Salary Package: ವರ್ಷಕ್ಕೆ 3 ಕೋಟಿ ಸ್ಯಾಲರಿ ಪ್ಯಾಕೇಜ್ ಪಡೆದ ಯಾಸಿರ್, ಪ್ಲೇಸ್​ಮೆಂಟ್ ಆದ್ರೆ ಹೀಗಾಗಬೇಕು!

ಯಾಸಿರ್​​

ಯಾಸಿರ್​​

ಯಾಸಿರ್ ಎಂ.ಎಂಬುವವರು ಇಂಥದ್ದೊಂದು ಹೆಗ್ಗಳಿಕೆಗೆ ಪಾತ್ರವಾಗಿದ್ದು, 3 ಕೋಟಿ ಮೌಲ್ಯದ ಭರ್ಜರಿ ಪ್ಲೇಸ್‌ಮೆಂಟ್ ಪ್ಯಾಕೇಜ್ ಪಡೆಯುವ ಮೂಲಕ ಹೊಸ ಪ್ಲೇಸ್‌ಮೆಂಟ್ ದಾಖಲೆಯನ್ನು ಬರೆದಿದ್ದಾರೆ.

  • Share this:

ವಿದ್ಯಾಭ್ಯಾಸದ (Education) ನಂತರ ಉದ್ಯೋಗ (Job) ಪಡೆಯುವುದು ಸವಾಲಿನ ಮತ್ತು ಪ್ರಮುಖ ಘಟ್ಟ. ಪ್ಲೇಸ್‌ಮೆಂಟ್‌ (Placement) ಎನ್ನುವುದು ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಅನುಭವಿಸುವ ಹೊಸ ಸವಾಲು ಎನ್ನಬಹುದು. ಎಲ್‌ಪಿಯು (LPU) , ಐಐಎಂ (ITM) , ಐಐಟಿ (IIT) ಮತ್ತು ಇತರ ಸಂಸ್ಥೆಗಳು ಸೇರಿದಂತೆ ಹಲವಾರು ಸಂಸ್ಥೆಗಳ ವಿದ್ಯಾರ್ಥಿಗಳು ಉತ್ತಮ ಕ್ಯಾಂಪಸ್ ಪ್ಲೇಸ್‌ಮೆಂಟ್ ಪಡೆಯಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ಇದಕ್ಕೆ ತದ್ವಿರುದ್ಧ ಎನ್ನುವಂತೆ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ ವಿದ್ಯಾರ್ಥಿಯೊಬ್ಬರು ಯಾರೂ ಊಹಿಸದ ಪ್ಲೇಸ್‌ಮೆಂಟ್‌ಗಳನ್ನು ಪಡೆಯುವ ಮೂಲಕ ದಾಖಲೆ ಬರೆದಿದ್ದಾರೆ.


3 ಕೋಟಿ ವೇತನದ ಉದ್ಯೋಗ ಪಡೆದು ದಾಖಲೆ ಬರೆದ ಯಾಸಿರ್


ಯಾಸಿರ್ ಎಂ.ಎಂಬುವವರು ಇಂಥದ್ದೊಂದು ಹೆಗ್ಗಳಿಕೆಗೆ ಪಾತ್ರವಾಗಿದ್ದು, 3 ಕೋಟಿ ಮೌಲ್ಯದ ಭರ್ಜರಿ ಪ್ಲೇಸ್‌ಮೆಂಟ್ ಪ್ಯಾಕೇಜ್ ಪಡೆಯುವ ಮೂಲಕ ಹೊಸ ಪ್ಲೇಸ್‌ಮೆಂಟ್ ದಾಖಲೆಯನ್ನು ಬರೆದಿದ್ದಾರೆ.


ಜರ್ಮನಿ ಕಂಪನಿಯಿಂದ ಆಫರ್‌ ಲೆಟರ್


ಜರ್ಮನಿಯ ಬಹುರಾಷ್ಟ್ರೀಯ ಕಂಪನಿಯಿಂದ ಯಾಸಿರ್‌ ಎಂ, ಅವರಿಗೆ 3 ಕೋಟಿ ಮೌಲ್ಯದ ಕೆಲಸಕ್ಕೆ ಆಫರ್‌ ಬಂದಿದೆ. ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯಲ್ಲಿ ಶಿಕ್ಷಣ ಮುಗಿಸಿದ ಇವರು, ಮೊದಲಿನಿಂದಲೂ ಓದಿನಲ್ಲಿ ಮುಂದಿದ್ದರು. ಶೈಕ್ಷಣಿಕವಾಗಿ ಉತ್ತಮವಾಗಿದ್ದ ಯಾಸಿರ್‌ ಕಂಪ್ಯೂಟರ್ ಸೈನ್ಸ್‌ನಲ್ಲಿ BTech ಪದವಿ ಮುಗಿಸಿದರು. BTech ಪದವಿ ಗಳಿಸುವಾಗ 8.6 CGPA ಸಹ ಗಳಿಸಿದರು.


ಬಿ.ಟೆಕ್‌ ಪದವಿ ಮುಗಿಸಿದ ನಂತರ ಕೋವಿಡ್ ಸಮಯದಲ್ಲಿ ಜಾಗತಿಕವಾಗಿ ಮಹತ್ವದ ಕೊಡುಗೆ ನೀಡಿದ ಜರ್ಮನಿಯ ಒಂದು ಪ್ರಸಿದ್ಧ ಬಹುರಾಷ್ಟ್ರೀಯ ಸಂಸ್ಥೆಯಿಂದ ಉದ್ಯೋಗದ ಪ್ರಸ್ತಾಪವನ್ನು ಪಡೆದರು. ಇದು ಕೇವಲ ಆಫರ್‌ ಲೆಟರ್‌ ಆಗಿರದೇ, ಬಹುಕೋಟಿ ಮೊತ್ತದ ಪ್ಯಾಕೇಜ್‌ ಆಗುವ ಮೂಲಕ ವೇತನದ ವಿಚಾರವಾಗಿ ದಾಖಲೆ ಬರೆದಿದೆ.


ಇದನ್ನೂ ಓದಿ: ಐಎಎಸ್, ಐಪಿಎಸ್ ಸೇರಿದಂತೆ ನಾಗರಿಕ ಸೇವಾ ಅಧಿಕಾರಿಗಳ ವೇತನ ಎಷ್ಟಿದೆ ನೋಡಿ


ಎಲ್ಲಾ ಕ್ಷೇತ್ರದಲ್ಲೂ ಮುಂದಿದ್ದ ಯಾಸಿರ್‌ ಎಂ


ಕಲಿಕೆ ಮತ್ತು ನೈಜ-ಪ್ರಪಂಚದ ಅನುಭವಕ್ಕೆ ಮತ್ತು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸದಲ್ಲಿ ಮುಂದಿದ್ದ ಇವರಿಗೆ ಇಷ್ಟು ದೊಡ್ಡದ ಆಫರ್‌ ಹುಡುಕಿ ಬಂದಿತ್ತು. ಕೇವಲ ಓದಿನಲ್ಲಿ ಮಾತ್ರ ಗುರುತಿಸಿಕೊಳ್ಳದ ಯಾಸಿರ್‌ ಎಲ್ಲಾ ಚಟುವಟಿಕೆ, ಕೌಶಲ್ಯಗಳನ್ನು ಸಹ ರೂಪಿಸಿಕೊಂಡಿದ್ದರು. ಎಲ್ಲಾ ರೀತಿಯಲ್ಲೂ ಮುಂದಿದ್ದ ಇವರು ಕಾಲೇಜಿನಲ್ಲಿ ಗುರುತಿಸಿಕೊಂಡ ವಿದ್ಯಾರ್ಥಿಯಾಗಿದ್ದರು.


ಎಂಜಿನಿಯರ್‌ ಆಗಿ ವೃತ್ತಿಜೀವನ ಆರಂಭಿಸಿದ ಯಾಸಿರ್


ವಿದ್ಯಾಭ್ಯಾಸದ ನಂತರ ವೃತ್ತಿಜೀವನ ಆರಂಭಿಸಿದ ಯಾಸಿರ್‌ ಎಂ, TiVo ನಲ್ಲಿ ಸಹಾಯಕ ಸಾಫ್ಟ್‌ವೇರ್ ಎಂಜಿನಿಯರ್ ಮತ್ತು ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಐದು ವರ್ಷ ಕೆಲಸ ಮಾಡಿದರು. ನಂತರ ಕಂಪನಿ ಬದಲಿಸಿದ ಇವರು ಮತ್ತೆ ಸಾಫ್ಟ್‌ವೇರ್ ಎಂಜಿನಿಯರ್ ಆಗಿ 10 ತಿಂಗಳ ಕಾಲ ಕೆಲಸ ಮಾಡಿದರು.


ಎರಡನೇ ಅತಿ ಹೆಚ್ಚು ಪ್ಲೇಸ್‌ಮೆಂಟ್ ಪ್ಯಾಕೇಜ್ ಅನ್ನು ಯಾರು ಪಡೆದುಕೊಂಡಿದ್ದಾರೆ?


ಯಾಸಿರ್‌ ಎಂ. ಮೂರು ಕೋಟಿ ಪ್ಯಾಕೇಜ್‌ ಪಡೆಯುವ ಮೂಲಕ ಅತಿದೊಡ್ಡ ಪ್ಯಾಕೇಜ್‌ ಪಡೆದಿದ್ದರೆ ಎಂಬ ದಾಖಲೆಗೆ ಪಾತ್ರರಾದರೆ, ಎರಡನೇ ದೊಡ್ಡ ಮೊತ್ತದ ಪ್ಯಾಕೇಜ್‌ ಅನ್ನು ಹರೇಕೃಷ್ಣ ಮಹ್ತೋ ಎಂಬುವವರು ಪಡೆದಿದ್ದಾರೆ. ಹರೇಕೃಷ್ಣ ಮಹ್ತೋ ಅವರು ಸಹ LPU B.Tech ನಲ್ಲಿ 2022 ರ ಬ್ಯಾಚ್‌ನ ವಿದ್ಯಾರ್ಥಿಯಾಗಿದ್ದು, ಗೂಗಲ್‌ನಲ್ಲಿ 64 ಲಕ್ಷ ರೂಪಾಯಿ ಮೌಲ್ಯದ ಪ್ಯಾಕೇಜ್‌ನ ಕೆಲಸ ಪಡೆದರು.


ಇದೇ ಯೂನಿವರ್ಸಿಟಿಯ ಹಲವು ವಿದ್ಯಾರ್ಥಿಗಳು ದೊಡ್ಡ ಮೊತ್ತದ ಪ್ಯಾಕೇಜ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚಿನ ಬ್ಯಾಚ್‌ಗಳ 600 ಕ್ಕೂ ಹೆಚ್ಚು LPU ವಿದ್ಯಾರ್ಥಿಗಳಿಗೆ 10-63 ಲಕ್ಷ ರೂಪಾಯಿ ಮೌಲ್ಯದ ಪ್ಯಾಕೇಜ್‌ನೊಂದಿಗೆ ಉದ್ಯೋಗವನ್ನು ನೀಡಲಾಗಿದೆ.




ಇನ್ನೂ ಕಾಗ್ನಿಜೆಂಟ್, ಕ್ಯಾಪ್ಜೆಮಿನಿ, ವಿಪ್ರೋ, ಎಂಫಸಿಸ್ ಮತ್ತು ಹೈರೇಡಿಯಸ್, ಸೇರಿ ಉನ್ನತ ಕಂಪನಿಗಳು ಸಹ ಈ ಸಂಸ್ಥೆಯ ವಿದ್ಯಾರ್ಥಿಗಳನ್ನು ನೇಮಕಾತಿ ಮಾಡಿಕೊಂಡಿದ್ದಾರೆ.

First published: