LPG Price: ಗ್ರಾಹಕರೇ ಗಮನಿಸಿ, ಈ ಕಾರಣಕ್ಕೆ ಏಪ್ರಿಲ್ ನಲ್ಲಿ ದುಪ್ಪಟ್ಟು ಆಗಲಿದೆಯಂತೆ LPG ಬೆಲೆ

ಏಪ್ರಿಲ್ ನಲ್ಲಿ ಅಡುಗೆ ಅನಿಲ ದರ (Domestic LPG Price) ಏರಿಗೆಯಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಜಾಗತಿಕ ಅನಿಲ ಬಿಕ್ಕಟ್ಟಿನಿಂದಾಗಿ ಆಹಾರ ಪದಾರ್ಥಗಳ ಬೆಲೆ ಸಹ ಏಪ್ರಿಲ್‌ ನಿಂದ ಹೆಚ್ಚು ದುಬಾರಿಯಾಗಬಹುದು ಎನ್ನಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಿನದಿಂದ ದಿನಕ್ಕೆ ಏರುತ್ತಿರುವ ಬೆಲೆ ಏರಿಕೆ (Price Hike) ಸಾಮಾನ್ಯ ಜನರ ಜೇಬಿಗೆ ಕಂಟಕವಾಗ್ತಿದೆ. ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ (Petrol And Diesel Price) ಜನರ ಆದಾಯ(Income)ವನ್ನು ಖಾಲಿ ಮಾಡುತ್ತಿವೆ. ಈ ಬಾರಿಯೂ ಕೇಂದ್ರ ಬಜೆಟ್ (Union Budget 2022) ಮೇಲೆ ಅಪಾರ ನಿರೀಕ್ಷೆಗಳನ್ನು ಕೇಂದ್ರ ಸರ್ಕಾರ (Central Government) ಸುಳ್ಳು ಮಾಡಿತ್ತು. ಈ ಎಲ್ಲ ಬೆಳಣಿಗೆಗಳ ನಡುವೆ ಮತ್ತೊಮ್ಮೆ ಹಣದುಬ್ಬರ (Inflation) ಮಧ್ಯಮ ವರ್ಗದ ಆರ್ಥಿಕ ಪರಿಸ್ಥಿತಿ ಮೇಲೆ ದೊಡ್ಡ ಹೊಡೆತ ನೀಡುವ ಸಾಧ್ಯತೆಗಳಿವೆ. ರಷ್ಯಾ (Russia) ಮತ್ತು ಉಕ್ರೇನ್ (Ukraine) ನಡುವಿನ ಬಿಕ್ಕಟ್ಟು ಜಾಗತೀಕ ಹಣದುಬ್ಬರಕ್ಕೆ ಕಾರಣವಾಗುತ್ತಿದೆ. ಹಾಗಾಗಿ ಏಪ್ರಿಲ್ ನಲ್ಲಿ ಅಡುಗೆ ಅನಿಲ ದರ (Domestic LPG Price) ಏರಿಗೆಯಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಜಾಗತಿಕ ಅನಿಲ ಬಿಕ್ಕಟ್ಟಿನಿಂದಾಗಿ ಆಹಾರ ಪದಾರ್ಥಗಳ ಬೆಲೆ ಸಹ ಏಪ್ರಿಲ್‌ ನಿಂದ ಹೆಚ್ಚು ದುಬಾರಿಯಾಗಬಹುದು ಎನ್ನಲಾಗುತ್ತಿದೆ.

ಜಾಗತಿಕ ಅನಿಲ ಬಿಕ್ಕಟ್ಟು

ಜಾಗತಿಕ ಬಿಕ್ಕಟ್ಟಿನಿಂದಾಗಿ ಸಿಎನ್‌ಜಿ (CNG), ಪಿಎನ್‌ಜಿ (PNG) ಮತ್ತು ವಿದ್ಯುತ್ (Electric) ಬೆಲೆಗಳು ಹೆಚ್ಚಾಗುವ ಸಾಧ್ಯತೆಯಿದೆ. ಇದು ಸಾರಿಗೆ ವೆಚ್ಚ ಮತ್ತು ಕೈಗಾರಿಕೆಗಳ ಕಾರ್ಯಾಚರಣೆಯ ವೆಚ್ಚದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಸರ್ಕಾರದ ರಸಗೊಬ್ಬರ ಸಬ್ಸಿಡಿ ಬಿಲ್ ಕೂಡ ಏರಿಕೆ ಕಾಣಬಹುದು. ಈ ಎಲ್ಲಾ ಅಂಶಗಳ ನೇರ ಪರಿಣಾಮವನ್ನು ಗ್ರಾಹಕರು ಎದುರಿಸಬೇಕಾಗುತ್ತದೆ.

ರಷ್ಯಾ ಪೈಪ್ ಲೈನ್ ಗಳ ಮೂಲಕ ಯುರೋಪಿನಾದ್ಯಂತ ಅನಿಲ ಪೂರೈಕೆ ಮಾಡುವ ಪ್ರಮುಖ ರಾಷ್ಟ್ರವಾಗಿದೆ. ಇದೀಗ ಎರಡೂ ರಷ್ಯಾ ಮತ್ತು ಉಕ್ರೇನ್ ಬಿಕ್ಕಟ್ಟು ದಿನದಿಂದ ದಿನಕ್ಕೆ ಸೂಕ್ಷ್ಮವಾಗುತ್ತಿದೆ. ರಷ್ಯಾಗೆ ಸಂಪರ್ಕ ಕಲ್ಪಿಸುವ ಅನಿಲ ಪೂರೈಕೆಯನ್ನು ಉಕ್ರೇನ್ ಸ್ಥಗಿತಗೊಳಿಸಬಹುದು. ಇದರಿಂದ ಮಾರುಕಟ್ಟೆ ಮೇಲೆ ನೇರ ಪರಿಣಾಮ ಬೀರಲಿದೆ.

ಇದನ್ನೂ ಓದಿ:  Russia-Ukraine War: ರಷ್ಯಾದ ವಿರುದ್ಧ ‘ದೊಡ್ಡಣ್ಣ‘ ಗರಂ, 2 ಹಣಕಾಸು ಸಂಸ್ಥೆಗಳ ಮೇಲೆ ಅಮೆರಿಕ ನಿರ್ಬಂಧ

ಮಾರುಕಟ್ಟೆಯ ಮೇಲೆ ನೇರ ಪರಿಣಾಮ

ಉಕ್ರೇನ್ ‌ನಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯು ಯುದ್ಧದ ಭಯವನ್ನು ಹೆಚ್ಚಿಸಿದೆ. ಇದು ಅನಿಲದ ವೆಚ್ಚವನ್ನು ಒಳಗೊಂಡಂತೆ ಬಹುವಿಧದ ಪರಿಣಾಮವನ್ನು ಬೀರಬಹುದು. ಅಡುಗೆ ಅನಿಲದ ಬೆಲೆಗಳನ್ನು ಪರಿಷ್ಕರಿಸಿದ್ರೆ ಏಪ್ರಿಲ್ ವೇಳೆಗೆ ಈ ಪರಿಣಾಮವು ಕಾಣಿಸಿಕೊಳ್ಳಬಹುದು. ವಿಶ್ಲೇಷಕರ ಪ್ರಕಾರ, ಪ್ರತಿ MMBtu ಗೆ $ 2.9 ರಿಂದ $ 6-7 ಗೆ ಬೆಲೆಯನ್ನು ಹೆಚ್ಚಿಸಬಹುದು ಎಂದು ಹೇಳುತ್ತಾರೆ.

ಫೆ.1 ರಂದು ವಾಣಿಜ್ಯ ಸಿಲಿಂಡರ್ ಗಳ ಬೆಲೆ ಇಳಿಕೆ

ಇಂಡಿಯನ್ ಆಯಿಲ್ (IOC) 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ (Commercial Gas Cylinder Price) ಬೆಲೆಯನ್ನು 91.5 ರೂ ಕಡಿತಗೊಳಿಸಿದೆ. ಬೆಲೆ ಕಡಿತದ ನಂತರ ದೆಹಲಿಯಲ್ಲಿ 19 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆ 1907 ರೂ. ಆಗಿದೆ. ಈ ತಿಂಗಳು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆಯಾಗಿಲ್ಲ. ತೈಲ ಮಾರುಕಟ್ಟೆ ಕಂಪನಿಗಳು ಫೆಬ್ರವರಿ ತಿಂಗಳ ದೇಶೀಯ ಅನಿಲ ಬೆಲೆಗಳನ್ನು (LPG ಗ್ಯಾಸ್ ಸಿಲಿಂಡರ್ ಬೆಲೆ) ಬಿಡುಗಡೆ ಮಾಡಿದೆ. ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ಏರಿಕೆ ಮಾಡಿಲ್ಲ.

ಪಂಚ ರಾಜ್ಯ ಚುನಾವಣೆ ಬಳಿಕ ಇಂಧನ ಬೆಲೆ ಏರಿಕೆ ಸಾಧ್ಯತೆ

ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ದೇಶದ 5 ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ಘೋಷಣೆ ಆಗಿರುವ ಹಿನ್ನೆಲೆ ತೈಲ ಬೆಲೆ ಏರಿಕೆಯನ್ನು ಕೇಂದ್ರ ಸರ್ಕಾರ ತಡೆಯಬಹುದಾಗಿದೆ. ಈ ಹಿನ್ನೆಲೆ ಕೆಲ ದಿನಗಳವರೆಗೆ ಜನಸಾಮನ್ಯರು ಬೆಲೆ ಏರಿಕೆಯಿಂದ ತಪ್ಪಿಸಕೊಳ್ಳಬಹುದಾಗಿದೆ. ವಿಧಾನಸಭಾ ಚುನಾವಣೆ ನಂತರ ಬೆಲೆ ಏರಿಕೆ ಮಾಡುವ ಸಾಧ್ಯತೆಗಳೇ ಎಂದು ಹೆಚ್ಚು ಹೇಳಲಾಗುತ್ತಿದೆ.

ಇದನ್ನೂ ಓದಿ:  Central Government Employees: ಕೇಂದ್ರ ಸರ್ಕಾರಿ ನೌಕರರಿಗೆ ಹೋಳಿ ಗಿಫ್ಟ್!

ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100 ರೂ. ದಾಟಿದೆ, ಆದರೆ ಚುನಾವಣೆ ಸಮೀಪಿಸುತ್ತಿದ್ದಂತೆ ಬೆಲೆ ಏರಿಕೆ ನಿಂತಿದೆ. ಕಳೆದ 74 ದಿನಗಳಿಂದ ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಿನ ಬದಲಾವಣೆ ಇಲ್ಲ. ಇಂದು ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 100.58 ರೂ ಮತ್ತು ಡೀಸೆಲ್ ಬೆಲೆ 85.01 ರೂ.ಗೆ ಮಾರಾಟವಾಗುತ್ತಿದೆ.
Published by:Mahmadrafik K
First published: