Money Lost: ಕ್ಷಣ ಮಾತ್ರದಲ್ಲಿ ಕೋಟ್ಯಾಧಿಪತಿ, ಮತ್ತೆ ಮೂರೇ ದಿನದಲ್ಲಿ ಭಿಕಾರಿ! ಇವರ ಕಥೆ ನೋಡಿ ನಗುವುದೋ? ಅಳುವುದೋ? ನೀವೇ ಹೇಳಿ

ಇದು ಒಬ್ಬರ ಕಥೆಯಲ್ಲ, ಇಬ್ಬರ ಕಥೆ. ಏನೂ ಅಲ್ಲದವರು ಕ್ಷಣ ಮಾತ್ರದಲ್ಲಿ ಕೋಟ್ಯಾಧಿಪತಿಗಳಾದರೂ, ಆದರೆ ಮತ್ತೆ ಮೂರು ದಿನಗಳಲ್ಲಿ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಂದು ನಿಂತಿದ್ದಾರೆ. ಕೇಳುವುದಕ್ಕೆ ಒಂಥರಾ ಥ್ರಿಲ್ಲಿಂಗ್​ ಅನ್ನಿಸಬಹುದು. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಯಾರ ಹಣೆಬರಹವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಯಾರು ಯಾವಾಗ ಶ್ರೀಮಂತ (Rich) ರಾಗುತ್ತಾರೆ ಅಂತ ಹೇಳಲು ಸಾಧ್ಯವಿಲ್ಲ. ಎಲ್ಲವೂ ಅದೃಷ್ಟ (Luck) ದ ಮೇಲೆ ನಿಂತಿರುತ್ತದೆ. ಕೆಲವೊಮ್ಮೆ ಆಗರ್ಭ ಶ್ರೀಮಂತ ಕೂಡ ಕ್ಷಣ ಮಾತ್ರದಲ್ಲಿ ಬಡವನಾಗಿಬಿಡುತ್ತಾನೆ. ಐಶ್ವರ್ಯ ಬಂದರೆ ಅರ್ಧ ರಾತ್ರಿ (Mid Night) ಲಿ ಕೊಡೆ ಹಿಡಿದು ನಿಂತುಕೊಂಡರು ಎಂಬ ಮಾತಿನಂತೆ ಇಲ್ಲಿ ಒಂದು ಕಹಾನಿ ನಡೆದಿದೆ. ಈ ಸ್ಟೋರಿ (Story) ನೋಡಿ ನಗುವುದೋ? ಅಳುವುದೋ? ಎಂಬುದೇ ತಿಳಿಯುವುದಿಲ್ಲ. ಷೇರುಪೇಟೆ (Share Market) ಯಲ್ಲಿ ಈ ತರಹದ ಸಂಗತಿಗಳು ಹೆಚ್ಚಾಗಿ ಕಂಡುಬರುತ್ತವೆ. ಇದು ಒಬ್ಬರ ಕಥೆಯಲ್ಲ, ಇಬ್ಬರ ಕಥೆ. ಏನೂ ಅಲ್ಲದವರು ಕ್ಷಣ ಮಾತ್ರದಲ್ಲಿ ಕೋಟ್ಯಾಧಿಪತಿ (Billionaire) ಗಳಾದರೂ, ಆದರೆ ಮತ್ತೆ ಮೂರು ದಿನಗಳಲ್ಲಿ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಂದು ನಿಂತಿದ್ದಾರೆ. ಕೇಳುವುದಕ್ಕೆ ಒಂಥರಾ ಥ್ರಿಲ್ಲಿಂಗ್​ (Thrilling) ಅನ್ನಿಸಬಹುದು. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಯಾರೂ ಅಲ್ಲದವರು ಕ್ಷಣ ಮಾತ್ರದಲ್ಲಿ ಕೋಟ್ಯಾಧಿಪತಿಗಳಾದರು!

ಷೇರು ಮಾರುಕಟ್ಟೆ ಯಾವಾಗಲೂ ಅನಿಶ್ಚಿತತೆಯ ಆಟವಾಗಿದೆ. ಆದ್ದರಿಂದ, ನಿಮ್ಮ ಸ್ವಂತ ಜವಾಬ್ದಾರಿಯಲ್ಲಿ ನೀವು ಈ ಸ್ಥಳದಲ್ಲಿ ಹೂಡಿಕೆ ಮಾಡಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಕೆಲವೊಮ್ಮೆ ಇದು ನಿರೀಕ್ಷೆಗಿಂತ ಹೆಚ್ಚು ಪ್ರಯೋಜನಕಾರಿಯಾಗಬಹುದು. ಬ್ಲೂಮ್‌ಬರ್ಗ್‌ನ ವರದಿಯ ಪ್ರಕಾರ, ಹಾಂಗ್ ಕಾಂಗ್‌ನಲ್ಲಿರುವ ಮ್ಯಾಜಿಕ್ ಎಂಪೈರ್ ಗ್ಲೋಬಲ್ ಲಿಮಿಟೆಡ್ ವಿಮೆ ಮತ್ತು ಸಲಹಾ ಸೇವೆಗಳನ್ನು ಒದಗಿಸುವ ಕೆಲಸ ಮಾಡುವ ಸಂಸ್ಥೆ. ಕಂಪನಿಯು ತಮ್ಮ ಐಪಿಒ ತಂದಿತ್ತು. ಕಳೆದ ವಾರ ಶುಕ್ರವಾರದಂದು ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಕಂಪನಿಯ ಷೇರುಗಳು ಲಿಸ್ಟ್ ಆಗಿದ್ದವು. ಸೋಮವಾರ, ಕಂಪನಿಯ ಷೇರುಗಳು ಇದ್ದಕ್ಕಿದ್ದಂತೆ ಬೌನ್ಸ್ ಆಗಿದ್ದು, ಕಂಪನಿಯ ನಿರ್ದೇಶಕರಿಬ್ಬರೂ ಕೋಟ್ಯಾಧಿಪತಿಗಳಾದರು.

3 ದಿನದಲ್ಲಿ ಗಳಿಸಿದ್ದೆಲ್ಲವೂ ಲಾಸ್​!

ಗಿಲ್ಬರ್ಟ್ ಚಾನ್ ಮತ್ತು ಜಾನ್ಸನ್ ಚಾನ್ ಮ್ಯಾಜಿಕ್ ಎಂಪೈರ್ ಕಂಪನಿಯಲ್ಲಿ 63 ಪ್ರತಿಶತ ಪಾಲನ್ನು ಹೊಂದಿದ್ದರು. ಕಂಪನಿಯ ಷೇರುಗಳು ಮರುಕಳಿಸಿದ ನಂತರ, ಇಬ್ಬರ ಷೇರು ಬೆಲೆಗಳು ಕ್ರಮವಾಗಿ $ 1.8 ಶತಕೋಟಿ ಮತ್ತು $ 1.3 ಶತಕೋಟಿಗೆ ಏರಿತು. ಆದಾಗ್ಯೂ, ಮಂಗಳವಾರ, ಕಂಪನಿಯ ಷೇರಿನ ಬೆಲೆಯು 89 ಶೇಕಡಾ ಕುಸಿತವನ್ನು ದಾಖಲಿಸಿದೆ. ನೋಡ ನೋಡುತ್ತಿದ್ದಂತೆ ಮತ್ತೆ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಂದು ನಿಂತಿದ್ದಾರೆ. ಯಾರೂ ಬೇಕಾದರೂ ಅದೃಷ್ಟ ಇದ್ದರೆ ಕೋಟ್ಯಾಧಿಪತಿಗಳಾಬಹುದು. ಆದರೆ, ಕೋಟ್ಯಾಧಿಪತಿಯಾಗಿ ಮತ್ತೆ ಶುರು ಮಾಡಿದ್ದಲ್ಲೇ ಬಂದು ನಿಲ್ಲುವುದು ತುಂಬಾ ಬೇಸರ ತರಿಸುವ ಸಂಗತಿ.

ಇದನ್ನೂ ಓದಿ: ಮನೆ ಬಾಡಿಗೆಗೂ ಜಿಎಸ್​ಟಿ! ಹೊಸ ನಿಯಮ ಜಾರಿ

9 ಕೆಲಸಗಾರರೊಂದಿಗೆ ಆರಂಭವಾದ ಸಂಸ್ಥೆ!


ಷೇರುಗಳ ಕುಸಿತದಿಂದಾಗಿ, ಗಿಲ್ಬರ್ಟ್ ಚಾನ್ ಅವರ ಷೇರುಗಳ ಮೌಲ್ಯವು ಸುಮಾರು 9 ಮಿಲಿಯನ್ ಡಾಲರ್‌ಗಳಿಗೆ ಇಳಿದಿದೆ. ಜಾನ್ಸನ್ ಷೇರುಗಳ ಮೌಲ್ಯ 6.5 ಮಿಲಿಯನ್ ಡಾಲರ್ ತಲುಪಿದೆ. ಮೂರೇ ದಿನಗಳಲ್ಲಿ ಇಬ್ಬರೂ ಕೋಟ್ಯಾಧಿಪತಿಗಳಾದರು. 2016ರಲ್ಲಿ ಆರಂಭವಾದ ಮ್ಯಾಜಿಕ್ ಎಂಪೈರ್ ಕಳೆದ ವರ್ಷ ಕೇವಲ 9 ಉದ್ಯೋಗಿಗಳನ್ನು ಹೊಂದಿತ್ತು. 2021 ರಲ್ಲಿ ಕಂಪನಿಯು 15 ಕೆಲಸಾಗರರೊಂದಿಗೆ ಕಾರ್ಯ ನಿರ್ವಹಿಸುತ್ತಿತ್ತು.

ಇದನ್ನೂ ಓದಿ:ಲಿಕ್ಕರ್ ಕಂಪನಿಯ ಸ್ಟಾಕ್, ಒಂದು ಲಕ್ಷ ಹೂಡಿಕೆಗೆ 20 ಲಕ್ಷ ಆದಾಯ!

ಅತಿ ಆಸೆಯಿಂದ ಹೀಗೆ ಆಯ್ತಾ?

ಹೌದು, ಮನುಷ್ಯನಿಗೆ ಅತಿ ಆಸೆ ಹೆಚ್ಚು. ಸಿಕ್ಕಿದ್ದಕ್ಕೆ ತೃಪ್ತಿ ಪಡೆದುಕೊಳ್ಳದೇ ಮತ್ತಷ್ಟು ಪಡೆದುಕೊಳ್ಳುವ ದುರಾಸೆ ಹೊಂದಿರುತ್ತಾನೆ. ಇಲ್ಲೂ ಕೂಡ ಅದೇ ಆಗಿದೆ ಎಂಬ ಅನುಮಾನ ಮೂಡಿದೆ. ತಮ್ಮ ಕಂಪನಿಯ ಷೇರುಗಳು ಆ ಮಟ್ಟಕ್ಕೆ ಏರಿಕೆ ಕಂಡಾಗ ಅವುಗಳನ್ನು ಮಾರಾಟ ಮಾಡಬೇಕಿತ್ತು. ಮತ್ತಷ್ಟು ಹಣ ಸಿಗಲಿ ಎಂದು ಕಾಯುತ್ತಿದ್ದರಾ ಎಂಬ ಪ್ರಶ್ನೆ ಮೂಡಿದೆ. ಇನ್ನೂ ಸ್ಟಾಕ್​ ಮಾರ್ಕೆಟ್​ ಎಂಬುಂದು ಹೀಗೆ ಹಾವು ಏಣಿ ಆಟದ ಹಾಗೇ. ಗೆದ್ದಾಗ ತಲೆ ಉಪಯೋಗಿಸುವವನೇ ಇಲ್ಲಿ ಕಿಂಗ್​ ಮೇಕರ್​​.

Published by:Vasudeva M
First published: