಿಕೆಯಾದ ಎಣ್ಣೆಯನ್ನು ತೆಗೆದುಕೊಂಡು ಹೋದರು ಎಂದು ಅಧಿಕಾರಿ ಹೇಳಿದ್ದು ಈ ಸಂಬಂಧ ಇನ್ನಷ್ಟೆ ತನಿಖೆ ಆಗಬೇಕಿದೆ.

  ಇದನ್ನೂ Ola Uber: ಓಲಾ, ಉಬರ್​ ಕಂಪನಿಗಳಿಗೆ ಶಾಕ್, ಇನ್ಮೇಲೆ ಆಟೊ, ಕ್ಯಾಬ್ ಬುಕ್ ಮಾಡಬಹುದೇ?

  ಜುಲೈ 2021 ರಲ್ಲಿ, ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಸಾಸಿವೆ ಎಣ್ಣೆ ತುಂಬಿದ ಟ್ಯಾಂಕರ್ ಪಲ್ಟಿಯಾಗಿತ್ತು. ಟ್ಯಾಂಕರ್‌ನಲ್ಲಿದ್ದ ಸುಮಾರು 20,000 ಲೀಟರ್ ತೈಲವು ರಸ್ತೆಯಲ್ಲಿ ಹರಡಿ ಅವ್ಯವಸ್ಥೆಗೆ ಕಾರಣವಾಗಿತ್ತು.
  Published by:guruganesh bhat
  First published: